Blink Teaser: ಐಟಿ ಹುಡುಗನ ಕನಸಲ್ಲಿ 'ಬ್ಲಿಂಕ್' ಸಂಭ್ರಮ.. ಕ್ಯೂರಿಯಾಸಿಟಿ ಹುಟ್ಟಿಸಿದ ಮೊದಲ ಝಲಕ್!

ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಹೀರೋ ಆಗಿ ನಟಿಸ್ತಿರುವ ಬ್ಲಿಂಕ್ ಸಿನಿಮಾಗೆ ಶ್ರೀನಿಧಿ ಬೆಂಗಳೂರು ಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಚಿತ್ರ. ಬ್ಲಿಂಕ್ ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದ್ದು, ಇಡೀ ಟೀಸರ್ ಕಪ್ಪು-ಬಿಳುಪಿನಿಂದ ಕೂಡಿದೆ.

ನಾಯಕ ನಟ ದೀಕ್ಷಿತ್‌ ಶೆಟ್ಟಿ,

ನಾಯಕ ನಟ ದೀಕ್ಷಿತ್‌ ಶೆಟ್ಟಿ,

  • Share this:
ಬ್ಲಿಂಕ್(Blink)...ಕನ್ನಡದಲ್ಲಿ ಹೀಗೊಂದು ಹೆಸರಿನ‌ ಸಿನಿಮಾ ಬರ್ತಿದೆ. ಒಂದಷ್ಟು ಸಿನಿಮೋತ್ಸಾಹಿ ತಂಡವೇ ಸೇರಿಕೊಂಡು ಮಾಡುತ್ತಿರುವ ಬ್ಲಿಂಕ್ ಚಿತ್ರಕ್ಕೆ ರವಿಚಂದ್ರ ಎ.ಜೆ(Ravichandra A.J) ಬಂಡವಾಳ ಹೂಡಿದ್ದಾರೆ. ಮೂಲತಃ ಉತ್ತರ ಕರ್ನಾಟಕದವರಾದ ರವಿಚಂದ್ರ ಐಟಿ ಉದ್ಯೋಗಿ. ಸಿನಿಮಾ(Movie) ಮೇಲಿನ ಅವರ ಆಸಕ್ತಿ ಬಣ್ಣದ ಲೋಕಕ್ಕೆ ಅವರನ್ನು ಕರೆತಂದಿದೆ. ಹಾಗಂತ ರವಿಚಂದ್ರ ಅವರಿಗೆ ಬಣ್ಣದ ಲೋಕವೇನು ಹೊಸತಲ್ಲ. ಒಂದೆರೆಡು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ರವಿಚಂದ್ರ ಬ್ಲಿಂಕ್ ಮೂಲಕ ನಿರ್ಮಾಪಕರಾಗಿ ಸ್ಯಾಂಡಲ್​ವುಡ್(Sandalwood)ಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮದೇ ಜನನಿ ಪಿಕ್ಚರ್ಸ್(Janani Pictures) ಎಂಬ ಪ್ರೊಡಕ್ಷನ್ ಹೌಸ್ ನಡಿ ರವಿಚಂದ್ರ ಬ್ಲಿಂಕ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

ದೀಕ್ಷಿತ್​ ‘ಬ್ಲಿಂಕ್’ ಟೀಸರ್ ರಿಲೀಸ್!

ದಿಯಾ ಸಿನಿಮಾ ಖ್ಯಾತಿಯ ದೀಕ್ಷಿತ್ ಹೀರೋ ಆಗಿ ನಟಿಸ್ತಿರುವ ಬ್ಲಿಂಕ್ ಸಿನಿಮಾಗೆ ಶ್ರೀನಿಧಿ ಬೆಂಗಳೂರು ಕಥೆ ಬರೆದು ಆಕ್ಷನ್ ಕಟ್ ಹೇಳ್ತಿದ್ದಾರೆ. ಇದು ಇವರ ಮೊದಲ ನಿರ್ದೇಶನದ ಚಿತ್ರ. ಬ್ಲಿಂಕ್ ಸಿನಿಮಾದ ಮೊದಲ ಝಲಕ್ ರಿಲೀಸ್ ಆಗಿದ್ದು, ಇಡೀ ಟೀಸರ್ ಕಪ್ಪು-ಬಿಳುಪಿನಿಂದ ಕೂಡಿದೆ. ವಿಭಿನ್ನ..ವಿಶೇಷ ಪ್ರಯತ್ನದಿಂದ ಮೂಡಿಬಂದಿರುವ ಟೀಸರ್ ನಲ್ಲಿ ಹಗಲುವೇಶ, ವೀರಗಾಸೆ ಸೇರಿದಂತೆ ಒಂದಷ್ಟು ಕಲೆಗಳನ್ನು ನಿರ್ದೇಶಕರು ಪರಿಚಯಿಸಿದ್ದು, ರಕ್ತದೋಕುಳಿಯಲ್ಲಿ ನಾಯಕ ಮಿಂದೆದ್ದಿದ್ದಾರೆ. ಸಖತ್ ಇಂಪ್ರೆಸಿವ್ ಆಗಿ ಮೂಡಿ ಬಂದಿರುವ ಟೀಸರ್ ನೋಡುಗರನ್ನು ಕ್ಯೂರಿಯಾಸಿಟಿ ದುಪ್ಪಟ್ಟು ಮಾಡಿದೆ.

ಸೈನ್​ ಫಿಕ್ಷನ್​ ಕಥೆ ಹೊಂದಿರುವ ಬ್ಲಿಂಕ್​ ಸಿನಿಮಾ!

ಸೈನ್ಸ್ ಫಿಕ್ಷನ್ ಬ್ಲಿಂಕ್ ಸಿನಿಮಾದಲ್ಲಿ ವಜ್ರಧೀರ್ ಜೈನ್, ಸುರೇಶ ಅನಗಳ್ಳಿ, ಚೈತ್ರ ಜೆ ಆಚಾರ್, ಮಂದಾರ ಬಟ್ಟಲಹಳ್ಳಿ, ಮತ್ತು ಗೋಪಾಲ ಕೃಷ್ಣ ದೇಶಪಾಂಡೆ, ಕಿರಣ್ ನಾಯ್ಕ್, ಯಶಸ್ವಿನಿ ರಾವ್ ಹಾಗೂ ಮುರಳಿ ಶೃಂಗೇರಿ ಮುಂತಾದವರು ನಟಿಸುತ್ತಿದ್ದಾರೆ. ಪ್ರಕಾಶ್ ಸಲಗರ್ ಅಸೋಸಿಯೇಟ್ ಪ್ರೊಡ್ಯೂಸರ್ ಆಗಿ, ಅನಿವಾಶ್ ಶಾಸ್ತ್ರೀ ಛಾಯಾಗ್ರಹಣ, ಪ್ರಸನ್ನ ಕುಮಾರ್ ಮ್ಯೂಸಿಕ್, ಸಂಜೀವ್ ಜಗೀರ್ದಾರ್ ಸಂಕಲನ, ದೀಕ್ಷಾ ಕೃಷ್ಣ ವಸ್ತ್ರ ವಿನ್ಯಾಸ, ಏಕಾಂತ್ ಪೋಸ್ಟರ್ ಡಿಸೈನ್ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಇದನ್ನೂ ಓದಿ: ಅರೇ.. ಇವ್ರು ಕೂಡ ಬಾಡಿಗೆ ತಾಯಿ ಮೂಲಕ ಮಗು ಪಡೀತಾರಂತೆ! ಏನಿದು ನಯನತಾರಾ ಬಗ್ಗೆ ಹೊಸ ಗುಸುಗುಸು?

ಕ್ಯೂರಿಯಾಸಿಟಿ ಹುಟ್ಟಿಸಿದ ಮೊದಲ ಝಲಕ್!

ಈಗಾಗಲೇ ಎರಡು ಹಂತದ ಶೂಟಿಂಗ್ ಮುಗಿಸಿರುವ ಬ್ಲಿಂಕ್ ಸಿನಿಮಾ ತಂಡ ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾಗ್ತಿದ್ದು, ಫಸ್ಟ್ ಲುಕ್ ರಿಲೀಸ್ ಮಾಡುವ ಮೂಲಕ ಗಮನಸೆಳೆದಿದೆ. ಈ ಫಸ್ಟ್​ ಲುಕ್​ ನೋಡಿದವರೆಲ್ಲ ಸಖತ್​ ಥ್ರಿಲ್ ಆಗಿದ್ದಾರೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸುವಂತಿದೆ ಈ ಟೀಸರ್​. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಯೂಟ್ಯೂಬ್​ನಲ್ಲೂ ಸಖತ್​ ಕಮಾಲ್​ ಮಾಡುತ್ತಿದೆ.

ಇದನ್ನೂ ಓದಿ: ಪುನೀತ್​ ಹೆಸರಲ್ಲಿ ಪ್ರತಿನಿತ್ಯ ನಡೀತಿದೆ ಅನ್ನದಾಸೋಹ! ಅಪ್ಪು ಎಂದಿಗೂ ನೀ ನಗುವಿನ ಶ್ರೀಮಂತ

ರಂಗಭೂಮಿ ಪ್ರತಿಭೆ ‘ದಿಯಾ’ ದೀಕ್ಷಿತ್‌ ಶೆಟ್ಟಿ!

‘ನಾಗಿಣಿ' ಧಾರಾವಾಹಿಯಿಂದ ಅಪಾರ ಖ್ಯಾತಿ ಪಡೆದು, ನಂತರ 'ದಿಯಾ' ಸಿನಿಮಾದಿಂದಲೂ ಜನಪ್ರಿಯತೆ ಗಿಟ್ಟಿಸಿಕೊಂಡವರು ನಟ ದೀಕ್ಷಿತ್‌ ಶೆಟ್ಟಿ. ಮೂಲತಃ ರಂಗಭೂಮಿ ಪ್ರತಿಭೆ.ತೆಲುಗು ಚಿತ್ರರಂಗದಲ್ಲಿಯೂ ಅವಕಾಶಗಳನ್ನು ಪಡೆದು ಸದ್ಯ ಕೈಯಲ್ಲಿ ಮೂರ್ನಾಲ್ಕು ಸಿನಿಮಾಗಳನ್ನು ಇಟ್ಟುಕೊಂಡಿದ್ದರೂ ಅವರೀಗ ಮತ್ತೆ ರಂಗದ ಮೇಲೆ ಬಂದಿದ್ದಾರೆ. 'ನಾನು ಮೂಲತಃ ರಂಗಭೂಮಿಯವನು. ಉಷಾ ಭಂಡಾರಿಯವರ ನಟನಾ ಶಾಲೆಯಿಂದ ನನ್ನ ರಂಗಭೂಮಿ ಜರ್ನಿ ಆರಂಭವಾಯಿತು.
Published by:Vasudeva M
First published: