Srinidhi Shetty: ನಟಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ನೋಡಿ!

ಈ ಬೆರಗುಗೊಳಿಸುವ ನಟಿ ಪ್ರಸ್ತುತ ಸೂಪರ್ ಸ್ಟಾರ್ ವಿಕ್ರಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕೋಬ್ರಾ' ಎಂಬ ಶೀರ್ಷಿಕೆಯ ತನ್ನ ಮುಂಬರುವ ತಮಿಳು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

ಶ್ರೀನಿಧಿ ಶೆಟ್ಟಿ

ಶ್ರೀನಿಧಿ ಶೆಟ್ಟಿ

  • Share this:
ಸಾಮಾನ್ಯವಾಗಿ ಈ ಚಲನಚಿತ್ರೋದ್ಯಮದಲ್ಲಿ ಅವಕಾಶಗಳು ಸಿಗುವುದು ತುಂಬಾನೇ ವಿರಳ, ಬಹುಶಃ ಅದಕ್ಕೆ ಅನ್ನಿಸುತ್ತೆ ಈ ನಟ (actor) ಮತ್ತು ನಟಿಯರು (Actress) ತಮ್ಮ ಅಭಿನಯದ ಯಾವುದಾದರೊಂದು ಚಿತ್ರ ಸೂಪರ್ ಹಿಟ್ ಆದರೆ ಕೂಡಲೇ ಅವರಿಗೆ ಸಿಗುವ ಅನೇಕ ಚಿತ್ರಗಳಲ್ಲಿ ಅವರ ಸಂಭಾವನೆಯನ್ನು ಜಾಸ್ತಿ ಮಾಡಿಕೊಳ್ಳುತ್ತಾರೆ. ಅದರಲ್ಲೂ ಚಿತ್ರ ಸೂಪರ್ ಹಿಟ್ (Super Hit Movie) ಆದಾಗಲಂತೂ ನಿರ್ದೇಶಕರು ಮತ್ತು ನಿರ್ಮಾಪಕರು ಅದೇ ನಟ ಮತ್ತು ನಟಿಯರನ್ನು ಹಾಕಿಕೊಂಡು ಸಿನೆಮಾ (Cinema) ಮಾಡಲು ಮುಂದಾಗುತ್ತಾರೆ. ಅಷ್ಟೇ ಅಲ್ಲದೆ ಆ ನಟ ಮತ್ತು ನಟಿಯು ಕೇಳುವ ಸಂಭಾವನೆಯನ್ನು ಸ್ವಲ್ಪವೂ ಕಡಿಮೆ ಮಾಡಿಕೊಳ್ಳಲು ಹೇಳದೇ ಅದನ್ನು ನೀಡಿ ಅವರನ್ನು ಆ ಚಿತ್ರದಲ್ಲಿ ಹಾಕಿಕೊಳ್ಳುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. 

ಅದರಲ್ಲೂ ಈಗಂತೂ ಈ ಪ್ಯಾನ್ ಇಂಡಿಯಾ ಚಿತ್ರಗಳ ಟ್ರೆಂಡ್ ಶುರುವಾಗಿದ್ದು, ಒಂದು ಇಂತಹ ದೊಡ್ಡ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿ ಬಿಟ್ಟರೆ ಸಾಕು, ನಂತರ ಅನೇಕ ಅವಕಾಶಗಳು ಆ ನಟ ಮತ್ತು ನಟಿಯರನ್ನು ಹುಡುಕಿಕೊಂಡು ಬರುತ್ತವೆ ಎಂದು ಹೇಳಬಹುದು.

ದುಪ್ಪಟ್ಟು ಸಂಭಾವನೆ ಗಳಿಸುತ್ತಿರುವ ನಟಿ 
ಇಲ್ಲೊಬ್ಬ ನಟಿ ಇದ್ದಾರೆ ನೋಡಿ, ಅವರು ಕರ್ನಾಟಕ ಅಷ್ಟೇ ಅಲ್ಲದೆ ಇಡೀ ದೇಶದಲ್ಲಿ ಮತ್ತು ದೇಶದ ಹೊರಗೂ ಸಹ ಭಾರಿ ಸದ್ದು ಮಾಡಿದ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಹಣ ಮಾಡಿದ ಕೆಜಿಎಫ್ ಚಿತ್ರದಲ್ಲಿ ನಟಿಸಿದ್ದಾರೆ. ಈಗ ಅವರು ಇನ್ನೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ.

ಶ್ರೀನಿಧಿ ಶೆಟ್ಟಿಯವರ ಮುಂದಿನ ಸಿನೆಮಾ 
ಯಾರಪ್ಪಾ ಆ ನಟಿ ಅಂತ ನೀವು ತಲೆ ಕೆಡೆಸಿಕೊಂಡಿರುತ್ತೀರಿ ಅಲ್ಲವೇ? ಆ ನಟಿ ಬೇರೆ ಯಾರು ಅಲ್ಲ, ಶ್ರೀನಿಧಿ ಶೆಟ್ಟಿ ಎಂದು ಹೇಳಬಹುದು. ಹೌದು.. ಕೆಜಿಎಫ್ ಫ್ರ್ಯಾಂಚೈಸ್ ನ ಭಾರಿ ಯಶಸ್ಸಿನಿಂದಾಗಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲಿ ಇವರು ಸಹ ಒಬ್ಬರಾಗಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಇದನ್ನೂ ಓದಿ:  Rashmika Mandanna: ಮನೆಗೆ ಹೊಸ ಅತಿಥಿ ಕರೆ ತಂದ ರಶ್ಮಿಕಾ! ಸದ್ಯಕ್ಕೆ ಇದೇ ಈಕೆಯ ಕ್ರಶ್​ ಅಂತೆ

ಈ ಬೆರಗುಗೊಳಿಸುವ ನಟಿ ಪ್ರಸ್ತುತ ಸೂಪರ್ ಸ್ಟಾರ್ ವಿಕ್ರಮ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕೋಬ್ರಾ' ಎಂಬ ಶೀರ್ಷಿಕೆಯ ತನ್ನ ಮುಂಬರುವ ತಮಿಳು ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಈ ಚಿತ್ರವು ಆಗಸ್ಟ್ ನಲ್ಲಿ ಬಿಡುಗಡೆಯಾಗಲಿದೆ ಮತ್ತು ಶ್ರೀನಿಧಿ ಶೆಟ್ಟಿ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಕೋಬ್ರಾ ಸಿನೆಮಾಕ್ಕೆ ಶ್ರೀನಿಧಿ ಪಡೆದುಕೊಂಡ ಸಂಭಾವನೆ ಎಷ್ಟು  
ಆದರೆ ಶ್ರೀನಿಧಿ ಶೆಟ್ಟಿ ಅವರು 'ಕೋಬ್ರಾ' ಚಿತ್ರಕ್ಕಾಗಿ 'ಕೆಜಿಎಫ್' ಫ್ರ್ಯಾಂಚೈಸ್ ನ ಸಂಭಾವನೆಗಿಂತ ದುಪ್ಪಟ್ಟು ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಟಿ 'ಕೋಬ್ರಾ' ಚಿತ್ರದಲ್ಲಿನ ತಮ್ಮ ಪಾತ್ರಕ್ಕಾಗಿ ದೊಡ್ಡ ಮೊತ್ತವನ್ನೇ ಪಡೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರಕ್ಕಾಗಿ ಅವರು ಪಡೆದ ಮೊತ್ತಕ್ಕಿಂತ ದುಪ್ಪಟ್ಟು ಮೊತ್ತವನ್ನು ಶ್ರೀನಿಧಿ ಅವರು ಪಡೆಯುತ್ತಿದ್ದಾರೆ. ಕೆಜಿಎಫ್: ಚಾಪ್ಟರ್ 2 ಚಿತ್ರಕ್ಕಾಗಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದ ಶ್ರೀನಿಧಿ ಶೆಟ್ಟಿ ಈಗ ಕೋಬ್ರಾ ಚಿತ್ರಕ್ಕಾಗಿ ಸುಮಾರು 7 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಯಶ್ ಅಭಿನಯದ ಕೆಜಿಎಫ್ ಚಿತ್ರದಲ್ಲಿ ಅವರು ರೀನಾ ದೇಸಾಯಿ ಎಂಬ ನಾಯಕಿಯ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅವರ ನಟನೆಯಿಂದ ಅಪಾರ ಅಭಿಮಾನಿಗಳನ್ನು ಸಹ ಇವರು ಗಳಿಸಿದ್ದಾರೆ.

ಇದನ್ನೂ ಓದಿ:  Kiara Advani: ಕಿಯಾರಾ ಲುಕ್​ಗೆ ಮನಸೋತ ನೆಟ್ಟಿಗರು, ನಟಿಯ ಹಾಟ್​ ಪೋಸ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಏತನ್ಮಧ್ಯೆ, ಕೋಬ್ರಾ ಸಿನೆಮಾದ ಮೂಲಕ ನಟಿ ಶ್ರೀನಿಧಿ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆರ್ ಅಜಯ್ ಜ್ಞಾನಮುತ್ತು ನಿರ್ದೇಶನದ ಕೋಬ್ರಾ ಚಿತ್ರವು ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಚಿತ್ರದಲ್ಲಿ ನಟ ವಿಕ್ರಮ್, ಶ್ರೀನಿಧಿ ಶೆಟ್ಟಿ, ಇರ್ಫಾನ್ ಪಠಾಣ್, ಮಿಯಾ ಜಾರ್ಜ್, ರೋಷನ್ ಮ್ಯಾಥ್ಯೂ, ಸರ್ಜನೋ ಖಾಲಿದ್, ಪದ್ಮಪ್ರಿಯಾ, ಮೊಹಮ್ಮದ್ ಅಲಿ ಬೇಗ್, ಕನಿಹಾ, ಮಿರ್ನಾಲಿನಿ ರವಿ, ಮೀನಾಕ್ಷಿ ಮತ್ತು ಕೆ.ಎಸ್.ರವಿಕುಮಾರ್ ಅವರನ್ನು ಒಳಗೊಂಡ ದೊಡ್ಡ ತಾರಾ ಬಳಗವಿದೆ. ಈ ಚಿತ್ರವು ಆಗಸ್ಟ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
Published by:Ashwini Prabhu
First published: