• Home
 • »
 • News
 • »
 • entertainment
 • »
 • ನಟ​​ ದರ್ಶನ್​​ ಮುಂದಿನ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ನಟ​​ ದರ್ಶನ್​​ ಮುಂದಿನ ಸಿನಿಮಾಗೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

ದರ್ಶನ್​

ದರ್ಶನ್​

ಇನ್ನು, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡಲಾಗುತ್ತಿದೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲಂದತೆ ಹಣ ಹೂಡಿಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲೇ ಹಿರೋಗಳ ಸಂಭಾವನೆಯೂ ಜಾಸ್ತಿಯಾಗಿದೆ.

 • Share this:

  ಬೆಂಗಳೂರು(ಫೆ.05): ರಾಕಿಂಗ್​​ ಸ್ಟಾರ್​​ ಯಶ್​ ಅಭಿನಯದ ಕೆಜಿಎಫ್​​ ಸಿನಿಮಾದ ನಂತರ ಸ್ಯಾಂಡಲ್​ವುಡ್​​ ಯಾವುದೇ ಚಿತ್ರರಂಗಕ್ಕಿಂತಲೂ ಕಡಿಮೆಯಿಲ್ಲ ಎನ್ನುವುದು ಗೊತ್ತಿರುವ ಸಂಗತಿ. ಅದರಂತೆಯೇ ಈಗ ನಟರ ಸಂಭಾವನೆ ವಿಚಾರದಲ್ಲೂ ಸ್ಯಾಂಡಲ್​​ವುಡ್​ ಬೇರೆ ಚಿತ್ರೋದ್ಯಮಗಳಿಗಿಂತ ಹಿಂದೆ ಬಿದ್ದಿಲ್ಲ. ಈ ಮಧ್ಯೆಯೇ ಸ್ಯಾಂಡಲ್​​​ವುಡ್​​ ಚಾಲೆಂಜಿಗ್​ ಸ್ಟಾರ್​ ದರ್ಶನ್​​ ತನ್ನ ಮುಂದಿನ ಐತಿಹಾಸಿಕ "ಗಂಡುಗಲಿ ಮದಕರಿ ನಾಯಕ" ಸಿನಿಮಾಗೆ ಭಾರೀ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ತನ್ನ ಮಾರುಕಟ್ಟೆಗೆ ತಕ್ಕಂತೆ ಸಿನಿಮಾ ನಿರ್ಮಾಪಕರು ಹಿಂದಿನ ಚಿತ್ರಕ್ಕಿಂತಲೂ ಹೆಚ್ಚೇ ಸಂಭಾವನೆ ನೀಡಿದ್ಧಾರೆ ಎಂದು ಹೇಳಲಾಗುತ್ತಿದೆ.


  ಚಾಲೆಂಜಿಗ್​ ಸ್ಟಾರ್​​ ದರ್ಶನ್​​ ದಕ್ಷಿಣ ಭಾರತದಲ್ಲೇ ಅತ್ಯಧಿಕ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರು. ಸಹಜವಾಗಿ ಒಂದು ಕಮರ್ಷಿಯಲ್​​ ಸಿನಿಮಾಗೆ 7-8 ಕೋಟಿ ರೂ. ಪಡೆಯುತ್ತಾರೆ ಎಂಬುದು ಗಾಂಧಿನಗರದ ಮಾಹಿತಿ. ಇತ್ತೀಚೆಗೆ ಬಿಡುಗಡೆಯಾದ ಭಾರೀ ಬಜೆಟ್​​ನ 'ಕುರುಕ್ಷೇತ್ರ' ಚಿತ್ರಕ್ಕೆ ದರ್ಶನ್​​ 10. ಕೋಟಿ ರೂ ಸಂಭಾವನೆ ಪಡೆದಿದ್ದರು ಎಂಬ ಮಾತಿದೆ.


  ಆದರೀಗ ದರ್ಶನ್ ನಾಯಕನಟನಾಗಿ ಅಭಿನಯಿಸುತ್ತಿರುವ 54ನೇ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಸುಮಾರು 10-12 ಕೋಟಿ. ರೂ ಸಂಭಾವನೆ ಪಡೆಯುತ್ತಿದ್ಧಾರೆ ಎನ್ನಲಾಗುತ್ತಿದೆ. ಇದು ಕೂಡ ಪೌರಾಣಿಕ ಚಿತ್ರವಾಗಿದ್ದು, ಎಸ್.ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.


  ಇನ್ನು, ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಹದಿನೈದು ಇಪ್ಪತ್ತು ಕೋಟಿ ಹಾಕಿ ಸಿನಿಮಾ ಮಾಡಲಾಗುತ್ತಿದೆ. ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಿಗೂ ಕಡಿಮೆ ಇಲ್ಲಂದತೆ ಹಣ ಹೂಡಿಕೆ ಮಾಡಲಾಗುತ್ತಿದೆ. ಅದೇ ಮಾದರಿಯಲ್ಲೇ ಹಿರೋಗಳ ಸಂಭಾವನೆಯೂ ಜಾಸ್ತಿಯಾಗಿದೆ.


  ಇದನ್ನೂ ಓದಿ: DBoss Darshan: ದರ್ಶನ್​ ಅಭಿನಯದ ಗಂಡುಗಲಿ ಮದಕರಿ ನಾಯಕ ಚಿತ್ರಕ್ಕೆ ಸಿಕ್ತು ಅದ್ದೂರಿ ಕಿಕ್​ ಸ್ಟಾರ್ಟ್​..!


  ಈ ಹಿಂದೆಯೇ ' ಗಂಡುಗಲಿ ಮದಕರಿ ನಾಯಕ' ಚಿತ್ರದ ವಿಚಾರವಾಗಿ ದರ್ಶನ್‌ ಮತ್ತು ಸುದೀಪ್‌ ಅಭಿಮಾನಿಗಳ ನಡುವೆ ಜಗಳ ಶುರುವಾಗಿತ್ತು. ಇಬ್ಬರೂ ಒಂದೇ ಕಥೆಯನ್ನು ಹೊಂದಿರುವ ಎರಡು ವಿಭಿನ್ನ ಸಿನಿಮಾಗಳಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯು ವಿವಾದಕ್ಕೂ ಕಾರಣವಾಗಿತ್ತು. ಈ ನಡುವೆ ಯಾರು ಮೊದಲು ಈ ಚಿತ್ರವನ್ನು ಶುರು ಮಾಡಲಿದ್ದಾರೆ ಎಂಬ ಕುತೂಹಲ ಕೂಡ ಮೂಡಿತ್ತು. ಅದಕ್ಕೀಗ ತೆರೆ ಬಿದ್ದಿದೆ. ದರ್ಶನ್‌ ನಟನೆಯ 'ಗಂಡುಗಲಿ ಮದಕರಿ ನಾಯಕ' ಸಿನಿಮಾದ ಕೆಲಸಗಳು ಈಗಾಗಲೇ ಶುರುವಾಗಿದ್ದು, ಈ ವರ್ಷದ ಒಳಗೆ ಚಿತ್ರ ಸೆಟ್ಟೇರುವ ಸಾಧ್ಯತೆಯಿದೆ ಎಂದಿದ್ದರು ನಿರ್ದೇಶಕ ರಾಜೇಂದ್ರ ಬಾಬು.


  ಈಗಾಗಲೇ ಚಿತ್ರದ ಕೆಲಸ ಶುರು ಮಾಡಿದ್ದೇವೆ. ಚಿತ್ರದಲ್ಲಿ ಏಳು ಹಾಡುಗಳಿದ್ದು ಹಂಸಲೇಖ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅಲ್ಲದೇ, ಅರುಣ್‌ ಸಾಗರ್‌ ಕಲಾ ನಿರ್ದೇಶಕರು. ಈಗಾಗಲೇ ಒಂದು ಹಂತದ ಸ್ಕ್ರಿಪ್ಟ್‌ ರೆಡಿಯಾಗಿದೆ. ಇನ್ನೂ ಮೂರು ರೌಂಡ್‌ನಲ್ಲಿ ಸ್ಕ್ರಿಪ್ಟ್‌ ಕೆಲಸ ನಡೆಯಬೇಕು. ಆನಂತರವೇ ಶೂಟಿಂಗ್‌ ಶುರು ಮಾಡುತ್ತೇವೆ' ಎನ್ನುವುದು ನಿರ್ದೇಶಕ ರಾಜೇಂದ್ರ ಸಿಂಗ್‌ ಬಾಬು ಮಾತು.

  Published by:Ganesh Nachikethu
  First published: