ಪ್ರಿಯಾಂಕಾ ಚೋಪ್ರಾ ತೊಟ್ಟಿರುವ ವಿಶೇಷ ಉಂಗುರ ಎಷ್ಟು ಕೋಟಿಯದ್ದು ಗೊತ್ತಾ?

news18
Updated:August 17, 2018, 6:20 PM IST
ಪ್ರಿಯಾಂಕಾ ಚೋಪ್ರಾ ತೊಟ್ಟಿರುವ ವಿಶೇಷ ಉಂಗುರ ಎಷ್ಟು ಕೋಟಿಯದ್ದು ಗೊತ್ತಾ?
news18
Updated: August 17, 2018, 6:20 PM IST
ನ್ಯೂಸ್​ 18 ಕನ್ನಡ 

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಸ್ ನಿಶ್ಚಿತಾರ್ಥವಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಈ ಜೋಡಿಯದ್ದೇ ಸುದ್ದಿ. ಅದರಲ್ಲೂ ಪ್ರಿಯಾಂಕಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ತಮ್ಮ ನಿಶ್ಚಿತಾರ್ಥದ ಉಂಗುರವನ್ನು ಮುಚ್ಚಿಡುತ್ತಿದ್ದರು. ​

ಆದರೆ ಇತ್ತೀಚೆಗಚ್ಟೆ ಆ ಉಂಗುರದ ಚಿತ್ರ ಎಲ್ಲೆಡೆ ವೈರಲ್​ ಆಗಿತ್ತು. ಈಗ ಈ ಉಂಗುರದ ಬೆಲೆ ಸಹ ಬಹಿರಂಗವಾಗಿದೆ. ಹೌದು ನಿಕ್​ ನಿಶ್ಚಿತಾರ್ಥಕ್ಕೆಂದು ಪಿಗ್ಗಿಗೆ ತೊಡಿಸಿರುವ ಉಂಗುರ ಟಿಫಾನಿಸ್​ ಬ್ರ್ಯಾಂಡ್​ನದ್ದಾಗಿದ್ದು, ಇದರ ಬೆಲೆ 2 ಲಕ್ಷ ಡಾಲರ್​ ಅಂದರೆ, 1.4 ಕೋಟಿ ಮೌಲ್ಯದ್ದಾಗಿದೆ.

ಕುಶನ್​ ಕಟ್​ ಇರುವ ಈ ವಜ್ರದ ಉಂಗುರ 4 ಕ್ಯಾರಟ್​ನದ್ದಾಗಿದೆ. ಪಿಗ್ಗಿ ಸದಾ ಈ ಉಂಗುರವನ್ನು ಮುಚ್ಚಿಡುತ್ತಲೇ ಇದ್ದರು. ಆದರೆ ಇತೀಚೆಗೆ ಪ್ರಿಯಾಂಕಾ, ರವೀನಾ ಟಂಡನ್​ ಅವರೊಂದಿಗೆ ತೆಗೆದುಕೊಂಡಿರುವ ಸೆಲ್ಫಿಯಲ್ಲಿ ಈ ಉಂಗುರ ಸೆರೆಯಾಗಿದೆ. ಆದರೆ ಈ ಸೆಲ್ಫಿಯನ್ನ ಪ್ರಿಯಾಂಕಾ ಅಂತು ಶೇರ್​ ಮಾಡಿಲ್ಲ. ಆದರೆ ರವೀನಾ ತಮ್ಮ ಟ್ವಿಟರ್​ ಖಾತೆಯಲ್ಲಿ ಇದನ್ನು ಶೇರ್ ಮಾಡಿದ್ದು, ಈಗ ವೈರಲ್​ ಆಗುತ್ತಿದೆ.


Loading...


Peecee and I getting our pouts in order ! 😂 #potraitlighting💡 #shotoniphonex


A post shared by Raveena Tandon (@officialraveenatandon) on


ಪ್ರಿಯಾಂಕಾ ಹಾಗೂ ನಿಕ್​ ಜೋನಸ್​ ಇದೇ ಅಕ್ಟೋಬರ್​ನಲ್ಲಿ ವಿವಾಹವಾಗಲಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...