Kamal Haasan: ಕಮಲ್ ಹಾಸನ್ ಗೆ ತಮ್ಮ ಮಾಜಿ ಪತ್ನಿಯ ಸಂಕಟ ಗೊತ್ತಿದ್ಯಾ? ಬರೀ 3 ಸಾವಿರ ಗಳಿಸಿದ್ರಂತೆ ಆಕೆ!

ತಮಿಳು ಚಿತ್ರರಂಗದ ಜನಪ್ರಿಯ ನಟ ಕಮಲ್ ಹಾಸನ್ ಅವರ ಮಾಜಿ ಪತ್ನಿಯಾದ ನಟಿ ಸಾರಿಕಾ ಅವರು ಐದು ವರ್ಷಗಳ ವಿರಾಮ ತೆಗೆದುಕೊಂಡ ನಂತರ ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಅವರು ಅನುಭವಿಸಿದ ಹಣದ ಕೊರತೆಯ ಬಗ್ಗೆ ತೆರೆದಿಟ್ಟರು.

ಕಮಲ್ ಹಾಸನ್ ಅವರ ಮಾಜಿ ಪತ್ನಿ ಸಾರಿಕಾ

ಕಮಲ್ ಹಾಸನ್ ಅವರ ಮಾಜಿ ಪತ್ನಿ ಸಾರಿಕಾ

  • Share this:
ತಮ್ಮ ಹೊಟ್ಟೆ (stomach) ಪಾಡಿಗಾಗಿ ಚಿಕ್ಕ ಪುಟ್ಟ ಕೆಲಸಗಳನ್ನು (Small work) ಮಾಡಿಕೊಂಡು ಜೀವನ (Life) ಸಾಗಿಸುತ್ತಿದ್ದವರಿಂದ ಹಿಡಿದು ದೊಡ್ಡ ದೊಡ್ಡ ಐಷಾರಾಮಿ (Luxury) ಬಂಗಲೆಯಲ್ಲಿರುವ ಜನರವರೆಗೆ ಎಲ್ಲರಿಗೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ (Covid-19 epidemic) ಸಮಯವು ಒಂದು ರೀತಿಯಲ್ಲಿ ಕಬ್ಬಿಣದ ಕಡಲೆಯಂತೆ ಆಗಿತ್ತು ಎಂದು ಹೇಳಬಹುದು. ಕೋವಿಡ್ ಸಂದರ್ಭದಲ್ಲಿ ಬಹುತೇಕವಾಗಿ ಎಲ್ಲಾ ಕೆಲಸಗಳು ಬಂದ್ ಆಗಿದ್ದು, ದುಡಿದು ತಿನ್ನುವ ಜನರಿಗೆ ಜೀವನ ಸಾಗಿಸುವುದು ತುಂಬಾನೇ ಕಷ್ಟವಾಗಿತ್ತು ಎಂದು ಹೇಳಬಹುದು. ಹಾಗಂದ ಮಾತ್ರಕ್ಕೆ ಶ್ರೀಮಂತ ಜನರಿಗೆ (rich people) ಇದರ ಬಿಸಿ ತಟ್ಟಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ.

ಎಲ್ಲರೂ ಕೆಲಸ ಮಾಡಿಯೇ ಹಣವನ್ನು ಸಂಪಾದಿಸುತ್ತಾರೆ, ಕೆಲಸಗಳೇ ನಿಲ್ಲಿಸಿದ ಮೇಲೆ ಮತ್ತು ಮನೆಯಿಂದ ಆಚೆ ಬರದೇ ಹೋದರೆ ಶ್ರೀಮಂತ ಜನರ ಬ್ಯಾಂಕ್ ಖಾತೆಯಲ್ಲಿರುವ ಉಳಿತಾಯದ ಹಣ ಹಾಗೆಯೇ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದನ್ನು ನೋಡಿದ ಅವರಿಗೂ ಈ ಕೋವಿಡ್ ರೋಗದ ಸಂದಿಗ್ಧ ಪರಿಸ್ಥಿತಿಯ ಬಿಸಿ ಸ್ವಲ್ಪ ಮಟ್ಟಿಗಾದರೂ ತಟ್ಟಿರುತ್ತದೆ ಎಂದು ಹೇಳಬಹುದು.

ಕೋವಿಡ್-19 ಸಂಧರ್ಭದಲ್ಲಿ ಆರ್ಥಿಕ ಸಂಕಷ್ಟ
ಒಟ್ಟಿನಲ್ಲಿ ಹೇಳುವುದಾದರೆ ಈ ಎರಡು ವರ್ಷಗಳಲ್ಲಿ ಬಹುತೇಕರು ತಮ್ಮ ಆಪ್ತರನ್ನು ಕಳೆದುಕೊಂಡು ಮತ್ತು ಅನೇಕ ಆರ್ಥಿಕ ಸಂಕಷ್ಟಗಳನ್ನು ಸಹ ಇವರು ಎದುರಿಸಿರುತ್ತಾರೆ ಎಂದು ಹೇಳಬಹುದು. ಇಲ್ಲೊಬ್ಬ ಜನಪ್ರಿಯ ನಟನೊಬ್ಬರ ಮಾಜಿ ಪತ್ನಿ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಎಷ್ಟೊಂದು ಕಷ್ಟ ಅನುಭವಿಸಿದ್ದಾರೆ ನೋಡಿ.

ತಮಿಳು ಚಿತ್ರರಂಗದ ಜನಪ್ರಿಯ ನಟ ಕಮಲ್ ಹಾಸನ್ ಅವರ ಮಾಜಿ ಪತ್ನಿಯಾದ ನಟಿ ಸಾರಿಕಾ ಅವರು ಐದು ವರ್ಷಗಳ ವಿರಾಮ ತೆಗೆದುಕೊಂಡ ನಂತರ ಕೋವಿಡ್ -19 ಸಾಂಕ್ರಾಮಿಕದ ಸಮಯದಲ್ಲಿ ಅವರು ಅನುಭವಿಸಿದ ಹಣದ ಕೊರತೆಯ ಬಗ್ಗೆ ತೆರೆದಿಟ್ಟರು. ಈ ಕೋವಿಡ್ ಮಹಾಮಾರಿ ಕೇವಲ ಒಂದು ವರ್ಷದೊಳಗೆ ಹೋದರೆ ಸಾಕಪ್ಪಾ ಅಂತ ಅವರು ಬಯಸಿದ್ದರಂತೆ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್ ಸಮಯದಲ್ಲಿ ಗಳಿಸಿದ ಹಣವೆಷ್ಟು
ಆದರೆ ಈ ಕರೋನ ವೈರಸ್ ಪ್ರೇರಿತ ಲಾಕ್‌ಡೌನ್ ನಿಂದಾಗಿ ಅದು ಎರಡನೇ ವರ್ಷಕ್ಕೂ ವಿಸ್ತರಿಸಲ್ಪಟ್ಟಿತು ಎಂದು ಅವರು ಬಹಿರಂಗಪಡಿಸಿದರು. ಅವರು ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು 3,000 ರೂಪಾಯಿಗಿಂತಲೂ ಕಡಿಮೆ ಹಣ ಗಳಿಸಿದರು ಎಂದು ಅವರು ಹೇಳಿದರು.

ಇದನ್ನೂ ಓದಿ: Famous actor: ನಟನೆ ಬಿಟ್ಟು ಕಸ ಗುಡಿಸುವ ಕೆಲಸ ಮಾಡಲು ಮುಂದಾದ ಈ ಖ್ಯಾತ ನಟ!

ಇತ್ತೀಚೆಗೆ ನೀಡಿದ ಒಂದು ಸಂದರ್ಶನವೊಂದರಲ್ಲಿ ಅವರು ಒಂದು ವರ್ಷದ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದಾಗ, ಅವರು ರಂಗಭೂಮಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು ಎಂದು ಹೇಳಿದರು. "ಅದು ಎಷ್ಟು ಅದ್ಭುತವಾಗಿತ್ತು ಎಂದರೆ ಆ ಒಂದು ವರ್ಷವು ನನಗೆ ಐದು ವರ್ಷಗಳ ಕೆಲಸವಾಗಿ ಬದಲಾಯಿತು. ಆದ್ದರಿಂದ ಅದೆಲ್ಲವನ್ನೂ ಮಾಡಲು ನನಗೆ ತುಂಬಾನೇ ಸಂತೋಷವಾಯಿತು" ಎಂದು ಹೇಳಿದರು.

ರಂಗಭೂಮಿಯಲ್ಲಿ ಪಡೆಯುತ್ತಿದ್ದ ಹಣವೆಷ್ಟು
"ಲಾಕ್‌ಡೌನ್ ಆಯಿತು ಮತ್ತು ನನ್ನ ಬಳಿ ಇದ್ದಂತಹ ಹಣ ಸಹ ಖಾಲಿಯಾಯಿತು, ಆಗ ನೀವು ಎಲ್ಲಿಗೆ ಹೋಗುತ್ತೀರಿ? ನೀವು ಮತ್ತೆ ಹೋಗುವುದು ಆ ನಟನೆಗೆ, ಏಕೆಂದರೆ ರಂಗಭೂಮಿಯಲ್ಲಿ ನೀವು ಕೇವಲ 2000 ದಿಂದ 2,700 ರೂಪಾಯಿ ಪಡೆಯುತ್ತೀರಿ ಮತ್ತು ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಇದು ಬಹಳ ಪ್ರಜ್ಞಾಪೂರ್ವಕ ನಿರ್ಧಾರವಾಗಿತ್ತು ಆದರೆ ಇದು ಒಂದು ವರ್ಷದವರೆಗೆ ಇರುತ್ತದೆ ಎಂದು ನಾನು ಭಾವಿಸಿದೆ ಆದರೆ ಅದು ಐದು ವರ್ಷಗಳು ಎಂದು ತಿಳಿಯಿತು. ಆ ಐದು ವರ್ಷ ಅದ್ಭುತವಾಗಿತ್ತು” ಎಂದು ಅವರು ನ್ಯೂಸ್ 18ಗೆ ತಿಳಿಸಿದ್ದಾರೆ.

ಮೈ ಬ್ಯೂಟಿಫುಲ್ ರಿಕಲ್ಸ್
ಐದು ವರ್ಷಗಳ ನಂತರ, ನಟಿ ‘ಮಾಡರ್ನ್ ಲವ್: ಮುಂಬೈ’ ಮೂಲಕ ಪುನರಾಗಮನ ಮಾಡುತ್ತಿದ್ದಾರೆ. ಅಲಂಕೃತ ಶ್ರೀವಾಸ್ತವ ಅವರ ಸಂಕಲನದಲ್ಲಿ, ಸಾರಿಕಾ ಅವರು ದಾನೇಶ್ ರಜ್ವಿ ಮತ್ತು ಅಹ್ಸಾಸ್ ಚನ್ನಾ ಅವರೊಂದಿಗೆ ನಟಿಸಿದ ‘ಮೈ ಬ್ಯೂಟಿಫುಲ್ ರಿಕಲ್ಸ್’ ಸಂಚಿಕೆಯಲ್ಲಿ ಕಾಣಿಸಿ ಕೊಂಡಿದ್ದಾರೆ. ಪ್ರೀತೀಶ್ ನಂದಿ ಕಮ್ಯೂನಿಕೇಷನ್ಸ್ ನಿರ್ಮಿಸಿರುವ ಈ ಸಿರೀಸ್ ಮೇ 13 ರಂದು ಪ್ರಥಮ ಪ್ರದರ್ಶನ ಕಾಣಲಿದೆ.

ಇದನ್ನೂ ಓದಿ:  MS Dhoni: ಬಣ್ಣದ ಲೋಕಕ್ಕೆ ಕಾಲಿಟ್ಟ ಧೋನಿ! 'ಆ' ನಟಿ ನಟಿಸಿದ್ರೆ ಮಾತ್ರ ದುಡ್ಡು ಹಾಕೋದು ಅಂದ್ರಾ ಮಾಹಿ?

ಸಾರಿಕಾ ಅವರು ತಮ್ಮ ಮೊದಲ ವಿರಾಮವು 1986 ರಲ್ಲಿ ತನ್ನ ಹಿರಿಯ ಮಗಳು ಶ್ರುತಿ ಹಾಸನ್ ಗೆ ಜನ್ಮ ನೀಡಿದಾಗ ತೆಗೆದು ಕೊಂಡಿದ್ದರು. ಅವರು 2000ರ ದಶಕದ ಮಧ್ಯ ಭಾಗದಲ್ಲಿ ಭೇಜಾ ಫ್ರೈ, ಮನೋರಮಾ ಸಿಕ್ಸ್ ಫೀಟ್ ಅಂಡರ್ ಮತ್ತು ಪರ್ಜಾನಿಯಾದಂತಹ ಚಲನಚಿತ್ರಗಳೊಂದಿಗೆ ತೆರೆಗೆ ಮರಳಿದರು.
Published by:Ashwini Prabhu
First published: