Urfi Javed: ವಿಚಿತ್ರ ಫ್ಯಾಷನ್​ ಮಾಡುವ ಈ ನಟಿಯ ಆದಾಯ ಕೇಳಿದ್ರೆ ಶಾಕ್​ ಆಗ್ತೀರಿ! ಯಾವ್ ಹೀರೋಯಿನ್​ಗೂ ಕಮ್ಮಿ ಇಲ್ಲ ಉರ್ಫಿ

Urfi Javed Net Worth: ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ. ಆದರೆ ಅವರ ಬಗ್ಗೆ ಇಷ್ಟೆಲ್ಲಾ ತಿಳಿದಿದ್ದರೂ ಸಹ ಅವರ ಸಂಪಾದನೆಯ ಬಗ್ಗೆ ಹೆಚ್ಚಿನ ಮಜನರಿಗೆ ಮಾಹಿತಿ ಇಲ್ಲ. ಹಾಗಾದ್ರೆ ಉರ್ಫಿ ಎಷ್ಟು ಗಳಿಸುತ್ತಾರೆ ಎಂಬುದು ಇಲ್ಲಿದೆ.

ಉರ್ಫಿ ಜಾವೇದ್​

ಉರ್ಫಿ ಜಾವೇದ್​

  • Share this:
ಈಗಾಗಲೇ ತಮ್ಮ ಔಟ್‌ಫಿಟ್‌(Outfit)ಗಳ ವಿಚಾರದಲ್ಲಿ ಉರ್ಫಿ ಜಾವೇದ್ (Urfi Javed) ಹಲವು ಬಾರಿ ಟ್ರೋಲ್ ಆಗಿದ್ದಾರೆ. ಹಾಗ್ನೋಡಿದ್ರೆ, ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್(Troll) ಆಗುತ್ತಿದ್ದಾರೆ. ಟ್ರೋಲ್ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್ ಕೊಡುತ್ತಾರೆ. ಬಿಗ್ ಬಾಸ್ ಒಟಿಟಿ ಮೂಲಕ ಹೆಚ್ಚು ಹೆಸರು ಪಡೆದ ಈ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್‌ನಿಂದ ಮಾತ್ರ ಅಲ್ಲ ಈಗ ಅವರ ಸಂಪಾದನೆಯ ಕಾರಣದಿಂದ ಸಹ ಸುದ್ದಿಯಲ್ಲಿದ್ದಾರೆ. ಅವರ ಫ್ಯಾಶನ್ ನೋಡಿ, ಜನರ ಕಣ್ಣುಗಳನ್ನು ಅರಳಿಸುತ್ತದೆ. ಹಾಗೆಯೇ ಗಳಿಕೆಯ ವಿಷಯದಲ್ಲಿಯೂ ಉರ್ಫಿ ಜಾವೇದ್‌ರನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.

ಉರ್ಫಿ ಜಾವೇದ್ ಆಗಾಗ್ಗೆ ತನ್ನ ದಪ್ಪ ಮತ್ತು ಅಸಾಮಾನ್ಯ ಬಟ್ಟೆಗಳಿಂದ ಎಲ್ಲರ ಗಮನವನ್ನು ಸೆಳೆಯುತ್ತಾರೆ. ಉರ್ಫಿ ಜಾವೇದ್ ಅವರ ಪ್ರತಿಯೊಂದು ಲುಕ್ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉರ್ಫಿ ಜಾವೇದ್ ಅವರ ಡ್ರೆಸ್ಸಿಂಗ್ ಶೈಲಿ ಹಲವು ಬಾರಿ ಟ್ರೋಲ್ ಆಗಿದ್ದಾರೆ. ಉರ್ಫಿ ಜಾವೇದ್ ಅವರನ್ನು ಕಾಂಟ್ರವರ್ಸಿಯಲ್ ಕ್ವೀನ್ ಎಂದು ಕರೆಯಲಾಗುತ್ತದೆ. ಆದರೆ ಅವರ ಬಗ್ಗೆ ಇಷ್ಟೆಲ್ಲಾ ತಿಳಿದಿದ್ದರೂ ಸಹ ಅವರ ಸಂಪಾದನೆಯ ಬಗ್ಗೆ ಹೆಚ್ಚಿನ ಮಜನರಿಗೆ ಮಾಹಿತಿ ಇಲ್ಲ. ಹಾಗಾದ್ರೆ ಉರ್ಫಿ ಎಷ್ಟು ಗಳಿಸುತ್ತಾರೆ ಎಂಬುದು ಇಲ್ಲಿದೆ.

170 ಕೋಟಿ ಒಡತಿಯಂತೆ ಉರ್ಫಿ

ಉರ್ಫಿ ಜಾವೇದ್ ಆಸ್ತಿ ವಿಚಾರಕ್ಕೆ ಬಂದರೆ, ವರದಿಯ ಪ್ರಕಾರ, ನಟಿ ಸುಮಾರು 170 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಅವರು ತಿಂಗಳಿಗೆ ಸುಮಾರು 2-5 ಮಿಲಿಯನ್ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ. ಉರ್ಫಿ ಜಾವೇದ್ ಮಾಡೆಲಿಂಗ್‌ನಿಂದ ಸಾಕಷ್ಟು ಸಂಪಾದಿಸುವ ಜೊತೆಗೆ ಎಡ್‌ನಿಂದಲೂ ಸಾಕಷ್ಟು ಸಂಪಾದಿಸುತ್ತಾರಂತೆ. ಫ್ಯಾಷನ್ ದಿವಾ ಉರ್ಫಿ ಜಾವೇದ್ ಎಲ್ಲರನ್ನೂ ಹಿಂದೆ ಹಾಕಿ, ಫುಲ್ ಸುದ್ದಿಯಲ್ಲಿದ್ದಾರೆ.

ಉರ್ಫಿ ಜಾವೇದ್ ಅವರು ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್‌ಗಳಿಗೆ ಸಹ ಅವರಿಗೆ ಹಣ ಬರುತ್ತದೆ. ಉರ್ಫಿ ಜಾವೇದ್ ಕೂಡ ಬಿಗ್ ಬಾಸ್ OTT ಯಲ್ಲಿ ಭಾಗವಹಿಸಲು ಭಾರಿ ಮೊತ್ತವನ್ನು ತೆಗೆದುಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಉರ್ಫಿ ಜಾವೇದ್ ಕೂಡ ಸ್ವಂತ ಮನೆ ಮತ್ತು ಕಾರು ಹೊಂದಿದ್ದಾರೆ. ಮುಂಬೈನಲ್ಲೂ ಈ ನಟಿಗೆ ಐಷಾರಾಮಿ ಮನೆ ಇದೆಯಂತೆ. ಉರ್ಫಿ ಜಾವೇದ್ ಸುದ್ದಿಯಲ್ಲಿರದ ದಿನಗಳಿಲ್ಲ. ಅಲ್ಲದೇ ವಿವಾದ ಸೃಷ್ಟಿಸುವುದು ಹೇಗೆ ಎಂಬುದು ಉರ್ಫಿ ಜಾವೇದ್ ಗೆ ಗೊತ್ತಿದೆ ಎಮದರೆ ತಪ್ಪಾಗಲಾರದು.

ಇದನ್ನೂ ಓದಿ: ಹೋಮ್​ ಟೂರ್​ ವಿಡಿಯೋ ಮಾಡಿದ ನಿವೇದಿತಾ ಗೌಡ, ಪಾತ್ರೆ ತೊಳೆಯೋದು ಅಂದ್ರೆ ಅಲರ್ಜಿಯಂತೆ!

ಟ್ರೋಲ್ ಆಗುವುದರಲ್ಲಿ ಮುಂದೆ ಈ ನಟಿ

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹೆಸರು.ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರ ಪ್ರತಿಯೊಂದು ಶೈಲಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ.

ಇದನ್ನೂ ಓದಿ: ಬಗೆಬಗೆಯ ಬಟ್ಟೆ ತೊಡುವ ಉರ್ಫಿ ಜಾವೇದ್ ಒಟ್ಟು ಆದಾಯ, ಆಸ್ತಿ ಮೌಲ್ಯ ಎಷ್ಟು?

ಉರ್ಫಿ ಜಾವೇದ್ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಮೂಲದವರು. ಅವರು 15 ಅಕ್ಟೋಬರ್ 1996 ರಂದು ಜನಿಸಿದರು. ಬಡೇ ಭಯ್ಯಾ ಕಿ ದುಲ್ಹನಿಯಾದಲ್ಲಿ, ಉರ್ಫಿ ಅವ್ನಿ ಪಂತ್ ಪಾತ್ರವನ್ನು ನಿರ್ವಹಿಸಿದರು, ಇದರಿಂದಾಗಿ ಅವರು ಸಾರ್ವಜನಿಕರ ಗಮನ ಸೆಳೆದಿದ್ದರು.
Published by:Sandhya M
First published: