• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Anupam Kher: ಬಾಲಿವುಡ್ ಚಿತ್ರಗಳಸೋಲಿನ ಬಗ್ಗೆ ಅನುರಾಗ್ ಕಶ್ಯಪ್ ಹೇಳಿಕೆಗೆ ಅನುಪಮ್ ಖೇರ್ ಖಡಕ್ ಉತ್ತರ!

Anupam Kher: ಬಾಲಿವುಡ್ ಚಿತ್ರಗಳಸೋಲಿನ ಬಗ್ಗೆ ಅನುರಾಗ್ ಕಶ್ಯಪ್ ಹೇಳಿಕೆಗೆ ಅನುಪಮ್ ಖೇರ್ ಖಡಕ್ ಉತ್ತರ!

ಅನುಪಮ್ ಖೇರ್ ಮತ್ತು ಅನುರಾಗ್ ಕಶ್ಯಪ್

ಅನುಪಮ್ ಖೇರ್ ಮತ್ತು ಅನುರಾಗ್ ಕಶ್ಯಪ್

ಬಾಲಿವುಡ್ ಚಿತ್ರಗಳ ಬಗ್ಗೆ ಅನುರಾಗ್ ನೀಡಿದ ಒಂದು ಹೇಳಿಕೆ ಯಾಕೋ ನಟ ಅನುಪಮ್ ಖೇರ್ ಅವರಿಗೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ಅನುರಾಗ್ ಅವರು ಹಿಂದಿ ಚಿತ್ರಗಳ ಬಗ್ಗೆ ಹೇಳಿದ್ದಾದರೂ ಏನು? ನೋಡೋಣ ಬನ್ನಿ.

  • Share this:

ಇತ್ತೀಚೆಗೆ ಬಾಲಿವುಡ್ ಚಿತ್ರಗಳಿಗಿಂತಲೂ (Bollywood Movies) ದಕ್ಷಿಣ ಭಾರತದ ಚಿತ್ರಗಳು ಜೋರಾಗಿ ಸದ್ದು ಮಾಡಿ, ಗಲ್ಲಾ ಪೆಟ್ಟಿಗೆಯನ್ನು (Box Office) ತುಂಬಿಸಿಕೊಂಡಿದ್ದು ನಮಗೆಲ್ಲಾ ಗೊತ್ತೇ ಇದೆ. ಬಾಲಿವುಡ್ ನ ಜನಪ್ರಿಯ ನಿರ್ದೇಶಕರಲ್ಲಿ ಒಬ್ಬರಾದ ಅನುರಾಗ್ ಕಶ್ಯಪ್ (Anurag Kashyap) ಅವರು ಹೀಗೆ ದಕ್ಷಿಣ ಭಾರತದ ಚಿತ್ರಗಳ ಮುಂದೆ ಬಾಲಿವುಡ್ ಚಿತ್ರಗಳು ಮಂಕಾಗಿರುವುದರ ಬಗ್ಗೆ ನೀಡಿದ ಒಂದು ಹೇಳಿಕೆ ಚಿತ್ರರಂಗದ ಕೆಲವು ನಟರಿಗೆ ಇಷ್ಟವಾಗಿಲ್ಲ. ಹೌದು.. ಬಾಲಿವುಡ್ ಚಿತ್ರಗಳ ಬಗ್ಗೆ ಅನುರಾಗ್ ನೀಡಿದ ಒಂದು ಹೇಳಿಕೆ ಯಾಕೋ ನಟ ಅನುಪಮ್ ಖೇರ್ (Anupam Kker) ಅವರಿಗೆ ಇಷ್ಟವಾದಂತೆ ಕಾಣಿಸುತ್ತಿಲ್ಲ. ಅನುರಾಗ್ ಅವರು ಹಿಂದಿ ಚಿತ್ರಗಳ ಬಗ್ಗೆ ಹೇಳಿದ್ದಾದರೂ ಏನು? ನೋಡೋಣ ಬನ್ನಿ.


ಅನುರಾಗ್ ಅವರ ಹೇಳಿಕೆಗೆ ಅನುಪಮ್ ಅವರ ಪ್ರತಿಕ್ರಿಯೆ
ಅನುರಾಗ್ ಅವರು “ಈ ದಿನಗಳಲ್ಲಿ ಹಿಂದಿಯ ಕೆಲವು ಉತ್ತಮ ಚಲನಚಿತ್ರಗಳು ಸಹ ಚಿತ್ರಮಂದಿರಗಳಲ್ಲಿ ಉತ್ತಮವಾಗಿ ಹಣ ಗಳಿಕೆ ಮಾಡಿಲ್ಲ, ಏಕೆಂದರೆ ಭಾರತದಲ್ಲಿ ಆರ್ಥಿಕ ಕುಸಿತದಿಂದಾಗಿ ಜನರ ಬಳಿ ಸಾಕಷ್ಟು ಹಣವಿಲ್ಲ ಮತ್ತು ಜನರು ಕೋವಿಡ್-19 ಆದ ನಂತರ ತುಂಬಾನೇ ಜಾಗರೂಕತೆಯಿಂದ ಖರ್ಚು ಮಾಡಲು ಬಯಸುತ್ತಿದ್ದಾರೆ” ಎಂದು ಹೇಳಿದ್ದಾರೆ.


ಈ ಹೇಳಿಕೆಗೆ ನಟ ಅನುಪಮ್ ಖೇರ್ ಪ್ರತಿಕ್ರಿಯಿಸಿ “ತಮ್ಮ, ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು 2022 ರ ಅತಿ ಹೆಚ್ಚು ಹಣ ಗಳಿಕೆಯ ಹಿಂದಿ ಚಲನಚಿತ್ರ ಎಂದು ಉಲ್ಲೇಖಿಸುವ ಮೂಲಕ ಮಾತು ಮುಂದುವರೆಸಿ ಅವರ ಇತ್ತೀಚಿನ ಬಿಡುಗಡೆಯಾದ ತೆಲುಗು ಚಿತ್ರ ‘ಕಾರ್ತಿಕೇಯ 2’ ಸಹ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ:  Nabha Natesh: ಕೋಟಿ ಸಂಭಾವನೆ ಕೇಳಿ ಎಡವಟ್​ ಮಾಡಿಕೊಂಡ ಸ್ಯಾಂಡಲ್​ವುಡ್​ ನಟಿ! ಕೈಯಲ್ಲಿ ಸಿನಿಮಾ ಇಲ್ಲದೇ ಖಾಲಿ ಕೂತಿದ್ದಾರಂತೆ


ಸಿದ್ಧಾರ್ಥ್ ಕಾನನ್ ಅವರೊಂದಿಗಿನ ಸಂದರ್ಶನದಲ್ಲಿ, ನಟ "ಆ ಪ್ರಶ್ನೆಗೆ ಉತ್ತರಿಸುವ ಮೂಲಕ ನಾನು ಏಕೆ ಅವರ ಹೇಳಿಕೆಗೆ ಅಷ್ಟೊಂದು ಮಹತ್ವ ನೀಡಬೇಕು? ಅವರು ಏನು ಯೋಚಿಸುತ್ತಾರೆ ಎಂಬುದು ನನಗೆ ಮುಖ್ಯವಲ್ಲ ಎಂದು ಹೇಳಿದರು.


ಚಿತ್ರಗಳಲ್ಲಿ ಒಳ್ಳೆಯ ವಿಷಯದ ಕೊರತೆಯೇ ಫ್ಲಾಪ್ ಆಗಲು ಮೂಲ ಕಾರಣ 
ಮಾಲ್ ಗಳು ಮತ್ತು ಪಂಚತಾರಾ ಹೋಟೆಲ್ ಗಳು ಜನರಿಂದ ತುಂಬಿ ತುಳುಕುತ್ತಿವೆ. ಪಾರ್ಕಿಂಗ್ ಸ್ಥಳಗಳು ತುಂಬಿವೆ. ರಸ್ತೆಗಳು ಕಾರುಗಳಿಂದ ಜಾಮ್ ಆಗಿವೆ. ಹಣವಿಲ್ಲ ಎಂದು ಹೇಳಿದರೆ ಅದರ ಅರ್ಥವೇನು? ಜನರು ಈಗ ಬುದ್ಧಿವಂತಿಕೆಯಿಂದ ಖರ್ಚು ಮಾಡುತ್ತಿದ್ದಾರೆ. ಜನರು ಒಳ್ಳೆಯ ಚಿತ್ರಗಳನ್ನು ನೋಡಲು ಬಯಸುತ್ತಾರೆ ಎಂದು ಅನುಪಮ್ ಖೇರ್ ಹೇಳಿದರು.


“ಅನುರಾಗ್ ಕಶ್ಯಪ್ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ದುಡ್ಡಿನ ಕೊರತೆಗಿಂತ ಹೆಚ್ಚಾಗಿ, ಚಿತ್ರಮಂದಿರಗಳಲ್ಲಿ ಕಡಿಮೆ ಜನರು ಚಲನಚಿತ್ರಗಳನ್ನು ವೀಕ್ಷಿಸಲು ಬರುತ್ತಿರುವುದರ ಹಿಂದೆ ಮುಖ್ಯವಾದ ಕಾರಣವೆಂದರೆ ಚಿತ್ರಗಳಲ್ಲಿ ಒಳ್ಳೆಯ ವಿಷಯದ ಕೊರತೆಯೇ ಕಾರಣ” ಎಂದು ಅವರು ಹೇಳಿದರು.


ಬಾಲಿವುಡ್ ಸಿನೆಮಾದ ಮುಂದಿನ ಸವಾಲೇನು?
ಈ ಸಂದರ್ಭದಲ್ಲಿ ಅನುಪಮ್ ಖೇರ್ ಅವರ ಪ್ರಕಾರ, ಹಿಂದಿ ಸಿನೆಮಾ ವ್ಯವಹಾರಕ್ಕೆ ಧಕ್ಕೆಯಾಗಿದೆ ಅಂತ ಹೇಳಲು ಸಾಧ್ಯವಿಲ್ಲ. ನಿರ್ಮಾಣಕಾರರು ಸಿನೆಮಾ ನಿರ್ಮಾಣದ ಕಾರ್ಯತಂತ್ರದಲ್ಲಿ ಬದಲಾವಣೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ನಂಬಿರುವುದಾಗಿ ಹೇಳಿದರು.


ಇದನ್ನೂ ಓದಿ:  Priyanka Chopra: ಲಾಸ್ ಏಂಜಲೀಸ್​ನಲ್ಲಿರೋ ಪ್ರಿಯಾಂಕಾ ಚೋಪ್ರಾ ಐಷಾರಾಮಿ ಮನೆ ಹೇಗಿದೆ?


ಈ ವರ್ಷದ ಆಸ್ಕರ್ ಪ್ರಶಸ್ತಿಗೆ ಭಾರತದ ಅಧಿಕೃತ ಸಲ್ಲಿಕೆಯಾಗಿ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಆಯ್ಕೆ ಮಾಡಬಾರದು ಎಂದು ಚಲನಚಿತ್ರ ನಿರ್ದೇಶಕ ಅನುರಾಗ್ ಅವರ ಹೇಳಿಕೆಗೆ ಅನುಪಮ್ ಅವರಿಂದ ಬಲವಾದ ಪ್ರತಿಕ್ರಿಯೆ ಬಂದಿತ್ತು. ಅನುರಾಗ್ ಅವರು ಚಲನಚಿತ್ರವನ್ನು ನೋಡದೆ ಚಿತ್ರದ ಬಗ್ಗೆ ಮಾತಾಡಿದ್ದಾರೆ ಎಂದು ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಹೇಳಿದರು.

First published: