HOME » NEWS » Entertainment » DO NOT PROVOKE MY FANS DARSHAN WARNS TO SUDEEP FANS OVER PAILWAAN MOVIE PIRACY RMD

Darshan And Sudeep:ನನ್ನ ಅಭಿಮಾನಿಗಳನ್ನು ಕೆಣಕಲು ಬರಬೇಡಿ; ವಾರ್ನಿಂಗ್ ಕೊಟ್ರು ಡಿ ಬಾಸ್!

ದರ್ಶನ್​ಗೆ ಅಭಿಮಾನಿಗಳೆಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಹೀಗಾಗಿ ದರ್ಶನ್ ಟ್ವೀಟ್​ನಲ್ಲಿ​ ಅನ್ನದಾತರು ಹಾಗು ಸೆಲೆಬ್ರಿಟಿಗಳು ಎಂದು ಸಂಬೋಧಿಸಿರುವುದು ಅಭಿಮಾನಿಗಳನ್ನು. ದರ್ಶನ್​ ಮಾಡಿರುವ ಟ್ವೀಟ್​ ಸುದೀಪ್​ ಅಭಿಮಾನಿಗಳಿಗೆ ನೀಡಿದ ಎಚ್ಚರಿಕೆ ಎನ್ನಲಾಗುತ್ತಿದೆ. 

Rajesh Duggumane | news18-kannada
Updated:September 17, 2019, 12:59 PM IST
Darshan And Sudeep:ನನ್ನ ಅಭಿಮಾನಿಗಳನ್ನು ಕೆಣಕಲು ಬರಬೇಡಿ; ವಾರ್ನಿಂಗ್ ಕೊಟ್ರು ಡಿ ಬಾಸ್!
Darshan
  • Share this:
‘ಪೈಲ್ವಾನ್​’ ಸಿನಿಮಾ ತೆರೆಕಂಡ ಬೆನ್ನಲ್ಲೇ ದರ್ಶನ್​ ಹಾಗೂ ಸುದೀಪ್​ ಅಭಿಮಾನಿಗಳ ನಡುವೆ ಟ್ವೀಟ್​ ವಾರ್​ ಆರಂಭಗೊಂಡಿತ್ತು. ಸಿನಿಮಾ ಪೈರಸಿ ಆಗಿದ್ದಕ್ಕೆ ದರ್ಶನ್​ ಅಭಿಮಾನಿಗಳು ಕಾರಣ ಎಂದು ಸುದೀಪ್​ ಹಿಂಬಾಲಕರು ಹೇಳಿಕೊಂಡಿದ್ದರೆ, ಇದಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಡಿ ಬಾಸ್​ ಬೆಂಬಲಿಗರು ಸ್ಪಷ್ಟನೆ ನೀಡಿದ್ದರು. ಈಗ ಈ ವಿಚಾರಕ್ಕೆ ಸಂಬಂಧಿಸಿ ದರ್ಶನ್​ ಟ್ವೀಟ್​ ಮಾಡಿದ್ದಾರೆ. ಅಷ್ಟೇ ಅಲ್ಲ ನನ್ನ ಅಭಿಮಾನಿಗಳ ಸುದ್ದಿಗೆ ಬರಬೇಡಿ ಎಂದು ವಾರ್ನಿಂಗ್​ ಕೊಟ್ಟಿದ್ದಾರೆ.

“ಸದ್ಯಕ್ಕೆ ನಾನು ಬೆಂಗಳೂರಿನಲ್ಲಿ ಇಲ್ಲ. ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದೇನೆ. ಸದ್ಯಕ್ಕೆ ಕೇಳಿ ಬರುತ್ತಿರುವ ಕೆಲವು ವ್ಯಕ್ತಿಗಳ ಬಗ್ಗೆ ಒಂದು ಕಿವಿಮಾತು. ನನ್ನ ಅನ್ನದಾತರು, ಸೆಲೆಬ್ರಿಟಿಗಳನ್ನು ಕೆಣಕಲು ಮತ್ತು ಪ್ರಚೋದಿಸಲು ಬರದಿರಿ,” ಎಂದು ಬರೆದುಕೊಂಡಿದ್ದಾರೆ ದರ್ಶನ್​.

ದರ್ಶನ್​ಗೆ ಅಭಿಮಾನಿಗಳೆಂದರೆ ಎಲ್ಲಿಲ್ಲದ ಅಚ್ಚುಮೆಚ್ಚು. ಹೀಗಾಗಿ ದರ್ಶನ್ ಟ್ವೀಟ್​ನಲ್ಲಿ​ ಅನ್ನದಾತರು ಹಾಗು ಸೆಲೆಬ್ರಿಟಿಗಳು ಎಂದು ಸಂಬೋಧಿಸಿರುವುದು ಅಭಿಮಾನಿಗಳನ್ನು. ದರ್ಶನ್​ ಮಾಡಿರುವ ಟ್ವೀಟ್​ ಸುದೀಪ್​ ಅಭಿಮಾನಿಗಳಿಗೆ ನೀಡಿದ ಎಚ್ಚರಿಕೆ ಎನ್ನಲಾಗುತ್ತಿದೆ.

'ಪೈಲ್ವಾನ್​' ಸಿನಿಮಾ ತೆರೆಕಂಡ ಕೆಲವೇ ದಿನಗಳಲ್ಲಿ ಆನ್​ಲೈನ್​ನಲ್ಲಿ ಸೋರಿಕೆ ಆಗಿತ್ತು. ಇದು ದರ್ಶನ್​ ಅಭಿಮಾನಿಗಳ ಕೆಲಸ ಎನ್ನುವ ಆರೋಪವನ್ನು ಸುದೀಪ್​ ಅಭಿಮಾನಿಗಳು ಹೊರಿಸಿದ್ದರು. ಇದಾದ ಬೆನ್ನಲ್ಲೇ ಡಿ ಬಾಸ್​ ಬೆಂಬಲಿಗರು ಬಹಿರಂಗ ಪತ್ರವೊಂದನ್ನು ಬರೆದಿದ್ದರು.

ಇದನ್ನೂ ಓದಿ: ಪೈಲ್ವಾನ್ ಪೈರಸಿ ಫೈಟ್: ಕೆಣಕಿದವರಿಗೆ ಡಿ ಬಾಸ್ ಅಭಿಮಾನಿಗಳಿಂದ ಬಹಿರಂಗ ಪತ್ರ

'ಪೈಲ್ವಾನ್' ಪೈರಸಿಗೂ ನಮಗೂ ಸಂಬಂಧವಿಲ್ಲ. ಸುಖಾಸುಮ್ಮನೆ ಆರೋಪಿಸಬೇಡಿ. ಇದು 'ಪೈಲ್ವಾನ್' ಚಿತ್ರದ ಮಾತ್ರ ಸಮಸ್ಯೆ ಅಲ್ಲ. ಈ ಹಿಂದೆ 'ಯಜಮಾನ' ಹಾಗೂ 'ಕುರುಕ್ಷೇತ್ರ' ಚಿತ್ರಗಳೂ ಸಹ ಲೀಕ್ ಆಗಿವೆ. ಆಗ ಯಾರು ಕೂಡ ಮಾತನಾಡಲಿಲ್ಲ. ಆದರೆ ಈಗ ತಮಿಳ್ ರಾಕರ್ಸ್ ಪೈರಸಿ ಮಾಡಿದರೆ ಅದನ್ನ ನಮ್ ಬಾಸ್ ಫ್ಯಾನ್ಸ್ ತಲೆಗೆ ಕಟ್ಟಲು ಹೊರಟಿದ್ದಾರೆ. ಡಿ ಬಾಸ್ ಅವರ ಹಿತಶತ್ರುಗಳಿಗೆ ಎಲ್ಲರಿಗೂ ಶುಭವಾಗಲಿ,” ಎಂದು ಅಭಿಮಾನಿಗಳು ಬಹಿರಂಗವಾಗಿ ಪತ್ರ ಬರೆದಿದ್ದರು. ಇದಾದ ಬೆನ್ನಲ್ಲೇ ದರ್ಶನ್​ ಈ ಹೇಳಿಕೆ ನೀಡಿರುವುದ ಅಚ್ಚರಿ ಮೂಡಿಸಿದೆ.

First published: September 17, 2019, 12:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories