Shahuraj Shinde Passed Away: ದರ್ಶನ್​ ಅಭಿನಯದ ಅರ್ಜುನ್​ ಸಿನಿಮಾದ ನಿರ್ದೇಶಕ ಶಾಹುರಾಜ್​ ಶಿಂಧೆ ಇನ್ನಿಲ್ಲ..!

ಶಾಹುರಾಜ್​ ಶಿಂಧೆ ಅವರ ಜೀವನ ಶೈಲಿ ಶಿಸ್ತಿನಿಂದ ಕೂಡಿತ್ತು. ಅವರು ನಿತ್ಯ ಬೆಳಿಗ್ಗೆ ವ್ಯಾಯಾಮ ಮಾಡದೆ ಒಂದು ದಿನವೂ ಇರುತ್ತಿರಲಿಲ್ಲವಂತೆ. ಇಂತಹವರಿಗೆ ಹೃದಯಾಘಾತವಾಗಿರುವ ಸುದ್ದಿ ಅವರ ಆಪ್ತರಿಗೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಫಿಲ್ಮ್​ ಮೇಕರ್​ ಅಶು ಬೆದ್ರ ಅವರು ಶಾಹುರಾಜ್​ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.

ನಿರ್ದೇಶಕ ಶಾಹುರಾಜ್​ ಶಿಂಧೆ

ನಿರ್ದೇಶಕ ಶಾಹುರಾಜ್​ ಶಿಂಧೆ

  • Share this:
2020 ನಿಜಕ್ಕೂ ಸಿನಿರಂಗದ ಪಾಲಿಗೆ ಕರಾಳ ವರ್ಷ ಎಂದರೆ ತಪ್ಪಾಗದು. ವರ್ಷದ ಆರಂಭದಿಂದಲೇ ಭಾರತೀಯ ಸಿನಿರಂಗದ ಸಾಕಷ್ಟು ಮಂದಿ ಅಗಲಿದ್ದಾರೆ. ಸ್ಯಾಂಡಲ್​ವುಡ್​ನ ನಿರ್ದೇಶಕ ಶಾಹುರಾಜ್​ ಶಿಂಧೆ ಅವರೂ ಅಗಲಿದ್ದಾರೆ. ಇಂದು ಬೆಳಿಗ್ಗೆ ಹೃದಾಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ದರ್ಶನ್​ ಅಭಿನಯದ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಇವರ  ಹಠಾತ್​ ಅಗಲಿಕೆಯಿಂದ ಚಂದನವನದ ಮಂದಿಗೆ ನಿಜಕ್ಕೂ ಆಘಾತವಾಗಿದೆ. ದರ್ಶನ್​ ಅಭಿನಯದ ಸ್ನೇಹಾನಾ ಪ್ರೀತಿನಾ ಸಿನಿಮಾದ ಮೂಲಕ ಚಂದನವನಕ್ಕೆ ನಿರ್ದೇಶಕರಾಗಿ ಪರಿಚಯವಾದವರು ಶಾಹುರಾಜ್​ ಶಿಂಧೆ. 2007ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ದರ್ಶನ್​ ಹಾಗೂ ಆದಿತ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆ್ಯಕ್ಷನ್​ ಕಟ್​ ಹೇಳಿದ ಮೊದಲ ಸಿನಿಮಾದಲ್ಲೇ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದ ನಿರ್ದೇಶಕ ಇವರು. 

ಶಾಹುರಾಜ್​ ಶಿಂಧೆ ಅವರ ಜೀವನ ಶೈಲಿ ಶಿಸ್ತಿನಿಂದ ಕೂಡಿತ್ತು. ಅವರು ನಿತ್ಯ ಬೆಳಿಗ್ಗೆ ವ್ಯಾಯಾಮ ಮಾಡದೆ ಒಂದು ದಿನವೂ ಇರುತ್ತಿರಲಿಲ್ಲವಂತೆ. ಇಂತಹವರಿಗೆ ಹೃದಯಾಘಾತವಾಗಿರುವ ಸುದ್ದಿ ಅವರ ಆಪ್ತರಿಗೆ ನಿಜಕ್ಕೂ ಆಘಾತವನ್ನುಂಟು ಮಾಡಿದೆ. ಫಿಲ್ಮ್​ ಮೇಕರ್​ ಅಶು ಬೆದ್ರ ಹಾಗೂ ಸಂಗೀತ ನಿರ್ದೇಶಕ ಅಜನೀಶ್​ ಲೋಕನಾಥ್​ ಅವರು ಶಾಹುರಾಜ್​ ಅವರ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ.ಸ್ನೇಹಾನಾ ಪ್ರೀತಿನಾ ಸಿನಿಮಾದ ನಂತರ ದರ್ಶನ್ ಅವರೊಂದಿಗೆ ಅರ್ಜುನ್ ಸಿನಿಮಾ ಮಾಡಿದ್ದಾರೆ. 2008ರಲ್ಲಿ ಈ ಚಿತ್ರ ರಿಲೀಸ್​ ಆಗಿದ್ದು, ಇದರಲ್ಲಿ ದರ್ಶನ್​ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 shahuraj shinde, Shahuraj Shinde Passes Away, shahuraj shinde dies of heart attack, shahuraj shinde death, ಶಾಹುರಾಜ್ ಶಿಂಧೆ, ಹೃದಯಾಘಾತದಿಂದ ಶಾಹುರಾಜ್ ಶಿಂಧೆ ನಿಧನ, ನಿರ್ದೇಶಕ ಶಾಹುರಾಜ್ ಶಿಂಧೆ, ನಿಧನ, ಸಾವು, Director Shahuraj Shinde passed away who directed darshan starrer films Snehana Preethina and Arjun
ನಿರ್ದೇಶಕ ಶಾಹುರಾಜ್​ ಶಿಂಧೆ


2011ರಲ್ಲಿ ರಘು ಮುಖರ್ಜಿ, ಕಿರಣ್​ ಹಾಗೂ ರೇಖಾ ಅಭಿನಯದ ಪ್ರೇಮ ಚಂದ್ರಮ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳಿದ್ದರು. ಇದಾದ ನಂತರ ಶಾಹುರಾಜ್​ ಶಿಂಧೆ ಇದ್ದಕ್ಕಿದ್ದಂತೆಯೇ ಸ್ಯಾಂಡಲ್​ವುಡ್​ನಿಂದ ದೂರ ಉಳಿದರು.

Shocked to hear the demise of our director #shahurajshinde who directed movies #snehanapreethina , #champion.... i pray to god to give strength to his family ಸುಮಾರು 9 ವರ್ಷಗಳ ನಂತರ 'ರಂಗ ಮಂದಿರ' ಸಿನಿಮಾದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆಶಿಕಾ ರಂಗನಾಥ್​ ಅಭಿನಯದ ಈ ಸಿನಿಮಾ ರಿಲೀಸ್ ಆಗುವ ಮೊದಲೇ ಶಾಹುರಾಜ್​ ಶಿಂಧೆ ಅವರು ಸಾವನ್ನಪ್ಪಿದ್ದಾರೆ. ಇನ್ನು ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿದೆ. ರಂಗಾಯಣ ರಘು, ಅಚ್ಯುತ್​ ಕುಮಾರ್​. ಟಾಲಿವುಡ್​ ನಟ ಸುಮನ್​ ತಾರಾಗಣದಲ್ಲಿದ್ದಾರೆ.
Published by:Anitha E
First published: