ಚಂಬಲ್ ಚಿತ್ರದ ವಿರುದ್ದ ಫಿಲ್ಮ್​ ಚೆಂಬರ್​ ಗೆ ಡಿಕೆ ರವಿ ತಾಯಿ ದೂರು

ನಿನಾಸಂ ಸತೀಶ್ ನಟನೆಯ ಚಂಬಲ್ ಚಿತ್ರ ತಂಡದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿಕೆ ರವಿ ಅವರ ತಾಯಿ ಗೌರಮ್ಮ ದೂರನ್ನು ಸಲ್ಲಿಸಿದ್ದಾರೆ

G Hareeshkumar | news18
Updated:February 8, 2019, 9:16 PM IST
ಚಂಬಲ್ ಚಿತ್ರದ ವಿರುದ್ದ ಫಿಲ್ಮ್​ ಚೆಂಬರ್​ ಗೆ ಡಿಕೆ ರವಿ ತಾಯಿ ದೂರು
ಸಾಂದರ್ಭಿಕ ಚಿತ್ರ
G Hareeshkumar | news18
Updated: February 8, 2019, 9:16 PM IST
ಬೆಂಗಳೂರು ( ಫೆ. 08) : ನಿನಾಸಂ ಸತೀಶ್ ನಟನೆಯ ಚಂಬಲ್ ಚಿತ್ರ ತಂಡದ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಗೆ ಡಿಕೆ ರವಿ ಅವರ ತಾಯಿ ಗೌರಮ್ಮ ದೂರನ್ನು ಸಲ್ಲಿಸಿದ್ದಾರೆ.

ನನ್ನ ಮಗನ ಜೀವನ ಕಥೆಯನ್ನು ಚಂಬಲ್ ಸಿನಿಮಾದಲ್ಲಿ ಬಳಸಲಾಗಿದೆ. ಈ ಕುರಿತು ಕುಟುಂಬದ ಸದಸ್ಯರ ಕಡೆಯಿಂದ ಚಿತ್ರ ತಂಡ ಯಾವುದೇ ಅನುಮತಿ ಪಡೆದಿಲ್ಲ. ಬಿಡುಗಡೆಗೆ ಮುನ್ನ ನನಗೆ ಸಿನಿಮಾ ತೋರಿಸಬೇಕು. ಒಂದು ವೇಳೆ ಚಿತ್ರದಲ್ಲಿ ಸತ್ಯಕ್ಕೆ ದೂರವಾದ ಅಂಶಗಳಿದ್ರೆ ದೂರು ಕೊಡಲು ಸಿದ್ಧಳಾಗಿದ್ದೇನೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ವಾಣಿಜ್ಯ ಮಂಡಳಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರಿನ ಪ್ರತಿ


ಎನ್ ದಿನೇಶ್, ರಾಜ್​ಕುಮಾರ್ ಹಾಗೂ ಮಾತ್ಯು ವರ್ಗೀಸ್ ಎನ್ನುವವರು ಚಿತ್ರವನ್ನು  ನಿರ್ಮಾಣ ಮಾಡಿರುವ ಚಂಬಲ್ ಸಿನಿಮಾವನ್ನು ಜೇಕಬ್ ವರ್ಗೀಸ್ ನಿರ್ದೇಶನವನ್ನು ಮಾಡಿದ್ದಾರೆ. ಇದೇ 22 ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು ಎನ್ನಲಾಗಿದೆ.

ಇನ್ನೂ ಈ ಬಗ್ಗೆ ಚಿತ್ರ ತಂಡ ಪ್ರತಿಕ್ರಿಯನ್ನು ನೀಡಿದ್ದು. ಈ ಚಿತ್ರವು ಹಲವಾರು ನೇರ, ನಿಷ್ಠಾವಂತ ,ದಿಟ್ಟ ಅಧಿಕಾರಿಗಳಿಂದ ಸ್ಫೂರ್ತಿ ಪಡೆದಿದೆ. ಈ ಕಥೆಯು ಕಾಲ್ಪನಿಕವಾಗಿದ್ದು ಯಾವುದೇ ವ್ಯಕ್ತಿಯ ನಿಜ ಜೀವನದಲ್ಲಿ ಯಾವುದೇ ಪಾತ್ರಕ್ಕೆ ಹೋಲುವಂತಿಲ್ಲ. ಇದು ಸಮಾಜಕ್ಕೆ ಸಂದೇಶವನ್ನು ತಿಳಿಸಲು ನಿರ್ಮಾಪಕನ ಒಂದು ಪ್ರಯತ್ನವಾಗಿದೆ ಅಲ್ಲದೆ ಯಾರನ್ನು ಕಳಪೆ ರೀತಿಯಲ್ಲಿ ಅಥವಾ ನೀಚ ದೃಷ್ಟಿಯಲ್ಲಿ ತೋರಿಸುವ ಉದ್ದೇಶ ನಮಗಿಲ್ಲ.ಈ ಚಲನಚಿತ್ರವನ್ನು ಒಂದು ಒಳ್ಳೆಯ ಉದ್ದೇಶದಿಂದ ಚಿತ್ರೀಕರಣ ಮಾಡಲಾಗಿದ್ದು, ಸೆನ್ಸಾರ್ ಮಂಡಳಿಯಿಂದ ಸ್ಪಷ್ಟತೆಯನ್ನು ಪಡೆದು ತೆರವುಗೊಳಿಸಲಾಗಿದೆ. ನಿಮ್ಮೆಲ್ಲರ ಸಹಕಾರ, ಪ್ರೀತಿ ಹಾಗೂ ಆಶೀರ್ವಾದವನ್ನು ಕೋರುತ್ತ.

- ಚಂಬಲ್ ಚಿತ್ರತಂಡ

ಇದನ್ನೂ ಓದಿ : 'ಕೆ.ಜಿ.ಎಫ್ ಚಾಪ್ಟರ್ 2' ಯಾವಾಗ ಶುರು: ಇದೇ ಡಿಸೆಂಬರ್​ಗೆ ರಿಲೀಸ್ ಆಗುತ್ತಾ ಭಾಗ-2..?
Loading...

First published:February 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...