Amitabh Bachchan: ಎಲಾನ್ ಮಸ್ಕ್ ಮುಂದೆ ನಟ ಅಮಿತಾಭ್ ಬಚ್ಚನ್ ಇಟ್ಟ ಬೇಡಿಕೆ ಏನು ಗೊತ್ತೇ?

 ಅಮಿತಾಭ್ ಬಚ್ಚನ್ ಮತ್ತು ಎಲಾನ್ ಮಸ್ಕ್​

ಅಮಿತಾಭ್ ಬಚ್ಚನ್ ಮತ್ತು ಎಲಾನ್ ಮಸ್ಕ್​

ಸೋಶಿಯಲ್ ಮೀಡಿಯಾ ಅಂದಾಗ ಸೆಲೆಬ್ರಿಟಿಗಳು ಏನಾದರೊಂದು ಪೋಸ್ಟ್​ ಹಾಕುತ್ತಿರುತ್ತಾರೆ. ಅದೇ ರೀತಿ ಇದೀಗ ಅಮಿತಾಭ್​ ಬಚ್ಚನ್​ ಟ್ವಿಟರ್​​ ಮಾಲೀಕ ಎಲಾನ್​​ ಮಸ್ಕ್​ ಬಳಿ ಟ್ವೀಟ್​ ಮೂಲಕ ಬೇಡಿಕೆಯೊಂದನ್ನು ಇಟ್ಟಿದ್ದಾರೆ.

  • Share this:

ಕೆಲವು ಸೆಲೆಬ್ರಿಟಿಗಳು (Celebrity) ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ಸಕ್ರಿಯರಾಗಿರುತ್ತಾರೆ. ತಮ್ಮ ಮುಂಬರುವ ಚಿತ್ರಗಳ ಬಗ್ಗೆ ಅಪ್ಡೇಟ್​​​ಗಳನ್ನು ಹಂಚಿಕೊಳ್ಳುತ್ತಾ, ತಮ್ಮ ದೈನಂದಿನ ಫಿಟ್ನೆಸ್ ವಿಡಿಯೋಗಳನ್ನು ಮತ್ತು ತಮ್ಮ ರಜಾದಿನದ ಫೋಟೋಗಳನ್ನುಶೇರ್​ ಮಾಡುತ್ತಾ ಸದಾ ಅವರ ಅಭಿಮಾನಿಗಳನ್ನು ಮತ್ತು ಅವರ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿರುವ ಫಾಲೋವರ್ ಗಳನ್ನು ರಂಜಿಸುತ್ತಾ ಇರುತ್ತಾರೆ. ಈ ಸೋಶಿಯಲ್ ಮೀಡಿಯಾಗಳಲ್ಲಿ ತುಂಬಾನೇ ಸಕ್ರಿಯವಾಗಿರುವ ಭಾರತೀಯ ಚಿತ್ರರಂಗದ ಕೆಲವೇ ಕೆಲವು ತಾರೆಗಳಲ್ಲಿ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಕೂಡ ಒಬ್ಬರು.


ಬಾಲಿವುಡ್ ನಿಂದ ಹಿಡಿದು ಸಾಮಾಜಿಕ ಮತ್ತು ರಾಜಕೀಯದವರೆಗೆ ಪ್ರತಿಯೊಂದು ವಿಷಯದ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕುತ್ತಾರೆ. ಅಷ್ಟೇ ಅಲ್ಲದೇ ಅವರು ತಮ್ಮ ತಂದೆಯ ಕವಿತೆಗಳು ಮತ್ತು ತಾವು ಬರೆದಂತಹ ಕವಿತೆಯ ಸಾಲುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಾರೆ.


ಅಭಿಮಾನಿಗಳು ಕೂಡ ಅವರ ಮುಂದಿನ ಪೋಸ್ಟ್​​​ಗಾಗಿ ಸದಾ ಎದುರು ನೋಡುತ್ತಿರುತ್ತಾರೆ. ಅದೇ ಸಮಯದಲ್ಲಿ, ಅವರ ಪೋಸ್ಟ್ ನಲ್ಲಿ ಏನಾದರೂ ಕಾಗುಣಿತ ಅಥವಾ ಮಾಹಿತಿಯಲ್ಲಿ ಸ್ವಲ್ಪ ತಪ್ಪಾದರೂ ಸಾಕು ಕೂಡಲೇ ಅವರ ಅಭಿಮಾನಿಗಳು ಅದನ್ನು ಬದಲಾಯಿಸಿಕೊಳ್ಳಲು ಸಲಹೆ ನೀಡುತ್ತಾರೆ.


ಇದನ್ನೂ ಓದಿ: ಬಾಲಿವುಡ್ ಸ್ಟಾರ್ಸ್​ಗೆ ಶಾಕ್ ಕೊಟ್ಟ ಟ್ವಿಟ್ಟರ್! ಹಣ ಕೊಡಿ ಬ್ಲೂ ಟಿಕ್ ತಗೊಳ್ಳಿ!


ಟ್ವಿಟ್ಟರ್ ಮಾಲೀಕರಾದ ಎಲಾನ್ ಮಸ್ಕ್ ಎದುರಿಗೆ ಬಿಗ್ ಬಿ ಇಟ್ಟ ಬೇಡಿಕೆ ಏನು?


ಆದರೆ ಈಗ ಇದೆಲ್ಲದರ ಬಗ್ಗೆ ಮಾತೇಕೆ ಅಂತೀರಾ? ಬಿಗ್ ಬಿ ಅಮಿತಾಭ್ ಅವರು ಟ್ವಿಟ್ಟರ್ ಮಾಲೀಕರಾದ ಎಲಾನ್ ಮಸ್ಕ್​​ಗೆ ಕೈಮುಗಿದು ಒಂದು ಬೇಡಿಕೆಯನ್ನು ಇಟ್ಟಿದ್ದಾರೆ. ಅಮಿತಾಭ್ ಬಚ್ಚನ್ ಕಳೆದ ರಾತ್ರಿ ಟ್ವಿಟ್ಟರ್ ನಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಬಿಗ್ ಬಿ ಅವರ ಈ ಪೋಸ್ಟ್ ಟ್ವಿಟರ್ ಮಾಲೀಕರ ಹೆಸರಿನಲ್ಲಿದೆ, ಅದರಲ್ಲಿ ಅವರು 'ಹೇ, ಟ್ವಿಟರ್ ಮಾಲೀಕ ಸಹೋದರ, ದಯವಿಟ್ಟು ಟ್ವಿಟ್ಟರ್ ನಲ್ಲಿ ಎಡಿಟ್ ಬಟನ್​​ವೊಂದನ್ನು ಸೇರಿಸಿ! ಎಂದು ಬರೆದಿದ್ದಾರೆ.


ಅಮಿತಾಭ್ ಬಚ್ಚನ್ ಮತ್ತು ಎಲಾನ್ ಮಸ್ಕ್​


ಹಾಕಿದಂತಹ ಪೋಸ್ಟ್ ನಲ್ಲಿ ತಪ್ಪುಗಳು ಮತ್ತೆ ಮತ್ತೆ ಸಂಭವಿಸಿದಾಗ ಮತ್ತು ಹಿತೈಷಿಗಳು ನಮಗೆ ಅದನ್ನು ಹೇಳಿದಾಗ, ಇಡೀ ಟ್ವೀಟ್ ಅನ್ನು ಅಳಿಸಬೇಕಾಗುತ್ತದೆ ಮತ್ತು ತಪ್ಪು ಟ್ವೀಟ್ ಅನ್ನು ಸರಿಪಡಿಸಿದ ನಂತರ, ಅದನ್ನು ಮತ್ತೆ ಪ್ರಕಟಿಸಬೇಕಾಗುತ್ತದೆ ಅಂತ ಬಿಗ್ ಬಿ ಅದರಲ್ಲಿ ಹೇಳಿದ್ದಾರೆ.


ಪೋಸ್ಟ್ ಅನ್ನು ಎಡಿಟ್ ಮಾಡುವ ಬಟನ್ ಅನ್ನು ಸೇರಿಸಿ ಅಂದ್ರು ಬಿಗ್ ಬಿ


ಅಮಿತಾಭ್ ಬಚ್ಚನ್ ಅವರ ಈ ಟ್ವೀಟ್ ಸಾಕಷ್ಟು ಚರ್ಚೆಯಾಗುತ್ತಿದೆ. ಅದೇ ಸಮಯದಲ್ಲಿ, ಅವರ ಕೆಲವು ಅಭಿಮಾನಿಗಳು ಸಹ ಅವರಿಗೆ ಸಲಹೆ ನೀಡುತ್ತಿದ್ದಾರೆ. 'ಸ್ವಲ್ಪ ಎಚ್ಚರಿಕೆಯಿಂದ ಟ್ವೀಟ್ ಮಾಡಿ' ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು 'ಪೋಸ್ಟ್ ಮಾಡುವಾಗ ಯಾವುದೇ ತಪ್ಪು ಆಗದಂತೆ ನೋಡಿಕೊಳ್ಳಿ' ಅಂತ ಬರೆದಿದ್ದಾರೆ.


ಅಮಿತಾಭ್ ಬಚ್ಚನ್ ಕೂಡ ತಮ್ಮ ಟ್ವೀಟ್ ಗಳಿಗೆ ಸಂಖ್ಯೆಗಳನ್ನು ನೀಡುತ್ತಾರೆ. ಅವರ ಇತ್ತೀಚಿನ ಟ್ವೀಟ್ ಪಕ್ಕದಲ್ಲಿ ಟಿ 4622 ಎಂದು ಬರೆಯಲಾಗಿದೆ. ಕೆಲವೊಮ್ಮೆ ಈ ಸಂಖ್ಯೆಗಳನ್ನು ಬರೆಯುವಲ್ಲಿಯೂ ತಪ್ಪಾಗಿದೆ. ಪೋಸ್ಟ್ ಮಾಡಿದ ನಂತರ ಟ್ವೀಟ್ ಅನ್ನು ಎಡಿಟ್ ಮಾಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ, ಅದನ್ನು ಪೂರ್ತಿಯಾಗಿ ಡಿಲಿಟ್ ಮಾಡುವುದೊಂದೇ ಏಕೈಕ ಪರಿಹಾರವಾಗಿದೆ. ಇದಕ್ಕಾಗಿ ಬಿಗ್ ಬಿ ಎಡಿಟ್ ಬಟನ್ ಗೆ ಬೇಡಿಕೆ ಇಡಲು ಇದು ಕಾರಣವಾಗಿದೆ.




ಅಮಿತಾಭ್ ಬಚ್ಚನ್ ವಯಸ್ಸಾದಂತೆ ವೃತ್ತಿಜೀವನದಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ. ಸಣ್ಣ ಪರದೆಯಿಂದ ದೊಡ್ಡ ಪರದೆಯವರೆಗೆ, ಅವರು ಇಡೀ ದಿನ ತುಂಬಾನೇ ಬ್ಯುಸಿ ಆಗಿರುತ್ತಾರೆ. 'ಗುಡ್‌ಬೈ' ಮತ್ತು 'ಉಂಚಾಯಿ' ಚಿತ್ರಗಳ ನಂತರ ಅವರ 'ಗಣಪತ್', 'ಘೂಮರ್', 'ಪ್ರಾಜೆಕ್ಟ್ ಕೆ', 'ಬಟರ್ ಫ್ಲೈ' ಚಿತ್ರಗಳು ಅವರ ಮುಂಬರುವ ಚಿತ್ರಗಳಾಗಿವೆ.

top videos
    First published: