ಕನ್ನಡದ ಬ್ಲಾಕ್ಬಸ್ಟರ್ ಸಿನಿಮಾ ಕಾಂತಾರ (Kantara) ಅದ್ಬುತ ಯಸ್ಸಿನೊಂದಿಗೆ ಮುನ್ನುಗುತ್ತಿದ್ದು, ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ (Rishab Shetty) ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ಸದ್ಯ ಬಾಹುಬಲಿ, ಆರ್ಆರ್ಆರ್ ನಂತ ಸಿನಿಮಾಗಳನ್ನು ನೀಡಿರುವ ಟಾಲಿವುಡ್ ಸ್ಟಾರ್ ನಿರ್ದೇಶಕ ಎಸ್ಎಸ್ ರಾಜಮೌಳಿ (SS Rajamouli) ಕೂಡ ಮಾತನಾಡಿದ್ದು, ಬ್ಲಾಕ್ಬಸ್ಟರ್ ಸಿನಿಮಾಗಳನ್ನು (Blockbuster Movie) ನೀಡಲು ಬಿಗ್ ಬಜೆಟ್ ಅಗತ್ಯವಿಲ್ಲ ಎಂಬುವುದನ್ನು ಕಾಂತಾರ ಸಿನಿಮಾ ನಮಗೆ ತೋರಿಸಿಕೊಟ್ಟಿದೆ ಎಂದಿದ್ದಾರೆ.
ಕಾಂತಾರ ನಮ್ಮನ್ನು ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿದೆ
ಕಾಂತಾರ ಸಿನಿಮಾ ಕುರಿತಂತೆ ಸಂದರ್ಶನವೊಂದರಲ್ಲಿ ರಾಜಮೌಳಿ ಮಾತನಾಡಿದ್ದು, ಬಿಗ್ ಬಜೆಟ್ ಸಿನಿಮಾಗಳ ನಡುವೆ ಏಕಾಏಕಿ ಮುನ್ನುಗ್ಗಿ ಬಂದ ಕಾಂತಾರ ಸಿನಿಮಾ ಉತ್ತಮ ನಂಬರ್ಗಳನ್ನು ಪಡೆದುಕೊಳ್ತು. ಇದು ದೊಡ್ಡ ನಂಬರ್ಗಳನ್ನು ಗಳಿಸಲು ಬಿಗ್ ಸ್ಕೇಲ್ ಸಿನಿಮಾಗಳ ಅಗತ್ಯವಿಲ್ಲ.
ಕಾಂತಾರದಂತಹ ಸಣ್ಣ ಸಿನಿಮಾ ಕೂಡ ಬಿಗ್ ನಂಬರ್ ಮಾಡಬಹುದು ಅಂತ ತೋರಿಸಿಕೊಟ್ಟಿತ್ತು. ಕಾಂತಾರ ಸಿನಿಮಾ ನೋಡಿದ ವೀಕ್ಷಕರು ಉತ್ಸಾಹಗೊಂಡರು. ಆದರೆ ಸಿನಿಮಾ ಮೇಕರ್ಸ್, ನಾವು ಏನು ಮಾಡುತ್ತಿದ್ದೇವೆ ಎಂಬುವುದನ್ನು ಒಮ್ಮೆ ಹಿಂದಿರುಗಿ ನೋಡುವಂತೆ ಮಾಡಿತು ಎಂದು ರಾಜಮೌಳಿ ಹೇಳಿದ್ದಾರೆ.
ಇದನ್ನೂ ಓದಿ: Prabhas-Rishab Shetty: ವಿಶ್ ಮಾಡೋಕೆ ಕಾಲ್ ಮಾಡಿದ್ರೆ ಇಂಟ್ರೆಸ್ಟ್ ತೋರಿಸ್ಲಿಲ್ಲ ಪ್ರಭಾಸ್! ರಿಷಬ್ ಏನಂದ್ರು?
ಆರ್ಆರ್ಆರ್ ಸಿನಿಮಾಗೆ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿ
ಉಳಿದಂತೆ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಸಿನಿಮಾ ಕಳೆದ ವಾರ ಮೊದಲ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ. ರಾಮ್ಚರಣ್, ಜೂ.ಎನ್ಟಿಆರ್ ನಟನೆಯ ಬಿಗ್ಬಜೆಟ್ ಸಿನಿಮಾ ಆರ್ಆರ್ಆರ್ ಚಿತ್ರದ ನಿರ್ದೇಶಕ ರಾಜಮೌಳಿ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್ನಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡ್ ಪಡೆದಯಕೊಂಡಿದ್ದಾರೆ. ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ ಸರ್ಕಲ್, ಅಮೆರಿಕದ ಹಳೆಯ ಸಿನಿಮಾ ವಿಮರ್ಶೆಯ ಗ್ರೂಪ್ ಆಗಿದ್ದು, 1935ರಲ್ಲಿ ಸ್ಥಾಪನೆ ಮಾಡಲಾಗಿತ್ತು.
400 ಕೋಟಿ ರೂಪಾಯಿ ಗಳಿಕೆಯೊಂದಿಗೆ ಕಾಂತಾರ ದಾಖಲೆ
ಸೆಪ್ಟೆಂಬರ್ 30 ರಂದು ಕನ್ನಡ, ಅಕ್ಟೋಬರ್ 14 ರಂದು ಹಿಂದಿ ಭಾಷೆಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಅದರಲ್ಲೂ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೆಂಬಾಳೆ ಫಿಲ್ಮ್ಸ್ ಭಾರೀ ಹೆಸರನ್ನು ತಂದುಕೊಟ್ಟಿದೆ.
ಅದರಲ್ಲೂ ಹಿಂದಿಯಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಸಿನಿಮಾ ಹಲವು ಬಾಲಿವುಡ್ ಸಿನಿಮಾಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿತ್ತು. ಇದುವರೆಗೂ ಕಾಂತಾರ ಸಿನಿಮಾ 400 ಕೋಟಿ ಪ್ಲಸ್ ಗಳಿಕೆ ಮಾಡಿದ್ದು, ಹಲವು ಸಿನಿಮಾ ವಿಮರ್ಶಕರು ಸಿನಿಮಾ ಬಗ್ಗೆ ನಿರಂತರವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಲ್ಲದೇ ಸಿನಿಮಾ ಮೇಕರ್ಸ್ಗೆ ಕಾಂತಾರ ಸಿನಿಮಾ ನೋಡಿ ಕಲಿತುಕೊಳ್ಳುವುದು ಸಾಕಷ್ಟಿದೆ ಎಂದು ಸಲಹೆಗಳನ್ನು ನೀಡುತ್ತಿದ್ದಾರೆ.
ಇದನ್ನೂ ಓದಿ: Actor Chetan: ನಟ ಚೇತನ್ ಕುಮಾರ್ ವಿರುದ್ಧದ ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ!
ಕಾಂತಾರ-2 ಸ್ಕ್ರಿಪ್ಟ್ ವರ್ಕ್ ತಯಾರಿ ಆರಂಭಿಸಿದ ರಿಷಬ್
ಇನ್ನು, ಕಾಂತಾರ ಸಿನಿಮಾ ಯಸ್ಸಿನ ಹಿನ್ನೆಲೆಯಲ್ಲಿ ಸಿಕ್ವೇಲ್ ಮಾಡುವ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ ಎನ್ನಲಾಗಿದೆ. ಈ ನಡುವೆ ನಿರ್ದೇಶಕರ ಮುಂದಿನ ನಡೆ ಏನು? ಎಂಬ ಕುತೂಹಲ ಪ್ರೇಕ್ಷಕರನ್ನು ಕಾಡುತ್ತಿದೆ.
ರಿಷಬ್ ಶೆಟ್ಟಿ ಕಾಂತಾರ ಪ್ರಚಾರಕ್ಕಾಗಿ ತೆರಳಿದ ಪ್ರತಿ ಸ್ಥಳದಲ್ಲೂ ಕಾಂತಾರ-2 ಚಿತ್ರದ ಬರುತ್ತಾ ಎಂಬ ಪ್ರಶ್ನೆ ಕೇಳಿ ಬರುತ್ತಲೇ ಇತ್ತು. ಸದ್ಯ ರಿಷಬ್, ಕಾಂತಾರ ಸ್ಕ್ರಿಪ್ಟ್ ವರ್ಕ್ಗೆ ಚಾಲನೆ ನೀಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಬೇಕಾದ ತಯಾರಿಯನ್ನು ನಿರ್ದೇಶಕರು ಈಗಾಗಲೇ ಆರಂಭ ಮಾಡಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ