Film Certificate: ಸಿನಿಮಾ ಶುರುವಾಗುವ ಮುನ್ನ ಸರ್ಟಿಫಿಕೇಟ್ ಬರುತ್ತಲ್ಲ, ಏನದು? ಇದರ ಬಗ್ಗೆ ನಿಮಗೆಷ್ಟು ಗೊತ್ತು?

ಚಲನಚಿತ್ರದ ಆರಂಭದಲ್ಲಿ ಸುಮಾರು ಹತ್ತು ಸೆಕೆಂಡುಗಳ ಕಾಲ ಈ ಪ್ರಮಾಣಪತ್ರವನ್ನು ತೋರಿಸುವುದು ಬಹಳ ಮುಖ್ಯ. ಈ ಚಲನಚಿತ್ರಗಳ ಪ್ರಮಾಣಪತ್ರದಲ್ಲಿ ಬಹು ಮುಖ್ಯವಾಗಿ ಏನೆಲ್ಲಾ ವಿವರಗಳನ್ನು ಬರೆದಿರುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್

  • Share this:
ನೀವು ಚಲನಚಿತ್ರಗಳನ್ನು (Movie) ತುಂಬಾನೇ ನೋಡುತ್ತಿದ್ದರೆ, ಈ ಸರ್ಟಿಫಿಕೇಟ್ (Certificate) ಬಗ್ಗೆ ನಿಮಗೆ ಚೆನ್ನಾಗಿಯೇ ತಿಳಿದಿರುತ್ತದೆ. ಅದೇ ನೀವು ಮೊದಲ ಬಾರಿಗೆ ಸಿನೆಮಾ ನೋಡುತ್ತಿದ್ದರೆ ಚಿತ್ರ ಶುರುವಾಗುವ ಮುನ್ನ ಒಂದು ಬಿಳಿ ಹಳೆಯ ಮೇಲೆ ಕಪ್ಪು ಅಕ್ಷರಗಳಿಂದ ಬರೆದ ಈ ಸರ್ಟಿಫಿಕೇಟ್ ಏನದು ಅಂತ ನೀವು ಗ್ಯಾರಂಟಿ ತಲೆ ಕೆಡೆಸಿಕೊಂಡಿರುತ್ತಿರಿ. ನೀವು ಚಲನಚಿತ್ರವನ್ನು ನೋಡಲು ಹೋದಾಗಲೆಲ್ಲಾ, ಸುಮಾರು ಹತ್ತು ಸೆಕೆಂಡುಗಳ ಕಾಲ, ನೀವು ಪರದೆಯ (Screen) ಮೇಲೆ ಈ ಪ್ರಮಾಣಪತ್ರವನ್ನು ನೋಡುತ್ತೀರಿ. ನಮ್ಮಲ್ಲಿ ಹೆಚ್ಚಿನವರು ಈ ಪ್ರಮಾಣಪತ್ರವನ್ನು ನಿರ್ಲಕ್ಷಿಸುತ್ತಾರೆ. ಚಲನಚಿತ್ರವು ಪ್ರಾರಂಭವಾಗುವವರೆಗೆ ಜನರು ಸುತ್ತಲೂ ನೋಡುತ್ತಿರುತ್ತಾರೆ ಅಥವಾ ತಮ್ಮ ಅಕ್ಕ ಪಕ್ಕದಲ್ಲಿರುವವರ ಜೊತೆಗೆ ಮಾತನಾಡುತ್ತಾ ಕುಳಿತಿರುತ್ತಾರೆ ಎಂದು ಹೇಳಬಹುದು.

ಚಿತ್ರದ ವಿವರಗಳು ಮತ್ತು ಸೆನ್ಸಾರ್ ಮಂಡಳಿಯವರಿಂದ ನೀಡಿದ ವಿವರಗಳಿರುವ ಸರ್ಟಿಫಿಕೇಟ್
ಈ ಸರ್ಟಿಫಿಕೇಟ್ ಚಿತ್ರದ ವಿವರಗಳು ಮತ್ತು ಸೆನ್ಸಾರ್ ಮಂಡಳಿಯವರಿಂದ ನೀಡಿದ ವಿವರಗಳನ್ನು ಒಳಗೊಂಡಿರುತ್ತವೆ ಎಂದು ಬಹುತೇಕರಿಗೆ ತಿಳಿದಿರುತ್ತದೆ. ಅದೇ ಚಿಕ್ಕ ಮಕ್ಕಳು ನಿಮ್ಮೊಂದಿಗೆ ಕೂತು ಮೊದಲ ಬಾರಿಗೆ ಚಲನಚಿತ್ರವನ್ನು ವೀಕ್ಷಿಸುತ್ತಿದ್ದರೆ, ಆ ಸರ್ಟಿಫಿಕೇಟ್ ನೋಡಿ ಅದರ ಬಗ್ಗೆ ಕೆಲವು ಪ್ರಶ್ನೆಗಳನ್ನು ನಿಮಗೆ ಕೇಳುವುದಂತೂ ಗ್ಯಾರಂಟಿ.

ನಾವೆಲ್ಲಾ ತುಂಬಾ ಸಲ ಸುದ್ದಿ ಮಾಧ್ಯಮಗಳಲ್ಲಿ ಈ ಚಿತ್ರದ ಹೆಸರು ವಿವಾದಾತ್ಮಕವಾಗಿದೆ, ಸೆನ್ಸಾರ್ ಮಂಡಳಿಯವರು ಹೆಸರು ಬದಲಾಯಿಸಲು ಸೂಚಿಸಿದ್ದಾರೆ. ಈ ಚಿತ್ರದಲ್ಲಿ ಇಷ್ಟೊಂದು ದೃಶ್ಯಗಳನ್ನು ಯಾರು ನೋಡುವಂತಿಲ್ಲ, ಇವುಗಳನ್ನು ತೆಗೆದುಹಾಕಿ ಎಂದು ಚಿತ್ರ ತಯಾರಕರಿಗೆ ಸೆನ್ಸಾರ್ ಮಂಡಳಿಯವರು ಹೇಳಿರುವುದನ್ನು ನೋಡುತ್ತೇವೆ.

ಚಿತ್ರದ ಅನೇಕ ವಿವರಗಳನ್ನು ಒಳಗೊಂಡಿರುವ ಸರ್ಟಿಫಿಕೇಟ್
ಹೌದು.. ಒಂದು ಚಿತ್ರ ತಯಾರಾದ ಮೇಲೆ ಅದನ್ನು ಎಂತಹ ಪ್ರೇಕ್ಷಕರು ನೋಡಬೇಕು, ಎಷ್ಟು ವಯಸ್ಸಿನ ಮಕ್ಕಳು ನೋಡಬೇಕು ಮತ್ತು ಯಾರು ನೋಡಬಾರದು ಎಂದು ತಿಳಿದುಕೊಳ್ಳಲು ದೊಡ್ಡದಾಗಿ ಕೆಲವು ಇಂಗ್ಲೀಷ್ ಅಕ್ಷರಗಳನ್ನು ಈ ಸರ್ಟಿಫಿಕೇಟ್ ನಲ್ಲಿ ನೀಡಿರುತ್ತಾರೆ. ಇದನ್ನು ಹೊರತು ಪಡಿಸಿ ಇದರಲ್ಲಿ ಚಿತ್ರ ತಯಾರಾದ, ಬಿಡುಗಡೆಯಾದ ದಿನಾಂಕ, ಚಿತ್ರ ಎಷ್ಟು ಘಂಟೆಯದ್ದಾಗಿದೆ ಎಂಬ ಅನೇಕ ವಿವರಗಳನ್ನು ಇದರಲ್ಲಿ ಉಲ್ಲೇಖಿಸಲಾಗಿರುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:  Jack Manju: ವಿಕ್ರಾಂತ್ ರೋಣ ನಿರ್ಮಾಪಕ ಆಸ್ಪತ್ರೆಗೆ ದಾಖಲು, ಶಸ್ತ್ರ ಚಿಕಿತ್ಸೆಗೊಳಗಾದ ಜಾಕ್ ಮಂಜು

ಒಂದು ಚಿತ್ರ ತಯಾರು ಮಾಡಿದ ನಂತರ, ಇಡೀ ಚಿತ್ರ ತಂಡವು ಈ ಸರ್ಟಿಫಿಕೇಟ್ ಗಾಗಿ ಸಾಕಷ್ಟು ಕೆಲಸ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ಪ್ರಮಾಣಪತ್ರವನ್ನು ನೀಡದಿದ್ದರೆ, ಚಲನಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯೆ ಆಗುವುದಿಲ್ಲ. ಸಿಬಿಎಫ್‌ಸಿ (ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್) ದೃಶ್ಯಗಳು, ಕಥಾವಸ್ತು ಇತ್ಯಾದಿಗಳಂತಹ ಚಲನಚಿತ್ರದ ವಿವರಗಳನ್ನು ಅವಲಂಬಿಸಿ ಈ ಪ್ರಮಾಣಪತ್ರಗಳನ್ನು ನೀಡುತ್ತದೆ.

ಹೌದು, ಚಲನಚಿತ್ರದ ಆರಂಭದಲ್ಲಿ ಸುಮಾರು ಹತ್ತು ಸೆಕೆಂಡುಗಳ ಕಾಲ ಈ ಪ್ರಮಾಣಪತ್ರವನ್ನು ತೋರಿಸುವುದು ಬಹಳ ಮುಖ್ಯ. ಈ ಚಲನಚಿತ್ರಗಳ ಪ್ರಮಾಣಪತ್ರದಲ್ಲಿ ಬಹು ಮುಖ್ಯವಾಗಿ ಏನೆಲ್ಲಾ ವಿವರಗಳನ್ನು ಬರೆದಿರುತ್ತಾರೆ ಎಂಬುದನ್ನು ನಾವು ತಿಳಿದುಕೊಳ್ಳೋಣ ಬನ್ನಿ.

ಯು ಸರ್ಟಿಫಿಕೇಟ್
ಒಂದು ಚಲನಚಿತ್ರದ ಪ್ರಮಾಣಪತ್ರದಲ್ಲಿ ಇಂಗ್ಲೀಷ್ ಅಕ್ಷರ 'ಯು' ಎಂದು ಬರೆದರೆ, ಎಲ್ಲಾ ವಯೋಮಾನದ ಜನರಿಗೆ ಈ ಚಲನಚಿತ್ರವನ್ನು ವೀಕ್ಷಿಸಲು ಅನುಮತಿಸಲಾಗಿದೆ ಎಂದರ್ಥ.

ಯು/ಎ ಸರ್ಟಿಫಿಕೇಟ್
ಅದೇ ಆ ಚಲನಚಿತ್ರದ ಪ್ರಮಾಣಪತ್ರದಲ್ಲಿ 'ಯು/ಎ' ಎಂದು ಬರೆದರೆ, ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಈ ಚಲನಚಿತ್ರವನ್ನು ನೋಡಬಹುದು ಆದರೆ ಅವರ ಪೋಷಕರೊಂದಿಗೆ ಮಾತ್ರ ನೋಡಬಹುದು ಎಂದು ಅರ್ಥ.

ಎಸ್ ಸರ್ಟಿಫಿಕೇಟ್
ಒಂದು ಚಿತ್ರದ ಸರ್ಟಿಫಿಕೇಟ್ ಮೇಲೆ 'ಎಸ್' ಎಂದು ಬರೆದರೆ, ಈ ಚಿತ್ರವನ್ನು ಒಂದು ನಿರ್ದಿಷ್ಟ ಪ್ರೇಕ್ಷಕರಿಗಾಗಿ ಮಾಡಲಾಗಿದೆ ಎಂದರ್ಥ. ಇದನ್ನು ವೈದ್ಯರು ಅಥವಾ ವಿಜ್ಞಾನಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಸಾಮಾನ್ಯ ಜನರು ಇದನ್ನು ವೀಕ್ಷಿಸಿ ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದರ್ಥ. ಅದೇ 'ಎ' ಅಂತಿದ್ದರೆ ಅದು ವಯಸ್ಕರಿಗಾಗಿ ಮಾತ್ರ ಎಂದರ್ಥ.

ಇದನ್ನೂ ಓದಿ:  Pawan Kalyan: ಪಕ್ಕಾ ತೆಲುಗು ಫಿಲ್ಮಿ ಸ್ಟೈಲು, 8 ಕಾರನ್ನು ಒಂದೇ ಸಲಕ್ಕೆ ಖರೀದಿಸಿದ ಪವನ್ ಕಲ್ಯಾಣ್; ಯಾರಿಗಾಗಿ?

ಇದಲ್ಲದೆ, ಚಿತ್ರದ ಪ್ರಮಾಣಪತ್ರವು ಚಿತ್ರದ ರೀಲ್ ಬಗ್ಗೆ ಮಾಹಿತಿಯನ್ನು ಒಳಗೊಂಡಿರುತ್ತದೆ. ಚಿತ್ರದ ಅವಧಿಯನ್ನು ಸಹ ಇದರಲ್ಲಿ ಉಲ್ಲೇಖಿಸಲಾಗಿರುತ್ತದೆ. ಒಂದು ದೃಶ್ಯವನ್ನು ಚಿತ್ರದಿಂದ ಕತ್ತರಿಸಬೇಕು ಎಂದು ಸೆನ್ಸಾರ್ ಮಂಡಳಿ ಭಾವಿಸಿದರೆ, ಅದನ್ನು ಸಹ ಅವರು ಈ ಪ್ರಮಾಣಪತ್ರದಲ್ಲಿ ಉಲ್ಲೇಖಿಸುತ್ತಾರಂತೆ ಎಂದು ಹೇಳಲಾಗುತ್ತದೆ.
Published by:Ashwini Prabhu
First published: