Vivek Agnihotri: ಶಾರುಖ್, ಸಲ್ಮಾನ್ ವಿರುದ್ಧ ಕಿಡಿಕಾರಿದ ವಿವೇಕ್ ಅಗ್ನಿಹೋತ್ರಿ! ಕಾಶ್ಮೀರ್ ಫೈಲ್ಸ್ ನಿರ್ದೇಶಕನ ಕೋಪಕ್ಕೆ ಕಾರಣವೇನು?

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರು ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್‌ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಹೆಸರನ್ನು ಉಲ್ಲೇಖಿಸದೇ ಪರೋಕ್ಷವಾಗಿ ಟ್ವಿಟರ್‌ನಲ್ಲಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ನಿರ್ದೇಶಕ ಇವರಿಬ್ಬರು ನಟರ ಬಗ್ಗೆ ಏನಂತ ಹೇಳಿದ್ದಾರೆ ಓದಿ...

ನಟ ಶಾರುಖ್ ಮತ್ತು ಸಲ್ಮಾನ್ ವಿರುದ್ಧ ಕಿಡಿಕಾರಿದ ವಿವೇಕ್ ಅಗ್ನಿಹೋತ್ರಿ

ನಟ ಶಾರುಖ್ ಮತ್ತು ಸಲ್ಮಾನ್ ವಿರುದ್ಧ ಕಿಡಿಕಾರಿದ ವಿವೇಕ್ ಅಗ್ನಿಹೋತ್ರಿ

  • Share this:
ಸಾಮಾನ್ಯವಾಗಿ ಯಾವುದೇ ರಾಜ್ಯದ ಚಲನಚಿತ್ರೋದ್ಯಮದಲ್ಲಿ ಒಬ್ಬರ ಬಗ್ಗೆ ಇನ್ನೊಬ್ಬರು ಮಾತಾಡುವುದು, ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಟೀಕಿಸುವುದು ಎಲ್ಲವೂ ನಡೆಯುತ್ತಿರುವುದನ್ನು ನಾವು ನೋಡುತ್ತೇವೆ. ಬಾಲಿವುಡ್ ನಲ್ಲಿಯೂ (Bollywood) ಸುಮಾರು ವರ್ಷಗಳಿಂದ ಇದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಆದರೆ ಯಾರೂ ಈ ಬಾಲಿವುಡ್ ನಲ್ಲಿ ಬಾದ್ ಶಾ (BadShah) ಅಂತಲೇ ಖ್ಯಾತಿ ಪಡೆದಿರುವಂತಹ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಬಗ್ಗೆ ಮಾತಾಡಿರುವುದನ್ನು ನಾವು ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ. ಆದರೆ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಒಬ್ಬ ನಿರ್ದೇಶಕ (Director) ಇವರ ಬಗ್ಗೆ ಎಲ್ಲಿಯೂ ಇವರ ಹೆಸರುಗಳನ್ನು ಉಲ್ಲೇಖಿಸದೆ ಪರೋಕ್ಷವಾಗಿ ಮಾತಾಡಿದ್ದಾರೆ ನೋಡಿ.

ನಿರ್ದೇಶಕ ಇಬ್ಬರು ನಟರ ಬಗ್ಗೆ ಏನು ಹೇಳಿದ್ದಾರೆ ನೋಡಿ 
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ನಿರ್ದೇಶಕರಾದ ವಿವೇಕ್ ಅಗ್ನಿಹೋತ್ರಿ ಅವರೇ ಇತ್ತೀಚೆಗೆ ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಅವರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ಟ್ವಿಟ್ಟರ್ ನಲ್ಲಿ ಅವರನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ. ಈ ನಿರ್ದೇಶಕ ಇವರಿಬ್ಬರು ನಟರ ಬಗ್ಗೆ ಏನಂತ ಹೇಳಿದ್ದಾರೆ ನೋಡಿ.

ಇದನ್ನೂ ಓದಿ:  Puneeth Rajkumar: ಪುನೀತ್ ರಾಜ್​ಕುಮಾರ್ ಖಾತೆಗೆ ಮರಳಿದ ನೀಲಿ ಟಿಕ್, ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಟ್ವಿಟರ್!

ಶಾರುಖ್ ಖಾನ್ ಇನ್ನೂ 'ಬಾಲಿವುಡ್ ನ ಬಾದ್ ಷಾ' ಎಂಬ ಶೀರ್ಷಿಕೆಯ ಲೇಖನಕ್ಕೆ ಪ್ರತಿಕ್ರಿಯಿಸಿದ ಅವರು, 'ಎಲ್ಲಿಯವರೆಗೆ ಬಾಲಿವುಡ್ ನಲ್ಲಿ ಖಾನ್ ಗಳು, ಬಾದ್ ಷಾ ಗಳು, ಸುಲ್ತಾನರು ಇದ್ದಾರೆಯೋ ಅಲ್ಲಿಯವರೆಗೆ ಅದು ಬಾಲಿವುಡ್ ಎನ್ನುವುದು ಮುಳುಗುತ್ತಲೇ ಇರುತ್ತದೆ. ಜನರ ಕಥೆಗಳೊಂದಿಗೆ ಅದನ್ನು ಜನರ ಚಲನಚಿತ್ರೋದ್ಯಮವಾಗಿ ಮಾಡಿ, ಇದು ಒಂದು ಜಾಗತಿಕ ಚಲನಚಿತ್ರೋದ್ಯಮವಾಗಿ ಮುನ್ನಡೆಯಲಿ' ಅಂತ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಯನ್ನು ಹಾಕಿಕೊಂಡಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್'ಸಿನೆಮಾದ ಬಳಿಕ ಬಾರಿ ಸುದ್ದಿಯಲ್ಲಿರುವ ಅಗ್ನಿಹೋತ್ರಿ
ಅಗ್ನಿಹೋತ್ರಿ ಅವರ ಕೊನೆಯ ಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಬಿಡುಗಡೆಯಾದಾಗಿನಿಂದ ಹಿಂದೆಂದಿಗಿಂತಲೂ ಹೆಚ್ಚು ಸುದ್ದಿಯಲ್ಲಿದ್ದಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಚಲನಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಸಮಾನವಾಗಿ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು.

ಇದು ಗಲ್ಲಾಪೆಟ್ಟಿಗೆಯಲ್ಲಿ ಮಾತ್ರ ದಾಖಲೆಯ ಗಳಿಕೆಯನ್ನು ಸಹ ಮಾಡಿತು. 'ದಿ ಕಾಶ್ಮೀರ್ ಫೈಲ್ಸ್' ಚಿತ್ರದಲ್ಲಿ ಬಾಲಿವುಡ್ ನ ಹಿರಿಯ ನಟರಾದ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ, ನಟಿ ಪಲ್ಲವಿ ಜೋಶಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರ ಈ ವರ್ಷದ ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಿತ್ತು ಮತ್ತು ದೊಡ್ಡ ಬ್ಲಾಕ್ ಬಸ್ಟರ್ ಗಳಲ್ಲಿ ಒಂದಾಗಿ ಹೊರ ಹೊಮ್ಮಿತು. ಇದು 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಪಲಾಯನವನ್ನು ವಿವರಿಸಿದೆ. 'ದಿ ಕಾಶ್ಮೀರ್ ಫೈಲ್ಸ್' ಚಿತ್ರ ತನ್ನ ಪ್ರದರ್ಶನದ ಕೊನೆಯಲ್ಲಿ ಸುಮಾರು 246 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಇದನ್ನೂ ಓದಿ:   Ponniyin Selvan: 'ಪೊನ್ನಿಯಿನ್ ಸೆಲ್ವನ್' ಚಿತ್ರಕ್ಕೂ ಎದುರಾಯ್ತು ಸಂಕಷ್ಟ, ನೋಟಿಸ್ ಜಾರಿ ಮಾಡಿದ ಕೋರ್ಟ್

ಈ ಹಿಂದೆ ವಿವೇಕ್ ಅವರು 'ದಿ ಕಾಶ್ಮೀರ್ ಫೈಲ್ಸ್' ನಲ್ಲಿ ಕೆಲಸ ಮಾಡುವಾಗ ಹಾಗೆಯೇ ನಿರ್ಲಕ್ಷಿಸಿದ ಮೊಣಕಾಲಿನ ನೋವನ್ನು ಬಹಿರಂಗಪಡಿಸಿ ಟ್ವಿಟ್ಟರ್ ನಲ್ಲಿ ಒಂದು ಟಿಪ್ಪಣಿ ಬರೆದಿದ್ದರು. ಮೊಣಕಾಲಿನ ನೋವು ತನಗೆ ತುಂಬಾನೇ ಒತ್ತಡವನ್ನು ಸಹ ನೀಡಿದೆ ಮತ್ತು ಅಂತಿಮವಾಗಿ ಅವರು ತಮ್ಮ ಗಾಯಕ್ಕೆ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ ಎಂದು ಚಲನಚಿತ್ರ ನಿರ್ಮಾಪಕರು ಬಹಿರಂಗಪಡಿಸಿದ್ದರು.

'ದಿ ಕಾಶ್ಮೀರ್ ಫೈಲ್ಸ್' ಬಳಿಕ 'ದೆಹಲಿ ಫೈಲ್ಸ್' ಸಿನೆಮಾ 
ಇವರು ಡಿಸೆಂಬರ್ 24, 2021 ದಿನದಂದು ಜಾರಿ ಬಿದ್ದು ಮೊಣಕಾಲಿಗೆ ಒಳಪೆಟ್ಟು ಆಗಿತ್ತು. ವೈದ್ಯರು ಇವರಿಗೆ 6 ರಿಂದ 8 ವಾರಗಳವರೆಗೆ ವಿಶ್ರಾಂತಿ ಪಡೆಯಲು ಹೇಳಿದ್ದರಂತೆ. ಆದರೆ ವಿವೇಕ್ ಮಾತ್ರ ತಮ್ಮ ಚಿತ್ರದ ಚಿತ್ರೀಕರಣದಲ್ಲಿ ಒಂದು ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಕುಂಟುತ್ತಲೇ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತಿದೆ. ಇನ್ನೂ ಕೆಲಸದ ವಿಷಯಕ್ಕೆ ಬಂದರೆ ಈ ನಿರ್ದೇಶಕರು 'ದೆಹಲಿ ಫೈಲ್ಸ್' ಚಿತ್ರವನ್ನು ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.
Published by:Ashwini Prabhu
First published: