ಚಮಕ್​ ನಂತರ ಮತ್ತೆ ಒಂದಾಯ್ತು ಸುನಿ-ಗಣೇಶ್​ ಜೋಡಿ; ಹೊಸ ಸಿನಿಮಾದ ಸ್ಪೆಷಲ್​ ಏನು ಗೊತ್ತಾ?

‘ಚಮಕ್​’ ಹಿಟ್​ ಆದ ನಂತರದಲ್ಲಿ ಇವರ ಕಾಂಬಿನೇಷನ್​ಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಅಭಿಮಾನಿಗಳ ಬಯಕೆ ಆಗಿತ್ತು. ಈಗ ಈ ಜೋಡಿ ಒಂದಾಗುತ್ತಿದೆ ಎನ್ನುವ ವಿಚಾರ ಭಾರೀ ಕುತೂಹಲ ಸೃಷ್ಟಿಸಿದೆ.

Rajesh Duggumane | news18-kannada
Updated:October 10, 2019, 3:17 PM IST
ಚಮಕ್​ ನಂತರ ಮತ್ತೆ ಒಂದಾಯ್ತು ಸುನಿ-ಗಣೇಶ್​ ಜೋಡಿ; ಹೊಸ ಸಿನಿಮಾದ ಸ್ಪೆಷಲ್​ ಏನು ಗೊತ್ತಾ?
ಗೋಲ್ಡನ್ ಗಣಿ ಸದ್ಯ ಯೋಗರಾಜ್ ಭಟ್​ ಅವರ ಗಾಳಿಪಟ2 ಚಿತ್ರದೊಂದಿಗೆ ಸಖತ್​ ಅನ್ನು ಕೂಡ ಕೈಗೆತ್ತಿಕೊಂಡಿದ್ದು, ಮತ್ತೊಂದೆಡೆ ಸಿಂಪಲ್ ಸುನಿ ಅವತಾರ ಪುರುಷನನ್ನು ರೆಡಿ ಮಾಡಿಟ್ಟುಕೊಂಡಿದ್ದಾರೆ.
  • Share this:
2017ರಲ್ಲಿ ತೆರೆಕಂಡಿದ್ದ ಗೋಲ್ಡನ್​ ಸ್ಟಾರ್​ ಗಣೇಶ್​ ನಟನೆಯ ‘ಚಮಕ್​’ ಸಿನಿಮಾ ದೊಡ್ಡ ಪ್ರಮಾಣದಲ್ಲಿ ಹಿಟ್​ ಆಗಿತ್ತು. ಈ ಚಿತ್ರವನ್ನು ನಿರ್ದೇಶಿಸಿದ್ದು ಸಿಂಪಲ್​ ಸುನಿ. ಈಗ ಎರಡು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗುತ್ತಿದೆ. ಸದ್ಯ ಹೀಗೊಂದು ವಿಚಾರ ಗಾಂಧಿ ನಗರದ ಅಂಗಳದಲ್ಲಿ ಹರಿದಾಡುತ್ತಿದೆ.

ಹೌದು, ‘ಚಮಕ್​’ ಹಿಟ್​ ಆದ ನಂತರದಲ್ಲಿ ಇವರ ಕಾಂಬಿನೇಷನ್​ಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಅಭಿಮಾನಿಗಳ ಬಯಕೆ ಆಗಿತ್ತು. ಈಗ ಈ ಜೋಡಿ ಒಂದಾಗುತ್ತಿದೆ ಎನ್ನುವ ವಿಚಾರ ಭಾರೀ ಕುತೂಹಲ ಸೃಷ್ಟಿಸಿದೆ. ಪ್ರತಿ ಬಾರಿ ಭಿನ್ನ ಸಿನಿಮಾ ನೀಡುವ ಮೂಲಕ ಗಮನ ಸೆಳೆದಿರುವ ಸಿಂಪಲ್​ ಸುನಿ ಈ ಬಾರಿಯೂ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರಂತೆ.

ಹೊಸ ನಿರ್ಮಾಣ ಸಂಸ್ಥೆ ಗಣೇಶ್​-ಸುನಿ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಲು ನಿರ್ಧರಿಸಲಾಗಿದೆ. ಚಿತ್ರಕ್ಕೆ ನಾಯಕಿ ಯಾರು, ಪಾತ್ರ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎನ್ನುವುದು ಇನ್ನಷ್ಟೇ ಅಂತಿಮವಾಗಬೇಕಿದೆ.

ಸದ್ಯ, ‘ಅವತಾರ ಪುರುಷ’ ಸಿನಿಮಾದಲ್ಲಿ ಸುನಿ ಬ್ಯುಸಿಯಾಗಿದ್ದಾರೆ. ಶರಣ್​ ಹಾಗೂ ಆಶಿಕಾ ರಂಗನಾಥ್​ ಈ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಈ ಸಿನಿಮಾದ ಶೇ.80 ಶೂಟಿಂಗ್​ ಪೂರ್ಣಗೊಂಡಿದೆ. ಇನ್ನು, ಗಣೇಶ್​ ‘ಗೀತಾ’ ಸಿನಿಮಾದ ಪ್ರಮೋಷನ್​ನಲ್ಲಿ ತೊಡಗಿದ್ದಾರೆ. ತಿಂಗಳ ಆರಂಭದಲ್ಲಿ ತೆರೆಕಂಡಿದ್ದ ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ಇದನ್ನೂ ಓದಿ:  ಹೌದು ಸ್ವಾಮಿ, ಈ ಎಲ್ಲರ ಬದುಕನ್ನೇ ಬದಲಿಸಿದ್ದು ಬಿಗ್​ ಬಾಸ್​!

‘ಚಮಕ್​’ ಸಿನಿಮಾದಲ್ಲಿ ಗಣೇಶ್​-ರಶ್ಮಿಕಾ ಒಂದಾಗಿ ನಟಿಸಿದ್ದರು. ಹಾಸ್ಯ ಪ್ರಧಾನ ಸಿನಿಮಾ ಇದಾಗಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು. ಈಗ ಗಣೇಶ್​-ಸುನಿ ಮತ್ತೆ ಒಂದಾಗುತ್ತಿದ್ದಾರೆ ಎನ್ನುವ ವಿಚಾರ ಸ್ಯಾಂಡಲ್​ವುಡ್​ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

First published:October 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading