Love 360 Movie: ಥಿಯೇಟರ್​ಗೆ ಬಂದು ಲವ್​ 360 ಚಿತ್ರ ನೋಡಿ; ಕೈ ಮುಗಿದು ನಿರ್ದೇಶಕ ಶಶಾಂಕ್​ ಮನವಿ

ದೊಡ್ಡಮಟ್ಟದಲ್ಲಿ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿಲ್ಲ ಎಂಬುದು ಶಶಾಂಕ್‌ ಅಳಲು ತೋಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹೊಸ ಮುಖಗಳಿಗೆ ಪ್ರೋತ್ಸಾಹ ನೀಡುವಂತೆ  ಶಶಾಂಕ್ ಮನವಿ ಮಾಡಿದ್ದಾರೆ.

ಲವ್ 360 ಚಿತ್ರ ನೋಡುವಂತೆ ಶಶಾಂಕ್​ ಮನವಿ

ಲವ್ 360 ಚಿತ್ರ ನೋಡುವಂತೆ ಶಶಾಂಕ್​ ಮನವಿ

  • Share this:
ಇತ್ತೀಚೆಗೆ ಬಿಡುಗಡೆಯಾದ 'ಲವ್ 360' (Love 360) ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ನಿರ್ದೇಶಕ ಶಶಾಂಕ್‌ ಮನವಿ  ಮಾಡಿಕೊಂಡಿದ್ದಾರೆ. ಎಮೋಷನಲ್ ಪ್ರೇಮ ಕಥೆಯ (Emotional Love Story) ಈ ಸಿನಿಮಾ ಇದು. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಚಿತ್ರದಲ್ಲಿನ ರಾಮ್ ಹಾಗೂ ಜಾನಕಿ ಪ್ರೇಮಕಥೆ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ಮಂದಿರಗಳಿಗೆ (Theater) ತೆರಳಿ ಚಿತ್ರವನ್ನು ವೀಕ್ಷಣೆ ಮಾಡುವಂತೆ ಪ್ರೇಕ್ಷಕರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.

ಹೊಸ ಮುಖಗಳಿಗೆ ಪ್ರೋತ್ಸಾಹ ನೀಡಿ

ದೊಡ್ಡಮಟ್ಟದಲ್ಲಿ ಜನರು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡುತ್ತಿಲ್ಲ ಎಂಬುದು ಶಶಾಂಕ್‌ ಅಳಲು ತೋಡಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹೊಸ ಮುಖಗಳಿಗೆ ಪ್ರೋತ್ಸಾಹ ನೀಡುವಂತೆ  ಶಶಾಂಕ್ ಮನವಿ ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಿನಿಮಾ ಮಂದಿರಗಳಿಗೆ ತೆರಳಿ ಚಿತ್ರವನ್ನು ವೀಕ್ಷಣೆ ಮಾಡುವಂತೆ ಪ್ರೇಕ್ಷಕರಲ್ಲಿ ಕೈಮುಗಿದು ಮನವಿ ಮಾಡಿದ್ದಾರೆ.



ಶಶಾಂಕ್‌ ಮನವಿ ಮಾಡಿಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಚಂದನವನದ ಹಲವಾರು ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ನಟ ಉಪೇಂದ್ರ, ನಿರ್ದೇಶಕ ಯೋಗರಾಜ್‌ ಭಟ್‌ ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ.

ಹೊಸ ಪ್ರತಿಭೆ ಪ್ರವೀಣ್ ನಾಯಕರಾಗಿದ್ದಾರೆ. ಅವರಿಗೆ ರಚನಾ ಇಂದರ್ ಜೋಡಿಯಾಗಿದ್ದಾರೆ. ಹೊಸ ಮುಖಗಳಿಗೆ ಶಶಾಂಕ್‌ ಆ್ಯಕ್ಷನ್‌ ಕಟ್‌ ಹೇಳಿರುವುದು ವಿಶೇಷ.





'ಜಗವೇ ನೀನು ಗೆಳತಿಯೇ..’ ಹಾಡಿನ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ‘ಲವ್​ 360’. ಹೊಸಬರ ಸಿನಿಮಾದ ಈ ಹಾಡು ಕೋಟಿಗಟ್ಟಲೆ ವೀಕ್ಷಣೆ ಕಂಡಿರುವುದು ವಿಶೇಷ. ಆ ಕಾರಣದಿಂದ ಹೈಪ್​ ಹೆಚ್ಚಾಯಿತು. ಈಗ ಈ ಸಿನಿಮಾ ಬಿಡುಗಡೆ ಆಗಿದೆ. ‘ಮೊಗ್ಗಿನ ಮನಸು’, ‘ಕೃಷ್ಣನ್​ ಲವ್​ ಸ್ಟೋರಿ’, ‘ಕೃಷ್ಣ ಲೀಲಾ’ ರೀತಿಯ ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದ ನಿರ್ದೇಶಕ ಶಶಾಂಕ್​ ಅವರು ಈ ಬಾರಿ ಹೊಸ ಪ್ರತಿಭೆಗಳ ಜೊತೆ ಸೇರಿ ‘ಲವ್​ 360’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇದನ್ನೂ ಓದಿ: Dhananjaya: ಅಭಿಮಾನಿಗಳೇ ಕ್ಷಮಿಸಿ, ಈ ವರ್ಷ ಹುಟ್ಟುಹಬ್ಬ ಆಚರಿಸಲ್ಲ, ಮನೆಯಲ್ಲೂ ನಾನು ಇರಲ್ಲ

ಒಂದು ಮರ್ಡರ್​ ಮಿಸ್ಟರಿ ಕಹಾನಿ

ಮಿಡಲ್​ ಕ್ಲಾಸ್​ ಬದುಕಿನ ಕಥೆಗಳನ್ನು ನಿರೂಪಿಸುವಲ್ಲಿ ನಿರ್ದೇಶಕ ಶಶಾಂಕ್​ ಫೇಮಸ್​. ಈ ಬಾರಿಯೂ ಅವರು ಅಂಥ ಒಂದು ಕಹಾನಿಯನ್ನು ತೆರೆಗೆ ತಂದಿದ್ದಾರೆ. ಇಲ್ಲಿನ ಕಥಾನಾಯಕ ರಾಮ್​ (ಪ್ರವೀಣ್​) ಹಾಗೂ ಕಥಾನಾಯಕಿ ಜಾನಕಿ (ರಚನಾ) ಅನಾಥರು. ಜಾನಕಿಗೆ ಬುದ್ಧಿ ಚುರುಕಿಲ್ಲ. ನೆನಪು ಆಗಾಗ ಕೈ ಕೊಡುತ್ತದೆ. ಅವಳನ್ನು ಹೇಗಾದರೂ ಮಾಡಿ ಗುಣಪಡಿಸಬೇಕು ಎಂದು ರಾಮ್​ ಪ್ರಯತ್ನಿಸುತ್ತಿರುವಾಗಲೇ ಖಳರ ಎಂಟ್ರಿ ಆಗುತ್ತದೆ. ಆರಂಭದಲ್ಲಿ ತುಂಬ ಸಿಂಪಲ್​ ಎನಿಸುವ ಈ ಕಥೆ ಮಧ್ಯಂತರದ ಬಳಿಕ ಬೇರೆಯದೇ ರೂಪ ಪಡೆದುಕೊಳ್ಳುತ್ತದೆ. ಒಂದು ಮರ್ಡರ್​ ಮಿಸ್ಟರಿ ಕಹಾನಿ ತೆರೆದುಕೊಳ್ಳುತ್ತದೆ.



ಸಿನಿಮಾ ನೋಡಿದ ಪ್ರೇಕ್ಷಕರಿಗೂ ಇಷ್ಟವಾಗುತ್ತೆ

ರಾಮ್​-ಜಾನಕಿ ಮುಗ್ಧ ಪ್ರೇಮಿಗಳು. ಅವರಿಗೆ ಎದುರಾಗುವ ವಿಲನ್​ಗಳೆಲ್ಲ ಕ್ರೂರ ಮನಸ್ಥಿತಿಯವರು. ಹೀಗೆ ಮುಗ್ಧತೆ ಮತ್ತು ಕ್ರೌರ್ಯದ ನಡುವಿನ ಸಮರದ ರೀತಿಯಲ್ಲಿ ಇಡೀ ಸಿನಿಮಾ ಮೂಡಿಬಂದಿದೆ. ಕೇವಲ ಲವ್​ ಸ್ಟೋರಿ ಹೇಳಲು ನಿರ್ದೇಶಕರು ಇಡೀ ಸಿನಿಮಾವನ್ನು ಸೀಮಿತವಾಗಿಸಿಲ್ಲ. ಸಸ್ಪೆನ್ಸ್​ ಮತ್ತು ಥ್ರಿಲ್ಲರ್​ ಅಂಶಗಳನ್ನೂ ಸೇರಿಸಿ ಇದನ್ನೊಂದು ಪತ್ತೇದಾರಿ ಸಿನಿಮಾವಾಗಿಸಿದ್ದಾರೆ. ಹಾಗಾಗಿ ಇದು ಎಲ್ಲ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.
Published by:Pavana HS
First published: