Deepika Padukone: ಕೋಟಿ ರೂ. ಮುಟ್ಟಿದ ದೀಪಿಕಾ ಬಾಡಿಗಾರ್ಡ್ ಸಂಬಳ!

Deepika Padukone Bodyguard Salary: 2017ರಲ್ಲಿ ಜಲಾಲ್​ಗೆ ದೀಪಿಕಾ ಪಡುಕೋಣೆ ಬರೋಬ್ಬರಿ 80 ಲಕ್ಷ ರೂಪಾಯಿ ವಾರ್ಷಿಕವಾಗಿ ಸಂಬಳ ನೀಡುತ್ತಿದ್ದರಂತೆ. ಇದು ಮೂರು ವರ್ಷಗಳ ಹಿಂದಿನ ಸಂಬಳ. ಆದರೆ ಈಗ ಜಲಾಲ್ ಅವರ ಸಂಬಳ ಎಷ್ಟಿರಬಹುದು? ಇಲ್ಲಿದೆ ಮಾಹಿತಿ

news18-kannada
Updated:June 9, 2020, 8:20 PM IST
Deepika Padukone: ಕೋಟಿ ರೂ. ಮುಟ್ಟಿದ ದೀಪಿಕಾ ಬಾಡಿಗಾರ್ಡ್ ಸಂಬಳ!
ದೀಪಿಕಾ ಬಾಡಿಗಾರ್ಡ್ ಜಲಾಲ್
  • Share this:
ಟಾಪ್ ಸೆಲೆಬ್ರಿಟಿಗಳು ಅಂದರೆ ಅವರಿಗೆ ಎಲ್ಲಿ ಹೋದರೂ ಬಾಡಿಗಾರ್ಡ್​ಗಳು ಬೇಕೇ ಬೇಕು. ಶೂಟಿಂಗ್, ಸಿನಿಮಾ ಪ್ರಚಾರ, ಸಾರ್ವಜನಿಕ ಕಾರ್ಯಕ್ರಮ, ಅದು ಇದು ಅಂತ ಯಾವಾಗಲೂ ಸುತ್ತುತ್ತಿರುತ್ತಾರೆ. ಅವರು ಎಲ್ಲಿಗೆ ಹೋದರೂ ಅಲ್ಲಿ ಜನ ಮುತ್ತಿಕೊಳ್ಳುವುದು ಸಾಮಾನ್ಯ. ತಮ್ಮ ನೆಚ್ಚಿನ ಸ್ಟಾರ್ ಜತೆ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು, ಅಪ್ಪಿಕೊಳ್ಳಬೇಕು, ಕೈ ಕುಲುಕಬೇಕು ಅಂತ ಮುಗಿಬೀಳುತ್ತಾರೆ. ಆ ಸಮಯದಲ್ಲಿ ಸ್ಟಾರ್​​​​ಗಳ ಜತೆ ಇರುವ ಬಾಡಿಗಾರ್ಡ್​​ಗಳು ಅವರನ್ನು ರಕ್ಷಿಸುತ್ತಾರೆ.

ಹೀಗೆ ಕಳೆದ ಹಲವು ವರ್ಷಗಳಿಂದ ದೀಪಿಕಾ ಪಡುಕೋಣೆ ಜತೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ ಜಲಾಲ್. ದೀಪಿಕಾ ಎಲ್ಲಿಗೆ ಹೋದರೂ ಅವರ ಜತೆ ಅವರ ನೆರಳಿನಂತೆ ಹಿಂಬಾಲಿಸುತ್ತಾರೆ ಜಲಾಲ್. ವಿಶೇಷ ಅಂದರೆ ದೀಪಿಕಾ ಹಾಗೂ ಜಲಾಲ್ ನಡುವಿನ ಸಂಬಂಧ ಸ್ಟಾರ್, ಬಾಡಿಗಾರ್ಡ್ ಆಗಿ ಅಥವಾ ಒಡತಿ, ಕೆಲಸಗಾರನ  ಸಂಬಂಧದಂತಿಲ್ಲ. ಬದಲಾಗಿ ಅಣ್ಣ ತಂಗಿಯಂತಹ ರಿಲೇಶನ್ಶಿಪ್ ಆಗಿದೆ. ಅದಕ್ಕೆ ಸಾಕ್ಷಿ ಪ್ರತಿ ವರ್ಷ ರಕ್ಷಾಬಂಧನ ಹಬ್ಬದ ದಿನ ದೀಪಿಕಾ ಪಡುಕೋಣೆ ಜಲಾಲ್​​ಗೆ ರಾಖೀ ಕಟ್ಟುತ್ತಾರೆ.

ಅಷ್ಟೇ ಯಾಕೆ, ಇಟಲಿಯಲ್ಲಿ ನಡೆದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮದುವೆಯಲ್ಲಿ ಹೆಣ್ಣಿನ ಕಡೆಯವರ ನೇತೃತ್ವ ವಹಿಸಿದ್ದರು ಜಲಾಲ್. 2017ರಲ್ಲಿ ಜಲಾಲ್​ಗೆ ದೀಪಿಕಾ ಪಡುಕೋಣೆ ಬರೋಬ್ಬರಿ 80 ಲಕ್ಷ ರೂಪಾಯಿ ವಾರ್ಷಿಕವಾಗಿ ಸಂಬಳ ನೀಡುತ್ತಿದ್ದರಂತೆ. ಇದು ಮೂರು ವರ್ಷಗಳ ಹಿಂದಿನ ಸಂಬಳ. ಆದರೆ ಈಗ ಜಲಾಲ್ ಪ್ರತಿ ವರ್ಷ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಬಳ ಪಡೆಯುತ್ತಿದ್ದಾರಂತೆ.

ದೀಪಿಕಾ ಬಾಡಿಗಾರ್ಡ್ ಜಲಾಲ್


ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗಿದ್ದು, ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿದೆ. ಬಾಲಿವುಡ್​​ನಲ್ಲಿ ತಮ್ಮ ಬಾಡಿಗಾರ್ಡ್​​ಗೆ ಅತಿ ಹೆಚ್ಚು ಸಂಬಳ ನೀಡುತ್ತಿರುವ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ದೀಪಿಕಾ ಪಡುಕೋಣೆ. ಅಂದಹಾಗೆ, ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ತಮ್ಮ ಬಾಡಿಗಾರ್ಡ್ ಶೇರಾಗೆ ಬರೋಬ್ಬರಿ 2 ಕೋಟಿ ರೂಪಾಯಿ ವಾರ್ಷಿಕ ಸಂಬಳ ನೀಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ.

ದೀಪಿಕಾ ಬಾಡಿಗಾರ್ಡ್ ಜಲಾಲ್


ಇನ್ನು ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಪತಿ ರಣಬೀರ್ ಜತೆ 83 ಚಿತ್ರದಲ್ಲಿ ಮಿಂಚಲಿದ್ದಾರೆ ದೀಪಿಕಾ. 1983ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ಟೀಂ ಮೊದಲ ಬಾರಿಗೆ ವಿಶ್ವಕಪ್ ಗೆದ್ದಿತ್ತು. ಆ ವಿಜಯಯಾತ್ರೆಯ ಸುತ್ತ 83 ಸಿನಿಮಾ ಕಥೆ ಹೆಣೆಯಲಾಗಿದ್ದು, ಕಬೀರ್ ಖಾನ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸುತ್ತಿದ್ದು, ಅವರ ಪತ್ನಿ ರೋಮಿ ದೇವ್ ಆಗಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ. ಲಾಕ್​​ಡೌನ್​​​ನಿಂದಾಗಿ ಸದ್ಯ ಸಿನಿಮಾ ಕೆಲಸಗಳು ನಿಂತಿದ್ದು, ಇನ್ನು ಕೆಲವೇ ದಿನಗಳಲ್ಲಿ 83 ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.ಇನ್ಮುಂದೆ ಫ್ಲಿಪ್​ಕಾರ್ಟ್​ನಲ್ಲಿ ಶಾಪಿಂಗ್​ ಮತ್ತಷ್ಟು ಸುಲಭ;​ ಪರಿಚಯಿಸಿದೆ ಹೊಸ ಫೀಚರ್!

PayTm: ಪೇಟಿಯಂ ಪರಿಚಯಿಸಿದೆ ‘ಮೊದಲು ಖರೀದಿಸಿ ನಂತರ ಪಾವತಿಸಿ‘; ಕಿರಾಣಿ ಅಂಗಡಿಯಲ್ಲಿ ಇದರ ಬಳಕೆ ಹೇಗೆ?
First published: June 9, 2020, 8:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading