• Home
  • »
  • News
  • »
  • entertainment
  • »
  • Rohan Shrestha: ತಮ್ಮ ತಂದೆಯ ಬಳಿ ಸಹಾಯಕನಾಗಿ ಕೆಲಸ ಮಾಡಿದ್ರಂತೆ ಈ ಪ್ರಸಿದ್ಧ ಫೋಟೊಗ್ರಾಫರ್!

Rohan Shrestha: ತಮ್ಮ ತಂದೆಯ ಬಳಿ ಸಹಾಯಕನಾಗಿ ಕೆಲಸ ಮಾಡಿದ್ರಂತೆ ಈ ಪ್ರಸಿದ್ಧ ಫೋಟೊಗ್ರಾಫರ್!

 ರೋಹನ್ ಶ್ರೇಷ್ಠಾ

ರೋಹನ್ ಶ್ರೇಷ್ಠಾ

ರೋಹನ್ ಶ್ರೇಷ್ಠಾ ಅವರು ನಿಧಾನವಾಗಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದು, ಇತ್ತೀಚೆಗೆ ಹಾಲಿವುಡ್ ನಟ ಕೆವಿನ್ ಹಾರ್ಟ್ ಅವರನ್ನು ಚಿತ್ರೀಕರಿಸಿದ ಮೊದಲ ಭಾರತೀಯ ಛಾಯಾಗ್ರಾಹಕರಾಗಿದ್ದಾರೆ.

  • Share this:

ಕೆಲವು ತಿಂಗಳುಗಳ ಹಿಂದೆ ಬಾಲಿವುಡ್ ನಟಿ ಶ್ರದ್ಧಾ ಕಪೂರ್ (Shraddha Kapoor) ಅವರೊಂದಿಗೆ ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರ ಬ್ರೇಕಪ್ ಆಗಿರುವ ಸುದ್ದಿಗಳು ಜೋರಾಗಿಯೇ ಹರಿದಾಡುತ್ತಿದ್ದುದ್ದು ಬಹುತೇಕವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಈ ಸೆಲೆಬ್ರಿಟಿ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ (Rohan Shrestha) ಅವರು ಬಾಲಿವುಡ್ ನ ಹಿರಿಯ ಛಾಯಾಗ್ರಾಹಕ ರಾಕೇಶ್ ಶ್ರೇಷ್ಠಾ (Rakesh Shrestha) ಅವರ ಮಗ. ಈಗ ರೋಹನ್ ಶ್ರೇಷ್ಠಾ ಅವರು ನಿಧಾನವಾಗಿ ಚಿತ್ರೋದ್ಯಮದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದು, ಇತ್ತೀಚೆಗೆ ಹಾಲಿವುಡ್ ನಟ ಕೆವಿನ್ ಹಾರ್ಟ್ ಅವರನ್ನು ಚಿತ್ರೀಕರಿಸಿದ ಮೊದಲ ಭಾರತೀಯ ಛಾಯಾಗ್ರಾಹಕರಾಗಿದ್ದಾರೆ.


ಸುದ್ದಿ ಮಾಧ್ಯಮದೊಂದಿಗೆ ನಡೆಸಿದ ವಿಶೇಷ ಸಂಭಾಷಣೆಯಲ್ಲಿ ರೋಹನ್ ಅವರು ತಮ್ಮ ತಂದೆ ರಾಕೇಶ್ ಅವರ ಹೆಸರಿಗೆ ತಕ್ಕಂತೆ ಬದುಕುವ ಬಗ್ಗೆ ಮತ್ತು ನಟಿ ಶ್ರದ್ಧಾ ಕಪೂರ್ ಅವರೊಂದಿಗೆ ಡೇಟಿಂಗ್ ವದಂತಿಗಳ ಬಗ್ಗೆ ಏನೆಲ್ಲಾ ಹೇಳಿದ್ದಾರೆ ನೋಡಿ.


ತನ್ನ ತಂದೆಯ ಬಗ್ಗೆ ರೋಹನ್ ಹೇಳಿದ್ದೇನು ನೋಡಿ..
ನಿಮ್ಮ ತಂದೆ ರಾಕೇಶ್ ಶ್ರೇಷ್ಠಾ ಮಾಡಿದ ಕೆಲಸ ಮತ್ತು ಗಳಿಸಿದ ಜನಪ್ರಿಯತೆಗೆ ತಕ್ಕಂತೆ ಬದುಕುವುದು ಬಹುತೇಕ ಅಸಾಧ್ಯವಾಗುತ್ತಿದೆಯೇ ಮತ್ತು ಇದರಿಂದ ನೀವು ಒತ್ತಡಕ್ಕೆ ಒಳಗಾಗಿದ್ದೀರಾ ಅಂತ ಕೇಳಿದ ಪ್ರಶ್ನೆಗೆ ರೋಹನ್ ಅವರು “ನಾನು ಚಿಕ್ಕವನಿದ್ದಾಗ, ಈ ಹೋಲಿಕೆಗಳ ಬಗ್ಗೆ ನಾನು ತುಂಬಾ ನರ್ವಸ್ ಆಗಿದ್ದೆ, ಏಕೆಂದರೆ ನನ್ನ ತಂದೆಯಂತೆ ಉದ್ಯಮದಲ್ಲಿ ಜನಪ್ರಿಯ ವ್ಯಕ್ತಿ ಆಗುವುದು ತುಂಬಾನೇ ಕಷ್ಟ.


ನಾನು ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ಆರಂಭದಲ್ಲಿ ಇದು ಇನ್ನೂ ಅಸಾಧ್ಯವಾಗಿತ್ತು. ಏಕೆಂದರೆ ನನ್ನನ್ನು ಯಾವಾಗಲೂ ನನ್ನ ತಂದೆಗೆ ಹೋಲಿಸಲಾಗುತ್ತಿತ್ತು. ಕಾಲಾನಂತರದಲ್ಲಿ, ನಾನು ನನ್ನ ಕೆಲಸದ ಮೂಲಕ ನನ್ನದೇ ಆದ ಒಂದು ಇಮೇಜ್ ಆನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇನೆ. ನನ್ನ ಶೈಲಿಯು ನನ್ನ ತಂದೆಗಿಂತ ತುಂಬಾ ಭಿನ್ನವಾಗಿದೆ, ಆದರೂ ನಾನು ಅವರಿಂದ ತುಂಬಾ ಕಲಿತಿದ್ದೇನೆ. ನನ್ನ ವೃತ್ತಿಜೀವನದ ವಿಷಯಕ್ಕೆ ಬಂದಾಗ ನನ್ನ ತಂದೆಯವರ ಮಾರ್ಗದರ್ಶನವನ್ನ ಶ್ಲಾಘಿಸುತ್ತೇನೆ. ಆದರೆ ನನ್ನ ತಂದೆ ಎಂದಿಗೂ ನನ್ನ ಕೆಲಸದ ಶೈಲಿಯಲ್ಲಿ ಹಸ್ತಕ್ಷೇಪ ಮಾಡಲಿಲ್ಲ” ಎಂದು ಹೇಳಿದರು.


ಇದನ್ನೂ ಓದಿ:  Urfi Javed: ಉರ್ಫಿ ವೇಸ್ಟ್ ಎಂದ ಈ ನಟ! ಯಾರೋ ಅವ್ನು ಅಕ್ಕನ ಕೆಣಕ್ಕಿದ್ದು ಅಂದ್ರು ಫ್ಯಾನ್ಸ್!


“ಅವರು ನನಗೆ ನನ್ನದೇ ಆದ ಮಾರ್ಗವನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟರು. ಹಾಗಾಗಿ ನನಗೆ ಈ ಕ್ಷೇತ್ರದಲ್ಲಿ ಏನು ಮಾಡಲು ಇಷ್ಟವೋ, ಅದೆಲ್ಲವನ್ನೂ ಮಾಡಲು ಅವರು ನನಗೆ ಅವಕಾಶ ಮಾಡಿಕೊಟ್ಟರು ಮತ್ತು ನನ್ನ ವೃತ್ತಿಜೀವನದ ಆರಂಭದಲ್ಲಿ ಅವರು ನನಗೆ ಸಹಾಯ ಮಾಡಲಿಲ್ಲ” ಎಂದು ಹೇಳಿದರು. “ಅವರು ನನಗೆ ಏಕೆ ಸಹಾಯ ಮಾಡಲಿಲ್ಲ ಎಂದು ನಾನು ಯಾವಾಗಲೂ ಆಶ್ಚರ್ಯ ಪಡುತ್ತಿದ್ದೆ, ಆದರೆ ಅವರು ಹಾಗೇಕೆ ಮಾಡಿದರು ಅಂತ ನನಗೆ ಆನಂತರ ಅರ್ಥವಾಯಿತು. ಅವರು ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡಲು ಹೇಳಿಕೊಟ್ಟರು” ಎಂದು ಹೇಳಿದರು.


ತನ್ನ ತಂದೆಯ ಬಳಿ ಸಹಾಯಕನಾಗಿ ಕೆಲಸ ಮಾಡಿದ್ರಂತೆ ರೋಹನ್..
ನೀವು ಚಿಕ್ಕವರಿದ್ದಾಗ ಫೋಟೋಶೂಟ್ ಗಳಲ್ಲಿ ನಿಮ್ಮ ತಂದೆಯೊಂದಿಗೆ ಹೋಗಿದ್ದೀರಾ? ನೀವು ಅವರೂಂದಿಗೆ ಕಳೆದ ಯಾವುದಾದರೂ ಘಟನೆಯನ್ನ ಹಂಚಿಕೊಳ್ಳಬಹುದೇ ಅಂತ ಕೇಳಿದಾಗ ರೋಹನ್ ಅವರು “ಹೌದು, ನಾನು ನನ್ನ ತಂದೆಯ ಬಳಿ ಕೆಲಸ ಮಾಡಿದೆ. ಅವರು ನನ್ನನ್ನು ಒಬ್ಬ ಸಹಾಯಕನಂತೆ ನಡೆಸಿಕೊಳ್ಳುತ್ತಿದ್ದರು ಮತ್ತು ಅವರ ಮಗನಂತೆ ಅಲ್ಲ, ಆಗ ನನಗೆ 21-22 ವರ್ಷ ವಯಸ್ಸು, ನನಗೆ ಏಕೆ ಹೀಗೆ ನಡೆಸಿಕೊಳ್ಳುತ್ತಾರೆ ಅಂತ ಬೇಸರ ಆಗುತ್ತಿತ್ತು. ಆದರೆ ಈಗ ಅರ್ಥವಾಗಿದೆ” ಅಂತ ಹೇಳುತ್ತಾರೆ.


“ನಾನೊಬ್ಬ ಛಾಯಾಗ್ರಾಹಕನಾಗಲು ಎಂದಿಗೂ ಬಯಸಿದವನಲ್ಲ. ನಾನು ನನ್ನ ತಂದೆಗೆ ಸಹಾಯ ಮಾಡುತ್ತಿದ್ದಾಗಲೂ ಸಹ, ಇದು ನನ್ನ ಕೆಲಸ ಅಂತ ನಾನು ಎಂದಿಗೂ ಭಾವಿಸಲಿಲ್ಲ ಮತ್ತು ಬೇರೆ ಏನೂ ಮಾಡಲು ಇಲ್ಲ ಎಂದು ನಾನು ಭಾವಿಸಿದ್ದರಿಂದ ಅದನ್ನು ಮಾಡುತ್ತಿದ್ದೆ ಅಷ್ಟೇ. ನಂತರ ಛಾಯಾಗ್ರಹಣದಲ್ಲಿ ಕೆಲಸ ಮಾಡೋಣ ಅಂತ ಪ್ರಯತ್ನಿಸಿದೆ, ಆದರೆ ನಾನು ಅದನ್ನು ದೀರ್ಘಕಾಲದವರೆಗೆ ಮಾಡಲು ಬಯಸುತ್ತೇನೆಯೇ ಅನ್ನೋದರ ಬಗ್ಗೆ ನನಗೆ ಖಚಿತತೆ ಇರಲಿಲ್ಲ. ನನ್ನ ತಂದೆಗೆ ಸಹಾಯ ಮಾಡಲು ಮೂರು ವರ್ಷಗಳ ನಂತರ, ಅವರು ನನ್ನನ್ನು ದುಬೈಗೆ ಸಹಾಯಕನಾಗಿ ಚಿತ್ರೀಕರಣಕ್ಕೆ ಕರೆದೊಯ್ದರು, ಅಲ್ಲಿ ನಾವು ಮರಳಿನ ದಿಬ್ಬಗಳಲ್ಲಿ ಚಿತ್ರೀಕರಣ ಮಾಡಿದೆವು” ಎಂದು ಹೇಳಿದರು.


ಇದನ್ನೂ ಓದಿ:  Nayantara: ರೂಲ್ಸ್ ಬ್ರೇಕ್ ಮಾಡಿಲ್ಲ ನಯನತಾರಾ-ವಿಘ್ನೇಶ್! ಪಬ್ಲಿಸಿಟಿಗಾಗಿ ಆಸ್ಪತ್ರೆ ಗಿಮಿಕ್?


“ನಾವು ಅಲ್ಲಿ ನಟಿ ಸೆಲಿನಾ ಜೈಟ್ಲಿಯನ್ನು ಶೂಟ್ ಮಾಡುತ್ತಿದ್ದೆವು ಮತ್ತು ನನ್ನ ಗಮನವು ಭವ್ಯವಾದ ಮರಳಿನ ದಿಬ್ಬಗಳ ಮೇಲೆ ಮಾತ್ರ ಇತ್ತು, ಏಕೆಂದರೆ ನಾನು ನನ್ನ ಜೀವನದಲ್ಲಿ ಅಂತಹದ್ದನ್ನು ಹಿಂದೆಂದೂ ನೋಡಿರಲಿಲ್ಲ. ಅದರ ಸೌಂದರ್ಯವು ನನ್ನ ಕಣ್ಣುಗಳನ್ನು ಸೆಳೆಯಿತು ಮತ್ತು ಈ ಕೆಲಸ ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ ಎಂದು ನನಗೆ ಮನವರಿಕೆ ಮಾಡಿಕೊಟ್ಟಿತು, ಇದು ಅತ್ಯಂತ ಸುಂದರವಾದ ವಿಷಯಗಳು ಮತ್ತು ಜನರನ್ನು ಸೆರೆಹಿಡಿಯುವುದು ಮಾತ್ರವಲ್ಲ, ಆದರೆ ಹೊಸ ಸ್ಥಳಗಳನ್ನು ಅನ್ವೇಷಿಸಲು ನನಗೆ ಅವಕಾಶ ನೀಡಿತು. ನಾನು ಪ್ರಯಾಣಿಸಲು ಇಷ್ಟಪಡುತ್ತೇನೆ, ಆದ್ದರಿಂದ ನಾನು ಟ್ರಾವೆಲ್ ಫೋಟೋಗ್ರಾಫರ್ ಆಗಲು ನಿರ್ಧರಿಸಿದೆ ಮತ್ತು ನಾನು ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ” ಎಂದು ಹೇಳಿದರು.


ಶ್ರದ್ಧಾ ಕಪೂರ್ ಅವರೊಂದಿಗಿನ ಸ್ನೇಹದ ಬಗ್ಗೆ ಏನ್ ಹೇಳಿದ್ರು ರೋಹನ್?
ನಿಮ್ಮ ಮತ್ತು ಶ್ರದ್ಧಾ ಕಪೂರ್ ಅವರ ಸ್ನೇಹದ ಬಗ್ಗೆ ಸ್ವಲ್ಪ ಹೇಳಿ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಎಲ್ಲಾ ವದಂತಿಗಳಿಗೆ ನಿಮ್ಮ ಪ್ರತಿಕ್ರಿಯೆ ಏನು ಅಂತ ಕೇಳಿದ ಪ್ರಶ್ನೆಗೆ ರೋಹನ್ “ನೀವೇ ಅವುಗಳನ್ನು ವದಂತಿಗಳು ಎಂದು ಕರೆದಿದ್ದೀರಿ! ಅದಕ್ಕೆ ಸೇರಿಸಲು ನನ್ನ ಬಳಿ ಬೇರೇನೂ ಇಲ್ಲ” ಎಂದು ಹೇಳಿದರು.

Published by:Ashwini Prabhu
First published: