Indian Models: ಭಾರತದಲ್ಲಿ IIM ಪದವೀಧರರಿಗಿಂತ ಹೆಚ್ಚು ವೇತನ ಪಡೆಯುತ್ತಾರೆ ಮಾಡೆಲ್​ಗಳು!

ಭಾರತೀಯ ಮಾಡೆಲ್‌ ಗಳ ಸ್ಯಾಲರಿ ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ. ಅವರು ಗಳಿಸೋ ಆದಾಯ ಯಾವ ಐಐಎಂ ಗ್ರಾಜುಯೇಟ್‌ ಗೂ ಕಮ್ಮಿಯಿಲ್ಲ! ಹೌದು, ಭಾರತೀಯ ಮಾಡೆಲ್‌ಗಳು ವಿದೇಶಿ ಮಾಡೆಲ್‌ ಗಳಷ್ಟು ಆದಾಯ ಗಳಿಸದಿದ್ದರೂ, ಅವರು ಖಂಡಿತವಾಗಿಯೂ ಅನೇಕ ಇತರ ವೃತ್ತಿಪರರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಮಾಡೆಲ್ ಗಳು

ಮಾಡೆಲ್ ಗಳು

  • Share this:
ಬಹಳಷ್ಟು ಜನಸಾಮಾನ್ಯರಿಗೆ ಚಿತ್ರರಂಗದ ಸೆಲೆಬ್ರಿಟಿಗಳ (celebrities) ಬಗ್ಗೆ ಗೊತ್ತು. ಅವರ ಹೈ-ಫೈ ಲೈಫ್‌ ಸ್ಟೈಲ್‌, ಒಂದು ಚಿತ್ರಕ್ಕೆ ಪಡೆಯಬಹುದಾದ ಕೋಟಿ ಕೋಟಿ ಸಂಭಾವನೆಯ ಬಗ್ಗೆ ಗೊತ್ತಿರುತ್ತೆ. ಆದ್ರೆ ಆದೇ ರಂಗದಲ್ಲಿರೋ ಮಾಡೆಲಿಂಗ್‌ (Modeling) ಬಗ್ಗೆ ಸಾಕಷ್ಟು ಜನರಿಗೆ ಪರಿಚಯವಿರೋದಿಲ್ಲ. ಫ್ಯಾಷನ್‌ ಶೋಗಳ ಬಗ್ಗೆ ಸ್ವಲ್ಪ ಮಟ್ಟಿಗೆ ಅಂದಾಜಿದ್ದರೂ ಅವರು ಪಡೆಯೋ ಸಂಭಾವನೆ ಬಗ್ಗೆ ಅಷ್ಟಾಗಿ ಐಡಿಯಾ ಇರೋದಿಲ್ಲ. ಆದ್ರೆ ಭಾರತೀಯ ಮಾಡೆಲ್‌ ಗಳ ಸ್ಯಾಲರಿ (Salary) ಕೇಳಿದ್ರೆ ನೀವು ಆಶ್ಚರ್ಯ ಪಡ್ತೀರಾ. ಅವರು ಗಳಿಸೋ ಆದಾಯ (Income) ಯಾವ ಐಐಎಂ ಗ್ರಾಜುಯೇಟ್‌ ಗೂ ಕಮ್ಮಿಯಿಲ್ಲ! ಹೌದು, ಭಾರತೀಯ ಮಾಡೆಲ್‌ಗಳು ವಿದೇಶಿ ಮಾಡೆಲ್‌ ಗಳಷ್ಟು ಆದಾಯ ಗಳಿಸದಿದ್ದರೂ, ಅವರು ಖಂಡಿತವಾಗಿಯೂ ಅನೇಕ ಇತರ ವೃತ್ತಿಪರರಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ಮಾಡೆಲ್ ಗಳ ವಾರ್ಷಿಕ ವೇತನ ಎಷ್ಟಿರುತ್ತದೆ 
ಬಾಲಿವುಡ್‌ನ ಪ್ರಾಬಲ್ಯದಿಂದಾಗಿ ನಮ್ಮ ದೇಶದಲ್ಲಿ ಸೂಪರ್ ಮಾಡೆಲ್ ಸಂಸ್ಕೃತಿ ಅಷ್ಟಾಗಿ ಪ್ರಚಲಿತವಾಗಿಲ್ಲ. ಯಾಕೆಂದ್ರೆ ಇಲ್ಲಿನ ಬಾಲಿವುಡ್ ಹಾಗೂ ಬೇರೆ ಬೇರೆ ಭಾಷೆಯ ಸೆಲೆಬ್ರಿಟಿಗಳು ಮಾಡೆಲ್‌ಗಳಿಗಿಂತ ಹೆಚ್ಚು ಬ್ರ್ಯಾಂಡ್ ಡೀಲ್‌ ಪಡೆದುಕೊಳ್ಳುತ್ತಾರೆ. ಇದು ಎಲ್ಲರಿಗೂ ಗೊತ್ತಿರೋ ವಿಷ್ಯ. ಆದ್ರೆ ಇದರರ್ಥ ಮಾಡೆಲಿಂಗ್‌ ಉದ್ಯೋಗದಲ್ಲಿ ಕಡಿಮೆ ವೇತನ ನೀಡಲಾಗುತ್ತೆ ಎಂದಲ್ಲ.

ಮಾಡೆಲಿಂಗ್‌ ನಲ್ಲಿರೋ ಮಹಿಳಾ ಹಾಗೂ ಪುರುಷ ರೂಪದರ್ಶಿಯರು ಲಕ್ಷ ಲಕ್ಷ ಗಳಿಸುತ್ತಾರೆ. ಈಗಂತೂ ಯಾವುದೇ ಬ್ರಾಂಡ್‌ ಇರಲಿ ಅಥವಾ ಯಾವುದೇ ಬ್ರಾಂಡ್‌ ನ ಪ್ರಮೋಷನಲ್‌ ಇರಲಿ. ಅದಕ್ಕೆ ರೂಪದರ್ಶಿಯರು ಬೇಕೇ ಬೇಕು. ಇನ್ನು ಸರಾಸರಿಯಾಗಿ ಹೇಳುವುದಾದರೆ ಪುರುಷ ಮಾಡೆಲ್‌ ವಾರ್ಷಿಕ ಪ್ಯಾಕೇಜ್ ಸುಮಾರು INR 30 ಲಕ್ಷ ರೂಪಾಯಿ ಇರುತ್ತೆ. ಆದರೆ ಮಹಿಳಾ ಮಾಡೆಲ್‌ ಸುಮಾರು 40 ಲಕ್ಷ ಪಡೆಯುತ್ತಾರೆ. ಇದು ಖಂಡಿತವಾಗಿಯೂ ಐಐಎಂ ನ ಫ್ರೆಶರ್ಸ್‌ ವಾರ್ಷಿಕ ವೇತನಕ್ಕಿಂತ ಹೆಚ್ಚಾಗಿರುತ್ತದೆ.

ಅತಿಹೆಚ್ಚು ಸಂಭಾವನೆ ಪಡೆಯುವ ರೂಪದರ್ಶಿಯರಿವರು
ಇನ್ನು, ಮಹಿಳೆಯರಲ್ಲಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೆಲವು ಮಾಡೆಲ್‌ಗಳೆಂದರೆ ರಿಕಿ ಚಟರ್ಜಿ, ಸೋನಾಲಿಕಾ ಸಹಾಯ್, ಲಕ್ಷ್ಮಿ ರಾಣಾ ಮತ್ತು ಅರ್ಚನಾ ಅಖಿಲ್ ಕುಮಾರ್.

ಆದಾಗ್ಯೂ, ಸಂಭಾವನೆಯ ವಿಷಯದಲ್ಲಿ ಈ ದಿವಾ ಗಳಿಗೆ ಸರಿಸಮಾನವಾಗಿರುವ ಹೊಸ ಮಹಿಳಾ ಮಾಡೆಲ್‌ಗಳಲ್ಲಿ ಸೋನಾಲಿ ಶರ್ಮಾ, ಜಸ್ಮೀತ್ ದೇವಗನ್ ಮತ್ತು ತಮನ್ನಾ ಕಟೋಚ್ ಇದ್ದಾರೆ. ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಪುರುಷ ಮಾಡೆಲ್‌ಗಳೆಂದರೆ ವಿವೇಕ್ ಧಿಮಾನ್, ಬರ್ದೀಪ್ ಧಿಮಾನ್, ನಿತಿನ್ ಗುಪ್ತಾ, ಗೌರವ್ ಚೌಧರಿ ಮತ್ತು ವೈಭವ್ ಆನಂದ್ ಅವರಾಗಿರ್ತಾರೆ.

ಕಮರ್ಷಿಯಲ್‌ ಜಾಹೀರಾತುಗಳಿಗೆ ಲಕ್ಷ ಲಕ್ಷ!
ದೆಹಲಿ ಮೂಲದ ಪ್ರಮುಖ ಮಾಡೆಲಿಂಗ್ ಏಜೆನ್ಸಿಯ ಪ್ರಕಾರ, ಅನುಭವಿ ಪುರುಷ ಮಾಡೆಲ್‌ ಜಾಹೀರಾತಿಗೆ ಹಾಗೂ ಪ್ರಚಾರ ಹಾಗೂ ಡಿಸೈನರ್‌ ಶೂಟ್‌ ಗಳಿಗೆ ತಿಂಗಳಿಗೆ 2 ರಿಂದ ಎರಡೂವರೆ ಲಕ್ಷ ಗಳಿಸ್ತಾರೆ. ಮಹಿಳಾ ಮಾಡೆಲ್‌ ಗಳು ಇದರಿಂದ ತಿಂಗಳಿಗೆ 3 ರಿಂದ ಮೂರೂವರೆ ಲಕ್ಷ ಗಳಿಸ್ತಾರೆ ಎನ್ನಲಾಗುತ್ತೆ. ಮಾಡೆಲಿಂಗ್ ಏಜೆನ್ಸಿಯ ಟ್ಯಾಲೆಂಟ್ಸ್ ಥೆಸಾರಸ್‌ನ ಮಾಲೀಕ ಶಿಖರ್ ಸಿದ್ಧಾರ್ಥ್ ಹೇಳೋ ಪ್ರಕಾರ, ಯಾವ ಬ್ರಾಂಡ್‌ಗಳು ತಮ್ಮ ಡಿಜಿಟಲ್ ಪ್ರೆಸೆನ್ಸ್‌ ಹೆಚ್ಚಿಸುತ್ತವೆಯೋ ಆಗ ಮಾಡೆಲ್‌ಗಳ ಕೆಲಸವು ಹತ್ತು ಪಟ್ಟು ಹೆಚ್ಚಾತ್ತದೆ.

ಇನ್ನು ಡಿಸೈನರ್‌ಗಳಲ್ಲಿ ಜನಪ್ರಿಯ ಮುಖವಾಗಿರುವ ಪ್ರಮುಖ ಮಹಿಳಾ ಮಾಡೆಲ್ ಒಬ್ಬರು ಹೇಳುವಂತೆ, "ನಾನು ಸಾಮಾನ್ಯವಾಗಿ ಡಿಸೈನರ್ ಶೂಟ್‌ಗಳಿಗೆ ದಿನಕ್ಕೆ ಸುಮಾರು 30 ರಿಂದ 35 ಸಾವಿರ ಶುಲ್ಕ ವಿಧಿಸುತ್ತೇನೆ. ಅಲ್ದೇ ನಾನು ಶೂಟಿಂಗ್‌ನಲ್ಲಿ ಹೆಚ್ಚು ಬ್ಯುಸಿಯಾಗಿದ್ದೇನೆ. ನಾನು ತಿಂಗಳಿಗೆ ಸರಾಸರಿ 15 ದಿನಗಳ ಕಾಲ ಶೂಟ್ ಮಾಡುತ್ತೇನೆ ಮತ್ತು ಜಿಎಸ್‌ ಟಿ ಹೊರತು ಪಡಿಸಿ ಸುಮಾರು 5 ಲಕ್ಷ ರೂಪಾಯಿ ಆದಾಯ ಗಳಿಸುತ್ತೇನೆ”. ಅಂತಾರೆ.

ಇದನ್ನೂ ಓದಿ:  Janhvi Kapoor: ಬಾಡಿಕಾನ್ ಡ್ರೆಸ್​​ನಲ್ಲಿ ಜಾನ್ವಿ, ನಿಮ್ಗೆ ಸೀರೇನೇ ಚಂದ ಎಂದ ನೆಟ್ಟಿಗರು

ಇನ್ನು ದಶಕದ ಹಿಂದೆ ಕೂಡ ಮಾಡೆಲಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಹಾಗೂ ಆದಾಯ ಗಳಿಸಲು ಅವಕಾಶವಿತ್ತು. ರ್‍ಯಾಂಪ್ ಮಾಡೆಲಿಂಗ್‌ ನಲ್ಲಿ ಈಗ ಗಳಿಸುತ್ತಿದ್ದಂತೆಯೇ ಲಕ್ಷ ಲಕ್ಷ ಗಳಿಸಲು ಅವಕಾಶವಿತ್ತು. ಆಗಲೂ ಕೂಡ ಜನಪ್ರಿಯ ರೂಪದರ್ಶಿಯರು 30 ರಿಂದ 40 ಲಕ್ಷ ಆದಾಯ ಗಳಿಸುತ್ತಿದ್ದರು.

ಮಾಡೆಲಿಂಗ್‌ನಲ್ಲಿ ಸಾಕಷ್ಟು ಕೆಲಸವಿದೆಯೇ?
ಮಾಡೆಲಿಂಗ್‌ ಕ್ಷೇತ್ರದಲ್ಲಿ ಕೆಲವರು ಮಾತ್ರ ಯಶಸ್ವಿಯಾಗ್ತಾರೆ. ನಮಗೆ ಕಾಣೋ ಮುಖಗಳು ಕೆಲವೊಂದಿಷ್ಟು ಮಾತ್ರ. ಹಾಗಿದ್ರೆ ಮಾಡೆಲಿಂಗ್‌ ನಲ್ಲಿ ಸಾಕಷ್ಟು ಕೆಲಸವಿದೆಯಾ ಅನ್ನೋದು ಜನಸಾಮಾನ್ಯರ ಮನದಲ್ಲಿ ಹುಟ್ಟಿಕೊಳ್ಳುವ ಪ್ರಶ್ನೆ. ಇದಕ್ಕೆ ಉತ್ತರ ಹೌದು.

ಮಾರುಕಟ್ಟೆಯಲ್ಲಿ ಹಲವಾರು ಮಾಡೆಲಿಂಗ್ ಕೆಲಸಗಳಿವೆ. ಪ್ರತಿದಿನ ಹೊಸ ಹೊಸ ಬ್ರ್ಯಾಂಡ್‌ಗಳು ಬರುತ್ತಿವೆ. ಹೆಚ್ಚಿನ ಪ್ರಯೋಗಗಳು ನಡೆಯುತ್ತಿವೆ. ಅವರೆಲ್ಲರೂ ತಮ್ಮ ವೆಬ್‌ಸೈಟ್ ಮತ್ತು ಸಾಮಾಜಿಕ ಮಾಧ್ಯಮಗಳು ಪ್ರಸ್ತುತವಾಗಿರಲು ನಿಯಮಿತವಾಗಿ ಶೂಟ್ ಮಾಡುತ್ತಾರೆ.

ಇನ್‌ ಸ್ಟಾಗ್ರಾಂ ನಂಥ ಸಾಮಾಜಿಕ ಜಾಲತಾಣಗಳು ಎಲ್ಲವನ್ನೂ ಸಂಪೂರ್ಣವಾಗಿ ಬದಲಾಯಿಸಿವೆ. ಪ್ರತಿ ವರ್ಷ ಕೇವಲ ಎರಡು ಪ್ರಚಾರಗಳನ್ನು ಮಾಡುತ್ತಿದ್ದ ವಿನ್ಯಾಸಕರು, ಪ್ರಸ್ತುತ ಪ್ರತಿ ತಿಂಗಳು ಕನಿಷ್ಠ ಒಂದು ಅಭಿಯಾನವನ್ನು ಮಾಡುತ್ತಾರೆ. ಆದ್ದರಿಂದ ಮಾಡೆಲ್‌ಗಳಿಗೆ ಹೆಚ್ಚಿನ ಆದಾಯ ಗಳಿಸಲು ಅವಕಾಶಗಳಿವೆ ಎನ್ನಲಾಗುತ್ತೆ.

ರ್‍ಯಾಂಪ್ ಶೋಗಳು ಮಾತ್ರ ಆದಾಯದ ಮೂಲವಲ್ಲ!
ಇನ್ನು ರನ್‌ವೇ ಶೋಗಳ ಬಗ್ಗೆ ಹೇಳೋದಾದ್ರೆ, ಒಬ್ಬ ಪುರುಷ ಮಾಡೆಲ್ ಪ್ರತಿ ಪ್ರದರ್ಶನಕ್ಕೆ ಸುಮಾರು 7 ರಿಂದ 10 ಸಾವಿರದಷ್ಟು ಆದಾಯ ಗಳಿಸಬಹುದು, ಆದರೆ ಮಹಿಳಾ ರೂಪದರ್ಶಿ ಅದಕ್ಕಿಂತ ಹೆಚ್ಚು ಗಳಿಸುತ್ತಾಳೆ.

ಆಕೆಗಿರುವ ಅನುಭವದ ಪ್ರಕಾರ ಪ್ರತಿ ಪ್ರದರ್ಶನಕ್ಕೆ 15 ರಿಂದ 20 ಸಾವಿರ ರೂ.ಗಳನ್ನು ಗಳಿಸುತ್ತಾಳೆ. ಪ್ರಮೋಷನಲ್‌ ಶೂಟಿಂಗ್‌ ಮತ್ತು ಟಿವಿ ಜಾಹೀರಾತುಗಳನ್ನು ಮಾಡುವ ಮಾಡೆಲ್‌ಗಳಂತೆ ರ್‍ಯಾಂಪ್ ಮಾಡೆಲ್‌ಗಳು ಹೆಚ್ಚು ಹಣವನ್ನು ಗಳಿಸುವುದಿಲ್ಲ. ಆದರೆ ಮಾಡೆಲಿಂಗ್‌ ಕ್ಷೇತ್ರದಲ್ಲಿ ಈಗಾಗಲೇ ಗುರುತಿಸಿಕೊಂಡವರು 3 ದಿನಗಳ ರಾಂಪ್ ಶೋಗಳಿಗೆ 3 ಲಕ್ಷದವರೆಗೂ ಪಡೆಯಬಹುದು.

ಡಿಸೈನರ್ ಪ್ರಚಾರ, ಬ್ರಾಂಡ್ ಜಾಹೀರಾತುಗಳಿಗೆ ಲಕ್ಷಗಟ್ಟಲೆ ಆದಾಯ
ಭಾರತೀಯ ಫ್ಯಾಷನ್‌ ಕ್ಷೇತ್ರದಲ್ಲಿ ಅತಿ ದೊಡ್ಡ ಹೆಸರು, ಸಬ್ಯಸಾಚಿ ಅವರದ್ದು. ಅವರ ಡಿಸೈನರ್‌ ಬಟ್ಟೆಗಳು ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿವೆ. ತಮ್ಮ ಡಿಸೈನರ್‌ ಬಟ್ಟೆಗಳ ಪ್ರಚಾರಕ್ಕಾಗಿ ಅವರ ಮಾದರಿಗಳಿಗೆ ಉತ್ತಮ ಸಂಭಾವನೆಯನ್ನು ನೀಡಲಾಗುತ್ತೆ.

ಅದು ಪುರುಷ ಅಥವಾ ಮಹಿಳೆಯಾಗಿರಲಿ, ಅವರು ಒಂದು ದಿನಕ್ಕೆ ಸುಮಾರು INR 80 ಸಾವಿರದಿಂದ 1 ಲಕ್ಷದವರೆಗೆ ಪಾವತಿಸುತ್ತಾರೆ. ಆದರೆ ಮಾಡೆಲ್‌ ಗಳಿಗೆ ದೊಡ್ಡ ಮೊತ್ತದ ಸಂಭಾವನೆ ನೀಡುವವರಲ್ಲಿ ಅನಿತಾ ಡೋಂಗ್ರೆ ಹೆಸರು ಮೊದಲಿಗೆ ಬರುತ್ತೆ. ಅವರು ತಮ್ಮ ಮಹಿಳಾ ರೂಪದರ್ಶಿಗಳಿಗೆ ದಿನದ ಪ್ರಚಾರದ ಚಿತ್ರೀಕರಣಕ್ಕಾಗಿ 2 ಲಕ್ಷ ರೂ. ಪಾವತಿಸುತ್ತಾರೆ.

ಇದನ್ನೂ ಓದಿ:  Anupama Parameswaran: ಹಳದಿ ಡಿಸೈನರ್ ಸೀರೆಯಲ್ಲಿ ಫೋಟೋ ಶೇರ್ ಮಾಡಿದ ಅಪ್ಪು ಹೀರೋಯಿನ್! ಫ್ಯಾನ್ಸ್​ಗೆ ಕೂದಲದ್ದೇ ಚಿಂತೆ

ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಮಾಡೆಲ್‌ಗಳು, ಫ್ಯಾಷನ್ ಛಾಯಾಗ್ರಾಹಕರು ಅಥವಾ ಸ್ಟೈಲಿಸ್ಟ್‌ಗಳಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಇಂದು ಮಾಡೆಲಿಂಗ್‌ ಕ್ಷೇತ್ರ ಕೇವಲ ಪಾರ್ಟ್‌ ಟೈಂ ಜಾಬ್‌ ಥರಾ ಉಳಿದಿಲ್ಲ. ಬದಲಾಗಿ ಇಂದು ಪೂರ್ಣ ಪ್ರಮಾಣದ ವೃತ್ತಿಯಾಗಿ ಬದಲಾಗಿದೆ. ಎಲ್ಲಾ ಡಿಜಿಟಲ್‌ ಮಯವಾಗಿರುವ ಇಂದಿನ ಕಾಲದಲ್ಲಿ ಮಾಡೆಲಿಂಗ್‌ ಅನ್ನೋದು ಜಾಸ್ತಿ ಆದಾಯ ಗಳಿಸೋ ವೃತ್ತಿಯಾಗಿ ಬದಲಾಗಿದೆ ಅನ್ನೋದು ಸತ್ಯ. ಹಾಗಾಗಿ ಮಾಡೆಲಿಂಗ್‌ ನಲ್ಲಿ ಆಸಕ್ತಿ ಇರುವವರು ಈ ಕ್ಷೇತ್ರದಲ್ಲಿ ಒಳ್ಳೆಯ ಟ್ರೇನಿಂಗ್‌ ಪಡೆದು ಇದನ್ನು ಪೂರ್ಣಪ್ರಮಾಣದ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ತಮ್ಮ ಫ್ಯಾಷನ್‌ ಜೊತೆಗೆ ಒಳ್ಳೆಯ ಆದಾಯವನ್ನೂ ಗಳಿಸಬಹುದು.
Published by:Ashwini Prabhu
First published: