HOME » NEWS » Entertainment » DO NOT DO A MOVIE WITH PAILWAN DIRECTOR KRISHNA SAYS KICCHA SUDEEP FAN RMD

‘ನಿರ್ದೇಶಕ ಕೃಷ್ಣ ಜೊತೆ ಮತ್ತೆ ಸಿನಿಮಾ ಮಾಡಬೇಡಿ, ನಮ್ಮ ಮರ್ಯಾದೆ ತೆಗೀತಾರೆ’; ಕಿಚ್ಚನಿಗೆ ಅಭಿಮಾನಿಯ ಕೋರಿಕೆ!

‘ಹೆಬ್ಬುಲಿ’ ಸಿನಿಮಾ ಹಿಟ್​ ಆದ ನಂತರದಲ್ಲಿ ​ ‘ಪೈಲ್ವಾನ್​’ಗಾಗಿ ನಿರ್ದೇಶಕ ಕೃಷ್ಣ ಜೊತೆ ಸುದೀಪ್ ಮತ್ತೆ ಕೈ ಜೋಡಿಸಿದ್ದರು. ಸಿನಿಮಾ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಈ ಮಧ್ಯೆ ಕೃಷ್ಣ ಬಗ್ಗೆ ಸುದೀಪ್​ ಅಭಿಮಾನಿಗಳು ಕೊಂಚ ಅಸಮಾಧನ ಹೊಂದಿದ್ದಾರೆ.

Rajesh Duggumane | news18-kannada
Updated:September 29, 2019, 9:05 AM IST
‘ನಿರ್ದೇಶಕ ಕೃಷ್ಣ ಜೊತೆ ಮತ್ತೆ ಸಿನಿಮಾ ಮಾಡಬೇಡಿ, ನಮ್ಮ ಮರ್ಯಾದೆ ತೆಗೀತಾರೆ’; ಕಿಚ್ಚನಿಗೆ ಅಭಿಮಾನಿಯ ಕೋರಿಕೆ!
ಕಿಚ್ಚ ಸುದೀಪ್​
  • Share this:
ಕಿಚ್ಚ ಸುದೀಪ್​ ನಟನೆಯ ‘ಪೈಲ್ವಾನ್​’ ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಸಿನಿಮಾ ನೋಡಿದ ಅನೇಕರು ಮೆಚ್ಚುಗೆಯ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ಬಾಕ್ಸ್​ ಆಫೀಸ್​ನಲ್ಲೂ ಒಳ್ಳೆಯ ಗಳಿಕೆ ಮಾಡಿದೆ. ಆದರೆ, ಕಿಚ್ಚನ ಕೆಲ ಅಭಿಮಾನಿಗಳಿಗೆ ನಿರ್ದೇಶಕ ಕೃಷ್ಣ ಅವರ ನಡೆ ಬೇಸರ ಮೂಡಿಸಿದೆಯಂತೆ. ಈ ಬೇಸರವನ್ನು ಸುದೀಪ್​ ಫ್ಯಾನ್​ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

‘ಹೆಬ್ಬುಲಿ’ ಸಿನಿಮಾ ಹಿಟ್​ ಆದ ನಂತರದಲ್ಲಿ ​ ‘ಪೈಲ್ವಾನ್​’ಗಾಗಿ ನಿರ್ದೇಶಕ ಕೃಷ್ಣ ಜೊತೆ ಸುದೀಪ್ ಮತ್ತೆ ಕೈ ಜೋಡಿಸಿದ್ದರು. ಸಿನಿಮಾ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಈ ಮಧ್ಯೆ ಕೃಷ್ಣ ಬಗ್ಗೆ ಸುದೀಪ್​ ಅಭಿಮಾನಿಗಳು ಕೊಂಚ ಅಸಮಾಧನ ಹೊಂದಿದ್ದಾರೆ. ಸಿನಿಮಾ ಉತ್ತಮವಾಗಿ ಮೂಡಿ ಬಂದಿದ್ದರೂ, ಆ ಬಗ್ಗೆ ಸರಿಯಾಗಿ ಪ್ರಚಾರ ನೀಡುತ್ತಿಲ್ಲ ಎಂಬುದು ಅಭಿಮಾನಿಗಳ ದೂರು.

‘ಪೈಲ್ವಾನ್​’ ಸೀಕ್ವೆಲ್​ಗೆ ಸುದೀಪ್​ ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರದ ಬಗ್ಗೆ ಟ್ವೀಟ್​ ಮಾಡಿದ್ದ ಸುದೀಪ್​ ಅಭಿಮಾನಿ, “ಸುದೀಪ್​ ಅಣ್ಣ ದಯವಿಟ್ಟು ಕೃಷ್ಣ ಸರ್ ಜೊತೆ ಮತ್ತೆ ಚಿತ್ರ ಮಾಡಬೇಡಿ. ಅವರು ಅಭಿಮಾನಿಗಳ ಮರ್ಯಾದೆ ತೆಗೆಯುತ್ತಾರೆ. ಸಿನಿಮಾದ ಬಗ್ಗೆ ಒಂದು ಸಕ್ಸಸ್ ಮೀಟ್ ಇಲ್ಲ. ಕಲೆಕ್ಷನ್ ಅನೌನ್ಸ್ ಕೂಡ ಇಲ್ಲ. ಚಿತ್ರ ಚೆನ್ನಾಗಿ ಹೋಗ್ತಾ ಇದ್ರು ಒಂದು ಪ್ರಚಾರ ಇಲ್ಲ,” ಎಂದಿದ್ದಾನೆ.

ಇದನ್ನೂ ಓದಿ: ಬಾಕ್ಸಾಫೀಸ್​ನಲ್ಲಿ ತೊಡೆ ತಟ್ಟಿದ ಪೈಲ್ವಾನ್: ಮೊದಲ ದಿನದ ಕಲೆಕ್ಷನ್ 15 ಕೋಟಿ?

ರಿಷಭ್​ ಶೆಟ್ಟಿ ಜೊತೆ ಸುದೀಪ್​ ಸಿನಿಮಾ ಮಾಡಬೇಕು ಎಂಬುದು ಈ ಅಭಿಮಾನಿಯ ಕೋರಿಕೆ. “ರಿಷಬ್​ ಶೆಟ್ಟಿಗೆ ನೀವು ಒಂದು ಒಂದು ಚಾನ್ಸ್ ಕೊಡಿ. ಇದು ನಿಮ್ಮ ಅಪ್ಪಟ ಅಭಿಮಾನಿಗಳ ಆಸೆ,” ಎಂದು ಅಭಿಮಾನಿ ಬರೆದುಕೊಂಡಿದ್ದಾನೆ.



‘ಪೈಲ್ವಾನ್​’ ಚಿತ್ರದಲ್ಲಿ ಸುದೀಪ್​ಗೆ ಜೊತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾವನ್ನು ಸುನೀಲ್​ ಶೆಟ್ಟಿ, ಕಬೀರ್​ ದುಹಾನ್​ ಸಿಂಗ್​ ಹಾಗೂ ಸುಶಾಂತ್​ ಸಿಂಗ್​ ಬಣ್ಣ ಹಚ್ಚಿದ್ದಾರೆ. ಕೃಷ್ಣ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್​ ಹೇಳಿದ್ದು, ಸಿನಿಮಾ ಸೆ.12ರಂದು ತೆರೆಗೆ ಬಂದಿತ್ತು.

First published: September 29, 2019, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories