Vijay Deverakonda: ಸೆಕ್ಸ್ ಲೈಫ್ ಬಗ್ಗೆ ನಟ ವಿಜಯ್ ದೇವರಕೊಂಡ ಏನಂದ್ರು ಗೊತ್ತಾ? ಇಲ್ಲಿದೆ ನೋಡಿ

‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಹೊಸ ಸಂಚಿಕೆಯಲ್ಲಿ, ವಿಜಯ್ ದೇವರಕೊಂಡ ತಮ್ಮ ಲೈಂಗಿಕ ಜೀವನದ ಬಗ್ಗೆ ತುಂಬಾನೇ ಬಹಿರಂಗವಾಗಿ ಮಾತನಾಡಿದ್ದಾರೆ ನೋಡಿ. ಅವರು ಕರಣ್ ಜೋಹರ್ ಅವರ ಜೊತೆಯಲ್ಲಿ ಮಾತನಾಡುತ್ತಾ ಅನೇಕ ವಿಷಯಗಳ ಬಗ್ಗೆ ಹೇಳಿಕೊಂಡಿದ್ದಾರೆ.

ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ

  • Share this:
ತೆಲುಗಿನ ಅರ್ಜುನ್ ರೆಡ್ಡಿ (Arjun Reddy) ಅಂತ ಹೇಳಿದರೆ ಸಾಕು ಬಹುತೇಕ ಎಲ್ಲರಿಗೂ ನಾವು ಯಾವ ನಟನ (Actor) ಬಗ್ಗೆ ಮಾತಾಡುತ್ತಿದ್ದೇವೆ ಅಂತ ಗೊತ್ತಾಗಿ ಬಿಡುತ್ತದೆ. ಹೌದು.. ಅನೇಕ ರೀತಿಯ ಬೋಲ್ಡ್ ಆಗಿರುವ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡ ನಟ ವಿಜಯ್ ದೇವರಕೊಂಡ (Vijay Deverakonda) ಅವರು ಈಗಾಗಲೇ ಅನೇಕ ಸೂಪರ್ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ ಮತ್ತು ಈಗ ಬಾಲಿವುಡ್ ನಲ್ಲಿಯೂ ಸಹ ತಮ್ಮ ನಟನೆಯ ಚಮಕ್ ಅನ್ನು ತೋರಿಸಲು ಸಜ್ಜಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇತ್ತೀಚೆಗೆ ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ (Koffee with Karan Season 7) ಎಪಿಸೋಡ್ ವೊಂದರಲ್ಲಿ ಅತಿಥಿಯಾಗಿ (Guest) ಆಗಮಿಸಿದ್ದು ಏನೆಲ್ಲಾ ಹೇಳಿದ್ದಾರೆ ನೋಡಿ.

‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರಲ್ಲಿ ಅಥಿತಿಯಾಗಿ ಬಂದ ವಿಜಯ್ 
ಇತ್ತೀಚೆಗೆ ಈ ನಟ ಬಾಲಿವುಡ್ ನ ಜನಪ್ರಿಯ ನಿರ್ಮಾಪಕರಾದ ಕರಣ್ ಜೋಹರ್ ಅವರು ನಡೆಸಿ ಕೊಡುವಂತಹ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಎಪಿಸೋಡ್ ವೊಂದರಲ್ಲಿ ಅತಿಥಿಯಾಗಿ ಆಗಮಿಸಿದ್ದರು. ಲೈಗರ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾಗೆ ಪಾದಾರ್ಪಣೆ ಮಾಡಲು ಸಜ್ಜಾಗಿರುವ ದಕ್ಷಿಣ ಭಾರತದ ಸ್ಟಾರ್ ವಿಜಯ್ ದೇವರಕೊಂಡ ಅವರು ಗುರುವಾರ ‘ಕಾಫಿ ವಿತ್ ಕರಣ್’ ಶೋ ನ ಸೋಫಾದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು.

ತಮ್ಮ ಲೈಂಗಿಕ ಜೀವನದ ಬಗ್ಗೆ ಹೇಳಿದ್ದೇನು ನೋಡಿ
‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರ ಹೊಸ ಸಂಚಿಕೆಯಲ್ಲಿ, ವಿಜಯ್ ದೇವರಕೊಂಡ ತಮ್ಮ ಲೈಂಗಿಕ ಜೀವನದ ಬಗ್ಗೆ ತುಂಬಾನೇ ಬಹಿರಂಗವಾಗಿ ಮಾತನಾಡಿದ್ದಾರೆ ನೋಡಿ. ಅವರು ಕರಣ್ ಜೋಹರ್ ಅವರ ಜೊತೆಯಲ್ಲಿ ಮಾತನಾಡುತ್ತಾ ಅನೇಕ ವಿಷಯಗಳ ಬಗ್ಗೆ ಹೇಳಿಕೊಂಡರು. ತನ್ನ ಮೈಮೇಲೆ ಆದಂತಹ ಚಿಕ್ಕಪುಟ್ಟ ಗಾಯಗಳನ್ನು ಹೇಗೆ ಮೇಕಪ್ ಮಾಡಿಕೊಂಡು ಮುಚ್ಚಿಕೊಳ್ಳುತ್ತಾರೆ ಮತ್ತು ಆಸಕ್ತಿದಾಯಕ ಸಾರ್ವಜನಿಕ ಸ್ಥಳಗಳಲ್ಲಿ ಇವರು ಹೇಗೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಎಂಬುದನ್ನೂ ಸಹ ಶೋ ನಲ್ಲಿ ವಿಜಯ್ ಬಹಿರಂಗಪಡಿಸಿದರು.

ಇದನ್ನೂ ಓದಿ: Vijay Deverakonda: ಲೋಕಲ್​ ಟ್ರೈನ್​ನಲ್ಲಿ ಅನನ್ಯಾ ಪಾಂಡೆ ತೊಡೆ ಮೇಲೆ ಮಲಗಿದ ಲೈಗರ್​! ಫೋಟೋ ನೋಡಿ ಬೆರಗಾದ ಫ್ಯಾನ್ಸ್​​

ಈ ಸಂಚಿಕೆಯಲ್ಲಿನ ಆಸಕ್ತಿದಾಯಕ ಬಿಂಗೊ ಆಟದಲ್ಲಿ, ವಿಜಯ್ ಮತ್ತು ನಟಿ ಅನನ್ಯಾ ಇಬ್ಬರೂ ಜೀವನದಲ್ಲಿ ತಾವು ಮಾಡಿದ ಕೆಲಸಗಳನ್ನು ರೌಂಡ್ ಮಾಡುವುದರ ಮೂಲಕ ಒಪ್ಪಿಕೊಳ್ಳಬೇಕಾಗಿತ್ತು. ಇದರಲ್ಲಿರುವ ಪ್ರಶ್ನೆಗಳು 'ಒಂದು ವಾರಕ್ಕೂ ಹೆಚ್ಚು ಕಾಲ ನನ್ನ ಸಂಗಾತಿಯೊಂದಿಗೆ ಮಾತನಾಡಲಿಲ್ಲ', 'ಅಜ್ಞಾತ ಸ್ಥಳದಲ್ಲಿ ಎಚ್ಚರಗೊಂಡೆ', 'ವ್ಯಾನಿಟಿ ವ್ಯಾನ್ ನಲ್ಲಿ ಮಾಡಿದ್ದು' ಮತ್ತು ಇನ್ನೂ ಅನೇಕ ಹೇಳಿಕೆಗಳು ಸೇರಿದ್ದವು.

ಕರಣ್ ಕೇಳಿದ ಪ್ರಶ್ನೆಗಳಿಗೆ ಏನಂದ್ರು ನಟ ವಿಜಯ್ ದೇವರಕೊಂಡ
ಈ ಆಟದಲ್ಲಿ ವಿಜಯ್ 'ಮೈಮೇಲೆ ಆದ ಹಿಕ್ಕಿ (ಕಲೆಗಳು)ಯನ್ನು ಕವರ್ ಮಾಡಲು ಮೇಕಪ್ ಅನ್ನು ಅನ್ವಯಿಸುತ್ತಾರೆ' ಎಂಬ ಹೇಳಿಕೆಯನ್ನು ಸರಿ ಎಂದು ಟಿಕ್ ಮಾಡಿದರು. ಇದನ್ನು ನೋಡಿ ಕರಣ್ ವಿಜಯ್ ಅವರನ್ನು ಪ್ರಶ್ನಿಸಿದಾಗ, ವಿಜಯ್ ಅವರು ತಮ್ಮ ಹಿಕ್ಕಿಗಳನ್ನು ಮೇಕಪ್ ನಿಂದ ಅನೇಕ ಬಾರಿ ಮುಚ್ಚಿ ಕೊಂಡಿದ್ದೇನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ತುಂಬಾ ಸಲ ಲೈಂಗಿಕ ಕ್ರಿಯೆ ಮಾಡಿರುವುದಾಗಿ ಹೇಳಿದರು.

"ಅದು ಒಂದು ಚಿಕ್ಕ ದೋಣಿಯಿತ್ತು, ಅದರಲ್ಲಿ ಸಹ ಮಾಡಿದ್ದೆ" ಅಂತ ವಿಜಯ್ ಹೇಳಿದಾಗ, ಕರಣ್ ಮರು ಪ್ರಶ್ನೆ ಮಾಡಿ ಅದೊಂದೇ ಸ್ಥಳದಲ್ಲಿ ಮಾಡಿದ್ದಾ ಅಂತ ಕೇಳಿಯೇ ಬಿಟ್ಟರು. ಆಗ ವಿಜಯ್ 'ಕಾರುಗಳಲ್ಲಿ ಮಾಡಿದ್ದೇನೆ' ಅಂತ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರಣ್, ನಿಮಗೆ ಅನಾನುಕೂಲವಾಗುವುದಿಲ್ಲವೇ ಅಂತ ಕೇಳಿದ್ದಕ್ಕೆ ನಟ “ತುಂಬಾನೇ ಅವಸರದ ಸಮಯದಲ್ಲಿ ಮಾಡಬೇಕಾಯಿತು” ಅಂತ ಹೇಳಿದರು.

ಇದನ್ನೂ ಓದಿ:  Bipasha Basu Pregnancy: ಗುಡ್​ ನ್ಯೂಸ್​ ಕೊಟ್ಟ ಬಿಪಾಶಾ, ಮೊದಲ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್​ ಬ್ಯೂಟಿ

ದೊಡ್ಡ ಬ್ಲಾಕ್‌ಬಸ್ಟರ್ ಸಿನೆಮಾ ಅಥವಾ ಲೈಂಗಿಕತೆಯ ನಡುವೆ ಆಯ್ಕೆಯನ್ನು ನೀಡಿದಾಗ ಯಾವುದನ್ನು ನೀವು ಆಯ್ಕೆ ಮಾಡುವಿರಿ ಅಂತ ವಿಜಯ್ ಗೆ ಕೇಳಿದಾಗ, ನಟ ತನ್ನ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಂಡರು. ಅರ್ಜುನ್ ರೆಡ್ಡಿ ನಟ ಚಮತ್ಕಾರಿ ರ್‍ಯಾಪಿಡ್-ಫೈರ್ ಸುತ್ತಿನಲ್ಲಿ ಲೈವ್ ಪ್ರೇಕ್ಷಕರ ಶೇಕಡಾ 68 ರಷ್ಟು ಮತಗಳನ್ನು ಪಡೆಯುವುದರೊಂದಿಗೆ ಗೆದ್ದರು ಮತ್ತು ಅನನ್ಯಾ ಬಝರ್ ಸುತ್ತಿನಲ್ಲಿ ಗೆದ್ದರು.

ವಿಜಯ್ ಅವರ ಮುಂದಿನ ಸಿನೆಮಾ ರಿಲೀಸ್ ಯಾವಾಗ?
ವಿಜಯ್ ಲೈಗರ್ ನಲ್ಲಿ ಬಾಕ್ಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ, ಇದನ್ನು ಪುರಿ ಜಗನ್ನಾಥ್ ನಿರ್ದೇಶಿಸಿದ್ದಾರೆ ಮತ್ತು ಕರಣ್ ಜೋಹರ್ ಅವರು ನಿರ್ಮಿಸುತ್ತಿದ್ದಾರೆ. ಈ ಚಿತ್ರವು ಆಗಸ್ಟ್ 25, 2022 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
Published by:Ashwini Prabhu
First published: