• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಮುಂದಿನ ಜನ್ಮದಲ್ಲಿ ಸಿಗುತ್ತೇನೆ; ಸಾಯುವ ಕೆಲವೇ ಗಂಟೆಗೂ ಮುನ್ನ ಸ್ಟೇಟಸ್​ ಹಾಕಿ ನಟಿ ಸಾವು

ಮುಂದಿನ ಜನ್ಮದಲ್ಲಿ ಸಿಗುತ್ತೇನೆ; ಸಾಯುವ ಕೆಲವೇ ಗಂಟೆಗೂ ಮುನ್ನ ಸ್ಟೇಟಸ್​ ಹಾಕಿ ನಟಿ ಸಾವು

ದಿವ್ಯಾ ಚೌಕಿ

ದಿವ್ಯಾ ಚೌಕಿ

Divvya Chouksey: ದಿವ್ಯಾ ಚೌಕಿ ಸಾವಿಗೂ 15 ಗಂಟೆಗಳ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಪೋಸ್ಟ್​ನಲ್ಲಿ ತನ್ನ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ. ಅಭಿಮಾನಿಗಳು ದಿವ್ಯಾ ಚೌಕಿ ಅವರ ಪೋಸ್ಟ್ ನೋಡಿ ಕಂಬನಿ ಸುರಿಸಿದ್ದಾರೆ.

  • Share this:

    ಬಾಲಿವುಡ್​ ನಟಿ ದಿವ್ಯಾ ಚೌಕಿ ನಿಧನರಾಗಿದ್ದಾರೆ. ಸಿನಿಮಾ, ಮಾಡೆಲ್​​, ರಿಯಾಲಿಟಿ ಶೋ, ಧಾರಾವಾಹಿಯಲ್ಲಿ ನಟಿಸಿರುವ ದಿವ್ಯಾ ಚೌಕಿ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇಂದು ನಟಿ ಸಾವನ್ನಪ್ಪುವ ಮೂಲಕ ಇಹಲೋಕ ತ್ಯಜಿಸಿದ್ದಾರೆ. ಇವರ ಸಾವಿಗೆ ಅನೇಕ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.


    ದಿವ್ಯಾ ಚೌಕಿ ಸಾವಿಗೂ 15 ಗಂಟೆಗಳ ಮುನ್ನ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಪೋಸ್ಟ್​ನಲ್ಲಿ ತನ್ನ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ. ಅಭಿಮಾನಿಗಳು ದಿವ್ಯಾ ಚೌಕಿ ಅವರ ಪೋಸ್ಟ್ ನೋಡಿ ಕಂಬನಿ ಸುರಿಸಿದ್ದಾರೆ. ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ದಿವ್ಯಾರನ್ನು ಇಷ್ಟು ಬೇಗ ಕಳೆದುಕೊಂಡವಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅನೇಕ ತಾರೆಯರು ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ದುಃಖದ ನೋವುಗಳನ್ನು ಬರೆದುಕೊಂಡಿದ್ದಾರೆ.


    ದಿವ್ಯಾ ಚೌಕಿ ಹಾಕಿರುವ ಪೋಸ್ಟ್​ನಲ್ಲಿ ಏನಿತ್ತು?


    ಹೇ ದಿಲ್​ ತೊ ಆವಾರಾ ಸಿನಿಮಾದಲ್ಲಿ ನಟಿಸಿದ್ದ ನಟಿ ದಿವ್ಯಾ ಚೌಕಿ ತನ್ನ ಇನ್​​ಸ್ಟಾಗ್ರಾಂನಲ್ಲಿ ‘ನಾನು ತಿಳಿಯ ಬಯಸುವುದನ್ನು ಪದಗಳಲ್ಲಿ ಹೇಳಲು ಆಗುತ್ತಿಲ್ಲ. ಹೆಚ್ಚು ಕಡಿಮೆ ತಿಂಗಳುಗಳ ನಂತರ ಈ ವಿಚಾರವನ್ನು ನಿಮಗೆ ಹೇಳುತ್ತಿದ್ದೇನೆ. ನಾನು ನಿಮಗೆಲ್ಲರಿಗೂ ಹೇಳುವ ಸಮಯವಿದು. ನಾನು ಸಾವಿನ ಹಾಸಿಗೆಯಲ್ಲಿದ್ದೇನೆ. ಶಿಟ್​​. ನಾನು ಬಲಶಾಲಿ. ಮುಂದಿನ ಜನ್ಮದಲ್ಲಿ ಭೇಟಿಯಾಗುತ್ತೇನೆ. ದುಃಖವಿಲ್ಲದ ಮತ್ತೊಂದು ಜೀವನ ನನಗಿರಲಿ. ದಯವಿಟ್ಟು ಯಾರು ಪ್ರಶ್ನಿಸಬೇಡಿ’. ಎಂದು ಬರೆದುಕೊಂಡಿದ್ದಾರೆ.


    ದಿವ್ಯಾ ಚೌಕಿ ಇನ್​​ಸ್ಟಾಗ್ರಾಂ ಪೋಸ್ಟ್​


    ದಿವ್ಯಾ ಅವರ ಸಹೋದರಿ ಸೌಮ್ಯ ಅಮಿಶ್​ ವರ್ಮಾ ಟ್ವೀಟ್​ ಮಾಡುವ ಮೂಲಕ ನಟಿಯ ಸಾವಿನ ಬಗ್ಗೆ ತಿಳಿಸಿದ್ದಾರೆ.


    ಸೌಮ್ಯ ಅಮಿಶ್​ ವರ್ಮಾ ಟ್ವೀಟ್

    Published by:Harshith AS
    First published: