• Home
 • »
 • News
 • »
 • entertainment
 • »
 • Nepotism: ನಟ ರಾಹುಲ್ ದೇವ್ ಬಾಲಿವುಡ್ ದಿಗ್ಗಜರ ಬಗ್ಗೆ ಹೇಳಿದ್ದೇನು?

Nepotism: ನಟ ರಾಹುಲ್ ದೇವ್ ಬಾಲಿವುಡ್ ದಿಗ್ಗಜರ ಬಗ್ಗೆ ಹೇಳಿದ್ದೇನು?

ರಾಹುಲ್ ದೇವ್

ರಾಹುಲ್ ದೇವ್

Nepotism: ಬಿಗ್‌ಬಾಸ್ ಸೀಸನ್ 10 ರಲ್ಲಿ ಕಾಣಿಸಿಕೊಂಡ ಬಾಲಿವುಡ್ ಮತ್ತು ಟಿವಿ ಸೀರಿಯಲ್ ನಟ ರಾಹುಲ್ ದೇವ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ ಸ್ವಜನಪಕ್ಷಪಾತದ ಬಗ್ಗೆ ಮಾತನಾಡಿದ್ದಾರೆ.

 • Share this:

  ಈ ಎಲ್ಲಾ ವೃತ್ತಿರಂಗದಲ್ಲೂ ಈ ‘ನೆಪೋಟಿಸಮ್’ (Nepotism) ಇದ್ದೇ ಇರುತ್ತದೆ ಅಂತ ಹೇಳಿದರೆ ಬಹುಶಃ ತಪ್ಪಾಗುವುದಿಲ್ಲ ಅಂತ ಅನ್ನಿಸುತ್ತದೆ. ಹೌದು ನೆಪೋಟಿಸಮ್ ಎಂದರೆ ಸ್ವಜನಪಕ್ಷಪಾತ ಅಂತ ಹೇಳಬಹುದು. ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಬೇಕು ಎಂದರೆ ಸಿನೆಮಾ (Cinema) ರಂಗದಲ್ಲಿ ತುಂಬಾನೇ ಪ್ರಭಾವ ಬೀರಿರುವ ವ್ಯಕ್ತಿಗಳಾಗಿದ್ದು, ಅವರ ಮಕ್ಕಳಿಗೆ, ಪರಿಚಯದವರಿಗೆ ಮತ್ತು ಸ್ನೇಹಿತರಿಗೆ ಹೆಚ್ಚು ಹೆಚ್ಚು ಅವಕಾಶಗಳನ್ನು(Opportunity) ನೀಡುವ ಒಂದು ಪರಿಪಾಠವನ್ನು ಬೆಳೆಸಿಕೊಂಡಿರುವುದು ಅಂತರ್ಥ. ಬಿಗ್‌ಬಾಸ್ ಸೀಸನ್ 10 ರಲ್ಲಿ ಕಾಣಿಸಿಕೊಂಡ ಬಾಲಿವುಡ್ ಮತ್ತು ಟಿವಿ ಸೀರಿಯಲ್ ನಟ ರಾಹುಲ್ ದೇವ್ ತಮ್ಮ ಇತ್ತೀಚಿನ ಸಂದರ್ಶನದಲ್ಲಿ (Interview) ಸ್ವಜನಪಕ್ಷಪಾತದ ಬಗ್ಗೆ ಎಳೆ ಎಳೆಯಾಗಿ ತೆರೆದಿಟ್ಟರು.


  ಅಮಿತಾಭ್ ಬಚ್ಚನ್, ಶಾರುಖ್ ಖಾನ್, ರಾಜೇಶ್ ಖನ್ನಾ, ಧರ್ಮೇಂದ್ರ, ಅಕ್ಷಯ್ ಕುಮಾರ್ ಮತ್ತು ಇತರರು ಹೊರಗಿನವರು, ಆದ್ದರಿಂದ ಬಾಲಿವುಡ್ ನಲ್ಲಿ 'ಚಲನಚಿತ್ರದ ಹಿನ್ನಲೆಯಿರುವ ಕುಟುಂಬಗಳು' ಮಾತ್ರ ಯಶಸ್ಸನ್ನು ಪಡೆಯುತ್ತವೆ ಎಂದು ನಾವು ಸಾಮಾನ್ಯೀಕರಿಸುವುದು ಮತ್ತು ಹೇಳುವುದು ಸರಿಯಲ್ಲ ಎಂದು ನಟ ಹೇಳಿದರು.


  ನಟ ರಾಹುಲ್ ದೇವ್ ಬಾಲಿವುಡ್ ದಿಗ್ಗಜ ನಟರ ಬಗ್ಗೆ ಹೇಳಿದ್ದೇನು?


  ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ದೇವ್ ಅವರು 'ಚಲನಚಿತ್ರ ಹಿನ್ನಲೆಯಿರುವ ಕುಟುಂಬಗಳಿಗೆ' ಅನೇಕ ಪ್ರಯೋಜನಗಳಿವೆ. ಆದರೆ ಬಾಲಿವುಡ್ ನ ಅತ್ಯಂತ ಜನಪ್ರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಶಾರುಖ್ ಖಾನ್ ಅವರಂತಹ ತಾರೆಯರು ಒಂದು ಸಮಯದಲ್ಲಿ ಅವರು ಸಹ ಹೊರಗಿನವರಾಗಿದ್ದರು ಎಂದು ಹೇಳಿದರು.ಸುದ್ದಿ ಮಾಧ್ಯಮದೊಂದಿಗೆ ಮಾತನಾಡುತ್ತಾ "ಚಿತ್ರೋದ್ಯಮದ ಹಿನ್ನಲೆಯಿರುವ ಕುಟುಂಬದಿಂದ ಬಂದಿರುವುದು ಅದರ ಅನುಕೂಲಗಳನ್ನು ಹೊಂದಿದೆ, ಆದರೆ ನೀವು ಪ್ರಾಮಾಣಿಕವಾಗಿ ಸುತ್ತಲೂ ನೋಡಿದರೆ, ಜನಪ್ರಿಯ ನಟರೆಲ್ಲರೂ ಒಂದೊಮ್ಮೆ ಹೊರಗಿನವರೇ ಆಗಿದ್ದಾರೆ.


  ಇದನ್ನೂ ಓದಿ: ಶಂಕರ್​ ನಾಗ್​ ಮೃತಪಟ್ಟ ಸ್ಥಳದಲ್ಲಿ ಪ್ರತಿ ಅಮಾವಾಸ್ಯೆ ಕಾಯ್ತಾರೆ ಇವರು! ಕಾರಣ ಕೇಳಿದ್ರೆ ನೀವು ಬೆಚ್ಚಿ ಬೀಳ್ತೀರಿ


  ಅದು ಅಮಿತಾಭ್ ಬಚ್ಚನ್, ಧರ್ಮೇಂದ್ರ, ವಿನೋದ್ ಖನ್ನಾ, ರಾಜೇಶ್ ಖನ್ನಾ, ಶತ್ರುಘ್ನ ಸಿನ್ಹಾ, ಶಾರುಖ್, ಅಮೀರ್ ಮತ್ತು ಸಲ್ಮಾನ್ ಖಾನ್ ಅಥವಾ ಅಕ್ಷಯ್ ಕುಮಾರ್ ಎಲ್ಲರೂ ಹೊರಗಿನವರೇ ಆಗಿದ್ದಾರೆ. ಅವರು ಯಶಸ್ಸಿನ ಹಿಂದೆ ದೊಡ್ಡ ಕಥೆಯೇ ಇವೆ, ಆದ್ದರಿಂದ ನಾನು ಏನನ್ನೂ ಸಾಮಾನ್ಯೀಕರಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.


  ಬೇರೆ ಭಾಷೆಗಳ ಚಿತ್ರಗಳಲ್ಲಿನ ತಮ್ಮ ನಟನೆಯ ಬಗ್ಗೆ ರಾಹುಲ್ ಹೇಳುವುದೇನು ನೋಡಿ


  ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿನ ತಮ್ಮ ನಟನೆಯ ಬಗ್ಗೆ ಮಾತನಾಡಿದ ಅವರು, "ದಕ್ಷಿಣ ಚಿತ್ರೋದ್ಯಮದ ನಿರ್ದೇಶಕರು ನನಗೆ ಒಂದು ನಿರ್ದಿಷ್ಟ ಪಾತ್ರವಿದೆ ಎಂದು ಗುರುತಿಸುತ್ತಾರೆ ಎಂದು ನಾನು ಹೇಳಲೇಬೇಕು, ಅದನ್ನು ಅವರ ಕಥೆಗಳು ಮತ್ತು ಚಲನಚಿತ್ರಗಳಲ್ಲಿ ಬಳಸಬಹುದು, ಇದು ನನ್ನ ಪ್ರಯಾಣವನ್ನು ಯಶಸ್ವಿ ಮತ್ತು ಸ್ಮರಣೀಯವಾಗಿಸಿದೆ. ಈಗ ಇಲ್ಲಿನ ನಿರ್ದೇಶಕರು ಸಹ ವಿಭಿನ್ನವಾದದ್ದನ್ನು ಹುಡುಕುತ್ತಿದ್ದಾರೆ, ನನಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುವ ವಿಶ್ವಾಸಾರ್ಹ ಪಾತ್ರಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ನಾನು ಗಮನಿಸುತ್ತೇನೆ.


  ಇದನ್ನೂ ಓದಿ: ಕಾದಂಬರಿ ಸಿನಿಮಾ ಆದಾಗ ಅದ್ಭುತ! ಪೊನ್ನಿಯಿನ್ ಸೆಲ್ವನ್​ಗೆ ವ್ಯಾಪಕ ಮೆಚ್ಚುಗೆ


  ಜನರ ಮೆಚ್ಚುಗೆ


  ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ನಾನು ಕೆಲಸ ಮಾಡುವಾಗ, ಜನರು ಆರಂಭದಲ್ಲಿ ನಾನು ಸಾಕಷ್ಟು ಸ್ಥಳೀಯವಾಗಿ ಕಾಣುವುದು ಕಷ್ಟ ಎಂದು ಭಾವಿಸಿದ್ದರು. ಆದಾಗ್ಯೂ, ಜನರು ನನ್ನನ್ನು ಚೆನ್ನಾಗಿಯೇ ಸ್ವೀಕರಿಸಿದರು" ಎಂದು ಹೇಳಿದರು. ಇದಕ್ಕೂ ಮೊದಲು, ರಾಹುಲ್ ತಮ್ಮ ಆರ್ಥಿಕ ಪರಿಸ್ಥಿತಿಗಳಿಂದಾಗಿ ಬಿಗ್‌ಬಾಸ್ ಸೀಸನ್ 10 ರಲ್ಲಿ ಭಾಗವಹಿಸಬೇಕಾಯಿತು ಎಂದು ಬಹಿರಂಗಪಡಿಸಿದರು. ಇಷ್ಟು ವರ್ಷಗಳ ಕಾಲ ಕೆಲಸ ಮಾಡಿದರೂ ಸಹ ಅವಕಾಶಗಳ ಕೊರತೆ ಇನ್ನೂ ಇದೆ ಅಂತ ಹೇಳಿದರು.


  ಚಿತ್ರೋದ್ಯಮದಲ್ಲಿ ಟ್ರೆಂಡ್ ತುಂಬಾನೇ ವೇಗವಾಗಿ ಬದಲಾಗುತ್ತವೆ


  "ನಾನು ಫಿಟ್ನೆಸ್ ಬ್ರ್ಯಾಂಡ್ ಅನ್ನು ಪ್ರಾರಂಭಿಸಿದೆ, ಆದರೆ ಅದು ಅಷ್ಟೊಂದು ಚೆನ್ನಾಗಿ ಕೆಲಸ ಮಾಡಲಿಲ್ಲ. ನನ್ನ ಮಗ ಓದಲು ಇಂಗ್ಲೆಂಡಿಗೆ ಹೋದ ನಂತರ, ನಾನು ಈಗ ಮುಂಬೈಗೆ ಹಿಂತಿರುಗಿ ನನ್ನ ನಟನಾ ವೃತ್ತಿಜೀವನದಲ್ಲಿ ಕೆಲಸ ಮಾಡುವುದು ಅಂತ ನಿರ್ಧರಿಸಿದೆ” ಅಂತ ಹೇಳಿದರು. “ಸದ್ಯಕ್ಕೆ ನನಗೆ ಯಾವುದೇ ಕೆಲಸವಿಲ್ಲದ ಕಾರಣ ನಾನು ಬಿಗ್‌ಬಾಸ್ 10 ರಲ್ಲಿ ಸ್ಪರ್ಧಿಯಾದೆ. ಅದಕ್ಕಾಗಿ ನಾನು ಯಾರನ್ನೂ ದೂಷಿಸುವುದಿಲ್ಲ, ಏಕೆಂದರೆ ನಮ್ಮ ಚಿತ್ರೋದ್ಯಮದಲ್ಲಿ ಟ್ರೆಂಡ್ ತುಂಬಾನೇ ವೇಗವಾಗಿ ಬದಲಾಗುತ್ತವೆ" ಎಂದು ಹೇಳಿದರು.

  First published: