ಮಿನುಗು ತಾರೆ ಇಲ್ಲಿ ಮಲಗಿದ್ದಾರೆ! ಕಲ್ಪನಾ ಸಮಾಧಿ ಈಗಿನ ಸ್ಥಿತಿ ಹೇಗಿದೆ ಗೊತ್ತಾ?

ಯಾರೆ ಸಾವನ್ಬಪ್ಪಿದರು ಅವರ ನೆನಪಿಗಾಗಿ ಸಮಾಧಿ ಕಟ್ಟುತ್ತಾರೆ. ಅಂತೆಯೇ ನಟಿ ಕಲ್ಪನಾ ಅವರಿಗೂ ಸಮಾಧಿ ಕಟ್ಟಲಾಗಿದೆ, ಆದರೆ ಅವರ ಸಮಾಧಿಯ ಈವಾಗಿನ ಸ್ಥಿತಿ ನೋಡಿದಾಗ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!

ಫೋಟೋ: ಕಲಾ ಮಾಧ್ಯಮ

ಫೋಟೋ: ಕಲಾ ಮಾಧ್ಯಮ

 • Share this:
  ಕನ್ನಡದ ಖ್ಯಾತ ನಟಿ ಶರತ್​ ಲತಾ ಬಗ್ಗೆ ಗೊತ್ತಿದ್ಯಾ? ಹೀಗೆ ಹೇಳಿದರೆ ಖಂಡಿತಾ ಗೊತ್ತಿರಲು ಸಾಧ್ಯವಿಲ್ಲ. ಆದರೆ ಮಿನುಗು ತಾರೆ ಕಲ್ಪನಾ ಎಂದರೆ ಅನೇಕರಿಗೆ ಗೊತ್ತಾಗಬಹುದು. ಕನ್ನಡ ಸಿನಿಮಾ ರಂಗದಲ್ಲಿ ಶ್ರೇಷ್ಠ ನಟಿಯಾಗಿ  ಮಿಂಚಿ ದುರಂತವಾಗಿ ಮರೆಯಾದ ನಟಿ ಕಲ್ಪನಾ. ಅಷ್ಟೇ ಏಕೆ ಅಂದಿನ ಕಾಲದಲ್ಲಿ ಪಾತ್ರಕ್ಕೆ ತಕ್ಕಂತೆ ಅದ್ಭುತವಾಗಿ ನಟಿಸುತ್ತಾ, ಪ್ರೇಕ್ಷಕರನ್ನು ಕುಳಿತಲ್ಲೇ ಕಣ್ಣು ಮಿಟಿಕಿಸುವಂತೆ ಮಾಡಿದ ನಟಿ ಇವರು. ಸಾಕಷ್ಟು ಅಭಿಮಾನಿಗಳು ಹೊಂದಿದ್ದರು ಮಿನುಗುತಾರೆ. ಆದರೆ ಅದೇನೋ ಬಹು ಬೇಗ ಈ ಶ್ರೇಷ್ಠ ನಟಿಯನ್ನು ಕಳೆದುಕೊಳಳಬೇಕಾಯಿತು. ಕಲ್ಪನಾ ಸಾವಿನ ಬಗ್ಗೆ ಸಾಕಷ್ಟು ಗೊಂದಲಗಳ ಮಾತಿದೆ. ಆದರೆ ಖ್ಯಾತ ನಟರೊಂದೊಗೆ ನಟಿಸಿ, ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಯಲ್ಲೂ ತಮ್ಮ ಅಭಿನಯವನ್ನು ತೋರ್ಪಡಿಸಿದ ಈ ನಟಿ 1979ರಲ್ಲಿ ನಿಧನರಾದರು. ಇಂದಿಗೆ ಕಲ್ಪನಾ ಅವರು ನಿಧನರಾಗಿ 35 ವರ್ಷ.

  ಯಾರೆ ಸಾವನ್ಬಪ್ಪಿದರು ಅವರ ನೆನಪಿಗಾಗಿ ಸಮಾಧಿ ಕಟ್ಟುತ್ತಾರೆ. ಅಂತೆಯೇ ನಟಿ ಕಲ್ಪನಾ ಅವರಿಗೂ ಸಮಾಧಿ ಕಟ್ಟಲಾಗಿದೆ, ಆದರೆ ಅವರ ಸಮಾಧಿಯ ಈವಾಗಿನ ಸ್ಥಿತಿ ನೋಡಿದಾಗ ಅಚ್ಚರಿ ಆಗೋದರಲ್ಲಿ ಅನುಮಾನವೇ ಇಲ್ಲ!

  ಕಲ್ಪನಾ ಅವರು ಹುಟ್ಟಿದ್ದು 18 ಜುಲೈ 1943. ಮೂಲತಃ ದಕ್ಷಿಣ ಕನ್ನಡದವರು. ಕೃಷ್ಣಮೂರ್ತಿ ಮತ್ತು ಜಾನಕಮ್ಮ ದಂಪತಿಗಳ ಪುತ್ರಿಯಾಗಿ ಜನಿಸಿ ಈಕೆ. ಕನ್ನಡ ಸಿನಿಮಾ ರಂಗದಲ್ಲಿ ಮಿನುಗು ತಾರೆಯಾಗಿ ಮಿಂಚಿದರು. ‘ಸಾಕು ಮಗಳು’ ಸಿನಿಮಾದ ಮೂಲಕ ಕೆರಿಯರ್​ ಆರಂಭಿಸಿದ ಈಕೆ, ಬೆಳ್ಳಿಮೋಡ, ಶರಪಂಜರ, ಗೆಜ್ಜೆ ಪೂಜೆ, ಎರಡು ಕನಸು, ಕಪ್ಪು ಬಿಳುಪು, ಗಂಧದ ಗುಡಿ, ಬಗಾರದ ಹೂವು ಸೇರಿದಂತೆ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ.  ಕನ್ನಡ ಮಾತ್ರವಲ್ಲ ತಮಿಳು, ತೆಲುಗು, ತುಳು, ಮಲಯಾಳಂ ಸಿನಿಮಾದಲ್ಲೂ ನಟಿಸಿದ್ದಾರೆ. ಉತ್ಸಾಹ ಭರಿತ ಈ ನಟಿ ಅವರು 13 ಮೇ 1979 ರಂದು ಗೋಟುರು ಐಬಿಯಲ್ಲಿ ನಿಧರಾಗುತ್ತಾರೆ. ಆತ್ಮಹತ್ಯೆ ಮೂಲಕ ಬದುಕು ಮುಗಿಸುತ್ತಾರೆ.

  ಮಿನುಗು ತಾರೆ ಇಲ್ಲಿ ಮಲಗಿದ್ದಾರೆ!

  ಬೆಳೆಯುತ್ತಿರುವ ನಗರ ಬೆಂಗಳೂರು. ಇಲ್ಲಿ ಇಂದು ಇಂದು ಜಾಗವನ್ನು ನಾಳೆ ನೋಡಿದಾಗ ಅಜಗಜಾಂತರ ವ್ಯತ್ಯಾಸಗಳು ಕಾಣುತ್ತವೆ. ಏಕೆಂದರೆ ಜನಗಳು ವಾಸಿಸಲು ತಮ್ಮ ಇದ್ದ ಜಾಗವನ್ನು ಮಾರಿ ಸೂಕ್ತ ಜಾಗವನ್ನು ಆರಿಸಿಕೊಂಡು ಹೋಗುತ್ತಾರೆ. ಅದರಂತೆ ಕಲ್ಪನಾ ಅವರ ಸಾಮಾಧಿ ಇರುವ ಜಾಗವು ಹಾಗೆಯೇ ಆಗಿದೆ. ಸಮಾಧಿ ಇರುವ ಜಾಗದ ಬಳಿ ಕಟ್ಟಡವೊಂದು ತಲೆ ಎತ್ತಿದೆ. ಆದರೆ ಆ ಜಾಗ ಖರೀದಿಸಿದ ವ್ಯಕ್ತಿ ಕಲ್ಪನಾ ಅವರ ಸಮಾಧಿಯನ್ನು ಕಂಡು ಹಾಗೆಯೇ ಉಳಿಸಿಕೊಂಡಿದ್ದಾರೆ. ಅದನ್ನು ಅಭಿವೃದ್ಧಿ ಪಡಿಸುವ ಯೋಚನೆ ಹಾಕಿಕೊಂಡಿದ್ದಾರಂತೆ. ಹಾಗಿದ್ದರೆ ಮಿನುಗು ತಾರೆ ಕಲ್ಪನಾ ಸಮಾಧಿ ಎಲ್ಲಿದೆ?

  ವಿಡಿಯೋ ಕೃಪೆ: ಕಲಾ ಮಾಧ್ಯಮ  ಬನಶಂಕರಿ, ಗುಬ್ಲಾಳ ಬಳಿ ಕಲ್ಪನಾ ಅವರ ಸಮಾಧಿ ಇದೆ. ಕಲ್ಪನಾ ಅವರ ಅಭಿಮಾನಿಯೊಬ್ಬರು ಅಂದು ತಮ್ಮ ತೆಂಗಿನ ತೋಟದಲ್ಲಿ ಕಲ್ಪನಾ ನೆನಪಿಗಾಗಿ ಸಮಾಧಿ ಕಟ್ಟಿದ್ದಾರೆ. ಆದರೀಗ ಆ ಜಾಗ ಬೇರೆಯವರ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ. ಮೊದಲೇ ಹೇಳಿದಂತೆ ಸಮಾಧಿ ಬಳಿ ಕಟ್ಟಡವೊಂದು ನಿರ್ಮಾಣವಾಗುತ್ತಿದ್ದು, ಆ ಜಾಗದ ಮಾಲೀಕ ಕಲ್ಪನಾ ಸಮಾಧಿಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ.
  Published by:Harshith AS
  First published: