Disha - Tiger Shroff: ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​ ಸುದ್ದಿ, ಟೈಗರ್ ಶ್ರಾಫ್​ - ದಿಶಾ ಪಾಟ್ನಿ ಜೊತೆಗಿಲ್ವಾ?

Disha Patani and Tiger Shroff breakup: ಎಲ್ಲರಿಗೂ ಗೊತ್ತಿರುವಂತೆ ಟೈಗರ್​ ಶ್ರಾಫ್​ ಮತ್ತು ದಿಶಾ ಪಾಟ್ನಿ ಸುಮಾರು ವರ್ಷಗಳಿಂದ ಜೊತೆಯಿದ್ದರು. ಆದರೆ ಈಗ ಈ ಜೋಡಿ ಬೇರೆಯಾಗಿದೆ ಎನ್ನಲಾಗುತ್ತಿದೆ.

ದಿಶಾ ಪಟ್ನಿ,

ದಿಶಾ ಪಟ್ನಿ,

  • Share this:
ಬಾಲಿವುಡ್​ನಲ್ಲಿ  (bollywood) ಒಂದೆಡೆ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿದೆ, ಇನ್ನೊಂದೆಡೆ ಸ್ಟಾರ್ ಜೋಡಿಗಳು ಮದುವೆಯಾಗುತ್ತಿದ್ದಾರೆ. ಈ ಮಧ್ಯೆ ಕೆಲ ಜೋಡಿಗಳು ಬೇರೆಯಾಗುತ್ತಿರುವ ಬಗ್ಗೆ ಸಹ ಸುದ್ದಿಗಳು ಹರಿದಾಡುತ್ತಿದೆ. ನಿನ್ನೆಯಷ್ಟೇ ಶಮಿತಾ ಶೆಟ್ಟಿ (Shamita Shetty) ಹಾಗೂ ರಾಕೇಶ್​ ಬಾಪಟ್​ (Raqesh Bapat) ದೂರವಾಗುತ್ತಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರ ಬಂದಿತ್ತು. ಇದೀಗ ನಟಿ ದಿಶಾ ಪಾಟ್ನಿ (Disha Patani) ಹಾಗೂ ನಟ ಟೈಗರ್ ಶ್ರಾಫ್​ (Tiger Shroff)  ಬಗ್ಗೆ ಸಹ ಕೆಲ ವಿಚಾರಗಳು ಕೇಳಿ ಬಂದಿವೆ.

ದೂರಾದ ಜೋಡಿ ಹಕ್ಕಿಗಳು

ಎಲ್ಲರಿಗೂ ಗೊತ್ತಿರುವಂತೆ ಟೈಗರ್​ ಶ್ರಾಫ್​ ಹಾಗು ದಿಶಾ ಪಾಟ್ನಿ ಸುಮಾರು ವರ್ಷಗಳಿಂದ ಜೊತೆಯಿದ್ದರು. ಆದರೆ ಈಗ ಈ ಜೋಡಿ ಬೇರೆಯಾಗಿದೆ ಎನ್ನಲಾಗುತ್ತಿದೆ. ಹೌದು, ಕಳೆದ 6 ವರ್ಷದಿಂದ ಡೇಟಿಂಗ್ ಮಾಡುತ್ತಿದ್ದ ಈ ಸ್ಟಾರ್ ಜೋಡಿ ಈ ವರ್ಷದ ಆರಂಭದಲ್ಲಿಯೇ ದೂರಾಗಿದ್ದಾರೆ ಎನ್ನುವ ಮಾಹಿತಿ ಇದೆ. ದಿಶಾ ಹಾಗೂ ಟೈಗರ್ ಈಗ ಜೊತೆಗಿಲ್ಲ ಇಬ್ಬರು ಸದ್ಯಕ್ಕೆ ಸಿಂಗಲ್ ಎನ್ನುವ ಸುದ್ದಿ ಹರಿದಾಡುತ್ತಿದೆ.

ಹಿಂದೂಸ್ತಾನ್ ಟೈಮ್ಸ್ ಪ್ರಕಾರ, ಇಬ್ಬರ ನಡುವೆ ಏನಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇಬ್ಬರು ಒಟ್ಟಿಗೆ. ಕಳೆದ ಒಂದು ವರ್ಷದಿಂದ ಅವರ ಸಂಬಂಧದಲ್ಲಿ ಹಲವಾರು ವ್ಯತ್ಯಾಸಗಳಾಗಿದೆ. ಇನ್ನು ಟೈಗರ್‌ ಸ್ನೇಹಿತರೊಬ್ಬರು ಅವರಿಬ್ಬರು ದೂರಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ವಿಚಾರ ಅವರ ಸ್ನೇಹಿತರಿಗೆ ತಿಳಿದು ಬಂದಿದ್ದು,  ಈ ಬಗ್ಗೆ ಟೈಗರ್ ಶ್ರಾಫ್​ ತನ್ನ ಸ್ನೆಹಿತರ ಬಳಿ ಹೆಚ್ಚು ಮಾತನಾಡಿಲ್ಲ ಎಂದು ತಿಳಿಸಿದ್ದಾರೆ. ಟೈಗರ್ ಪ್ರಸ್ತುತ ತನ್ನ ಕೆಲಸದ ಮೇಲೆ ಗಮನಹರಿಸಿದ್ದು, ಈ ಬ್ರೇಕಪ್ ಅವರ ಕೆಲಸದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ವಿಕ್ರಾಂತ್ ರೋಣ ಸಿನಿಮಾ ಯಶಸ್ಸಿಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ, ವಿರೇಶ್​ ಚಿತ್ರಮಂದಿರದವರೆಗೆ ಮೆರವಣಿಗೆ

ಅವರ ಬ್ರೇಕಪ್ ವರದಿಯ ಮಧ್ಯೆ ಸಹ, ಟೈಗರ್ ಮತ್ತು ದಿಶಾ ತಮ್ಮ ತಮ್ಮ ಚಿತ್ರಗಳಿಗಾಗಿ Instagram ನಲ್ಲಿ ಪರಸ್ಪರ ವಿಶ್ ಮಾಡಿಕೊಳ್ಳುತ್ತಿದ್ದಾರೆ. ದಿಶಾ ಅವರು ತಮ್ಮ ಮುಂಬರುವ ಚಿತ್ರ 'ಏಕ್ ವಿಲನ್ ರಿಟರ್ನ್ಸ್' ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಹಾಗೆಯೆ ಟೈಗರ್ ಸೋಮವಾರ ತಮ್ಮ ಹೊಸ ಚಿತ್ರ 'ಸ್ಕ್ರೂ ಧೀಲಾ' ಅನ್ನು ಘೋಷಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಪರಸ್ಪರ ವಿಶ್ ಮಾಡಿಕೊಂಡಿದ್ದಾರೆ. ವರದಿಯ ಪ್ರಕಾರ, ಇವರಿಬ್ಬರು ಸ್ನೇಹಿತರಾಗಿ ಮುಂದುವರೆದಿದ್ದಾರೆ.

ಸಿನಿಮಾದಲ್ಲಿ ಇಬ್ಬರೂ ಬ್ಯುಸಿ

ಈ ನಡುವೆ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇರುವ ನಟಿ ಹೇಳುವ ಮಾತುಗಳು ಅಭಿಮಾನಿಗಳನ್ನು ಗೊಂದಲಕ್ಕೀಡು ಮಾಡಿದೆ. ಇತ್ತೀಚೆಗೆ, ರ್ಯಾಪಿಡ್-ಫೈರ್ ರೌಂಡ್‌ನಲ್ಲಿ, ದಿಶಾ ಇತರ ನಟರಲ್ಲಿ ಟೈಗರ್ ಅನ್ನು ಆಯ್ಕೆ ಮಾಡಿದ್ದಾರೆ ಟೈಗರ್, ಜಾನ್ ಅಬ್ರಹಾಂ ಮತ್ತು ಅರ್ಜುನ್ ಕಪೂರ್ ಅವರು ಮಿಸ್ಟರ್ ಯೂನಿವರ್ಸ್ 2022 ರಲ್ಲಿ ಸ್ಪರ್ಧಿಸಿದರೆ ಯಾರೂ ಗೆಲ್ಲಬಹುದು ಎಂದು ದಿಶಾ ಅವರನ್ನು ಕೇಳಿದಾಗ ನಟಿ ಟೈಗರ್ ಶ್ರಾಫ್ ಅವರ ಹೆಸರನ್ನು ಹೇಳಿದ್ದಾರೆ. ನನಗೆ ವೈಯಕ್ತಿಕವಾಗಿ ಅವರೇ ಬೆಸ್ಟ್​ ಎಂದಿದ್ದಾರೆ. ಮತ್ತೊಂದು ಸಂದರ್ಶನದಲ್ಲಿ, ದಿಶಾ ಟೈಗರ್ ಅನ್ನು ಹೊಗಳಿದ್ದಾರೆ. ನಾನು ಅವರಿಂದ ಶಿಸ್ತು ಕಲಿತಿದ್ದೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯಾರ ಬಳಿಯೂ ಇರದ ಕಾರ್ ಈಕೆ ಹತ್ರ ಇದೆ! ಈ ದುಡ್ಡಲ್ಲಿ ದೊಡ್ಡ ಬಂಗಲೆ ಕಟ್ಬಹುದಿತ್ತು

ಒಟ್ಟಾರೆಯಾಗಿ ಸದ್ಯ ಈಗ ಹರಿದಾಡುತ್ತಿರುವ ಅವರ ಬ್ರೇಕಪ್ ಸುದ್ದಿ ಎಷ್ಟು ಸತ್ಯ ಎಂಬುದು ಇನ್ನೂ ಗೊತ್ತಿಲ್ಲ. ಈ ಬಗ್ಗೆ ದಿಶಾ ಹಾಗೂ ಟೈಗರ್ ಅಧಿಕೃತವಾಗಿ ಹೇಳಬೇಕಿದೆ. ಈ ಜೋಡಿ ಎಂದರೆ ಅಭಿಮಾನಿಗಳಿಗೆ ಬಹಳ ಇಷ್ಟ. ಇವರು ದೂರವಾಗುತ್ತಿರುವುದು ನಿಜವಾದರೆ, ಅಭಿಮಾನಿಗಳಿಗೆ ಖಂಡಿತ ಬೇಸರವಾಗುತ್ತದೆ.
Published by:Sandhya M
First published: