Bikini Photo: ಬಿಕಿನಿ ಫೋಟೋ ಹಂಚಿಕೊಂಡ ಸ್ಟಾರ್​ ನಟಿಯನ್ನು ದೇಶದಿಂದ ಹೊರ ಹಾಕಿ ಎಂದ ನೆಟ್ಟಿಗರು..!

Bikini Photo: ಸದಾ ಬೋಲ್ಡ್​ ಫೋಟೋಶೂಟ್​ಗಳಿಂದಲೇ ಸದ್ದು ಮಾಡುವ ನಟಿ ದಿಶಾ ಪಟಾಣಿ. ನಿತ್ಯ ಒಂದಿಲ್ಲೊಂದು ಬಿಕಿನಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅವರು ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.

Anitha E | news18-kannada
Updated:December 21, 2019, 12:17 PM IST
Bikini Photo: ಬಿಕಿನಿ ಫೋಟೋ ಹಂಚಿಕೊಂಡ ಸ್ಟಾರ್​ ನಟಿಯನ್ನು ದೇಶದಿಂದ ಹೊರ ಹಾಕಿ ಎಂದ ನೆಟ್ಟಿಗರು..!
ನಟಿ ದಿಶಾ ಪಟಾಣಿ ಸದಾ ತಮ್ಮ ಬೋಲ್ಡ್​ ಹಾಗೂ ಹಾಟ್​ ಫೋಟೋಶೂಟ್​ಗಳಿಂದಲೇ ಸಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುತ್ತಾರೆ.
  • Share this:
ಬಾಲಿವುಡ್​ ತಾರೆಯರಲ್ಲಿ ಸಾಕಷಟು ಮಂದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹಾಟ್​ ಹಾಗೂ ಬೋಲ್ಡ್​ ಚಿತ್ರಗಳನ್ನು ಹಂಚಿಕೊಳ್ಳುವುದು ಸಹಜ. ಹೀಗೆ ಹಂಚಿಕೊಂಡ ಚಿತ್ರಗಳಿಂದಲೇ ಅವರು ಟ್ರೋಲ್​ ಆಗುವುದು ಕಾಮನ್​. ನಟಿ ದಿಶಾ ಪಟಾಣಿ ಸಹ ಈಗ ತಮ್ಮ ಬಿಕಿನಿ ಫೋಟೋಯಿಂದಾಗಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸದಾ ಬೋಲ್ಡ್​ ಫೋಟೋಶೂಟ್​ಗಳಿಂದಲೇ ಸದ್ದು ಮಾಡುವ ನಟಿ ದಿಶಾ ಪಟಾಣಿ. ನಿತ್ಯ ಒಂದಿಲ್ಲೊಂದು ಬಿಕಿನಿ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈಗಲೂ ಸಹ ಅವರು ತಮ್ಮ ಲೆಟೆಸ್ಟ್​ ಫೋಟೋಶೂಟ್​ನ ಚಿತ್ರಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಕೋಪಕ್ಕೆ ಕಾರಣವಾಗಿದೆ.
 View this post on Instagram
 

🦋 #MYCALVINS @calvinklein


A post shared by disha patani (paatni) (@dishapatani) on


'ಭಾರತ್​' ಸಿನಿಮಾದಲ್ಲಿ ಸಲ್ಮಾನ್​ ಖಾನ್​ ಜತೆ ನಟಿಸಿದ ನಟಿ ದಿಶಾ ಪಟಾಣಿ ಬಿಕಿನಿ ಬ್ರ್ಯಾಂಡ್​ವೊಂದಕ್ಕೆ ರಾಯಭಾರಿಯಾಗಿದ್ದಾರೆ. ಅದರ ಫೋಟೋಶೂಟ್​ನ ಚಿತ್ರಗಳನ್ನು ಅವರು ಆಗಾಗ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅವರು ಬಿಕಿನಿ ತೊಟ್ಟಿರುವ ಚಿತ್ರವನ್ನು ಹಂಚಿಕೊಂಡಿದ್ದು, ಈಗ ಅದು ಟ್ರೋಲ್​ ಆಗುತ್ತಿದೆ.

Disha Patani bikini photos troll on Instagram angry reaction on social media over caa protest
ದಿಶಾ ಪಟಾಣಿ


ದಿಶಾ ಅವರ ಈ ಚಿತ್ರಕ್ಕೆ ಟೀಕೆಯ ರೂಪದಲ್ಲಿ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.  ದೇಶದಲ್ಲಿ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕುರಿತಾಗಿ ನಡೆಯುತ್ತಿರುವ ಪ್ರತಿಭಟನೆಗಳಿಂದಾಗಿ ದೇಶ ಸಮಸ್ಯೆಯಲ್ಲಿದೆ. ಆದರೆ ನೀವು ಮಾತ್ರ ಈ ಕೆಲಸ ಮಾಡುತ್ತಿದ್ದೀರಿ. ನಿಮ್ಮನ್ನ ಹೀಗೆ ನೋಡಿದ ನಂತರ ಈ ದೇಶದಿಂದ ಹೊರ ಹಾಕಬೇಕೆನಿಸುತ್ತಿದೆ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ದೇಶದಲ್ಲಿ ಇಷ್ಟು ಸಮಸ್ಯೆಗಳಿರುವಾಗ ನೀವು ಮಾಡಿರುವ ಕೆಲಸ ನೋಡಿ ಚಪ್ಪಾಳೆ ಹೊಡಿಬೇಕೆನಿಸುತ್ತಿದೆ ಎಂದು ಮತ್ತೊಬ್ಬರು ವ್ಯಂಗ್ಯ ಮಾಡಿದ್ದಾರೆ.

ಇದನ್ನೂ ಓದಿ: ಸರಿಲೇರು ನೀಕೆವ್ವರು ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದ ಮಹೇಶ್​ ಬಾಬು ಮಗಳು ಸಿತಾರಾ..!

'ಎಂಎಸ್​. ಧೋನಿ: ದ ಅನ್​ಟೋಲ್ಡ್​ ಸ್ಟೋರಿ' ಚಿತ್ರದ ಮೂಲಕ ಬಿ-ಟೌನ್​ಗೆ ಎಂಟ್ರಿಕೊಟ್ಟ ನಟಿ ದಿಶಾ. ಟೈಗರ್​ ಶ್ರಾಫ್​ ಜತೆ 'ಬಾಗಿ 2' ಹಾಗೂ ಸಲ್ಮಾನ್​ ಖಾನ್​ ಜತೆ 'ಭಾರತ್​' ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

Chandan Shetty - Niveditha Gowda Marriage: ಜೋರಾಗಿ ನಡೆದಿದೆ ಚಂದನ್​ ಶೆಟ್ಟಿ-ನಿವೇದಿತಾ ಗೌಡ ಮದುವೆ ತಯಾರಿ..!

Published by: Anitha E
First published: December 21, 2019, 12:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading