Neetu Kapoor: ಯಂಗ್ ಆಗಿ ಕಾಣುವ ನೀತು ಕಪೂರ್ ಅವರ ಬ್ಯೂಟಿ ಮಂತ್ರವೇ ಓಟ್ಸ್ ಅಂತೆ: ಇವರ ಓಟ್ ಮೀಲ್ ರೆಸಿಪಿ ಇದು

ಈ ಬಾಲಿವುಡ್ ಮಂದಿಯಂತೂ ಫಿಟ್ ನೆಸ್, ಡಯೆಟ್ ಗೆ ತುಂಬಾ ಮಹತ್ವ ಕೊಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದರೆ ರಣಬೀರ್ ಕಪೂರ್ ತಾಯಿ ನೀತು ಕಪೂರ್. 64ರ ಹರೆಯದ ಸುಂದರಿ ನೀತು ಕಪೂರ್ ಇತ್ತೀಚಿನ 'ಜಗ್ ಜಗ್ ಜೀಯೋ' ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು. ನೀತು ಕಪೂರ್ ಫಿಟ್ ಆಗಿರಲು ಈಗಲೂ ಸಹ ವ್ಯಾಯಾಮ, ಆಹಾರ ಪದ್ದತಿ ಎಲ್ಲವನ್ನೂ ಅನುಸರಿಸುತ್ತಾರೆ.

ನೀತು ಕಪೂರ್

ನೀತು ಕಪೂರ್

  • Share this:
ಚಿತ್ರರಂಗದ ಕೆಲ ಕಲಾವಿದರಿಗೆ ಎಷ್ಟೇ ವಯಸ್ಸಾದರೂ ವಯಸ್ಸು (Age) ಕೇವಲ ಸಂಖ್ಯೆ ಎನ್ನುವಂತೆ ಇನ್ನೂ ಯುವಕರಂತೆ ಕಾಣುತ್ತಾರೆ. ಹೀಗೆ ಯಂಗ್ ಆಗಿ ಕಾಣಲು ಫಿಟ್ ನೆಸ್, ವರ್ಕೌಟ್ ಮುಖ್ಯವಾಗಿ ಅವರು ಸೇವಿಸುವ ಆಹಾರ ಕಾರಣ ಎನ್ನಬಹುದು. ಅದರಲ್ಲೂ ಈ ಬಾಲಿವುಡ್ (Bollywood) ಮಂದಿಯಂತೂ ಫಿಟ್ ನೆಸ್, ಡಯೆಟ್ ಗೆ (Diet) ತುಂಬಾ ಮಹತ್ವ ಕೊಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಅಂದರೆ ರಣಬೀರ್ ಕಪೂರ್ ತಾಯಿ ನೀತು ಕಪೂರ್ (Neetu Kapoor). 64ರ ಹರೆಯದ ಸುಂದರಿ ನೀತು ಕಪೂರ್ ಇತ್ತೀಚಿನ 'ಜುಗ್ ಜುಗ್ ಜಿಯೋ' ಮೂಲಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದರು. ನೀತು ಕಪೂರ್ ಫಿಟ್ ಆಗಿರಲು ಈಗಲೂ ಸಹ ವ್ಯಾಯಾಮ, ಆಹಾರ ಪದ್ದತಿ ಎಲ್ಲವನ್ನೂ ಅನುಸರಿಸುತ್ತಾರೆ.

ಯುವ ಸುಂದರಿ ತನ್ನ ಫಿಟ್‌ನೆಸ್ ಮಂತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹಲವು ಬಾರಿ ಹಂಚಿಕೊಳ್ಳುತ್ತಿರುತ್ತಾರೆ. ಪ್ರತಿದಿನ ವರ್ಕೌಟ್, ಹೆಚ್ಚು ನೀರು ಸೇವನೆ, ತೂಕದ ಬಗ್ಗೆ ನಿರಂತರ ಪರಿಶೀಲನೆ, ಉತ್ತಮ ಆಹಾರ ಇವು ನೀತು ಕಪೂರ್ ಅವರ ಪ್ರತಿದಿನದ ಫಿಟ್ ನೆಸ್ ಮಂತ್ರವಂತೆ.

ನೀತು ಕಪೂರ್ ಇತ್ತೀಚಿನ ಒಂದು ಸಂದರ್ಶನದಲ್ಲಿ ಅವರ ಬ್ಯೂಟಿ ಸೀಕ್ರೇಟ್ ಓಟ್ಸ್ ಅಂತಾ ಹೇಳಿಕೊಂಡಿದ್ದಾರೆ. ಮೊನ್ನೆ ಮೊನ್ನೆ ಸಮಂತಾ ಕೂಡ ತಮ್ಮ ಡಯೆಟ್ ನಲ್ಲಿ ಓಟ್ಸ್ ಇದ್ದೇ ಇರುತ್ತದೆ ಎಂದು ತಮ್ಮ ಇಷ್ಟದ ಓಟ್ಸ್ ಇಡ್ಲಿ ರೆಸಿಫಿಯನ್ನು ಹಂಚಿಕೊಂಡಿದ್ದರು.

ಓಟ್ಸ್ ಸೇವನೆಯ ಪ್ರಯೋಜನ
ಓಟ್ಸ್ ಸೇವನೆ ದೇಹಕ್ಕೆ ಹಲವಾರು ರೀತಿಯ ಲಾಭಗಳನ್ನು ನೀಡುತ್ತದೆ. ಸಣ್ಣ ಆಗಲು ಬಯಸುವವರು ತಮ್ಮ ಆಹಾರ ಕ್ರಮದಲ್ಲಿ ಓಟ್ಸ್ ನ್ನು ಸೇರ್ಪಡೆ ಮಾಡಿಕೊಳ್ಳುವುದು ಉತ್ತಮ ಮಾರ್ಗ. ತೂಕ ಕಳೆದುಕೊಳ್ಳಲು ಬಯಸುವಂತಹ ಹೆಚ್ಚಿನ ಜನರು ತಮ್ಮ ಬೆಳಗ್ಗಿನ ಉಪಹಾರದಲ್ಲಿ ಸೇವಿಸುವ ಆಹಾರವೇ ಓಟ್ ಮೀಲ್. ಹೆಚ್ಚಿನ ಪೋಷಕಾಂಶ ತಜ್ಞರು ಹಾಗೂ ವೈದ್ಯರು ಕೂಡ ಓಟ್ ಮೀಲ್ ಸೇವನೆಗೆ ಸಲಹೆ ನೀಡುತ್ತಾರೆ.

ದೇಹಕ್ಕೆ ಬೇಕಾಗುವ ಮ್ಯಾಂಗನೀಸ್ ಓಟ್ ಮೀಲ್ ನಲ್ಲಿದೆ. ಓಟ್ ಮೀಲ್ ನಲ್ಲಿ ಕೆಲವೊಂದು ರೀತಿಯ ಆ್ಯಂಟಿಆಕ್ಸಿಡೆಂಟ್ ಗಳು, ವಿಟಮಿನ್ ಇ, ಸೆಲೆನಿಯಂ, ಫೆನೊಲಿಕ್ ಆಮ್ಲ ಮತ್ತು ಪೈಟಿಕ್ ಆಮ್ಲವಿದೆ. ಇಷ್ಟು ಮಾತ್ರವಲ್ಲದೆ ಇದರಲ್ಲಿ ವಿಟಮಿನ್ ಬಿ1, ಬಯೋಟಿನ್, ಮೆಗ್ನಿಶಿಯಂ, ತಾಮ್ರ, ಮೊಲಿಬ್ಡಿನಮ್, ಪೋಸ್ಪರಸ್ ಇತ್ಯಾದಿ ಅಂಶಗಳು ಇವೆ. ಇದರಲ್ಲಿರುವಂತಹ ಕರಗಬಲ್ಲ ನಾರಿನಾಂಶದಿಂದಾಗಿ ದೇಹದ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ.

ಇದನ್ನೂ ಓದಿ: Workout And Diet: ಮ್ಯಾನ್ ವರ್ಸಸ್ ವೈಲ್ಡ್ ಶೋನ ಬೇರ್ ಗ್ರಿಲ್ಸ್ ಡಯೆಟ್, ಜೀವನಶೈಲಿ ಹೀಗಿದೆ

ಓಟ್ ಮೀಲ್ ತಯಾರಿಸಿಕೊಳ್ಳುವುದು ಹೇಗೆ?
ಬೇಕಾಗಿರುವ ಪದಾರ್ಥಗಳು

  1. ಬಾದಾಮಿ ಹಾಲು – 1 ಕಪ್

  2. ಓಟ್ಸ್ – ಅರ್ಧ ಕಪ್

  3. ಕತ್ತರಿಸಿದ ಒಣ ಖರ್ಜೂರ

  4. ಕತ್ತರಿಸಿದ ಒಣಗಿದ ಪ್ಲಮ್


ವಿಧಾನ
ಹಂತ 1- ಮೊದಲಿಗೆ ಒಂದು ಪಾತ್ರೆ ತೆಗೆದುಕೊಂಡು ಅದಕ್ಕೆ 1 ಕಪ್ ಬಾದಾಮಿ ಹಾಲನ್ನು ಸುರಿದುಕೊಳ್ಳಿ. ನೀತು ಕಪೂರ್ ಬಾದಾಮಿ ಹಾಲನ್ನು ತೆಗೆದುಕೊಳ್ಳುತ್ತಾರೆ, ನೀವು ಇದಕ್ಕೆ ಸೋಯಾ ಹಾಲನ್ನು ಕೂಡ ಸೇರಿಸಬಹುದು.
ಹಂತ 2- ನಂತರ ಪಾತ್ರೆಯನ್ನು ಒಲೆ ಮೇಲೆ ಇಟ್ಟು ಹಾಲನ್ನು ಬಿಸಿ ಮಾಡಿ. ಹಾಲು ಬಿಸಿ ಆಗುತ್ತಿದ್ದ ಹಾಗೆ ಗ್ಯಾಸ್ ಆಫ್ ಮಾಡಿ.
ಹಂತ 3 – ನಂತರ ನಿಧಾನವಾಗಿ ಓಟ್ಸ್ ಅನ್ನು ಹಾಕಿ, ಕೈಯಾಡಿಸುತ್ತಾ ಇರಿ. ಮದ್ಯಮ ಉರಿಯಲ್ಲಿ ಓಟ್ಸ್ ಉಂಡೆ ಗಟ್ಟದಂತೆ ನೋಡಿಕೊಳ್ಳಲು ನಿಧಾನವಾಗಿ ಸೌಟಿನಿಂದ ಆಡಿಸಿ.
ಹಂತ 4- ಈಗ ಓಟ್ ಮೀಲ್ ಗೆ ಕತ್ತರಿಸಿದ ಡೇಟ್ಸ್, ಒಣಗಿದ ಫ್ಲಮ್ ಗಳನ್ನು ಹಾಕಿ
ಹಂತ 5- ಬೇಕಿದ್ದಲ್ಲಿ ನೀವು ಇದನ್ನು ಫ್ರಿಡ್ಜ್ ನಲ್ಲಿಟ್ಟು ಸಹ ಸೇವಿಸಬಹುದು.

ಇದನ್ನೂ ಓದಿ:  Skin Care Tips: ಗರ್ಭಿಣಿಯರಿಗೆ ತ್ವಚೆಯ ಆರೈಕೆ ಮಾಡುವ ಸರಳ ಮತ್ತು ಪರಿಣಾಮಕಾರಿ ಟಿಪ್ಸ್ ಹೇಳಿದ ನಟಿ ಕರಿಷ್ಮಾ ಕಪೂರ್

ಇದಕ್ಕೆ ನೀವು ಖರ್ಜೂರ, ಪ್ಲಮ್ ಮಾತ್ರವಲ್ಲದೇ ಬೇರೆ ಬೇರೆಡ ಡ್ರೈ ಫ್ರೂಟ್ಸ್, ವೆನಿಲ ಎಸೆನ್ಸ್ ಮಿಶ್ರಣ ಮಾಡಿ ಸೇವಿಸಬಹುದು.
Published by:Ashwini Prabhu
First published: