ನಟಿ ಆಗಬೇಕು ಅಂದುಕೊಂಡಿರಲಿಲ್ಲವಂತೆ Disha Patani.. ಮತ್ತೆ ಹಾಟ್​ ಬೆಡಗಿ ಕನಸ್ಸು ಏನಾಗಿತ್ತು?

ನಾನು ಮಾಡೆಲಿಂಗ್‌ನಲ್ಲಿ ಮುಂದುವರಿಯಲು ನಿರ್ಧರಿಸಿದೆ. ಅದು ನನಗೆ ಸ್ವತಂತ್ರವಾಗಿರಲು, ನನಗಾಗಿ ಸಂಪಾದಿಸಲು ಮತ್ತು ನನ್ನ ಕುಟುಂಬದ ಮೇಲೆ ಅವಲಂಬಿತವಾಗದೇ ಇರಲು ಸಹಾಯ ಮಾಡಿತು

ನಟಿ ದಿಶಾ ಪಾಟ್ನಿ

ನಟಿ ದಿಶಾ ಪಾಟ್ನಿ

  • Share this:
ಜೀವನದಲ್ಲಿ ಬಹುತೇಕರು (Most people) ತಮ್ಮದೇ ಆದ ಒಂದು ಗುರಿ, ಕನಸನ್ನು(Dreams) ಹೊಂದಿರುತ್ತಾರೆ. ನಾನು ಹೀಗೆ ಆಗಬೇಕು, ಇಂತಹ ಉದ್ಯೋಗದಲ್ಲಿರಬೇಕು ಎಂದು ಹೀಗೆ ಅನೇಕ ಕನಸುಗಳನ್ನು ಕಂಡಿರುತ್ತಾರೆ. ಕೇವಲ ಕೆಲವರಿಗೆ ಮಾತ್ರ ತಮ್ಮ ಗುರಿಯನ್ನು ಸಾಧಿಸಲು ಮತ್ತು ಅವರು ಕನಸು ಕಂಡ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಬಹುತೇಕರಂತೆ ಈ ಬಾಲಿವುಡ್ ನಟ ನಟಿಯರು( Bollywood actresses) ಸಹ ಯಾವುದೋ ಬೇರೆ ವೃತ್ತಿಗಳನ್ನು( Career ) ಆರಿಸಿಕೊಳ್ಳಲು ಹೋಗಿ ನಂತರ ಸಿನಿಮಾ (Cinema) ರಂಗಕ್ಕೆ ಬಂದವರು ಮತ್ತು ಕೆಲವರು ಸಿನಿಮಾದಲ್ಲಿಯೇ ಹೆಸರು ಮಾಡಬೇಕು ಎಂದು ಬಂದವರನ್ನು ಸಹ ನಾವು ನೋಡಬಹುದು.

ಚಿತ್ರೋದ್ಯಮ ಆಯ್ಕೆ ಕನಸು ಆಗಿರಲಿಲ್ಲವಂತೆ
ಬಾಲಿವುಡ್ ನಟಿ ದಿಶಾ ಪಾಟ್ನಿ ಸಹ ಒಂದು ಕನಸನ್ನು ಹೊಂದಿದ್ದರಂತೆ. ಆದರೆ ಈಗ ಅವರು ಸಿನಿಮಾ ರಂಗದಲ್ಲಿ ತಮ್ಮ ಸಿನಿ ಪ್ರಯಾಣ ಶುರು ಮಾಡಿರುವುದು ನಮಗೆಲ್ಲಾ ಗೊತ್ತಿರುವ ವಿಚಾರವೇ ಆಗಿದೆ. ಅವರು ಪ್ರಸ್ತುತವಾಗಿ ಕೆಲಸ ಮಾಡುತ್ತಿರುವ ಚಿತ್ರೋದ್ಯಮ ಆಯ್ಕೆ ಮಾಡಿಕೊಳ್ಳುವುದು ಎಂದಿಗೂ ತಮ್ಮ ಕನಸು ಆಗಿರಲಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: Disha Patani: ಬಿಕಿನಿಯಲ್ಲಿ ದಿಶಾ ಪಾಟ್ನಿ ಪೋಸ್​​.. ಇಂಟರ್​ನೆಟ್​ಗೆ ಬೆಂಕಿ ಬಿದ್ದಿದೆ ಕಾಪಾಡಿ ಎಂದ ನೆಟ್ಟಿಗರು!

ಪೈಲಟ್ ಆಗಲು ನಾನು ಬಯಸಿದ್ದೆ
ಈ ನಟಿ ನೀಡಿದ ಹೊಸ ಸಂದರ್ಶನವೊಂದರಲ್ಲಿ ಅವರು “ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಲು ನಾನು ಬಯಸಿದ್ದೆ” ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮುಂದುವರಿಸುವುದರಿಂದ ಹಿಡಿದು ಹೇಗೆ ಒಬ್ಬ ಮಾಡೆಲ್ ಆಗಲು ಹೋದೆ ಎಂದು ಇಲ್ಲಿ ಹೇಳಿಕೊಂಡಿದ್ದಾರೆ. ನಟಿ ದಿಶಾ ಪಟಾನಿ ವರುಣ್ ತೇಜ್ ಜೊತೆಗೆ ನಟಿಸಿರುವ ತೆಲುಗು ಚಲನಚಿತ್ರ ಲೋಫರ್‌ನೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ಎಂ. ಎಸ್. ಧೋನಿ: ದಿ ಅನ್ ಟೋಲ್ಡ್ ಸ್ಟೋರಿ ಚಿತ್ರದಲ್ಲಿ ನಟಿಸುವುದರ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

2013ರಲ್ಲಿ ವಿಜೇತಳಾದೆ
ಇವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ "ತಮಾಷೆಯೆಂದರೆ, ನಟಿಯಾಗುವುದು ನನ್ನ ಕನಸಾಗಿರಲಿಲ್ಲ. ನಾನು ವಾಯುಪಡೆಯಲ್ಲಿ ಪೈಲಟ್ ಆಗಲು ಬಯಸಿದ್ದೆ ಮತ್ತು ಎಂಜಿನಿಯರಿಂಗ್ ಓದುತ್ತಿದ್ದೆ. ಲಕ್ನೋ ಕಾಲೇಜಿನಲ್ಲಿದ್ದಾಗ ನನ್ನ ಸ್ನೇಹಿತರೊಬ್ಬರು ಮಾಡೆಲಿಂಗ್ ಸ್ಪರ್ಧೆಯ ಬಗ್ಗೆ ಹೇಳಿ ಇದರಲ್ಲಿ ವಿಜೇತರಾದವರನ್ನು ಮುಂಬೈಗೆ ಕರೆದೊಯ್ಯುತ್ತಾರೆ ಎಂದು ಹೇಳಿದರು. ಮುಂಬೈಗೆ ಹೋಗಲು ಯಾರು ಬಯಸಲ್ಲ ಹೇಳಿ? ನಾನು ಅರ್ಜಿ ಸಲ್ಲಿಸಿದೆ ಮತ್ತು 2013ರಲ್ಲಿ ವಿಜೇತಳಾದೆ" ಎಂದು ಹೇಳಿದರು.

ಮಾಡೆಲಿಂಗ್‌ನಲ್ಲಿ ಮುಂದುವರಿದೆ
"ಅಲ್ಲಿಂದ ನಾನು ಒಂದು ಏಜೆನ್ಸಿಯಿಂದ ಗುರುತಿಸಲ್ಪಟ್ಟೆ, ಆದರೆ ಮಾಡೆಲಿಂಗ್ ಮಾಡುವಾಗ ನನ್ನ ಕಾಲೇಜಿನ ಕನಿಷ್ಠ ಹಾಜರಾತಿ ಅಗತ್ಯ ಪೂರೈಸಲು ಸಾಧ್ಯವಾಗದ ಕಾರಣ ನಾನು ಮಾಡೆಲಿಂಗ್‌ನಲ್ಲಿ ಮುಂದುವರಿಯಲು ನಿರ್ಧರಿಸಿದೆ. ಅದು ನನಗೆ ಸ್ವತಂತ್ರವಾಗಿರಲು, ನನಗಾಗಿ ಸಂಪಾದಿಸಲು ಮತ್ತು ನನ್ನ ಕುಟುಂಬದ ಮೇಲೆ ಅವಲಂಬಿತವಾಗದೇ ಇರಲು ಸಹಾಯ ಮಾಡಿತು" ಎಂದು ಹೇಳಿದರು.

ಆತ್ಮವಿಶ್ವಾಸ ಇದೆ
ಬಾಲ್ಯದಲ್ಲಿ ನನಗೆ ಹೆಚ್ಚಿನ ಸ್ನೇಹಿತರಿರಲಿಲ್ಲ, ಏಕೆಂದರೆ ನಾನು ಯಾರ ಜೊತೆ ಮಾತನಾಡಲೂ ಸಹ ತುಂಬಾ ನಾಚಿಕೆ ಪಡುತ್ತಿದ್ದೆ. ನಾನು ಇನ್ನೂ ಹಾಗೆಯೇ ಇದ್ದೇನೆ, ಆದರೆ ತುಂಬಾ ಆತ್ಮವಿಶ್ವಾಸ ಇದೆ ನನಗೆ. ಚಲನಚಿತ್ರೋದ್ಯಮದಲ್ಲಿರುವವರು ಅಂತರ್ಮುಖಿಗಳಾಗಿರಬಹುದು ಎಂದು ಜನರು ಊಹಿಸುವುದು ಕಷ್ಟ. ಆದರೆ ನಟಿಯಾದರೆ ಎಲ್ಲಾ ಸಮಯದಲ್ಲೂ ಎಲ್ಲರ ಜೊತೆಯಲ್ಲಿ ಬೆರೆಯಬೇಕು ಎಂದರ್ಥವಲ್ಲ. ನೀವು ನೀವಾಗಿರುವುದು ಮತ್ತು ನಿಮಗೆ ಸೂಕ್ತ ಎನಿಸಿದ ರೀತಿಯಲ್ಲಿ ಬದುಕುವುದು ತುಂಬಾನೇ ಮುಖ್ಯವಾಗುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ: Disha Patani: ದಿಶಾ ಪಾಟ್ನಿ ಹೊಸ ಫೋಟೋ ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಂಡ ನೆಟ್ಟಿಗರು

ನಟಿ ದಿಶಾ ಇತ್ತೀಚೆಗೆ ಮುಂಬರುವ ಆ್ಯಕ್ಷನ್-ಡ್ರಾಮಾ ‘ಯೋಧಾ’ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿದರು. ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ದಿಶಾ ಏಕ್ತಾ ಕಪೂರ್ ಅವರ ಕೆಟಿನಾ ಮತ್ತು ‘ಏಕ್ ಖಳನಾಯಕ್ ರಿಟರ್ನ್ಸ್’ ಚಿತ್ರಗಳಲ್ಲಿ ಸಹ ನಟಿಸಲಿದ್ದಾರೆ.
Published by:vanithasanjevani vanithasanjevani
First published: