• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Deepavali Bash: ಬಾಲಿವುಡ್‌ನಲ್ಲಿ ದೀಪಾವಳಿ ಸಂಭ್ರಮ, ಬೆಳಕಿನ ಹಬ್ಬದಲ್ಲಿ ಮಿಂದೆದ್ದ ಸಿನಿ ತಾರೆಯರು!

Deepavali Bash: ಬಾಲಿವುಡ್‌ನಲ್ಲಿ ದೀಪಾವಳಿ ಸಂಭ್ರಮ, ಬೆಳಕಿನ ಹಬ್ಬದಲ್ಲಿ ಮಿಂದೆದ್ದ ಸಿನಿ ತಾರೆಯರು!

ಸಿನಿತಾರೆಯರ ಸಂಭ್ರಮ

ಸಿನಿತಾರೆಯರ ಸಂಭ್ರಮ

ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ದೀಪಾವಳಿ ಬಾಶ್ ನಲ್ಲಿ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ರಿಂದ ಹಿಡಿದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವರೆಗೂ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

  • Trending Desk
  • 3-MIN READ
  • Last Updated :
  • Share this:

    ಇನ್ನೇನು  ಬೆಳಕಿನ ಹಬ್ಬ ದೀಪಾವಳಿ ಹಬ್ಬ(Deepavali Festival) ಶುರುವಾಗುತ್ತೆ ಅಂತ ಹಬ್ಬದ ತಯಾರಿಯಲ್ಲಿ ಎಲ್ಲರೂ ಬ್ಯುಸಿ (Busy) ಇರ್ತಾರೆ. ಆದರೆ ಬಾಲಿವುಡ್ (Bollywood) ಮಂದಿಗೆ ದೀಪಾವಳಿ ಹಬ್ಬದ ಸಂಭ್ರಮ ಈಗಾಗಲೇ ಶುರುವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳು (Celebrity) ಒಂದು ದೀಪಾವಳಿ ಪಾರ್ಟಿ (Party) ಮುಗಿಸಿಕೊಂಡು ಇನ್ನೊಂದು ದೀಪಾವಳಿ ಪಾರ್ಟಿಗೆ ಹೋಗುತ್ತಿದ್ದಾರೆ ಅನ್ನೋವಷ್ಟು ಹಬ್ಬದ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ ಅಂತ ಹೇಳಬಹುದು.


    ಡಿಸೈನರ್ ಮನೀಶ್ ಮಲ್ಹೋತ್ರಾ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ದೀಪಾವಳಿ ಬಾಶ್ ನಲ್ಲಿ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ರಿಂದ ಹಿಡಿದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವರೆಗೂ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ.


    ಮನೀಶ್ ಅವರ ದೀಪಾವಳಿ ಬಾಶ್ ಗೆ ಯಾರೆಲ್ಲಾ ಬಂದಿದ್ರು?


    ನಟಿ ಐಶ್ವರ್ಯಾ ರೈ ಪಿಂಕ್ ಶರಾರಾ ಸೂಟ್ ಧರಿಸಿದ್ದರೆ, ಅಭಿಷೇಕ್ ಕೆಂಪು ಕುರ್ತಾ ಪೈಜಾಮಾದಲ್ಲಿ ಕಾಣಿಸಿಕೊಂಡಿದ್ದರು. ಮುಖ್ಯ ಬಾಗಿಲಿಗೆ ಹೋಗುವ ಕೆಲವು ಮೆಟ್ಟಿಲುಗಳನ್ನು ಏರುತ್ತಿದ್ದಂತೆ ಅಭಿಷೇಕ್ ಐಶ್ವರ್ಯಾ ಅವರ ಕೈಯನ್ನು ಹಿಡಿದುಕೊಂಡು ಕರೆದುಕೊಂಡು ಹೋಗಿದ್ದಾರೆ. ಅಷ್ಟೇ ಅಲ್ಲದೆ ಅಭಿಷೇಕ್ ಅವರ ಸಹೋದರಿ ಶ್ವೇತಾ ನಂದಾ ಮತ್ತು ಅವರ ಮಗಳು ನವ್ಯಾ ನವೇಲಿ ನಂದಾ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


    ಸಿನಿತಾರೆಯರ ಸಂಭ್ರಮ


    ಕಪ್ಪು ಶೆರ್ವಾನಿಯಲ್ಲಿ ಕಾಣಿಸಿಕೊಂಡ ವಿಕ್ಕಿ ಕೌಶಲ್


    ಈ ಸಂಭ್ರಮದಲ್ಲಿ ನಟ ವಿಕ್ಕಿ ಕೌಶಲ್ ಅವರು ಕಪ್ಪು ಶೆರ್ವಾನಿಯನ್ನು ಧರಿಸಿದ್ದರೆ, ಪತ್ನಿ ಕತ್ರಿನಾ ಸರಳ ವೈಡೂರ್ಯ ಸೀರೆಯಲ್ಲಿ ಅವರೊಂದಿಗೆ ಕಾಣಿಸಿಕೊಂಡರು. ಈ ದಂಪತಿಗಳು ಮನೀಶ್ ಅವರ ಮನೆಯ ಹೊರಗೆ ಪಾಪರಾಜಿಗಳಿಗಾಗಿ ಒಟ್ಟಿಗೆ ಪೋಸ್ ನೀಡಿದರು. ಕತ್ರಿನಾ ಕೆಂಪು ಸೀರೆಯುಟ್ಟಿದ್ದ ಕರಿಷ್ಮಾ ಕಪೂರ್ ಅವರೊಂದಿಗೆ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಸಹ ಕಂಡುಬಂದಿದೆ.


    ಸೀರೆಗಳಲ್ಲಿ ಸುಂದರವಾಗಿ ಕಾಣಿಸಿದ ನಟಿಮಣಿಯರು


    ಪಾರ್ಟಿಯಲ್ಲಿ ಇನ್ನೂ ಅನೇಕ ನಟಿಯರು ಸೀರೆಯಲ್ಲಿ ಕಾಣಿಸಿಕೊಂಡರು. ಕಿಯಾರಾ ಅಡ್ವಾಣಿ, ಕಾಜೋಲ್ ಮತ್ತು ರಿಯಾ ಚಕ್ರವರ್ತಿ ಈ ಸಂದರ್ಭದಲ್ಲಿ ಹೊಳೆಯುವ ಚಿನ್ನದ ಬಣ್ಣದ ಸೀರೆಗಳನ್ನು ಧರಿಸಿದ್ದರು.


    ಕೃತಿ ಸನೋನ್ ಸಂಪೂರ್ಣ ಲ್ಯಾವೆಂಡರ್ ಸೀರೆಯನ್ನು ಧರಿಸಿದ್ದರೆ, ಡಯಾನಾ ಪೆಂಟಿ ಹಸಿರು ಬಣ್ಣದ ಸೀರೆಯನ್ನು ಧರಿಸಿದ್ದರು. ಅಥಿಯಾ ಶೆಟ್ಟಿ ಕೂಡ ನೀಲಿ ಸೀರೆಯಲ್ಲಿದ್ದರು. ಜೆನಿಲಿಯಾ ಅವರು ಪತಿ ರಿತೇಶ್ ದೇಶ್ಮುಖ್ ಅವರೊಂದಿಗೆ ಬ್ಯಾಷ್ ನಲ್ಲಿ ಕೆಂಪು ಸೀರೆಯಲ್ಲಿ ಕಾಣಿಸಿಕೊಂಡರು.


    ಕಸೂತಿ ಮಾಡಿದ ರವಿಕೆಯೊಂದಿಗೆ ಮಲೈಕಾ ಅರೋರಾ ಕಪ್ಪು ಸೀರೆಯಲ್ಲಿ ತುಂಬಾನೇ ಸುಂದರವಾಗಿ ಕಾಣುತ್ತಿದ್ದರು. ಅಂಬಾನಿ ಕುಟುಂಬದ ರಾಧಿಕಾ ಮರ್ಚೆಂಟ್ ಮತ್ತು ಶ್ಲೋಕಾ ಮೆಹ್ತಾ ಕೂಡ ಪಾರ್ಟಿಗೆ ಒಟ್ಟಿಗೆ ಬಂದರು.


    ಸೆಲೆಬ್ರಿಟಿಗಳಿಂದ ತುಂಬಿದ ದೀಪಾವಳಿ ಪಾರ್ಟಿ


    ನಟಿ ರಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಕೂಡ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಈ ಸಂದರ್ಭಕ್ಕಾಗಿ ನಟಿ ರಕುಲ್ ಅವರು ವರ್ಣರಂಜಿತ ಲೆಹೆಂಗಾವನ್ನು ಆಯ್ಕೆ ಮಾಡಿದ್ದರು. ನಟಿ ಮಾಧುರಿ ದೀಕ್ಷಿತ್ ಸಹ ಪತಿ ಡಾ.ಶ್ರೀರಾಮ್ ನೇನೆ ಅವರೊಂದಿಗೆ ಬಂದಿದ್ದರು.


    ನಟ ಆಯುಷ್ಮಾನ್ ಖುರಾನಾ ಮತ್ತು ಪತ್ನಿ ತಾಹಿರಾ ಕಶ್ಯಪ್ ಕೂಡ ಇಲ್ಲಿ ಕಾಣಿಸಿಕೊಂಡರು. ಇವರಷ್ಟೇ ಅಲ್ಲದೆ, ಕಾರ್ತಿಕ್ ಆರ್ಯನ್, ಸಿದ್ಧಾಂತ್ ಚತುರ್ವೇದಿ ಅವರು ಜಾಹ್ನವಿ ಕಪೂರ್, ಅವರ ಸಹೋದರಿ ಖುಷಿ ಕಪೂರ್, ಸೋದರ ಸಂಬಂಧಿ ಶನಾಯಾ ಕಪೂರ್ ಮತ್ತು ಸುಹಾನಾ ಖಾನ್ ಅವರ ಸಂಪೂರ್ಣ ಪರಿವಾರದವರು ಈ ಬಾಶ್  ನ ಭಾಗವಾಗಿದ್ದರು. ಒಟ್ಟಿನಲ್ಲಿ ಹೇಳುವುದಾದರೆ ಬಾಲಿವುಡ್ ಮಂದಿಗೆ ದೀಪಾವಳಿ ಹಬ್ಬದ ಸಂಭ್ರಮ ಎಲ್ಲರಿಗಿಂತಲೂ ಸ್ವಲ್ಪ ಬೇಗನೆ ಶುರುವಾಗಿದೆ ಅಂತ ಹೇಳಬಹುದು.

    Published by:Sandhya M
    First published: