• Home
  • »
  • News
  • »
  • entertainment
  • »
  • Disha Patani: 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ: ಅಭಿಮಾನಿಗಳು ಫುಲ್ ಇಂಪ್ರೆಸ್..!

Disha Patani: 80 ಕೆಜಿ ತೂಕ ಎತ್ತಿದ ನಟಿ ದಿಶಾ ಪಟಾನಿ: ಅಭಿಮಾನಿಗಳು ಫುಲ್ ಇಂಪ್ರೆಸ್..!

ನಟಿ ದಿಶಾ ಪಟಾನಿ

ನಟಿ ದಿಶಾ ಪಟಾನಿ

ದಿಶಾ ಪಟಾಣಿ ಸದಾ ತಮ್ಮ ಫಿಟ್ನೆಸ್​ ವಿಡಿಯೋಗಳಿಗೆ ಹೆಸರುವಾಸಿ. ಈಗಲೂ ಸಹ 80 ಕೆಜಿ ತೂಕ ಎತ್ತಿ ಅದರ ಜೊತೆಗೆ ಸ್ಕ್ವಾಟ್ಸ್​ ಮಾಡಿದ್ದಾರೆ. ನಟಿಯ ಈ ವಿಡಿಯೋ ಸಖತ್​ ವೈರಲ್​ ಆಗಿದ್ದು, ನೆಟ್ಟಿಗರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

  • Share this:

ಬಾಲಿವುಡ್‌ನಲ್ಲಿ ಫಿಟ್ ಆ್ಯಂಡ್ ಬ್ಯೂಟಿಫುಲ್ ಆಗಿರುವುದು ತುಂಬಾ ಮುಖ್ಯವಾಗುತ್ತೆ, ಅದರಲ್ಲೂ ಈಗಿನ ಬಹುತೇಕ ನಟ ನಟಿಯರು ಜಿಮ್​ನಲ್ಲಿ ಕಸರತ್ತು ಮಾಡುವ ವಿಡಿಯೋಗಳನ್ನು ತಮ್ಮ ಇನ್ಸ್ಟಾಗ್ರಾಂ‌ನಲ್ಲಿ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯವಾಗಿರುವಂತಹ ವಿಷಯವಾಗಿದ್ದು, ಈಗ ನಟಿಯರು ತಾವು ಯಾರಿಗಿಂತ ಕಮ್ಮಿಯಿಲ್ಲ ಎನ್ನುವ ರೀತಿಯಲ್ಲಿ ಜಿಮ್​ನಲ್ಲಿ ಕಸರತ್ತು ಮಾಡುತ್ತಿರುವುದನ್ನು ಇತ್ತೀಚಿನ ದಿನಗಳಲ್ಲಿ ನಾವು ನೋಡಬಹುದಾಗಿದೆ. ಬಾಲಿವುಡ್‌ನ ಅತ್ಯಂತ ಫಿಟ್ ಆಗಿರುವಂತಹವರಲ್ಲಿ ದಿಶಾ ಪಟಾನಿ ಸಹ ಒಬ್ಬರು ಎಂದರೆ ತಪ್ಪಾಗಲಾರದು. ಇತ್ತೀಚಿಗೆ ದಿಶಾ ತಾವು ಜಿಮ್‌ನಲ್ಲಿ ತಮ್ಮ ತರಬೇತುದಾರರ ಸಹಾಯದಿಂದ ಸುಮಾರು 80 ಕೆಜಿ ತೂಕವನ್ನು ಎತ್ತಿರುವಂತಹ ಸನ್ನಿವೇಶದ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದು, ಅದಕ್ಕೆ ಅಭಿಮಾನಿಗಳು ಫುಲ್ ಇಂಪ್ರೆಸ್ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಾವು ಶೇರ್ ಮಾಡಿಕೊಂಡ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ದಿಶಾ ಪಟಾಣಿ ತುಂಬಾ ಕಷ್ಟಕರವಾದಂತಹ ಕಸರತ್ತುಗಳನ್ನು ಜಿಮ್​ನಲ್ಲಿ ಮಾಡುತ್ತಿದ್ದು, ಈ ವಿಡಿಯೋವನ್ನು ಸಹ ಹಾಕಿ ಅದರ ಕೆಳಗೆ ಬಾರ್‌ಬೆಲ್‌ 80ಕೆಜಿ ತೂಕದ್ದು ಎಂದು ಬರೆದಿದ್ದಾರೆ.  ಈ ಸಲ ತೂಕದ ಬಾರ್‌ಬೆಲ್‌ ಅನ್ನು ಎತ್ತಲು ದಿಶಾ ಅವರಿಗೆ ಸಹಾಯ ಮಾಡುತ್ತಿದ್ದ ತರಬೇತುದಾರ ರಾಜೇಂದ್ರ ಧೊಲೆ ಮತ್ತು ದಿಶಾ ಪೂರ್ತಿಯಾಗಿ ಕಪ್ಪು ಬಣ್ಣದ ಜಿಮ್ ಡ್ರೆಸ್​ ಅನ್ನು ಧರಿಸಿದ್ದು, ತಮ್ಮ ಸೊಂಟದ ಭಾಗದಲ್ಲಿ ಯಾವುದೇ ಗಾಯಗಳು ಆಗಬಾರದೆಂದು ಬೆಲ್ಟ್ ಅನ್ನು ಧರಿಸಿದ್ದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.




80 ಕೆಜಿ ತೂಕ ಎತ್ತುವುದರೊಂದಿಗೆ ದಿಶಾ ಪಟಾಣಿ ಸ್ಕ್ವಾಟ್ಸ್​ ಸಹ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ದಿಶಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಆರು ಗಂಟೆಗಳು ಕಳೆದಿಲ್ಲ, ಆಗಲೇ ಸುಮಾರು ಒಂದು ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಗಳಿಸಿದೆ. ವಿಡಿಯೋದ ಶೀರ್ಷಿಕೆಯಲ್ಲಿ ತಮ್ಮ ಜಿಮ್ ತರಬೇತುದಾರ ರಾಜೇಂದ್ರ ಅವರಿಗೆ ಅಭಿನಂದನೆಗಳನ್ನು ದಿಶಾ ಹೇಳಿರುವುದು ಸಹ ಕಾಣಬಹುದು. ಇದೊಂದು ಥ್ರೋಬ್ಯಾಕ್​ ವಿಡಿಯೋ ಆಗಿದೆ.


ಇದನ್ನೂ ಓದಿ: Sanjjanaa Galrani: ಸಂಜನಾ ಗಲ್ರಾನಿ ಬೆನ್ನಿನ ಮೇಲೆ ಗಂಡ ಅಜೀಜ್ ಹೆಸರಿನ ಟ್ಯಾಟೂ: ವರ್ಷಗಳ ನಂತರ ರಿವೀಲ್​ ಮಾಡಿದ ನಟಿ..!


ಬಾಲಿವುಡ್​ನ ಮತ್ತೊಬ್ಬ ನಟ ಹಾಗೂ ದಿಶಾ ಅವರ ಬಾಯ್​ ಫ್ರೆಂಡ್​ ಎಂದು ಕರೆಯಲಾಗುವ ಟೈಗರ್ ಶ್ರಾಫ್ ಸಹ ಈ ವಿಡಿಯೋ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋ ನೋಡಿ ದಿಶಾ ಸಹೋದರಿ ಖುಷ್ಬೂ ಪಟಾನಿ ತಮ್ಮ ಸಹೋದರಿ ದಿಶಾರನ್ನು ಓ ದೇವರೇ.. ಪುರಾತನ ಕಾಲದ ಬಲಶಾಲಿ ಮಹಿಳೆ ಎಂದು ಪ್ರತಿಕ್ರಿಯಿಸಿದ್ದಾರೆ.   ಈ ವಿಡಿಯೋಗೆ ಟ್ರೈನರ್ ರಾಜೇಂದ್ರ ಸಹ ಪ್ರತಿಕ್ರಿಯಿಸಿದ್ದು ನೇರ ಮತ್ತು ಬಲಿಷ್ಠ ಎಂದು ಬರೆದಿದ್ದಾರೆ.


ಇದನ್ನೂ ಓದಿ: Bigg Boss 8 Kannada: ತಂದಿಟ್ಟು ತಮಾಷೆ ನೋಡುವ ಚಕ್ರವರ್ತಿಗೆ ಬಿಸಿ ಮುಟ್ಟಿಸಿದ ಪ್ರಶಾಂತ್ ಸಂಬರಗಿ: ಸುಳ್ಳು ಹೇಳಿ ಸಿಕ್ಕಿ ಬಿದ್ದ ಚಂದ್ರಚೂಡ


ದಿಶಾ ಅವರು ಮತ್ತೊಂದು ಅವರ ವಿಡಿಯೋ ಅನ್ನು ಅವರ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಅವರು ಕ್ಲೀನ್ ಆಗಿ ಮೇಲಿಂದ ಒಂದು ಬ್ಯಾಕ್ ಫ್ಲಿಪ್ ಹೊಡೆದಿರುವುದು ಕಾಣಬಹುದಾಗಿದೆ. ಈ ಇನ್​ಸ್ಟಾಗ್ರಾಂ ವಿಡಿಯೋವನ್ನು ಸುಮಾರು 14 ಮಿಲಿಯನ್ ಜನರು ನೋಡಿದ್ದು ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋಗೆ ದಿಶಾ ಅನೇಕ ಸ್ನೇಹಿತರು ಸಹ ಪ್ರತಿಕ್ರಿಯಿಸಿದ್ದು ಟೈಗರ್ ಶ್ರಾಫ್ ಕ್ಲೀನ್ ಎಂದು ಚುಟುಕಾಗಿ ಬರೆದು ತಮ್ಮ ಪ್ರತಿಕ್ರಿಯೆ ನೀಡಿದರೆ, ದಿಶಾ ಸಹೋದರಿ ಖುಷ್ಬೂ ಕ್ರೇಜಿ ದಿಶು.. ವಾವ್ ನನಗೂ ಕಲಿಸು ಎಂದು ಬರೆದಿದ್ದಾರೆ.

Published by:Anitha E
First published: