• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Divya Uruduga: ಸಪ್ತಮಿ ಐಡಿಯಾ ಫಾಲೋ ಮಾಡಿದ್ರು ದಿವ್ಯಾ ಉರುಡುಗ! ಮಾಸ್ಕ್ ಹಾಕಿ ಸಾಗರ ಜಾತ್ರೆಯಲ್ಲಿ ಫುಲ್ ಸುತ್ತಾಟ

Divya Uruduga: ಸಪ್ತಮಿ ಐಡಿಯಾ ಫಾಲೋ ಮಾಡಿದ್ರು ದಿವ್ಯಾ ಉರುಡುಗ! ಮಾಸ್ಕ್ ಹಾಕಿ ಸಾಗರ ಜಾತ್ರೆಯಲ್ಲಿ ಫುಲ್ ಸುತ್ತಾಟ

ದಿವ್ಯಾ ಉರುಡುಗ

ದಿವ್ಯಾ ಉರುಡುಗ

ನಟಿ ದಿವ್ಯಾ ಉರುಡುಗ ಅವರು ಸಾಗರ ಜಾತ್ರೆ ಸುತ್ತಾಡಿದ್ದಾರೆ. ಮಾಸ್ಕ್ ಧರಿಸಿದ ನಟಿ ಯಾರಿಗೂ ಗೊತ್ತಾಗದಂತೆ ಜಾಲಿಯಾಗಿ ಸುತ್ತಾಡಿದ್ದಾರೆ.

  • News18 Kannada
  • 5-MIN READ
  • Last Updated :
  • Bangalore, India
  • Share this:

ಊರ ಜಾತ್ರೆ ಅಂದ್ರೆ ಸ್ಪೆಷಲ್ ಕನೆಕ್ಷನ್ ಅಲ್ವಾ? ಊರ ಜಾತ್ರೆ ಮಾತ್ರ ಜನರು ಮಿಸ್ ಮಾಡುವುದೇ ಇಲ್ಲ. ಯಾವುದೇ ನಗರ, ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದರೂ ಊರ ಜಾತ್ರೆ ಬಂದಾಗ ಜನ ಓಡೋಡಿ ತಮ್ಮ ಊರು ಸೇರುತ್ತಾರೆ. ನಟಿ ಅನುಷ್ಕಾ ಶೆಟ್ಟಿ (Anushka Shetty) ಊರಿನ ದೈವ ಕೋಲ ಮಿಸ್ ಮಾಡದೆ ನೋಡುತ್ತಾರೆ. ಹೀಗೆ ಸ್ಟಾರ್ ಸೆಲೆಬ್ರಿಟಿಗಳಿಗೂ ತಮ್ಮ ಊರಿನ ನಂಟು ಮರೆಯಲಾಗುವುದಿಲ್ಲ. ಇತ್ತೀಚೆಗೆ ನಟಿ ಸಪ್ತಮಿ ಗೌಡ (Sapthami Gowda) ಸ್ನೇಹಿತರ ಜೊತೆ ಮಾಸ್ಕ್ ಧರಿಸಿ, ಕ್ಯಾಪ್ ಹಾಕಿ, ಹೂಡಿ ಧರಿಸಿಕೊಂಡು ಬೆಂಗಳೂರಿನ  (Bengaluru) ಐತಿಹಾಸಿಕ ಪರಿಷೆ ಸುತ್ತಾಡಿದ್ದರು. ಈಗ ಬಿಗ್​ಬಾಸ್  (Bigg boss) ಖ್ಯಾತಿಯ ದಿವ್ಯಾ ಉರುಡುಗ (Divya Uruduga) ಕೂಡಾ ಅದನ್ನೇ ಮಾಡಿದ್ದಾರೆ. 


ನಟಿ ದಿವ್ಯಾ ಉರುಡುಗ ತಮ್ಮೂರು ಸಾಗರದ ಜಾತ್ರೆಗೆ ಹೋಗಿದ್ದಾರೆ. ಬಿಗ್​ಬಾಸ್ ಖ್ಯಾತಿಯ ನಟಿ ಅಂದರೆ ಹೇಳಬೇಕೇ? ದಿವ್ಯಾ ಉರುಡುಗ ಬಂದಿದ್ದಾರೆ ಅಂದ್ರೆ ಅಭಿಮಾನಿಗಳು ಮುಗಿಬೀಳುತ್ತಾರೆ. ಇನ್ನೂ ನಮ್ಮೂರಿನ ಹುಡುಗಿ ಎಂದು ಸ್ಪೆಷಲ್ ಭಾವನೆ ಕೂಡಾ ಇರುತ್ತೆ.


ಊರ ಜಾತ್ರೆ ಮಿಸ್ ಮಾಡೋಕಾಗುತ್ತಾ?


ಆದರೆ ಅಭಿಮಾನಿಗಳು ಬಂದು ಮುಗಿಬೀಳ್ತಾರೆ ಅಂತ ಊರ ಜಾತ್ರೆ ಮಿಸ್ ಮಾಡೋಕಾಗುತ್ತಾ? ದಿವ್ಯಾ ಅವರು ಖಂಡಿತಾ ತಮ್ಮೂರಿನ ಜಾತ್ರೆಯನ್ನು  ಮಿಸ್ ಮಾಡಿಕೊಂಡಿಲ್ಲ. ಹೇಗೋ ಸರ್ಕಸ್ ಮಾಡಿಕೊಂಡು ನಟಿ ಜಾತ್ರೆಗೆ ಹೋಗಿದ್ದಾರೆ.


ಸಾಗರ ಜಾತ್ರೆಯಲ್ಲಿ ದಿವ್ಯಾ ಉರುಡುಗ ಸುತ್ತಾಟ


ನಟಿ ದಿವ್ಯಾ ಉರುಡುಗ ಅವರು ಸಾಗರ ಜಾತ್ರೆಯಲ್ಲಿ ಸುತ್ತಾಡಿದ್ದಾರೆ. ನಟಿ ಮಾಸ್ಕ್ ಧರಿಸಿ ಅಪ್ಪಟ ಹಳ್ಳಿ ಹುಡುಗಿಯಾಗಿ ತಮ್ಮೂರಿನ ಜಾತ್ರೆಯನ್ನು ಖುಷಿ ಖುಷಿಯಾಗಿ ಎಂಜಾಯ್ ಮಾಡಿದ್ದಾರೆ.









View this post on Instagram






A post shared by DU✨ (@divya_uruduga)





ಪ್ರಿಂಟೆಡ್ ಕುರ್ತಾ ಧರಿಸಿ, ಮಾಸ್ಕ್ ಧರಿಸಿ ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ. ದೇವರ ದರ್ಶನ ಪಡೆದು, ನಟಿ ಜೈಂಟ್ ವೀಲ್​ನಲ್ಲಿ ಕೂಡಾ ಕುಳಿತುಕೊಂಡು ಊರಜಾತ್ರೆಯ ಮಜಾ ಅನುಭವಿಸಿದ್ದಾರೆ.




ವಿಡಿಯೋ ಶೇರ್ ಮಾಡಿದ ನಟಿ


ನಟಿ ಸಾಗರ ಜಾತ್ರೆಯಲ್ಲಿ ಸುತ್ತಾಡಿದ ಶಾರ್ಟ್ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಇದರಲ್ಲಿ ಕ್ವಿಕ್ ಆಗಿ ಜಾತ್ರೆಯ ಒಂದು ಲುಕ್ ತೋರಿಸಿದ್ದಾರೆ. ಅವರು ನಗುವಿನಲ್ಲಿ ಪ್ರೀತಿ ಬರೆದಳು, ಕಣ್ಣಿನಿಂದ ಮ್ಯಾಜಿಕ್ ಮಾಡಿದಳು ಎಂದು ಬರೆದಿದ್ದಾರೆ. ನಟಿಯ ವಿಡಿಯೋ ವೈರಲ್ ಆಗಿದ್ದು ಅಭಿಮಾನಿಗಳು ಖುಷಿಪಟ್ಟಿದ್ದಾರೆ. ನಟಿಯ ವಿಡಿಯೋಗೆ 127 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 246ಕ್ಕೂ ಹೆಚ್ಚು ಜನರು ವಿಡಿಯೋ ನೋಡಿ ಕಮೆಂಟ್ ಮಾಡಿದ್ದಾರೆ.




ಇದನ್ನೂ ಓದಿ: Divya Uruduga: ​ದಿವ್ಯಾ ಉರುಡುಗ ಬೋಲ್ಡ್​ ಫೋಟೋಸ್- ದೃಷ್ಟಿ ಆಗುತ್ತೆ ಕಾಡಿಗೆ ಹಚ್ಕೊಳಿ ಎಂದ ಫ್ಯಾನ್ಸ್


ದಿವ್ಯಾ ಉರುಡುಗ (Divya Uruduga) ಅವರು ಇತ್ತೀಚೆಗೆ ಸೀರೆ (Saree) ಉಟ್ಟಿರುವ ಒಂದು ವಿಡಿಯೋವನ್ನು ಶೇರ್ ಮಾಡಿದ್ದರು. ದಿವ್ಯಾ ಉರುಡುಗ ಉಟ್ಟ ಸೀರೆ ತುಂಬಾ ಸಿಂಪಲ್ ಆಗಿದೆ. ಹೈನೆಕ್ ರೆಡ್ ಕಲರ್ ಬ್ಲೌಸ್ ಹಾಗೂ ಬಿಳಿ ಬಣ್ಣದ ಟ್ರಾನ್ಸ್​ಪರೆಂಟ್ ಸೀರೆ. ಇದಕ್ಕೆ ಸಿಂಪಲ್ ಆಗಿರುವ ಇಯರಿಂಗ್ಸ್ ಧರಿಸಿದ್ದಾರೆ. ಸಿಂಪಲ್ ಆಗಿರುವ ಮೇಕಪ್. ಇಷ್ಟು ಬಿಟ್ಟು ಬೇರೇನಿಲ್ಲ. ಆದರೂ ನಟಿ ಕ್ಯೂಟ್ ಕಾಣಿಸಿದ್ದಾರೆ.









View this post on Instagram






A post shared by DU✨ (@divya_uruduga)





ಪ್ರತಿ ಸೀರೆಯೂ ಒಂದು ಕಥೆ ಹೇಳುತ್ತದೆ ಎನ್ನುತ್ತಾರೆ. ಅದರಲ್ಲಿ ಮುಂದಿರುವ ಸೀರೆ ಇದು. ನನ್ನ ವಾರ್ಡ್​ರೋಬ್​ನ ರಾಜಕುಮಾರಿ ಈ ಸೀರೆ. ಅಂದ ಹಾಗೆ ಈ ಸ್ಪೆಷಲ್ ಸೀರೆಯ ಹಿಂದಿನ ಕಥೆ ನಿಮಗೆಲ್ಲರಿಗೂ ಗೊತ್ತು. ನೆನಪಿಸಿಕೊಳ್ಳಿ. ಈ ಸಲ ಈ ಸೀರೆ ಉಟ್ಟಾಗ ನಾಚಿಗೆ ಆಗುತ್ತಿದೆ ಎಂದು ನಾನು ಹೇಳಿಲ್ಲ. ಹಾಗೆಯೇ ಯಾರು ನನ್ನ ಬಳಿ ಜಸ್ಟ್ ಚೋಕರ್ ಮಾತ್ರ ಹಾಕು ಎಂದು ಹೇಳಿಲ್ಲ ಎಂದಿದ್ದಾರೆ ದಿವ್ಯಾ ಉರುಡುಗ.

Published by:Divya D
First published: