• Home
  • »
  • News
  • »
  • entertainment
  • »
  • Lalit Modi: ಲಲಿತ್ ಮೋದಿಯ ಲಂಡನ್ ನಲ್ಲಿರುವ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ

Lalit Modi: ಲಲಿತ್ ಮೋದಿಯ ಲಂಡನ್ ನಲ್ಲಿರುವ ಮನೆ ಹೇಗಿದೆ ಗೊತ್ತಾ? ಇಲ್ಲಿದೆ ನೋಡಿ

ಲಲಿತ್ ಮೋದಿ

ಲಲಿತ್ ಮೋದಿ

ಜಗತ್ತಿಗೆ ಐಪಿಎಲ್ ಪರಿಚಯಿಸಿದ್ದ ಲಲಿತ್ ಮೋದಿ ಸಾಕಷ್ಟು ಜನಪ್ರೀಯರಾದರು. ತದನಂತರ ಕೆಲ ವಿವಾದಕ್ಕೆ ಸಿಲುಕಿದ ಲಲಿತ್ ಮೋದಿ ಅವರು ಐಪಿಎಲ್ ನಿಂದ ಅಮಾನತ್ತುಗೊಂಡಿದ್ದರು. ತರುವಾಯ ಅವರು ಭಾರತದಲ್ಲಿ ತಮಗೆ ಸುರಕ್ಷತೆಗೆ ಧಕ್ಕೆಯಿದೆ ಎಂದು ಅಲವತ್ತುಕೊಂಡು 2010 ರಲ್ಲೇ ಲಂಡನ್ನಿಗೆ ಶಿಫ್ಟ್ ಆಗಿ ಅಲ್ಲಿಯೇ ನೆಲೆಸಿದ್ದಾರೆ.ಇವರ ಐಷಾರಾಮಿ ಬಂಗಲೆ ಹೇಗಿದೆ ಗೊತ್ತಾ

ಮುಂದೆ ಓದಿ ...
  • Share this:

ಇತ್ತೀಚಿನ ಕೆಲ ದಿನಗಳಿಂದ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ (Sushmita Sen) ಅವರು ಸಾಕಷ್ಟು ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ ಇಲ್ಲದಿಲ್ಲ ಅಂತೇನೂ ಇಲ್ಲ. ಅಸಲಿಗೆ ಅವರು ಕೆಲ ಸಮಯದ ಹಿಂದಷ್ಟೇ ಬ್ರೇಕಪ್ ಮಾಡಿಕೊಂಡಿದ್ದರು. ಈಗ ಮತ್ತೆ ಅವರ ಹೆಸರು ಮತ್ತೊಬ್ಬ ಪ್ರಸಿದ್ಧ ವ್ಯಕ್ತಿಯೊಂದಿಗೆ ತಳುಕಿ ಹಾಕಿಕೊಂಡಿರುವುದೇ ಸುಶ್ಮಿತಾ ಅವರು ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ. ಹೌದು, ಜಗತ್ತಿಗೆ ಅತಿ ಪ್ರತಿಷ್ಠಿತ ಹಾಗೂ ಜನಪ್ರೀಯ ಚುಟುಕು ಕ್ರಿಕೆಟ್ ರೂಪಾಂತರವಾದ ಐಪಿಎಲ್ ಅನ್ನು (IPL) ಪರಿಚಯಿಸಿದ ಲಲಿತ್ ಮೋದಿ (Lalit Modi) ಈಗ ಸುಶ್ಮಿತಾ ಸೇನ್ ಜೊತೆ ಡೇಟ್ ಮಾಡುತ್ತಿದ್ದು ಇಬ್ಬರು ಸದ್ಯ ಜೊತೆಯಾಗಿರುವುದಾಗಿ ಇತ್ತೀಚಿಗಷ್ಟೆ ಲಲಿತ್ ಅವರು ಬಹಿರಂಗಪಡಿಸಿದ್ದರು. ಅದಾದ ತರುವಾಯ ಈಗ ಎಲ್ಲೆಡೆ ಇಬ್ಬರ ಪ್ರಣಯದ ವಿಷಯವೇ ಚರ್ಚೆಯಾಗುತ್ತಿದೆ ಎಂದರೆ ತಪ್ಪಾಗಲಾರದು.


2010 ರಲ್ಲೇ ಲಂಡನ್ನಿಗೆ ಶಿಫ್ಟ್ 
ಜಗತ್ತಿಗೆ ಐಪಿಎಲ್ ಪರಿಚಯಿಸಿದ್ದ ಲಲಿತ್ ಮೋದಿ ಸಾಕಷ್ಟು ಜನಪ್ರೀಯರಾದರು. ತದನಂತರ ಕೆಲ ವಿವಾದಕ್ಕೆ ಸಿಲುಕಿದ ಲಲಿತ್ ಮೋದಿ ಅವರು ಐಪಿಎಲ್ ನಿಂದ ಅಮಾನತ್ತುಗೊಂಡಿದ್ದರು. ತರುವಾಯ ಅವರು ಭಾರತದಲ್ಲಿ ತಮಗೆ ಸುರಕ್ಷತೆಗೆ ಧಕ್ಕೆಯಿದೆ ಎಂದು ಅಲವತ್ತುಕೊಂಡು 2010 ರಲ್ಲೇ ಲಂಡನ್ನಿಗೆ ಶಿಫ್ಟ್ ಆಗಿ ಅಲ್ಲಿಯೇ ನೆಲೆಸಿದ್ದಾರೆ. ಸದ್ಯ ಮೋದಿ ಎಂಟರ್ಪ್ರೈಸಸ್ ಎಂಬ ಉದ್ದಿಮೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಲಲಿತ್ ಮೋದಿ ಏನಿಲ್ಲವೆಂದರೂ 4555 ಕೋಟಿ ರೂಪಾಯಿಗಳಷ್ಟು ಮೌಲ್ಯದ ಆಸ್ತಿಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ ಎನ್ನಲಾಗಿದೆ.


ಲಲಿತ್ ಮೋದಿಯವರ ಲಂಡನ್ ನಲ್ಲಿರುವ ಮನೆ ಹೇಗಿದೆ? 
ಲಲಿತ್ ಮೋದಿ ಅವರು ಪ್ರಸ್ತುತ ಲಂಡನ್ನಿನಲ್ಲಿ ಬಹು ಅಂತಸ್ತಿನ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ, ಲಲಿತ್ ಅವರ ಲಂಡನ್ನಿನ ಬಂಗಲೆಯು 7000 ಚ. ಅಡಿಗಳಷ್ಟು ವಿಸ್ತಾರವಾಗಿದೆ ಎನ್ನಲಾಗಿದೆ. ಈ ಬಂಗಲೆಯಲ್ಲಿ ಒಂದು ಎಲಿವೇಟರ್ ಹಾಗೂ ಒಟ್ಟು 12 ಕೋಣೆಗಳಿವೆ ಎಂದು ತಿಳಿದುಬಂದಿದೆ. ಅಲ್ಲದೆ, ಎರಡು ಅತಿಥಿ ಕೋಣೆಗಳು, ನಾಲ್ಕು ಸ್ವಾಗತ ಕೋಣೆಗಳು ಈ ಬಂಗಲೆಯಲ್ಲಿದೆ ಎಂದು ಹೇಳಲಾಗಿದೆ.


ಇದನ್ನೂ ಓದಿ:  Lalit Modi- Sushmita Sen: ವಿಶ್ವ ಸುಂದರಿ ಸುಶ್ಮಿತಾ ಸೇನ್ ಜೊತೆ ಲಲಿತ್ ಮೋದಿ ಡೇಟಿಂಗ್!

View this post on Instagram


A post shared by Lalit Modi (@lalitkmodi)

View this post on Instagram


A post shared by Lalit Modi (@lalitkmodi)
ಲಲಿತ್ ಮೋದಿ ಮೊದಲಿನಿಂದಲೂ ತಮ್ಮ ಲಕ್ಸುರಿ ಜೀವನಶೈಲಿಗಾಗಿ ಸಾಕಷ್ಟು ಗುರುತಿಸಿಕೊಂಡಿದ್ದಾರೆ. ಈಗಲೂ ಲಂಡನ್ನಿನಲ್ಲಿ ತಮ್ಮ ವೈಯಕ್ತಿಕ ಆಸೆಗೆ ತಕ್ಕ ಹಾಗೆ ಜೀವನ ನಡೆಸುತ್ತಿರುವ ಅವರು ಎಂಟು ಡಬಲ್ ಬೆಡ್ ವುಳ್ಳ ಕೋಣೆಗಳು, ಏಳು ಬಾತ್ರೂಮ್ ಗಳು, ಅತಿಥಿ ಕೋಣೆಗಳು, ಎರಡು ಅಡುಗೆಮನೆಗಳು, ಹಾಗೂ ಮನೆಯೊಳಗೇನೇ ಲಿಫ್ಟ್ ವ್ಯವಸ್ಥೆಯುಳ್ಳ ಲಕ್ಸುರಿ ಬಂಗಲೆಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ.

View this post on Instagram


A post shared by Lalit Modi (@lalitkmodi)
ಈ ಬಂಗಲೆಯ ಬಾಡಿಗೆ ಎಷ್ಟು?
ಈ ಅದ್ಭುತ ಬಂಗಲೆಯು ಲಲಿತ್ ಮೋದಿ ಅವರು ಬರುವ ಮುಂಚೆ ಮಾರುಕಟ್ಟೆಯಲ್ಲಿ ಬಾಡಿಗೆಗೆಂದು ಲಭ್ಯವಿತ್ತು. ಇದರ ಬಾಡಿಗೆ ಸುಮಾರು ಮಾಸಿಕ 11,500 ಲಂಡನ್ ಪೌಂಡ್ ಆಗಿತ್ತು. ಅಂದರೆ, ಭಾರತೀಯ ಕರೆನ್ಸಿಯಲ್ಲಿ ಈ ಬಂಗಲೆಯ ತಿಂಗಳ ಬಾಡಿಗೆ ಸುಮಾರು ಹನ್ನೆರಡು ಲಕ್ಷ ರೂಪಾಯಿಗಳು. ಆದರೆ, ಲಲಿತ್ ಮೋದಿ ಇದನ್ನು ದೀರ್ಘಾವಧಿಯ ಭೋಗ್ಯಕ್ಕೆಂದು ಪಡೆದು ಪ್ರಸ್ತುತ ಅಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಲಕ್ಸ್ ಪ್ರೆಸ್ಸೊ ಮ್ಯಾಗಜೀನ್ ವರದಿ ಮಾಡಿದೆ.

View this post on Instagram


A post shared by Lalit Modi (@lalitkmodi)
ಸುಶ್ಮಿತಾ ಸೇನ್ ಹಾಗೂ ಲಲಿತ್ ಮೋದಿ ಇಬ್ಬರ ಬಿಸಿಬಿಸಿ ಚರ್ಚೆ
ಇದೀಗ ಲಲಿತ್ ಅವರ ಜೀವನದಲ್ಲಿ ಸುಶ್ಮಿತಾ ಸೇನ್ ಅವರ ಪ್ರವೇಶವಾಗಿದ್ದು ಲಲಿತ್ ಅವರು ತಮ್ಮ ಈ ಹೊಸ ಸಂಬಂಧದಿಂದಾಗಿ ಖುಶಿಯ ಕಡಲಿನಲ್ಲಿ ತೇಲುತ್ತಿದ್ದಾರೆಂದು ಅವರು ಮಾಡಿರುವ ಪೋಸ್ಟ್ ಗಳಿಂದ ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಅವರು ಮಾಲ್ಡೀವ್ಸ್ ಹಾಗೂ ಸಾರ್ಡಿನಿಯಾ ಪ್ರವಾಸ ಮುಗಿಸಿಕೊಂಡು ಬಂದಿದ್ದು ತಮ್ಮ ಹೊಸ ಪಾರ್ಟ್ನರ್ ಸುಶ್ಮಿತಾ ಅವರ ತಮ್ಮ ಜೀವನದಲ್ಲಿ ಮಾಡಿರುವ ಪ್ರವೇಶದ ಕುರಿತು ಹೇಳುವುದನ್ನು ಮರೆತಿಲ್ಲ. ಈ ಮೂಲಕ ಅವರು ಸಾಕಷ್ಟು ಸಂತಸದಲ್ಲಿರುವುದಾಗಿ ತಮ್ಮ ಪೋಸ್ಟಿನಲ್ಲಿ ಬರೆದುಕೊಂಡಿದ್ದು ದೈವಾನುಗ್ರಹವಿದ್ದರೆ ಮದುವೆ ಆಗಬಹುದೆಂಬುದಾಗಿಯೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


ಇದನ್ನೂ ಓದಿ: Ruchir Modi: ನನ್ನಪ್ಪನ ಡೇಟಿಂಗ್ ಬಗ್ಗೆ ಮೊದಲೇ ತಿಳಿದಿತ್ತು! ರುಚಿರ್ ಮೋದಿ ಶಾಕಿಂಗ್ ಹೇಳಿಕೆ


ಒಟ್ಟಿನಲ್ಲಿ ಲಲಿತ್ ಮೋದಿ ಅವರು ಐಪಿಎಲ್ ನಿಂದ ಈಗ ದೂರ ಉಳಿದಿದ್ದರೂ ಸಹ ಜಗತ್ತಿಗೆ ಈ ಮಹಾ ಕ್ರೀಡೆಯನ್ನು ಪರಿಚಯಿಸಿ ಆ ಮೂಲಕ ಅವರು ಸಹ ಪ್ರಸಿದ್ಧಿ ಪಡೆದು ಲಂಡನ್ನಿನಂತಹ ನಗರದಲ್ಲಿ ಅದ್ದೂರಿ ಜೀವನಶೈಲಿಯೊಂದಿಗೆ ಬಾಳು ನಡೆಸುತ್ತಿರುವುದು ಸುಳ್ಳಲ್ಲ.

Published by:Ashwini Prabhu
First published: