Yogaraj Bhat: ಮತ್ತೊಂದು ಸಿನಿಮಾ ನಿರ್ಮಾಣ ಮಾಡ್ತಾರಂತೆ ಯೋಗರಾಜ್​ ಭಟ್​, ಅಕ್ಟೋಬರ್​ನಲ್ಲಿ ಸೆಟ್ಟೇರಲಿದೆ ಚಿತ್ರ

Sandalwood: ಈ ಪದವಿಪೂರ್ವ ಸಿನಿಮಾವನ್ನು ಭಟ್ಟರ ತಂಡದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.  ಈ ಪದವಿಪೂರ್ವ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

ಯೋಗರಾಜ್ ಭಟ್

ಯೋಗರಾಜ್ ಭಟ್

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಒಂದರ ನಂತರ ಒಂದು ಸಿನಿಮಾಗಳು ಸೆಟ್ಟೇರುತ್ತಿದೆ. ಒಂದು ಸಿನಿಮಾ  (Film) ಬಿಡುಗಡೆಯಾಗುತ್ತಿದ್ದಂತೆ ಮತ್ತೊಂದು ಸಿನಿಮಾ ರೆಡಿಯಾಗುತ್ತಿದೆ. ಕೊರೊನಾ (Corona) ನಂತರ ಸ್ಯಾಂಡಲ್​ವುಡ್​ ಚೇತರಿಸಿಕೊಳ್ಳುತ್ತಿದೆ. ಈಗ ನಿರ್ದೇಶಕ ಯೋಗರಾಜ್​ ಭಟ್​ (Yogaraj Bhatt) ಕೂಡ ಸಾಲು ಸಾಲು ಸಿನಿಮಾ ಮಾಡುತ್ತಿದ್ದಾರೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ ಶಾಮನೂರ್ ಫಿಲಂಸ್‌ ಜಂಟಿಯಾಗಿ ನಿರ್ಮಿಸುತ್ತಿರುವ ಪದವಿಪೂರ್ವ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಒಂದು ಸಿನಿಮಾ ಬಿಡುಗಡೆಯಾಗುವ ಮುನ್ನವೇ, ಇದೇ ತಂಡ ಮತ್ತೊಂದು ಸಿನಿಮಾದ ಸಜ್ಜಾಗುತ್ತಿದೆ.

ಅಕ್ಟೋಬರ್​ನಲ್ಲಿ ಹೊಸ ಸಿನಿಮಾ

ಈ ಪದವಿಪೂರ್ವ ಸಿನಿಮಾವನ್ನು ಭಟ್ಟರ ತಂಡದ ಹರಿಪ್ರಸಾದ್ ಜಯಣ್ಣ ನಿರ್ದೇಶಿಸಿದ್ದು, ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.  ಈ ಪದವಿಪೂರ್ವ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇದೇ ನಿರ್ಮಾಣ ಸಂಸ್ಥೆ ಹಾಗೂ ಇದೇ ನಿರ್ದೇಶಕರು ಸೇರಿ ಮತ್ತೊಂದು ಚಿತ್ರ ಆರಂಭಿಸಿದ್ದು, ಹೊಸ ಚಿತ್ರವನ್ನು ಅನೌನ್ಸ್ ಮಾಡಿದೆ. ಮಾಹಿತಿ ಪ್ರಕಾರ, ಈ ಪದವಿಪೂರ್ವ ಸಿನಿಮಾವನ್ನು ಪೋಸ್ಟ್ ಪ್ರೊಡಕ್ಷನ್ ಮಾಡುವಾಗ ಯೋಗರಾಜ್​ ಭಟ್ಟರು ನೋಡಿದ್ದು, ನಿರ್ದೇಶಕ ಹರಿಪ್ರಸಾದ್ ಜಯಣ್ಣ ಅವರ ಕೆಲಸವನ್ನು ಮೆಚ್ಚಿದ್ದು, ಅವರ ಜೊತೆ ಮತ್ತೊಂದು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಚಾರ್ಲಿ ಸಿನಿಮಾ ನೋಡಿದ್ರಾ ರಶ್ಮಿಕಾ? ಕಿರಿಕ್ ಬ್ಯೂಟಿಗೆ ಅಭಿಮಾನಿಗಳು ಈ ಪ್ರಶ್ನೆ ಕೇಳಿದ್ದೇಕೆ?

ಹೌದು, ಹರಿಪ್ರಸಾದ್ ಜಯಣ್ಣ ಅವರ ನಿರ್ದೇಶನದ ಮತ್ತೊಂದು ಸಿನಿಮಾವನ್ನು ಯೋಗರಾಜ್ ಭಟ್​ ನಿರ್ಮಾಣ ಮಾಡುತ್ತಿದ್ದಾರೆ.  ಇನ್ನು ಪದವಿಪೂರ್ವ ಸಿನಿಮಾದ ಮತ್ತೊಬ್ಬ ನಿರ್ಮಾಪಕರಾದ ರವಿ ಶಾಮನೂರ್ ಅವರೂ ಸಹ ಭಟ್ಟರ ನಿರ್ಮಾಣ ಸಂಸ್ಥೆಯ ಜೊತೆ ಈ ಹೊಸ ಸಿನಿಮಾಗೆ ಕೈ ಜೋಡಿಸಿದ್ದು, ಮತ್ತೊಂದು ಸಿನಿಮಾ ಮಾಡಲು ಈ ತಂಡ ಸಜ್ಜಾಗಿದೆ. ಮಾಹಿತಿ ಪ್ರಕಾರ ಈ ಹೊಸ ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ಸೆಟ್ಟೇರಲಿದೆ. ಅಲ್ಲದೇ ಈ ಸಿನಿಮಾದಲ್ಲಿ ಪದವಿಪೂರ್ವ ಸಿನಿಮಾದ ತಂಡವೇ ಇರಲಿದ್ದು,  ಪದವಿಪೂರ್ವ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದ ನಟ ಪೃಥ್ವಿ ಶಾಮನೂರ್ ಅವರೇ ನಾಯಕನಾಗಿ ಅಭಿನಯಿಸಲಿದ್ದಾರೆ.

ಈ ಪೃಥ್ವಿ ನಾಯಕನಾಗಿ ಇದು ಎರಡನೇ ಸಿನಿಮಾವಾಗಿದ್ದು, ಯೋಗರಾಜ್​ ಭಟ್ಟರ ಗರಡಿ ಸಿನಿಮಾದಲ್ಲಿ ಸಹ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಭಟ್ಟರ ತಂಡದಲ್ಲಿ ಪದೇ ಪದೇ ಅವಕಾಶ ಪಡೆಯುವುದು ಅಷ್ಟು ಸುಲಭವಲ್ಲ. ಆದರೆ ತನ್ನ ಪ್ರತಿಭೆ ಹಾಗೂ ನಟನೆಯ ಮೂಲಕ ಭಟ್ಟರ ಮನ ಗೆದ್ದಿರುವ ನಟ, ಸ್ಯಾಂಡಲ್​ವುಡ್​ನಲ್ಲಿ ಅದ್ಭುತ ನಟನಾಗಿ ಹೊರ ಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಪ್ರತಿಭೆಗಳಿಗೆ ಹುಡುಕಾಟ

ಅಲ್ಲದೇ, ಈ ಹೊಸ ಸಿನಿಮಾಗಾಗಿ ಹೊಸ ಪ್ರತಿಭೆಗಳನ್ನು ಸಹ ಚಿತ್ರತಂಡ ಹುಡುಕುತ್ತಿದ್ದು, ಆಡಿಷನ್ ಮೂಲಕ ಅಪ್ಪಟ್ಟ ದೇಸಿ ಪ್ರತಿಭೆಗೆ ಅವಕಾಶ ನೀಡಲಾಗುತ್ತದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ತಾಂತ್ರಿಕ ವರ್ಗದ ವಿಚಾರಕ್ಕೆ  ಬಂದರೆ ಈ ಬಾರಿ ಕೂಡ ಪದವಿಪೂರ್ವ ಚಿತ್ರದ ತಾಂತ್ರಿಕ ವರ್ಗವೇ ಕೆಲಸ ಮಾಡಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್ ತಮ್ಮ ಗರಡಿ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದು, ಈ ಚಿತ್ರ ಕೂಡ ಈ ವರ್ಷ ಬಿಡುಗಡೆಯಾಗಲಿದೆ. ಈಗಾಗಲೇ ಈ ಚಿತ್ರದ ಮುಕ್ಕಾಲು ಭಾಗ ಶೂಟಿಂಗ್ ಮುಗಿದಿದ್ದು, ಟೈಟಲ್ ಸಾಂಗ್ ಚಿತ್ರೀಕರಣ ಸಹ ಆಗಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಇದನ್ನೂ ಓದಿ: ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ, ಶ್ರೀವಲ್ಲಿ ಅಭಿಮಾನಿಗಳಿಗೆ ಬೇಸರ

ಗರಡಿ ಚಿತ್ರದಲ್ಲಿ ಹಲವಾರು ವಿಶೇಷತೆಗಳಿದ್ದು, ‘ಕೌರವ’ ಖ್ಯಾತಿಯ, ಸಚಿವ ಬಿ.ಸಿ.ಪಾಟೀಲ್ಅವರು ಅಭಿನಯಿಸುತ್ತಿರುವುದು ಇನ್ನೊಂದು ವಿಶೇಷ. ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಕುಸ್ತಿ ಅಖಾಡದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಗರಡಿ ಚಿತ್ರದಲ್ಲಿ ಸೂರಿ ಪಾತ್ರ ನಿರ್ವಹಿಸುತ್ತಿರುವ ಶಿಶಿರ, ಚಿಂಗಾರಿ, ಕುರುಕ್ಷೇತ್ರ, ಒಡೆಯ ಸಿನಿಮಾದ ಖ್ಯಾತಿಯ ನಟ ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
Published by:Sandhya M
First published: