Ram Charan ಅಭಿನಯದ ಚಿತ್ರದಲ್ಲಿನ ಒಂದು ಆ್ಯಕ್ಷನ್​ ದೃಶ್ಯಕ್ಕೆ ಖರ್ಚಾಗುತ್ತಿರುವುದು ಎಷ್ಟು ಕೋಟಿ ಗೊತ್ತಾ..?

ಬಿಗ್ ಬಜೆಟ್​ ಸಿನಿಮಾ ನಿರ್ಮಿಸುತ್ತಿರುವ ನಿರ್ದೇಶಕ ಶಂಕರ್​ ಅವರ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಕಿಯಾರಾ ನಟಿಸುತ್ತಿದ್ದಾರೆ. ಈ ಸಿನಿಮಾದ ಒಂದು ಆ್ಯಕ್ಷನ್​ ದೃಶ್ಯಕ್ಕಾಗಿ ಈಗ ಕೋಟಿ ಕೋಟಿ ವೆಚ್ಚ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರಂತೆ.

ರಾಮ್​ ಚರಣ್​-ಕಿಯಾರಾ ಅಭಿನಯದ ಹೊಸ ಸಿನಿಮಾದ ಪೋಸ್ಟರ್​

ರಾಮ್​ ಚರಣ್​-ಕಿಯಾರಾ ಅಭಿನಯದ ಹೊಸ ಸಿನಿಮಾದ ಪೋಸ್ಟರ್​

  • Share this:
ಭಾರತೀಯ ಚಿತ್ರರಂಗಕ್ಕೆ ಹಲವಾರು ಹಿಟ್ ಚಿತ್ರಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್. ಶಂಕರ್  (S Shankar)ಈಗ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ  (Megha Star Chiranjeevi)ಅವರ ಮಗ ಮತ್ತು ನಟ ರಾಮ್ ಚರಣ್ (Ram Charan) ಅವರೊಂದಿಗೆ ಒಂದು ರಾಜಕೀಯ ಕಥಾ ಹಂದರವನ್ನು ಹೊಂದಿರುವ ಚಿತ್ರ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ಈ ಚಿತ್ರದ ಬಗ್ಗೆ ಇನ್ನೊಂದು ವಿಶಿಷ್ಟವಾದ ಸಂಗತಿ ಎಂದರೆ ಈ ಚಿತ್ರತಂಡವು ಚಿತ್ರದಲ್ಲಿ ಒಂದು ದೊಡ್ಡ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸಲಿದೆಯಂತೆ. ಅದಕ್ಕೆ ಎಷ್ಟು ಹಣ ಖರ್ಚು ಮಾಡಲಿದೆ ಎಂದು ನಿಮಗೆ ಗೊತ್ತಾದರೆ ನಿಮ್ಮ ಕಣ್ಣು ಹುಬ್ಬುಗಳನ್ನು ಒಮ್ಮೆ ಮೇಲೇರಿಸುವುದು ಗ್ಯಾರಂಟಿ.

ನಟ ರಾಮ್ ಚರಣ್ ಮತ್ತು ನಿರ್ದೇಶಕ ಶಂಕರ್ ಹೈದರಾಬಾದ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಚಲನಚಿತ್ರ ನಿರ್ಮಾಪಕರು ಯೋಜಿಸುತ್ತಿರುವ ಆ್ಯಕ್ಷನ್ ದೃಶ್ಯಕ್ಕಾಗಿ ಈ ಚಿತ್ರವು ಸದ್ಯ ಸುದ್ದಿಯಲ್ಲಿದೆ ಎಂದರೆ ತಪ್ಪಾಗಲಾರದು. ಈ ಚಿತ್ರವು ರಾಮ್ ಚರಣ್ ಒಳಗೊಂಡ ದೊಡ್ಡ ಆ್ಯಕ್ಷನ್ ದೃಶ್ಯವನ್ನು ಚಿತ್ರೀಕರಿಸಲಿದ್ದು ಮತ್ತು ಒಂದೇ ದೃಶ್ಯಕ್ಕೆ ಸರಿ ಸುಮಾರು 10 ಕೋಟಿ ರೂಪಾಯಿ ಹಣ ಖರ್ಚು ಮಾಡಲಾಗುವುದು ಎಂದು ಹೇಳಲಾಗಿದೆ.

ram charan shakar movie budget,ram charan shakar movie concept poster,ram charan new movie dil raju shankar,rc 15 title Vishwambhara,SVC 50 shankar ram charan,shankar ram charan political thriller,ram charan upcoming movies,ram charan shankar movie,director shankar ram charan movie,ram charan and shankar movie,shankar next movie with ram charan,ram charan and shankar movie news,ram charan director shankar movie,ram charan and shankar movie update,ram charan upcoming movie with shankar dil raju, Sensational director Shankar, Shankar once again huge budget for his latest movie with Ram Charan, ರಾಮ್​ ಚರಣ್​ ಸಿನಿಮಾ, ನಿರ್ದೇಶಕ ಶಂಕರ್ ಕಾಂಬಿನೇಷನ್​ನಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ, ಪೋಸ್ಟರ್​ಗೆ ಕೋಟಿ ಕೋಟಿ ಖರ್ಚು, ಕಿಯಾರಾ ಅಡ್ವಾನಿ, ರಣವೀರ್ ಸಿಂಗ್​, ಚಿರಂಜೀವಿ, ರಾಜಮೌಳಿ, ದಿಲ್ ರಾಜು ಪ್ರೊಡಕ್ಷನ್ಸ್​, Big Budget movie by director Shankar with Ram Charan and Kiara Advani Ranveer Singh also seen in the set ae
ಮಗನ ಸಿನಿಮಾಗೆ  ಕ್ಲ್ಯಾಪ್​ ಮಾಡಿದ ಚಿರಂಜೀವಿ

ಆ್ಯಕ್ಷನ್ ದೃಶ್ಯದಲ್ಲಿ ನಟ ರಾಮ್ ಚರಣ್ ಅವರೊಂದಿಗೆ ನೂರಾರು ಫೈಟರ್‌ಗಳು ಇರುವ ಸಾಧ್ಯತೆಯಿದೆ. ಚಿತ್ರ ತಂಡವು ಈಗಾಗಲೇ ಈ ದೃಶ್ಯಕ್ಕಾಗಿ ವಿಶೇಷವಾದ ‘ರೈಲಿನ ಸೆಟ್’ ಅನ್ನು ನಿರ್ಮಿಸುತ್ತಿದೆಯಂತೆ.

ರಾಮ್ ಚರಣ್ ಅಭಿಮಾನಿಗಳು ಆರ್​ 15 ಎಂದೇ ಕರೆಯುವ ಈ ಸಿನಿಮಾ ಪ್ಯಾನ್​ ಇಂಡಿಯಾ ಚಿತ್ರವಾಗಿದ್ದು, ಇದರ ಮುಹೂರ್ತ ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ನೆರವೇರಿತು. ಈ ಚಿತ್ರದ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಚಿರಂಜೀವಿ ಹಾಗೂ ಬಾಲಿವುಡ್​ ನಟ ರಣವೀರ್ ಸಿಂಗ್​ ಸಹ ಭಾಗಿಯಾಗಿದ್ದರು.

ಇದನ್ನೂ ಓದಿ: ನಟ Ram Charan ಖರೀದಿಸಿದ 2.43 ಕೋಟಿ ಬೆಲೆಯ Mercedes-Maybach GLS 600 ವಿಶೇಷತೆ ಏನು ಗೊತ್ತೇ..?

ಈ ಚಲನ ಚಿತ್ರವನ್ನು ಪ್ರಸ್ತುತ ‘ಎಸ್‌ವಿಸಿ 50’ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರೀಕರಣ ಶುರು ಮಾಡಿದ್ದು, ಚಿತ್ರವು ಅಕ್ಟೋಬರ್ 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ತಯಾರಕರು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.

ram charan shakar movie budget,ram charan shakar movie concept poster,ram charan new movie dil raju shankar,rc 15 title Vishwambhara,SVC 50 shankar ram charan,shankar ram charan political thriller,ram charan upcoming movies,ram charan shankar movie,director shankar ram charan movie,ram charan and shankar movie,shankar next movie with ram charan,ram charan and shankar movie news,ram charan director shankar movie,ram charan and shankar movie update,ram charan upcoming movie with shankar dil raju, Sensational director Shankar, Shankar once again huge budget for his latest movie with Ram Charan, ರಾಮ್​ ಚರಣ್​ ಸಿನಿಮಾ, ನಿರ್ದೇಶಕ ಶಂಕರ್ ಕಾಂಬಿನೇಷನ್​ನಲ್ಲಿ ಪ್ಯಾನ್​ ಇಂಡಿಯಾ ಸಿನಿಮಾ, ಪೋಸ್ಟರ್​ಗೆ ಕೋಟಿ ಕೋಟಿ ಖರ್ಚು, ಕಿಯಾರಾ ಅಡ್ವಾನಿ, ರಣವೀರ್ ಸಿಂಗ್​, ಚಿರಂಜೀವಿ, ರಾಜಮೌಳಿ, ದಿಲ್ ರಾಜು ಪ್ರೊಡಕ್ಷನ್ಸ್​, Big Budget movie by director Shankar with Ram Charan and Kiara Advani Ranveer Singh also seen in the set ae
ಎಸ್​ವಿಸಿ 50 ಸಿನಿಮಾದ ಪೋಸ್ಟರ್​

ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ಕಿಯಾರಾ ಆಡ್ವಾಣಿ ನಟಿಸಲಿದ್ದು, ಅವರು ಈ ಸಮಾರಂಭದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡರು. ಈ ಪೋಸ್ಟರ್‌ನಲ್ಲಿ ನಟ ರಾಮ್ ಚರಣ್, ಕಿಯಾರಾ ಮತ್ತು ಅನೇಕರು ಕಪ್ಪು ಸೂಟ್ ಧರಿಸಿ ಬಹುಶಃ ನ್ಯಾಯಾಲಯದ ಕಡೆಗೆ ಸಾಗುತ್ತಿರುವುದನ್ನು ಕಾಣಬಹುದಾಗಿದೆ.

“ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದಾಗಲಿದ್ದು, ತುಂಬಾ ಉತ್ಸಾಹದಿಂದ ಇದ್ದೇನೆ. ದಿಲ್ ರಾಜು ನಿರ್ಮಿಸುತ್ತಿರುವ ಮತ್ತು ಶಂಕರ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನನ್ನ ಒಳ್ಳೆಯ ಸ್ನೇಹಿತ ಮತ್ತು ಸಹ ನಟ ರಾಮ್ ಚರಣ್ ಅವರೊಂದಿಗೆ ನಟಿಸುತ್ತಿರುವ ವಿಚಾರ ಖುಷಿ ನೀಡಿದೆ" ಎಂದು ನಟಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಪುಟದಲ್ಲಿ ಬರೆದುಕೊಂಡಿದ್ದಾರೆ 29 ವರ್ಷದ ನಟಿ ಕಿಯಾರಾ.

ಇದನ್ನೂ ಓದಿ: ರಶ್ಮಿಕಾ ಜಾಗಕ್ಕೆ ಹೊಸ ನಟಿ ಎಂಟ್ರಿ: ಶಂಕರ್-ರಾಮ್‌ಚರಣ್ ಮೆಗಾ ಪ್ರಾಜೆಕ್ಟ್​ಗೆ ಕಿಯಾರಾ ನಾಯಕಿ!

ಈ ಚಿತ್ರದ ಮುಹೂರ್ತ ಸಮಾರಂಭವು ಹೈದರಾಬಾದ್‌ನಲ್ಲಿರುವ ಅನ್ನಪೂರ್ಣ ಸ್ಟುಡಿಯೋನಲ್ಲಿ ಬುಧವಾರದಂದು ಅದ್ದೂರಿಯಾಗಿ ನಡೆಯಿತು. ನಟ ರಾಮ್ ಚರಣ್ ತಂದೆ ಮತ್ತು ನಟ ಚಿರಂಜೀವಿ ಚಿತ್ರದ ಮಹೂರ್ತ ಶಾಟ್‌ಗಾಗಿ ಕ್ಲ್ಯಾಪ್ ಮಾಡಿದರು. ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ತಮ್ಮ ಫಂಕಿ ಸ್ಟೈಲ್​ನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Published by:Anitha E
First published: