ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ: Sexual Harassment Caseನಲ್ಲಿ ನಿರ್ದೇಶಕ ಶಂಕರ್​ ಅಳಿಯನ ಹೆಸರು..!

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕ್ರಿಕೆಟಿಗ ರೋಹಿತ್ ದಾಮೋದರನ್ ವಿರುದ್ಧ ಪ್ರಕರಣ ದಾಖಲಾಗಿದೆ. ಮೆಟ್ಟುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ (POCSO) ಪ್ರಕರಣ ದಾಖಲಿಸಲಾಗಿದೆ.

ಖ್ಯಾತ ನಿರ್ದೇಶಕ ಶಂಕರ್​ ಅವರ ಮಗಳು ಹಾಗೂ ಅಳಿಯ

ಖ್ಯಾತ ನಿರ್ದೇಶಕ ಶಂಕರ್​ ಅವರ ಮಗಳು ಹಾಗೂ ಅಳಿಯ

  • Share this:
ಇತ್ತೀಚಿನ ದಿನಗಳಲ್ಲಿ ಲೈಂಗಿಕ ಕಿರುಕುಳದ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗುತ್ತಿದ್ದು, ಕೆಲವೊಂದು ಪ್ರಕರಣಗಳಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದಂತಹ ಜನಪ್ರಿಯ ವ್ಯಕ್ತಿಗಳ ಸಂಬಂಧಿಕರು, ಹತ್ತಿರದವರೇ ಭಾಗಿಯಾಗಿದ್ದು ಅವರ ವಿರುದ್ದವೇ ಪ್ರಕರಣ ದಾಖಲಿಸಲಾಗುತ್ತಿರುವುದನ್ನು ನಾವು ನೋಡಬಹುದು. ಈಗ ನಾವು ಹೇಳಲು ಹೊರಟಿರುವ ಘಟನೆಯೂ ಇಂತದ್ದೇ ಆಗಿದೆ. ಆ ಆಘಾತಕಾರಿ ಸುದ್ದಿ ಏನೆಂದರೆ ಅಪ್ರಾಪ್ತೆಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದ ಖ್ಯಾತ ನಿರ್ದೇಶಕ ಶಂಕರ್ ಅಳಿಯ ರೋಹಿತ್  (Shankar son in law booked for sexual harassment of 16 year-old girl) ಮತ್ತು ಇತರ 5 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಕ್ರಿಕೆಟಿಗ ರೋಹಿತ್ ದಾಮೋದರನ್ (Rohit Damodaran) ವಿರುದ್ಧ ಪ್ರಕರಣ ದಾಖಲಾಗಿದೆ. ಮೆಟ್ಟುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿಯಲ್ಲಿ (POCSO) ಪ್ರಕರಣ ದಾಖಲಿಸಲಾಗಿದೆ.

director shankar Daughter Marriage Pics, shankar daughter marriage,director shankar daughter aishwarya marriage,director shankar daughter aishwarya marriage cricketer rohit damodaran, ಎಂ.ಕೆ. ಸ್ಟಾಲಿನ್​, ರೋಹಿತ್ ದಾಮೋದರನ್, ಐಶ್ವರ್ಯಾ, ಎಸ್​. ಶಂಕರ್​, ನಿರ್ದೇಶಕ ಶಂಕರ್​ ಅವರ ಮಗಳ ಮದುವೆ, ilm Director Shankar Daughter Aishwarya Shankar Rohit Damodharan Wedding photos gone viral ae
ನಿರ್ದೇಶಕ ಶಂಕರ್ ಅವರ ಮಗಳ ಮದುವೆಯ ಫೋಟೋ


ಸುದ್ದಿ ಮಾಧ್ಯಮದ ವರದಿಯ ಪ್ರಕಾರ, ತಮಿಳುನಾಡು ಪ್ರೀಮಿಯರ್ ಲೀಗ್‌ನ ಮಧುರೈ ಪ್ಯಾಂಥರ್ಸ್ ತರಬೇತುದಾರ ತಮಾರೈಕಣ್ಣನ್ ವಿರುದ್ಧ ಬಾಲಕಿ ಮೊದಲು ಲೈಂಗಿಕ ಕಿರುಕುಳದ ದೂರು ನೀಡಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಆಡಳಿತ ಮಂಡಳಿಯವರು ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಬಾಲಕಿ ಪುದುಚೇರಿ ಮಕ್ಕಳ ಕಲ್ಯಾಣ ಸಮಿತಿಯನ್ನು (PCWC) ಸಂಪರ್ಕಿಸಿದ್ದಾರೆ ಎನ್ನಲಾಗಿದೆ

ಇದನ್ನೂ ಓದಿ: Shankar Daughter Marriage Pics: ನಿರ್ದೇಶಕ ಶಂಕರ್​ ಮಗಳ ಮದುವೆಯಲ್ಲಿ ಭಾಗಿಯಾದ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್​..!

ದೂರಿನ ಹಿನ್ನೆಲೆಯಲ್ಲಿ PCWC, ತರಬೇತುದಾರರಾದ ತಮಾರೈಕಣ್ಣನ್ ಮತ್ತು ಜಯಕುಮಾರ್, ಮಧುರೈ ಪ್ಯಾಂಥರ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ದಾಮೋದರನ್ ಮತ್ತು ಅವರ ಮಗ ರೋಹಿತ್ ಹಾಗೂ ಕಾರ್ಯದರ್ಶಿ ವೆಂಕಟ್ ವಿರುದ್ಧ ಮೆಟ್ಟುಪಾಳ್ಯಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಪೊಲೀಸರು ಇನ್ನೂ ಅವರನ್ನು ಬಂಧಿಸಿಲ್ಲ ಎಂದು ವರದಿಯಾಗಿದೆ. ಈ ಪ್ರಕರಣದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.

ಇಂಡಿಯನ್ 2 ಮತ್ತು ಇನ್ನಿತರೆ ಜನಪ್ರಿಯತೆ ಗಳಿಸಿದ ಚಲನಚಿತ್ರಗಳನ್ನು ನಿರ್ದೇಶಿಸಿದ ಶಂಕರ್ ಮಗಳು ಐಶ್ವರ್ಯಾರನ್ನು ಇದೇ ವರ್ಷದ ಜೂನ್ 27ರಂದು ಮಹಾಬಲಿಪುರಂನಲ್ಲಿ TNPL ಕ್ರಿಕೆಟಿಗ ರೋಹಿತ್ ದಾಮೋದರನ್ ವಿವಾಹವಾಗಿದ್ದರು. ಈ ವಿವಾಹ ಸಮಾರಂಭವು ಖಾಸಗಿ ಸಮಾರಂಭವಾಗಿದ್ದು ಕೇವಲ ಆಪ್ತರು ಮತ್ತು ಕುಟುಂಬ ಸದಸ್ಯರು ಮಾತ್ರ ಆಗಮಿಸಿದ್ದರು.

ರೋಹಿತ್ ಮತ್ತು ಐಶ್ವರ್ಯಾ ವಿವಾಹಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣ್ಯನ್ ಮತ್ತು ವಿಧಾನಸಭೆ ಸದಸ್ಯ ಹಾಗೂ ನಟ ಉದಯನಿಧಿ ಸ್ಟಾಲಿನ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ: Ram Charan -Shankar ಕಾಂಬಿನೇಶನ್​ನಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ: ಪೋಸ್ಟರ್​ಗಾಗಿ ಕೋಟಿ ಖರ್ಚು..!

ರೋಹಿತ್ ದಾಮೋದರನ್ ತಮಿಳುನಾಡು ಪ್ರೀಮಿಯರ್ ಲೀಗ್ (TNPL) ನ ಮಧುರೈ ಪ್ಯಾಂಥರ್ಸ್ ಕ್ರಿಕೆಟ್ ತಂಡದ ಮಾಲೀಕರಾಗಿದ್ದು, ಖ್ಯಾತ ಕೈಗಾರಿಕೋದ್ಯಮಿ ದಾಮೋದರನ್ ಮಗ ಮತ್ತು ನಿರ್ದೇಶಕ ಶಂಕರ್ ಅಳಿಯ ಆಗಿದ್ದು, ಅಪ್ರಾಪ್ತ ಬಾಲಕಿಯ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತಮ್ಮ ಹೆಸರು ಕಾಣಿಸಿಕೊಂಡಿದ್ದು ಗಂಭೀರವಾದ ಚರ್ಚೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನು ಕೆಲ ಸಮಯದ ಹಿಂದೆ ಹಿಂದಿಯ ಕಿರುತೆರೆ ನಟ ಪರ್ಲ್​ ವಿ ಪುರಿ ವಿರುದ್ಧ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಪರ್ಲ್​ ವಿ ಪುರಿ, ಏಕ್ತಾ ಕಪೂರ್ ನಿರ್ಮಾಣದ ನಾಗಿನ್​ 3 ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಿರುತೆರೆಯಲ್ಲಿ ಖ್ಯಾತಿ ಪಡೆದಿರುವ ಪರ್ಲ್​ ವಿ ಪುರಿ ಈ ರೀತಿಯ ಕೆಲಸ ಮಾಡಿಲ್ಲ ಎಂದು ಅವರ ಜೊತೆ ಕೆಲಸ ಮಾಡಿರುವ ಸಹ ನಟ-ನಟಿಯರು ಹಾಗೂ ಸ್ನೇಹಿತರು ನಟನ ಬೆಂಬಲಕ್ಕೆ ನಿಂತಿದ್ದರು.
Published by:Anitha E
First published: