ನಿರ್ದೇಶಕ ಶಂಕರ್ (Director Shankar) ಅವರ ಸಿನಿಮಾ ಎಂದರೆ ಅದರ ಬಜೆಟ್ ಎಷ್ಟು ಎಂದು ಕೇಳಲೇಬೇಕು. ಏಕಂದ್ರೆ ಇವರು ಮಾಡುವ ಒಂದು ಸಿನಿಮಾದ ಬಜೆಟ್ನಲ್ಲಿ 10 ಚಿತ್ರಗಳನ್ನು ನಿರ್ಮಿಸಬಹುದು. ಐದು ವರ್ಷಗಳ ಹಿಂದೆ 400 (400 crore budget) ಕೋಟಿ ಬಜೆಟ್ನಲ್ಲಿ 2.0 ಸಿನಿಮಾ ಮಾಡಿದ್ದರು. ಈ ಸಿನಿಮಾಗಿಂತ ಮೊದಲು ಮಾಡಿದ ಚಿತ್ರಗಳ್ಲೂ ಶಂಕರ್ ಕೋಟಿಗಿಂತ ಕಡಿಮೆ ಬಜೆಟ್ನಲ್ಲಿ ಯಾವ ಸಿನಿಮಾಗಳನ್ನೂ ಮಾಡಿಲ್ಲ. ಮೊದಲ ಚಿತ್ರ ಜಂಟಲ್ಮೆನ್ನಿಂದ 2.0 ಚಿತ್ರದವರೆಗೂ ಶಂಕರ್ ಅವರು ಬಜೆಟ್ ವಿಷಯದಲ್ಲಿ ಎಲ್ಲೂ ಹಿಂದೆ ಬಿದ್ದಿಲ್ಲ. ತಮ್ಮ ಸಂಭಾವನೆಯಲ್ಲಿ ಕಡಿಮೆ ಮಾಡಿಕೊಳ್ಳುತ್ತಾರೆ ಹೊರತು ಸಿನಿಮಾದ ಬಜೆಟ್ ವಿಷಯದಲ್ಲಿ ಮಾತ್ರ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವಂತೆ ನಿರ್ದೇಶಕ ಶಂಕರ್.
ಇಂತಹ ನಿದೇರ್ಶಕ ಶಂಕರ್ ಅವರು ಈಗ ರಾಮ್ ಚರಣ್ ಅವರ ಅಭಿನಯದ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಈ ಚಿತ್ರದ ಶೂಟಿಂಗ್ ಆರಂಭವಾಗಿದೆ. ಇನ್ನು ಸಿನಿಮಾದಬಜೆಟ್ ಕುರಿತಾದ ಲೆಕ್ಕಾಚಾರ ಆರಂಭವಾಗಿದೆ. ಆದರೆ ಈ ಹಿಂದಿನ ಸಿನಿಮಾಗಳಂತೆ ಈ ಚಿತ್ರದಲ್ಲಿ ಅಷ್ಟು ಬಜೆಟ್ ಇರುವುದಿಲ್ಲ ಎಂದು ಮೊದಲಿನಿಂದಲೂ ಹೇಳಲಾಗುತ್ತಿದೆ. ಆದರೂ, ಈಗಾಗಲೇ ರಿಲೀಸ್ ಆಗಿರುವ ಕಾನ್ಸೆಪ್ಟ್ ಪೋಸ್ಟರ್ಗಾಗಿ 1.73 ಕೋಟಿ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಪೋಸ್ಟರ್ನಲ್ಲಿ ನಿರ್ದೇಶಕ ಶಂಕರ್, ರಾಮ್ ಚರಣ್ ಹಾಗೂ ನಾಯಕಿ ಕಿಯಾರಾ ಅಡ್ವಾಣಿ ಜೊತೆಗೆ ಇತರೆ ಸಹ ನಟ-ನಟಿಯರೂ ಇದ್ದಾರೆ. ಈ ಪೋಸ್ಟರ್ಗಾಗಿ ಒಂದೂವರೆ ಕೋಟಿಗೂ ಅಧಿಕ ವೆಚಚ್ ಮಾಡಿರುವ ನಿರ್ದೇಶಕ ಶಂಕರ್ ಈಗ 7 ನಿಮಿಷಗಳ ಸೀಕ್ವೆನ್ಸ್ಗೆ 70 ಕೋಟಿ ಖರ್ಚು ಮಾಡಲಿದ್ದಾರಂತೆ. ಹೀಗೊಂದು ಸುದ್ದಿ ಸದ್ಯ ಹರಿದಾಡುತ್ತಿದೆ. ಸಿನಿಮಾದಲ್ಲಿ ಬರುವ ಪ್ರಮುಖ ದೃಶ್ಯಕ್ಕಾಗಿ ಇಷ್ಟು ಖರ್ಚು ಮಾಡಲು ನಿರ್ಧರಿಸಿದ್ದಾರಂತೆ. ಈ ಎಲ್ಲ ಲೆಕ್ಕಗಳು ಪೂರ್ತಿಯಾಗೋದು ಸಿನಿಮಾದ ಚಿತ್ರೀಕರಣ ಮುಗಿದ ನಂತರ ಎಂದು ಹೇಳಬಹುದು.
ಇದನ್ನೂ ಓದಿ: Ram Charan -Shankar ಕಾಂಬಿನೇಶನ್ನಲ್ಲಿ ಪ್ಯಾನ್ ಇಂಡಿಯಾ ಸಿನಿಮಾ: ಪೋಸ್ಟರ್ಗಾಗಿ ಕೋಟಿ ಖರ್ಚು..!
ರಾಮ್ ಚರಣ್ ಅಭಿಮಾನಿಗಳು ಆರ್ 15 ಎಂದೇ ಕರೆಯುವ ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಇದರ ಮುಹೂರ್ತ ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ನೆರವೇರಿತು. ಈ ಚಿತ್ರದ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ, ಚಿರಂಜೀವಿ ಹಾಗೂ ಬಾಲಿವುಡ್ ನಟ ರಣವೀರ್ ಸಿಂಗ್ ಸಹ ಭಾಗಿಯಾಗಿದ್ದರು.
ಈ ಚಲನ ಚಿತ್ರವನ್ನು ಪ್ರಸ್ತುತ ‘ಎಸ್ವಿಸಿ 50’ ಎಂಬ ಶೀರ್ಷಿಕೆ ಅಡಿಯಲ್ಲಿ ಚಿತ್ರೀಕರಣ ಶುರು ಮಾಡಿದ್ದು, ಚಿತ್ರವು ಅಕ್ಟೋಬರ್ 2022ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಚಿತ್ರದ ತಯಾರಕರು ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ನಟಿ ಕಿಯಾರಾ ಆಡ್ವಾಣಿ ನಟಿಸಲಿದ್ದು, ಅವರು ಈ ಸಮಾರಂಭದಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಂಡರು. ಈ ಪೋಸ್ಟರ್ನಲ್ಲಿ ನಟ ರಾಮ್ ಚರಣ್, ಕಿಯಾರಾ ಮತ್ತು ಅನೇಕರು ಕಪ್ಪು ಸೂಟ್ ಧರಿಸಿ ಬಹುಶಃ ನ್ಯಾಯಾಲಯದ ಕಡೆಗೆ ಸಾಗುತ್ತಿರುವುದನ್ನು ಕಾಣಬಹುದಾಗಿದೆ.
ಇದನ್ನೂ ಓದಿ: ರಶ್ಮಿಕಾ ಜಾಗಕ್ಕೆ ಹೊಸ ನಟಿ ಎಂಟ್ರಿ: ಶಂಕರ್-ರಾಮ್ಚರಣ್ ಮೆಗಾ ಪ್ರಾಜೆಕ್ಟ್ಗೆ ಕಿಯಾರಾ ನಾಯಕಿ!
“ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ ಇದಾಗಲಿದ್ದು, ತುಂಬಾ ಉತ್ಸಾಹದಿಂದ ಇದ್ದೇನೆ. ದಿಲ್ ರಾಜು ನಿರ್ಮಿಸುತ್ತಿರುವ ಮತ್ತು ಶಂಕರ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ನನ್ನ ಒಳ್ಳೆಯ ಸ್ನೇಹಿತ ಮತ್ತು ಸಹ ನಟ ರಾಮ್ ಚರಣ್ ಅವರೊಂದಿಗೆ ನಟಿಸುತ್ತಿರುವ ವಿಚಾರ ಖುಷಿ ನೀಡಿದೆ" ಎಂದು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿರುವ ಪುಟದಲ್ಲಿ ಬರೆದುಕೊಂಡಿದ್ದಾರೆ 29 ವರ್ಷದ ನಟಿ ಕಿಯಾರಾ.
ಈ ಚಿತ್ರದ ಮುಹೂರ್ತ ಸಮಾರಂಭವು ಹೈದರಾಬಾದ್ನಲ್ಲಿರುವ ಅನ್ನಪೂರ್ಣ ಸ್ಟುಡಿಯೋನಲ್ಲಿ ಬುಧವಾರದಂದು ಅದ್ದೂರಿಯಾಗಿ ನಡೆಯಿತು. ನಟ ರಾಮ್ ಚರಣ್ ತಂದೆ ಮತ್ತು ನಟ ಚಿರಂಜೀವಿ ಚಿತ್ರದ ಮಹೂರ್ತ ಶಾಟ್ಗಾಗಿ ಕ್ಲ್ಯಾಪ್ ಮಾಡಿದರು. ಬಾಲಿವುಡ್ ನಟ ರಣವೀರ್ ಸಿಂಗ್ ಕೂಡ ತಮ್ಮ ಫಂಕಿ ಸ್ಟೈಲ್ನಲ್ಲಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ