HOME » NEWS » Entertainment » DISHA SALIAN PHONE WAS USED TILL NINE DAYS AFTER HER DEMISE RH

SSR Death Case: ದಿಶಾ ಸಾಲಿಯನ್ ಸಾವಿನ ಬಳಿಕ ಆಕೆ ಮೊಬೈಲ್ 9 ದಿನಗಳ ಕಾಲ ಬಳಕೆಯಲ್ಲಿತ್ತು ಎಂದು ಹೇಳಿದ ವರದಿ

Disha Salian: ದಿಶಾ ಅವರ ಸಾವಿನಲ್ಲಿ ನಿಗೂಢತೆ ಇದೆ ಮತ್ತು ಅದು ಆತ್ಮಹತ್ಯೆಯಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಆರು ದಿನಗಳ ಮೊದಲು ನಿಧನರಾದ ಅವರ ಮಾಜಿ ವ್ಯವಸ್ಥಾಪಕರಾದ ದಿಶಾ ಅವರ ಸಾವಿನೊಂದಿಗೆ ಸಂಬಂಧವಿರಬೇಕು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

news18-kannada
Updated:August 25, 2020, 7:58 AM IST
SSR Death Case: ದಿಶಾ ಸಾಲಿಯನ್ ಸಾವಿನ ಬಳಿಕ ಆಕೆ ಮೊಬೈಲ್ 9 ದಿನಗಳ ಕಾಲ ಬಳಕೆಯಲ್ಲಿತ್ತು ಎಂದು ಹೇಳಿದ ವರದಿ
ಸುಶಾಂತ್‌ ಸಿಂಗ್ ಮಾಜಿ ಮ್ಯಾನೇಜರ್‌ ದಿಶಾ ಸಾಲಿಯಾನ್.
  • Share this:
ದಿಶಾ ಸಾಲಿಯನ್ ಅವರ ಸಾವಿನ ಪ್ರಕರಣದಲ್ಲಿ ಆಸಕ್ತಿಕರ ವಿಷಯವೊಂದು ಈಗ ವರದಿಯಾಗಿದೆ. ಆಕೆ ಸತ್ತ ನಂತರ ಒಂಭತ್ತು ದಿನಗಳ ಕಾಲ ಆಕೆಯ ಮೊಬೈಲ್ ಬಳಕೆಯಲ್ಲಿತ್ತು ಎಂಬ ಮಾಹಿತಿ ತಿಳಿದುಬಂದಿದೆ. ಆತ್ಮಹತ್ಯೆಗೆ ಮಾಡಿಕೊಂಡ ಎನ್ನಲಾದ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ಆಗಿದ್ದ ದಿಶಾ ಸಾಲಿಯನ್ ಜೂನ್ 8ರಂದು ಹೈರೈಸ್ ಅಪಾರ್ಟ್​ಮೆಂಟ್​ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.  ದಿಶಾ ಮೊಬೈಲ್ ಕೇವಲ ಸ್ವಿಚ್ಡ್​ ಆನ್​ ಅಷ್ಟೇ ಆಗಿಲ್ಲ. ಜೂನ್ 9 ಮತ್ತು ಜೂಣ್ 17ರಂದು ಆಕೆಯ ಮೊಬೈಲ್​ನಿಂದ ಇಂಟರ್​ನೆಟ್​ ಕಾಲ್​ ಕೂಡ ಮಾಡಲಾಗಿದೆ ಎಂದು ಜೀ ನ್ಯೂಸ್.ಇಂಡಿಯಾ.ಕಾಂ ವರದಿ ಮಾಡಿದೆ. ಪ್ರತ್ಯಕ್ಷದರ್ಶಿಯ ಪ್ರಕಾರ, ದಿಶಾ ಸತ್ತ ಸ್ಥಳಕ್ಕೆ ಮುಂಬೈ ಪೊಲೀಸರು ಶೀಘ್ರವಾಗಿ ತಲುಪಿದ್ದರೂ, ಅವರು ಆಕೆಯ ಫೋನ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಿಲ್ಲ ಎಂದು ವರದಿ ಹೇಳಿದೆ.

ಇದನ್ನು ಓದಿ: SP Balasubrahmanyam – ಎಸ್.ಪಿ. ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿರ: ಎಂಜಿಎಂ ಆಸ್ಪತ್ರೆ ಹೇಳಿಕೆ

ಟೈಮ್ಸ್​ಆಫ್​ಇಂಡಿಯಾ.ಕಾಮ್​ ವರದಿ ಪ್ರಕಾರ, ದಿಶಾ ಸಾವಿನ ಬಳಿಕ ಆಕೆಯ ಮೊಬೈಲ್ಅನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಗಾಗಿ ಆಕೆಯ ಮೊಬೈಲ್​ ಸ್ವಿಚ್ಡ್ ಆನ್​ ಮಾಡಿದ್ದಾರೆ ಎಂದು ಹೇಳಿದೆ. ಸುಶಾಂತ್ ಅವರ ಮಾಜಿ ವ್ಯವಸ್ಥಾಪಕರ ಫೋನ್‌ನ ಕಾಲ್ ಡೇಟಾ ದಾಖಲೆಗಳು ಆಕೆಯ ನಿಧನದ ನಂತರ ಒಂಬತ್ತು ದಿನಗಳವರೆಗೆ ಇಂಟರ್‌ನೆಟ್ ಬಳಸಲಾಗಿದೆಯೆಂದು ವರದಿಯಲ್ಲಿ ಹೇಳಲಾಗಿದೆ.

ಏತನ್ಮಧ್ಯೆ, ದಿಶಾ ಅವರ ಸಾವಿನಲ್ಲಿ ನಿಗೂಢತೆ ಇದೆ ಮತ್ತು ಅದು ಆತ್ಮಹತ್ಯೆಯಲ್ಲ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಜೂನ್ 14 ರಂದು ಸುಶಾಂತ್ ಸಿಂಗ್ ರಜಪೂತ್ ಅವರ ನಿಧನಕ್ಕೆ ಆರು ದಿನಗಳ ಮೊದಲು ನಿಧನರಾದ ಅವರ ಮಾಜಿ ವ್ಯವಸ್ಥಾಪಕರಾದ ದಿಶಾ ಅವರ ಸಾವಿನೊಂದಿಗೆ ಸಂಬಂಧವಿರಬೇಕು ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.
Published by: HR Ramesh
First published: August 25, 2020, 7:51 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories