Sushmita Sen: ಸುಶ್ಮಿತಾ ಸೇನ್ ಲವ್ ಸ್ಟೋರಿಸ್; ಇವರ ಹೆಸರಿನ ಜೊತೆ ಯಾವೆಲ್ಲಾ ಹೆಸರುಗಳು ಥಳುಕು ಹಾಕಿವೆ ನೋಡಿ

ಸುಶ್ಮಿತಾ ಹೆಸರು ಅನೇಕ ಜನರ ಹೆಸರಿನೊಂದಿಗೆ ಈ ಹಿಂದೆ ಕಾಣಿಸಿಕೊಂಡಿದೆ. ಎಂದರೆ ತನ್ನ ವರ್ಚಸ್ವಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಪ್ರತಿಭಾವಂತ ನಟಿಈ ಹಿಂದೆ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ವದಂತಿಯಿರುವ ಪುರುಷರ ದೊಡ್ಡ ಪಟ್ಟಿಯೆ ಇದೇ ನೋಡಿ.

ಸುಶ್ಮಿತಾ ಸೇನ್

ಸುಶ್ಮಿತಾ ಸೇನ್

  • Share this:
ಬಾಲಿವುಡ್ ನಟಿ ಮತ್ತು ಮಾಜಿ ಬ್ಯೂಟಿ ಕ್ವೀನ್ ಸುಶ್ಮಿತಾ ಸೇನ್ (Sushmita Sen), ರಾಮ್ ಮಧ್ವಾನಿ ಅವರ ವೆಬ್ ಸಿರೀಸ್ 'ಆರ್ಯ' (Arya) ಸೀಸನ್ 1 ಮತ್ತು 2 ರಲ್ಲಿ ಪವರ್-ಪ್ಯಾಕ್ಡ್ ಅಭಿನಯದೊಂದಿಗೆ ಮನರಂಜನಾ ಜಗತ್ತಿಗೆ ಪುನರಾಗಮನ ಮಾಡಿದ್ದು ನಮಗೆಲ್ಲಾ ಗೊತ್ತೇ ಇದೆ. ಆದರೆ ಈಗ ಹೊಸದಾಗಿ ಇವರ ಒಂದು ಫೋಟೋ ಲಲಿತ್ ಮೋದಿ (Lalit Modi) ಅವರೊಂದಿಗೆ ಕಾಣಿಸಿಕೊಂಡಿದ್ದು, ಈ ನಟಿ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ (Dating) ಮಾಡುತ್ತಿದ್ದಾರೆಯೇ ಅಂತ ಗುಸುಗುಸು ಶುರುವಾಗಿತ್ತು. ಮಾಜಿ ಮಿಸ್ ಯೂನಿವರ್ಸ್ ಪ್ರಸ್ತುತ ತಲೆಮರೆಸಿಕೊಂಡಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

ಬಿಸಿಸಿಐ ತನ್ನನ್ನು ಪದಚ್ಯುತಗೊಳಿಸಿದಾಗಿನಿಂದ ಲಂಡನ್​ನಲ್ಲಿ ವಾಸಿಸುತ್ತಿರುವ ಲಲಿತ್ ಮೋದಿ, ನಟಿಯೊಂದಿಗಿನ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಂಡು ನಂತರ ಈ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ನಟಿಯನ್ನು ತನ್ನ ಬೆಟರ್ ಹಾಫ್ ಎಂದು ಸಂಬೋಧಿಸಿದ್ದಾರೆ. 'ಇದು ಹೊಸ ಆರಂಭ - ಅಂತಿಮವಾಗಿ ಸಿಕ್ಕಿದೆ ಹೊಸ ಜೀವನ' ಎಂದು ಹೇಳಿದ್ದಾರೆ.

ಸುಶ್ಮಿತಾ ಹೆಸರು ಅನೇಕ ಜನರ ಹೆಸರಿನೊಂದಿಗೆ ಈ ಹಿಂದೆ ಕಾಣಿಸಿಕೊಂಡಿದೆ. ಎಂದರೆ ತನ್ನ ವರ್ಚಸ್ವಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾದ ಪ್ರತಿಭಾವಂತ ನಟಿ, ಯಾವಾಗಲೂ ತನ್ನ ಸಂಬಂಧಗಳಿಗಾಗಿ ಮುಖ್ಯಾಂಶದಲ್ಲಿದ್ದಾರೆ ಎಂದು ಹೇಳಬಹುದು. ಈ ಹಿಂದೆ ಸುಶ್ಮಿತಾ ಸೇನ್ ಅವರೊಂದಿಗೆ ಡೇಟಿಂಗ್ ಮಾಡಿದ್ದಾರೆ ಎಂಬ ವದಂತಿಯಿರುವ ಪುರುಷರ ದೊಡ್ಡ ಪಟ್ಟಿಯೆ ಇದೇ ನೋಡಿ.

ಮಾಡೆಲ್ ರೋಹ್ಮನ್ ಜೊತೆ ಮೂರು ವರ್ಷ ಡೇಟಿಂಗ್
ವರದಿಗಳ ಪ್ರಕಾರ, ಈ ಹಿಂದೆ ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಎಂಬ ಮಾಡೆಲ್ ಇಬ್ಬರು ಡಿಸೆಂಬರ್ 2021 ರಲ್ಲಿ ಬ್ರೇಕಪ್ ಮಾಡಿಕೊಳ್ಳುವ ಮುಂಚೆ ಸುಮಾರು ಮೂರು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದರು. ಡಿಸೆಂಬರ್ ನಲ್ಲಿ ಸುಶ್ಮಿತಾ ತನ್ನ ಇನ್‌ಸ್ಟಾಗ್ರಾಮ್ ನಲ್ಲಿ ರೋಹ್ಮನ್ ಶಾಲ್ ಅವರೊಂದಿಗಿನ ಬ್ರೇಕಪ್ ಅನ್ನು ಖಚಿತಪಡಿಸುವ ಮೂಲಕ ಎಲ್ಲಾ ಊಹಾಪೋಹಗಳು ಮತ್ತು ವದಂತಿಗಳಿಗೆ ವಿರಾಮ ನೀಡಿದರು.

ಇದನ್ನೂ ಓದಿ:  Sushmita Sen: ಅಕ್ಕನ ಪ್ರೇಮ್​ ಕಹಾನಿ ಬಗ್ಗೆ ತಮ್ಮನ ಶಾಕಿಂಗ್​ ಹೇಳಿಕೆ! ಹುಡುಗನ್ನ ಬಿಟ್ಟು ಅಂಕಲ್​ ಹಿಂದೆ ಯಾಕ್​ ಹೋದ್ರು ಅಂತ ಟ್ರೋಲ್​

ವಿಕ್ರಮ್ ಭಟ್ ಅವರೊಂದಿಗೆ ಸಹ ಸಂಬಂಧ ಇತ್ತು: ವರದಿ
ಸುಶ್ಮಿತಾ ಸೇನ್ ಮತ್ತು ವಿಕ್ರಮ್ ಭಟ್ ಅವರ ಪ್ರೇಮಕಥೆಯು 1996 ರಲ್ಲಿ ಬಿಡುಗಡೆಯಾದ ಸೈಕಲಾಜಿಕಲ್-ಥ್ರಿಲ್ಲರ್ ಚಿತ್ರ 'ದಸ್ತಕ್' ಚಿತ್ರೀಕರಣದ ಸಮಯದಲ್ಲಿ ಪ್ರಾರಂಭವಾಯಿತು. ಆ ಸಮಯದಲ್ಲಿ ವಿಕ್ರಮ್ ಆದಾಗಲೇ ಮದುವೆಯಾಗಿದ್ದರು ಮತ್ತು ಸುಶ್ಮಿತಾ ಅವರೊಂದಿಗಿನ ಅವರ ಸಂಬಂಧವು ಅವರಿಗೆ ಸಾಕಷ್ಟು ತೊಂದರೆಯನ್ನುಂಟು ಮಾಡಿತು ಎಂದು ವರದಿಯಾಗಿದೆ. ಚಲನಚಿತ್ರ ನಿರ್ಮಾಪಕನು ತನ್ನ ಕುಟುಂಬವನ್ನು ಸಹ ಬಿಡಬೇಕಾಯಿತು. ಆದಾಗ್ಯೂ, ನಟಿಯೊಂದಿಗಿನ ಅವರ ಸಂಬಂಧವು ಹೆಚ್ಚು ಕಾಲ ಉಳಿಯಲಿಲ್ಲ ಮತ್ತು ಅವರು ಸ್ವಲ್ಪ ಸಮಯದ ನಂತರ ಬೇರ್ಪಟ್ಟರು.

ಇದು ಸುಶ್ಮಿತಾ ಸೇನ್ ಅವರ ತುಂಬಾನೇ ಸುದ್ದಿ ಮಾಡಿದ ಅಫೇರ್
ಸುಶ್ಮಿತಾ ಸೇನ್ ಮತ್ತು ರಣದೀಪ್ ಹೂಡಾ ಅವರ ಮಧ್ಯೆ ಇರುವ ಸಂಬಂಧ ತುಂಬಾನೇ ಸುದ್ದಿ ಮಾಡಿದ ಅಫೇರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ. ರಣದೀಪ್ ಹೂಡಾ ಮತ್ತು ಸುಶ್ಮಿತಾ 'ಕರ್ಮ' ಮತ್ತು 'ಹೋಳಿ' ಚಿತ್ರಗಳ ಚಿತ್ರೀಕರಣದ ಸಮಯದಲ್ಲಿ ಒಬ್ಬರನ್ನೊಬ್ಬರು ನೋಡಿ ಇಷ್ಟಪಡಲು ಶುರು ಮಾಡಿದ್ದರು ಎಂದು ಹೇಳಲಾಗುತ್ತಿದೆ ಎಂದು ವರದಿಯಾಗಿದೆ. ಅವರ ಬ್ರೇಕಪ್ ಹೊರತಾಗಿಯೂ, ಇಬ್ಬರು ನಟರು ಪರಸ್ಪರ ಸೌಹಾರ್ದಯುತ ಸಂಬಂಧವನ್ನು ಮುಂದುವರಿಸಿದ್ದಾರೆ.

ರೆಸ್ಟೋರೆಂಟ್ ಉದ್ಯಮಿ ರಿತಿಕ್ ಭಾಸಿನ್ ಅವರೊಂದಿಗೆ ಡೇಟಿಂಗ್
ಸುಶ್ಮಿತಾ ನಾಲ್ಕು ವರ್ಷಗಳ ಕಾಲ ಮುಂಬೈ ಮೂಲದ ರೆಸ್ಟೋರೆಂಟ್ ಉದ್ಯಮಿ ರಿತಿಕ್ ಭಾಸಿನ್ ಅವರೊಂದಿಗೆ ಡೇಟಿಂಗ್ ಮಾಡಿದ್ದರು ಮತ್ತು ನಂತರ 2017 ರಲ್ಲಿ ಬೇರ್ಪಟ್ಟರು ಎಂದು ವರದಿಯಾಗಿದೆ. ಕ್ರಿಕೆಟ್ ಆಟಗಾರ ಜಹೀರ್ ಖಾನ್ ಮತ್ತು ಬಾಲಿವುಡ್ ನಟಿ ಸಾಗರಿಕಾ ಘಾಟ್ಗೆ ಅವರ ವಿವಾಹದಲ್ಲಿ ಇವರಿಬ್ಬರು ಒಟ್ಟಿಗೆ ಭಾಗವಹಿಸಿದ್ದರು. ಆದಾಗ್ಯೂ, ಈ ಬಗ್ಗೆ ಯಾವುದೇ ದೃಢೀಕರಣವಿಲ್ಲ.

ಹಾಟ್ಮೇಲ್ ನ ಸ್ಥಾಪಕನೊಂದಿಗೆ ಸುಶ್ಮಿತಾ ಸಂಬಂಧ ಒಂದು ವದಂತಿಯೇ?ಸಬೀರ್ ಭಾಟಿಯಾ ಹಾಟ್‌ಮೇಲ್ ನ ಸ್ಥಾಪಕರಾಗಿದ್ದಾರೆ ಮತ್ತು ಅವರು ಮತ್ತು ಸುಶ್ಮಿತಾ ಅವರು ಸ್ಥಿರ ಸಂಬಂಧದಲ್ಲಿದ್ದರು ಎಂದು ವದಂತಿ ಹಬ್ಬಿತ್ತು. ಆದಾಗ್ಯೂ, ನಟಿ ಶೀಘ್ರದಲ್ಲಿಯೇ ಅದನ್ನು ನಿಲ್ಲಿಸಿದರು.

ಸುಶ್ಮಿತಾ ಮತ್ತು ಪಾಕ್ ಕ್ರಿಕೆಟಿಗ ವಾಸಿಂ ಅಕ್ರಂ ಡೇಟಿಂಗ್ ಸುದ್ದಿ
ಪಾಕಿಸ್ತಾನದ ಕ್ರಿಕೆಟ್ ಆಟಗಾರರಾದ ವಾಸಿಂ ಅಕ್ರಂ ಮತ್ತು ನಟಿ ಸುಶ್ಮಿತಾ ಒಂದು ಡ್ಯಾನ್ಸ್ ರಿಯಾಲಿಟಿ ಶೋನ ಸೆಟ್ ನಲ್ಲಿ ಪರಸ್ಪರ ಹತ್ತಿರವಾದರು ಮತ್ತು ಶೀಘ್ರದಲ್ಲಿಯೇ ಡೇಟಿಂಗ್ ಮಾಡಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ಇಬ್ಬರೂ ಹಲವಾರು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು, ಆದರೆ ಅವರ ಸಂಬಂಧದ ಬಗ್ಗೆ ಎಂದಿಗೂ ಬಹಿರಂಗವಾಗಿ ಹೇಳಲಿಲ್ಲ.

ಬಂಟಿ ಸಚದೇವ್ ಅವರೊಂದಿಗೆ ಸುಶ್ಮಿತಾ ಹೆಸರು ಕೇಳಿ ಬಂದಿತ್ತು
ಕಾರ್ನರ್ ಸ್ಟೋನ್ ಎಂಬ ಟ್ಯಾಲೆಂಟ್ ಮ್ಯಾನೇಜ್ಮೆಂಟ್ ಕಂಪನಿಯ ಮುಖ್ಯಸ್ಥರಾದ ಬಂಟಿ ಸಚದೇವ್ ಅವರೊಂದಿಗೆ ಸುಶ್ಮಿತಾ ಸಂಬಂಧ ಹೊಂದಿದ್ದಾರೆ ಅಂತ ಅನೇಕ ಸುದ್ದಿಗಳು ಹರಿದಾಡಿದ್ದವು. ಇಬ್ಬರೂ ಅನೇಕ ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಸುಶ್ಮಿತಾ ಅವರ ಮ್ಯಾನೇಜರ್ ಸಹ ಆಗಿದ್ದರು. ಆದಾಗ್ಯೂ, ಸುಶ್ಮಿತಾ ಆ ಸಮಯದಲ್ಲಿ ಎಲ್ಲಾ ವದಂತಿಗಳನ್ನು ತಳ್ಳಿ ಹಾಕಿದ್ದರು.

ಇದನ್ನೂ ಓದಿ:  Sushmita Sen: ಕೋಟಿ ಆಸ್ತಿಗಳ ಒಡತಿ ಈ ಮಾಜಿ ವಿಶ್ವ ಸುಂದರಿ, ಸುಶ್ಮಿತಾ ಬಳಿ ಇರುವ ಕಾರು ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತಿರಾ!

ಉದ್ಯಮಿ ಇಮ್ತಿಯಾಜ್ ಖತ್ರಿಯನ್ನು ಪ್ರೀತಿಸಿದ್ದರಂತೆ ಸುಶ್ಮಿತಾ
ನಟಿ ಸುಶ್ಮಿತಾ ತಮಗೆ 36 ವಯಸ್ಸಾದಾಗ 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರೂ ಗೋವಾದಲ್ಲಿ ರ್‍ಯಾಂಪ್ ಮೇಲೆ ನಡೆದಿದ್ದರು, ಇದು ಅವರಿಬ್ಬರ ಉತ್ತಮ ಸ್ನೇಹಕ್ಕೆ ಕಾರಣವಾಗಿತ್ತು. ಅವರು ಆಗಾಗ್ಗೆ ತಮ್ಮ ಸ್ನೇಹಿತರೊಂದಿಗೆ ಪರಸ್ಪರರ ಸಹವಾಸವನ್ನು ಆನಂದಿಸುತ್ತಿದ್ದರು. ಸುಶ್ಮಿತಾ ಈ ಬಗ್ಗೆ ಎಂದಿಗೂ ಪ್ರತಿಕ್ರಿಯಿಸಿಲ್ಲವಾದರೂ, ಇಮ್ತಿಯಾಜ್ ಯಾವಾಗಲೂ ಅವರಿಬ್ಬರೂ ಉತ್ತಮ ಸ್ನೇಹಿತರು ಎಂದು ಹೇಳುತ್ತಿದ್ದರು.
Published by:Ashwini Prabhu
First published: