ಬಿಗ್ಬಾಸ್ (Bigg Boss) ಚೆಲುವೆ ದಿವ್ಯಾ ಉರುಡುಗ (Divya Uruduga) ಹೊಸ ಡ್ರೆಸ್ ಧರಿಸಿ ಚಂದದ್ದೊಂದು ವಿಡಿಯೋವನ್ನು (Video) ಶೇರ್ ಮಾಡಿದ್ದಾರೆ. ಓ ಸೋನಾ ಹಾಡಿಗೆ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ (Instagram)ಶೇರ್ ಮಾಡಿದ್ದಾರೆ. ಬಿಳಿ ಬಣ್ಣದ ಸಿಂಪಲ್ ಲೆಹಂಗಾ (Lehanga) ಜೊತೆ ನೇರಳೆ ಬಣ್ಣದ ಗ್ರ್ಯಾಂಡ್ ದುಪಟ್ಟಾ ಧರಿಸಿ ಮಿಂಚಿದ್ದಾರೆ. ಅವರ ಲುಕ್ ಸುಂದರವಾಗಿ ಕಂಡು ಬಂದಿದ್ದು ಫ್ಯಾನ್ಸ್ ವಿಡಿಯೋವನ್ನು ಎಲ್ಲೆಡೆ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಓ ಸೋನಾ ಹಾಡಿಗೆ ಮುಗುಳುನಗೆ
ಸಾಧಾರಣವಾಗಿ ರೀಲ್ಸ್ ಮಾಡುವಾಗ ಡ್ಯಾನ್ಸ್ ಮಾಡುತ್ತಾರೆ. ಆದರೆ ದಿವ್ಯಾ ಅವರು ಓ ಸೋನಾ ಹಾಡಿಗೆ ಡ್ಯಾನ್ಸ್ ಮಾಡಿಲ್ಲ. ಕ್ಯೂಟ್ ಕ್ಯೂಟ್ ಆಗಿ ಸ್ಮೈಲ್ ಕೊಟ್ಟು ಅಭಿಮಾನಿಗಳ ಮನಸು ಕದ್ದಿದ್ದಾರೆ.
ಕ್ಯಾಪ್ಶನ್ನಲ್ಲಿ ಏನಿದೆ?
ಕೆಲವೊಮ್ಮೆ ಜನರು ಸುಂದರವಾಗಿ ಕಾಣುತ್ತಾರೆ. ಹೊರಗಿನಿಂದಲ್ಲ, ಅವರ ಹೇಳಿಕೆಯಿಂದಲ್ಲ. ಬದಲಾಗಿ ಅವರು ಅವರಾಗಿರುವುದರಿಂದಲೇ ಸುಂದರವಾಗಿ ಕಾಣುತ್ತಾರೆ ಎಂದು ದಿವ್ಯಾ ಕ್ಯಾಪ್ಶನ್ನಲ್ಲಿ ಬರೆದಿದ್ದಾರೆ.
View this post on Instagram
ಇದನ್ನೂ ಓದಿ: Divya Uruduga-Aravind KP: ಬಿಗ್ಬಾಸ್ ಜೋಡಿ ದಿವ್ಯಾ ಉರುಡುಗ-ಅರವಿಂದ್ ಏಜ್ ಗ್ಯಾಪ್ ಇಷ್ಟಿದೆ
ನಟಿಯ ವಿಡಿಯೋ ಸಖತ್ ವೈರಲ್ ಆಗಿದ್ದು ಅವರ ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದಾರೆ. ದಿವ್ಯಾ ಉರುಡುಗ ಅವರ ವಿಡಿಯೋಗೆ 61 ಸಾವಿರ ಲೈಕ್ಸ್ ಬಂದಿದ್ದು 420ಕ್ಕೂ ಹೆಚ್ಚು ಜನರು ಕಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಮುಗಿಯುತ್ತಿದ್ದಂತೆ ಸ್ಪರ್ಧಿಗಳು ಸ್ವತಂತ್ರ ಹಕ್ಕಿಗಳಾಗಿ ಹೊರಗೆ ಬಂದಿದ್ದಾರೆ. ಟಿವಿ ರಿಯಾಲಿಟಿ ಶೋನನಲ್ಲಿ ಭಾಗವಹಿಸಿದ ಅನೇಕ ಸ್ಪರ್ಧಿಗಳು ತಮ್ಮ ಹೊಸ ಸ್ನೇಹಿತರೊಂದಿಗೆ ಕೆಫೆಗಳು ಮತ್ತು ಮಾಲ್ಗಳ ಹೊರಗೆ ಒಟ್ಟಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ದಿವ್ಯಾ ಉರುಡುಗ ತನ್ನ 33 ನೇ ಹುಟ್ಟುಹಬ್ಬವನ್ನು ಇತ್ತೀಚೆಗೆ ತನ್ನ ಬಿಗ್ ಬಾಸ್ ಸ್ನೇಹಿತರೊಂದಿಗೆ ಆಚರಿಸಿಕೊಂಡರು. ಈ ವಿಶೇಷ ಸಂದರ್ಭದಲ್ಲಿ ರಾಕೇಶ್ ಅಡಿಗ ಅವರು ದಿವ್ಯಾಗಾಗಿ ವಿಶೇಷ ವಿಡಿಯೋ ಮಾಡಿದ್ದರು. ಈ ವಿಡಿಯೋ ಬಿಗ್ ಬಾಸ್ನಲ್ಲಿ ದಿವ್ಯಾ ಅವರ ಪ್ರಯಾಣ ಮತ್ತು ಅವರ ಕೆಲವು ಅತ್ಯುತ್ತಮ ಫೋಟೋಗಳನ್ನು ಒಳಗೊಂಡಿತ್ತು.
ಅರವಿಂದ್ ಕೆಪಿ ಅವರು ದಿವ್ಯಾ ಅವರ ಬರ್ತ್ಡೇಯನ್ನು ಭರ್ಜರಿಯಾಗಿ ಆಚರಿಸಿದ್ದಾರೆ. ಗೆಳತಿಗಾಗಿ ಸರ್ಪೈಸ್ ಪಾರ್ಟಿ ಕೊಟ್ಟು ಫೋಟೋಸ್ ಕ್ಲಿಕ್ ಮಾಡಿದ್ದಾರೆ. ದಿವ್ಯಾ ಶೇರ್ ಮಾಡಿದ ಫೋಟೋಸ್ಗಳಲ್ಲಿ ಅರವಿಂದ್ ಕ್ಯಾಮೆರಾ ಹಿಡಿದು ಗೆಳತಿಯ ಫೋಟೋಸ್ ಕ್ಲಿಕ್ ಮಾಡುವುದನ್ನು ಕೂಡಾ ಸ್ಪಷ್ಟವಾಗಿ ಕಾಣಬಹುದಾಗಿದೆ.
ಇತ್ತೀಚೆಗೆ ದಿವ್ಯಾ ಹಾಗೂ ಅರವಿಂದ್ ಕೆಪಿ ತಮ್ಮ ಮುಂಬರುವ ಚಿತ್ರ ಅರ್ಧಂಬರ್ಧ ಪ್ರೇಮ ಕಥೆ ಸಿನಿಮಾ ಹಾಡಿಗೆ ತಮ್ಮ ರೀಲ್ಸ್ ಮಾಡಿದ್ದರು. ತಮ್ಮ ಸಿನಿಮಾ ಹಾಡಿನ ಹುಕ್ ಸ್ಟೆಪ್ ರೀಲ್ಸ್ ಮಾಡಿದ್ದರು. ಅದನ್ನು ಫಾಲೋ ಮಾಡುವಂತೆ ಫ್ಯಾನ್ಸ್ಗೂ ಹೇಳಿದ್ದರು.
ಬಿಗ್ ಬಾಸ್ ಕನ್ನಡ ಮನೆಯಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಭೇಟಿಯಾದರು. ಅವರು ಪರಸ್ಪರ ಹೆಚ್ಚು ಆತ್ಮೀಯರಾದರು. ಈ ಜೋಡಿ ರಿಯಾಲಿಟಿ ಶೋನಲ್ಲಿ ತಮ್ಮ ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದರು. ಅರವಿಂದ್ ಕೆಪಿ ರೇಸರ್. ದಿವ್ಯಾ ಉರುಡುಗ ಅವರು ಪದವಿ ಪೂರ್ವ, ಫೇಸ್ 2 ಫೇಸ್ ಮತ್ತು ಗಿರ್ಕಿಯಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ