ಏಳು ಸಿನಿಮಾ 570 ಕೋಟಿ: ನಿರ್ಮಾಪಕರ ಹೊಸ ಆಶಾಕಿರಣವಾದ ಒಟಿಟಿ!

ಕೊರೋನಾ ಅಟ್ಟಹಾಸದಿಂದ ಬೇಸತ್ತ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಆನ್​ಲೈನ್​  ಫ್ಲಾಟ್​ಫಾಮ್​ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಚಿತ್ರತಂಡಗಳು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಡೇಟ್​ ಫಿಕ್ಸ್​ ಮಾಡಿದ್ದಾರೆ. ಹೀಗಾಗಿ ಒಟಿಟಿ ಫ್ಲಾರ್ಟ್​ಫಾರ್ಮ್​ ನಿರ್ಮಾಪಕ ಬದುಕಿಗೆ ಆಶಾಕಿರಣವಾಗಿದೆ.

news18-kannada
Updated:July 20, 2020, 4:51 PM IST
ಏಳು ಸಿನಿಮಾ 570 ಕೋಟಿ: ನಿರ್ಮಾಪಕರ ಹೊಸ ಆಶಾಕಿರಣವಾದ ಒಟಿಟಿ!
ಸಿನಿಮಾ
  • Share this:
ಒಂದೆದೆ ಕೊರೋನಾ ಅವಾಂತರ. ಮತ್ತೊಂದೆಡೆ ಬಾಗಿಲು ಮುಚ್ಚಿರುವ ಸಿನಿಮಾ ಥಿಯೇಟರ್​ಗಳು. ಇದರ ಮಧ್ಯದಲ್ಲಿ ಸಿನಿಮಾ ಬಿಡುಗಡೆ ಮಾಡಲು ಕಾದು ಕುಳಿತ ಚಿತ್ರತಂಡಗಳು. 

ಕೊರೋನಾದಿಂದಾಗಿ ಅನೇಕ ಸಿನಿಮಾಗಳು ಬಿಡುಗಡೆಗೆ ಕ್ಯೂನಲ್ಲಿ ನಿಂತಿವೆ. ಆದರೆ ಕೊರೋನಾ ಅವಾಂತರ ಕಡಿಮೆಯಾಗದೆ ಮಲ್ಟಿಫ್ಲಿಕ್ಸ್​ ಥಿಯೇಟರ್​ಗಳು ತೆರೆಯುವುದು ಅನುಮಾನ. ಹೀಗಿರುವಾಗ ಕೆಲವು ಚಿತ್ರತಂಡಗಳು ತಮ್ಮ ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಹೌದು, ಕೊರೋನಾ ಅಟ್ಟಹಾಸದಿಂದ ಬೇಸತ್ತ ಸಿನಿಮಾ ನಿರ್ಮಾಪಕರು ತಮ್ಮ ಸಿನಿಮಾಗಳನ್ನು ಆನ್​ಲೈನ್​  ಫ್ಲಾಟ್​ಫಾಮ್​ನಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಕೆಲವು ಚಿತ್ರತಂಡಗಳು ತಮ್ಮ ಸಿನಿಮಾವನ್ನು ಬಿಡುಗಡೆ ಮಾಡಲು ಡೇಟ್​ ಫಿಕ್ಸ್​ ಮಾಡಿದ್ದಾರೆ. ಹೀಗಾಗಿ ಒಟಿಟಿ ಫ್ಲಾರ್ಟ್​ಫಾರ್ಮ್​ ನಿರ್ಮಾಪಕ ಬದುಕಿಗೆ ಆಶಾಕಿರಣವಾಗಿದೆ.

ಆನ್​ಲೈನ್​​ ಫ್ಲಾರ್ಟ್​ಫಾರ್ಮ್​ಗಳಲ್ಲಿ ಜನಪ್ರಿಯತೆ ಪಡೆದಿರುವ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ ಕೊರೋನಾ ಸಮಯದಲ್ಲಿ ಒಟ್ಟು 7 ಸಿನಿಮಾಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಒಟ್ಟಾರೆ 570 ಕೋಟಿ ಡೀಲ್​ ಒಟ್ಟಿಕೊಂಡಿದೆ. ಕೊವೀಡ್​ ಸಮಯದಲ್ಲಿ ಒಟಿಟಿ ಫ್ಲಾರ್ಟ್​ಪಾರ್ಮ್​ಗಳು ಮಾತ್ರ ಲಾಭದ ನಡೆಯಲ್ಲಿದೆ.

ವಿಪಿಎನ್​ ಆ್ಯಪ್​​ ಬಳಸುತ್ತಿದ್ದೀರಾ?; ಬಳಕೆದಾರರ ಖಾಸಗಿ ಮಾಹಿತಿ ಎಗರಿಸುತ್ತಿವೆ ಈ ಆ್ಯಪ್​​ಗಳು

ಅಕ್ಷಯ್ ಕುಮಾರ್​ ನಟನೆಯ ‘ಲಕ್ಷ್ಮೀ ಬಾಂಬ್’​ ಸಿನಿಮಾ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗುತ್ತಿದೆ.  ತಮಿಳಿನಲ್ಲಿ ಸೂಪರ್​ ಹಿಟ್​ ಆಗಿರುವ ರಾಘವ ಲಾರೆನ್ಸ್​​ ನಟನೆಯ ‘ಮುನಿ 2’ ಸಿನಿಮಾದ ರಿಮೇಕ್​ ಆಗಿದೆ.  ಲಕ್ಷ್ಮೀ ಬಾಂಬ್​ ಸಿನಿಮಾವನ್ನು ರಾಘವ ಲಾರೆನ್ಸ್​​ ನಿರ್ದೇಶನ ಮಾಡಿದ್ದಾರೆ. ಹಾಗಾಗಿ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ 125 ಕೋಟಿಗೆ ಈ ವ್ಯವಹಾರನ್ನು ಕುದುರಿಸಿಕೊಂಡಿದೆ.

ಸಮುದ್ರ ಆಳದಲ್ಲಿ ಪತ್ತೆಯಾಯ್ತು 14 ಕಾಲಿನ ಹೊಸ ಜೀವಿ!

ಅಜಯ್​ ದೇವಗನ್​, ಸಂಜಯ್​ ದತ್ತ್​​, ಸೋನಾಕ್ಷಿ ಸಿನ್ಹಾ, ನೊರಾ ಫತೇಲಿ ನಟನೆಯ ‘ಭುಜ್’​ ಸಿನಿಮಾ ಕೂಡ ಒಟಿಟಿ ಫ್ಲಾರ್ಟ್​ಫಾಮ್​ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗುತ್ತಿದೆ. ಸುಮಾರು 110 ಕೋಟಿ ರೂಗೆ ಈ ಸಿನಿಮಾ ಮಾರಾಟವಾಗಿದೆ.

ಇನ್ನು ‘ಸಡಕ್​​ 2’, ‘ಲೂಟ್​ ಕೇಸ್‘​, ಸುಶಾಂತ್​​ ಸಿಂಗ್​ ನಟನೆಯ ‘ದಿಲ್​ ಬೇಚಾರ‘ ಸಿನಿಮಾ ಡಿಸ್ನಿ ಪ್ಲಸ್​​ ಹಾಟ್​ಸ್ಟಾರ್​ನಲ್ಲಿ ಬಿಡುಗಡೆಯಾಗುತ್ತಿದೆ.
Published by: Harshith AS
First published: July 20, 2020, 4:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading