Naga Chaitanya: ನಾಗ ಚೈತನ್ಯ ಟ್ಯಾಟೂಗೂ, ಸಮಂತಾಗೂ ಇದೆಯಂತೆ ಲಿಂಕ್​! ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ

ನಾಗ ಚೈತನ್ಯ ಅವರು ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ತಮ್ಮ ತೋಳಿನ ಟ್ಯಾಟೂ ಹಿಂದಿನ ಅರ್ಥವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ನೋಡಿ. ಹಾಗೆಯೇ ತಾವು ಹಾಕಿಸಿಕೊಂಡಂತೆ ಟ್ಯಾಟೂವನ್ನು ನೀವು ಹಾಕಿಸಿಕೊಳ್ಳಲು ಪ್ರಯತ್ನಿಸಬೇಡಿ ಅಥವಾ ಅನುಕರಿಸಬೇಡಿ ಅಂತ ಅಭಿಮಾನಿಗಳಲ್ಲಿ ವಿನಂತಿ ಸಹ ಮಾಡಿಕೊಂಡಿದ್ದಾರೆ.

ನಾಗ ಚೈತನ್ಯ ಅವರ ಟ್ಯಾಟೂ

ನಾಗ ಚೈತನ್ಯ ಅವರ ಟ್ಯಾಟೂ

  • Share this:
ತೆಲುಗು ನಟ ನಾಗ ಚೈತನ್ಯ (Naga Chaitanya) ಇತ್ತೀಚೆಗೆ ತುಂಬಾನೇ ಸುದ್ದಿಯಲ್ಲಿರುವುದು ಅವರ ಬಾಲಿವುಡ್ ಪಾದಾರ್ಪಣೆಯಿಂದ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಆಗಸ್ಟ್ 11 ರಂದು ದೇಶಾದ್ಯಂತ ಬಿಡುಗಡೆಯಾದ ಇವರ ಅಭಿನಯದ ಬಾಲಿವುಡ್ ಚಿತ್ರ ‘ಲಾಲ್ ಸಿಂಗ್ ಚಡ್ಡಾ’ (Lal Singh Chaddha). ಬಾಲಿವುಡ್ ನಟಆಮಿರ್ ಖಾನ್ ಅವರೊಂದಿಗೆ ಪೋಷಕ ನಟನಾಗಿ ಮೊದಲ ಬಾರಿಗೆ ಹಿಂದಿ ಚಿತ್ರದಲ್ಲಿ (Hindi Movie) ಕಾಣಿಸಿಕೊಂಡಿದ್ದಾರೆ . ಈಗ ಇವರು ಮತ್ತೊಂದು ಕಾರಣಕ್ಕೆ ಸುದ್ದಿಯಲ್ಲಿದ್ದಾರೆ ಎಂದು ಹೇಳಬಹುದು. ತಮ್ಮ ತೋಳಿನ ಟ್ಯಾಟೂ (Tattoo) ಹಿಂದಿನ ಅರ್ಥವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ ನೋಡಿ. ಹಾಗೆಯೇ ತಾವು ಹಾಕಿಸಿಕೊಂಡಂತೆ ಟ್ಯಾಟೂವನ್ನು ನೀವು ಹಾಕಿಸಿಕೊಳ್ಳಲು ಪ್ರಯತ್ನಿಸಬೇಡಿ ಅಥವಾ ಅನುಕರಿಸಬೇಡಿ ಅಂತ ಅಭಿಮಾನಿಗಳಲ್ಲಿ ವಿನಂತಿ ಸಹ ಮಾಡಿಕೊಂಡಿದ್ದಾರೆ.

ಆ ಟ್ಯಾಟೂ ಯಾವುದು 
ಮೋರ್ಸ್ ಕೋಡ್ ಆಗಿರುವ ತನ್ನ ಹಚ್ಚೆ ತನ್ನ ಮತ್ತು ತಮ್ಮ ಮಾಜಿ ಹೆಂಡತಿಯಾದ ಸಮಂತಾ ರುತ್ ಪ್ರಭು ಅವರ ವಿವಾಹದ ದಿನಾಂಕವನ್ನು ಹೊಂದಿದೆ ಎಂದು ನಟ ಬಹಿರಂಗಪಡಿಸಿದ್ದಾರೆ. ಅವರು ಬೇರ್ಪಟ್ಟ ನಂತರ ಹಚ್ಚೆ ತೆಗೆಯುವ ಬಗ್ಗೆ ನಟ ಯೋಚಿಸಿಲ್ಲ ಎಂದು ಅವರು ಹೇಳಿದರು.

ಇದನ್ನೂ ಓದಿ: Samantha Ruth Prabhu: ಕನಸುಗಳನ್ನು ಬೆನ್ನತ್ತಿ, ಅವುಗಳೇ ನಿಮ್ಮನ್ನು ರೂಪಿಸುತ್ತವೆ; ವಿದ್ಯಾರ್ಥಿಗಳಿಗೆ ಸಮಂತಾ ಕಿವಿಮಾತು

ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ ಅವರು 2017ರ ಜನವರಿಯಲ್ಲಿ ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು ಮತ್ತು ಅದೇ ವರ್ಷದ ಅಕ್ಟೋಬರ್ 6 ರಂದು ಹಿಂದೂ ಸಂಪ್ರದಾಯದ ಪ್ರಕಾರ ಗೋವಾದಲ್ಲಿ ವಿವಾಹವಾದರು ಮತ್ತು ಮರುದಿನ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹವಾದರು. ಅವರು ಅಕ್ಟೋಬರ್ 2, 2021 ರಂದು ಜಂಟಿ ಹೇಳಿಕೆಯ ಮೂಲಕ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. 6-10-17 ರಂದು ತಮ್ಮ ಮತ್ತು ಸಮಂತಾ ಅವರ ವಿವಾಹದ ದಿನಾಂಕ ಎಂದು ಅಭಿಮಾನಿಗಳು ಈ ಹಿಂದೆ ಅವರ ತೋಳಿನ ಹಚ್ಚೆಯನ್ನು ಡಿಕೋಡ್ ಮಾಡಿದ್ದರು.

ಟ್ಯಾಟೂ ಬಗ್ಗೆ ನಾಗ ಚೈತನ್ಯ ಏನು ಹೇಳಿದ್ದಾರೆ
ಚೈತನ್ಯ ಅವರು ಬಾಲಿವುಡ್ ಬಬಲ್ ಅವರೊಂದಿಗಿನ ಇತ್ತೀಚಿನ ಸಂಭಾಷಣೆಯಲ್ಲಿ ತಮ್ಮ ಹಚ್ಚೆ ಬಗ್ಗೆ ಮಾತನಾಡಿದರು. "ನನ್ನ ಹೆಸರು ಮತ್ತು ಅದರಂತೆಯೇ ಟ್ಯಾಟೂ ಹಾಕಿಸಿಕೊಂಡ ಕೆಲವು ಅಭಿಮಾನಿಗಳನ್ನು ನಾನು ಭೇಟಿಯಾದೆ ಮತ್ತು ಅವರು ಈ ಹಚ್ಚೆಯನ್ನು ಅನುಕರಿಸಿದ್ದಾರೆ. ಇದು ನೀವು ಅನುಕರಿಸಲು ಬಯಸುವ ವಿಷಯವಲ್ಲ, ಏಕೆಂದರೆ ಇದು ನಾನು ಮದುವೆಯಾದ ದಿನವಾಗಿದೆ. ಅಭಿಮಾನಿಗಳು ನನ್ನ ಟ್ಯಾಟೂವನ್ನು ಅನುಕರಿಸಿದರೆ ನಾನು ನಿಜವಾಗಿಯೂ ಕೆಟ್ಟದಾಗಿ ಭಾವಿಸುತ್ತೇನೆ ಎಂದು ನಟ ಹೇಳಿದ್ದಾರೆ.

ಸಮಂತಾಳನ್ನು ನೀವು ಭೇಟಿಯಾದರೆ ಏನು ಮಾಡುತ್ತೀರಿ
ಟ್ಯಾಟೂವನ್ನು ಬದಲಾಯಿಸುವ ಬಗ್ಗೆ ನೀವು ನಿಜವಾಗಿಯೂ ಯೋಚಿಸಿದ್ದೀರಾ ಎಂದು ಕೇಳಿದಾಗ, "ಇಲ್ಲ ನಾನು ಅದರ ಬಗ್ಗೆ ಯೋಚಿಸಿಲ್ಲ, ಅದು ಚೆನ್ನಾಗಿದೆ" ಎಂದು ನಟ ಹೇಳಿದರು. ಇಂದು ಮಾಜಿ ಪತ್ನಿ ಸಮಂತಾಳನ್ನು ಭೇಟಿಯಾದರೆ ಏನು ಮಾಡುತ್ತೀರಿ ಎಂದು ಅವರನ್ನು ಕೇಳಲಾಯಿತು, ಅದಕ್ಕೆ ಅವರು "ಹಾಯ್ ಅಂತ ಹೇಳಿ ಅವಳನ್ನು ಅಪ್ಪಿಕೊಳ್ಳುತ್ತೇನೆ" ಎಂದು ಹೇಳಿದರು.

ಇದನ್ನೂ ಓದಿ: Naga Chaitanya: ನಮ್ಮಿಬ್ಬರ ನಡುವಿನ ವಿಚ್ಛೇದನದ ಬಗ್ಗೆ ಯಾರೂ ಕೇಳಬಾರದು, ಸಮಂತಾ ಕುರಿತು ನಾಗ ಚೈತನ್ಯ ಶಾಕಿಂಗ್​ ಕಾಮೆಂಟ್

ಚೈತನ್ಯ ಅವರ ತೋಳಿನ ಹಚ್ಚೆ ಎರಡು ಬಾಣಗಳನ್ನು ಸಹ ಹೊಂದಿದೆ, ಅದನ್ನು ಅವರು ಸಮಂತಾ ಅವರೊಂದಿಗೆ ಸೇರಿಕೊಂಡಿದ್ದರು ಎಂದು ಅರ್ಥ ನೀಡುತ್ತದೆ. ಈ ಹಿಂದೆ ಸಹ ತಮ್ಮ ಮತ್ತು ತಮ್ಮ ಗಂಡನ ಸಂಬಂಧದ ಬಗ್ಗೆ ಇರುವ ಹಚ್ಚೆಗಳನ್ನು ವಿವರಿಸುತ್ತಾ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದರು.

'ಚಾಯ್' ಅಂತ ಟ್ಯಾಟೂ ಹಾಕಿಸಿಕೊಂಡಿದ್ರಂತೆ ಸಮಂತಾ
“ಚಾಯ್ ಮತ್ತು ನಾನು ಅದನ್ನು ಒಟ್ಟಿಗೆ ಹಾಕಿಸಿಕೊಂಡಿದ್ದೇವೆ. ಇದು ನಮಗೆ ನಿಜವಾಗಿಯೂ ವಿಶೇಷವಾಗಿದೆ" ಎಂದು ಸಮಂತಾ ಹೇಳಿದ್ದರು. ಸಮಂತಾ ಸಹ ತನ್ನ ಪಕ್ಕೆಲುಬಿನ ಬಲಭಾಗದಲ್ಲಿ 'ಚಾಯ್' ಅಂತ ಶಾಯಿ ಹಾಕಿಸಿಕೊಂಡಿದ್ದಳು. ಇದಲ್ಲದೆ, ಅವರು ತಮ್ಮ ಕುತ್ತಿಗೆಯ ನೇಪ್ ಕೆಳಗೆ 'ವೈಎಂಸಿ' ಅಂತ ಹಚ್ಚೆಯನ್ನು ಸಹ ಹೊಂದಿದ್ದಾರೆ. 'ವೈಎಂಸಿ' ಯು ಅವರ ಮೊದಲ ಚಿತ್ರ ‘ಯೆ ಮಾಯೆ ಚೆಸಾವೆ’ ಚಿತ್ರದ ಪ್ರಥಮಾಕ್ಷರಗಳಾಗಿದ್ದವು.
Published by:Ashwini Prabhu
First published: