• Home
  • »
  • News
  • »
  • entertainment
  • »
  • Sathya Prakash: ರಾಮ ರಾಮ ರೇ ನಿರ್ದೇಶಕರ ಹೊಸ ಸಿನಿಮಾದ ಟೈಟಲ್​ ಲಾಂಚ್, ಸಾಥ್ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

Sathya Prakash: ರಾಮ ರಾಮ ರೇ ನಿರ್ದೇಶಕರ ಹೊಸ ಸಿನಿಮಾದ ಟೈಟಲ್​ ಲಾಂಚ್, ಸಾಥ್ ನೀಡಿದ ಅಶ್ವಿನಿ ಪುನೀತ್ ರಾಜ್​ಕುಮಾರ್

ಟೈಟಲ್​ ಲಾಂಚ್​

ಟೈಟಲ್​ ಲಾಂಚ್​

Un Lock Raghava: ಈ  ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕತೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.  

  • Share this:

ರಾಷ್ಟ್ರ ಪ್ರಶಸ್ತಿ ವಿಜೇತ (National Award Winner) ನಿರ್ದೇಶಕ ಸತ್ಯಪ್ರಕಾಶ್ (Director Sathya Prakash)  ನಿರ್ಮಾಣದ  ಹೊಸ ಚಿತ್ರದ ಟೈಟಲ್ ಲಾಂಚ್ (Title Launch)  ಇಂದು ಆಗಿದ್ದು, ಈ ವಿನೂತನ ಸಿನಿಮಾದ (Film) ಟೈಟಲ್ ಅನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ (Ashwini Puneeth Rajkumar) ಅವರು ಲಾಂಚ್ ಮಾಡಿದ್ದಾರೆ.  ಸತ್ಯ ಪಿಕ್ಚರ್ಸ್ (Sathya Pictures) ಹೊಸ ಸಿನಿಮಾ ಇದಾಗಿದ್ದು, ಯಾವಾಗಲೂ ವಿಭಿನ್ನ ಕಥೆಯ ಜೊತೆ ಬರುವ ಸತ್ಯ ಪ್ರಕಾಶ್​ ಈ ಬಾರಿ ಜನರಿಗೆ ಏನು ಮೋಡಿ ಮಾಡಲಿದ್ದಾರೆ ಎಂಬುದನ್ನ ಕಾದು ನೋಡಬೇಕಿದೆ.


ಆನ್ ಲಾಕ್ ರಾಘವ ಸಿನಿಮಾ ಟೈಟಲ್​


ಸತ್ಯ ಪಿಕ್ಚರ್ಸ್ ನ ಹೊಸ ಸಿನಿಮಾದ ಹೆಸರು ಆನ್ ಲಾಕ್ ರಾಘವ. ಈ  ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಲಿದ್ದು, ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕತೆ ಬರೆದು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ.  ಮೊದಲಿನಿಂದಲೂ ಸತ್ಯ ಪ್ರಕಾಶ್ ಚಿತ್ರಗಳಿಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಾಥ್ ನೀಡುತ್ತಿದ್ದರು. ಈಗ ಅವರ ಅನುಪಸ್ಥಿತಿಯಲ್ಲಿ ಸತ್ಯ ಪಿಕ್ಚರ್ಸ್ ಹೊಸ ಹೆಜ್ಜೆಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ ನೀಡಿದ್ದಾರೆ.




ಸತ್ಯ ಪ್ರಕಾಶ್​ ರಾಮ ರಾಮ ರೇ ಸಿನಿಮಾ ಮೂಲಕ ಹೆಸರುಗಳಿಸಿದವರು. ಮೊದಲ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪಡೆದ ನಂತರ ಎರಡನೇ ಸಿನಿಮಾಗೆ ಸಹ ರಾಜ್ಯ ಪ್ರಶಸ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆದು ಪ್ರಶಂಸೆಗೆ ಪಾತ್ರರಾಗಿದ್ದ ನಿರ್ದೇಶಕ ಇವರು. ರಾಮಾ ರಾಮಾ ರೇ' ಮತ್ತು 'ಒಂದಲ್ಲಾಎರಡಲ್ಲಾ' ಚಿತ್ರಗಳಲ್ಲಿ ಅಪರೂಪದ ಕಥೆಯನ್ನು ಹೇಳಿದ್ದ ಸತ್ಯ ಪ್ರಕಾಶ್​ ಆನ್ ಲಾಕ್ ರಾಘವ ಸಿನಿಮಾ ಮೂಲಕ ಮತ್ತೊಂದು ಕಥೆ ಹೇಳಲು ಹೊರಟಿದ್ದಾರೆ.


ಇದನ್ನೂ ಓದಿ: ಗಣೇಶನ ಜೊತೆ ಅಪ್ಪು, ಹಬ್ಬದ ಸಂಭ್ರಮದಲ್ಲೂ ಪರಮಾತ್ಮನ ಮರೆಯದ ಅಭಿಮಾನಿಗಳು




ಹೊಸ ಸಿನಿಮಾ ಮೂಲಕ ಮೋಡಿ ಮಾಡಲು ಸಜ್ಜು


ಡಿ. ಸತ್ಯಪ್ರಕಾಶ್​ ನಿರ್ದೇಶನದ ‘ರಾಮಾ ರಾಮಾ ರೇ‘ ಸಿನಿಮಾ 2016ರಲ್ಲಿ ಬಿಡುಗಡೆಗೊಂದು ಸ್ಯಾಂಡಲ್​​ವುಡ್​​ ಸಿನಿ ಪ್ರೇಕ್ಷರನ್ನು ರಂಜಿಸಿತ್ತು. ಸಾಕಷ್ಟು ಜನರು ಈ ಸಿನಿಮಾ ನೋಡಿ ಇಷ್ಟಪಟ್ಟಿದ್ದರು. ಪರ ಭಾಷೆಗಳಿಂದ ಕೂಡ ರಿಮೇಕ್​​​ ಮಾಡುವುದಕ್ಕೆ ಸಾಕಷ್ಟು ಬೇಡಿಕೆ ಬಂತು. ಅತ್ತ ಟಾಲಿವುಡ್​ನಲ್ಲೂ ಈ ಸಿನಿಮಾ ರಿಮೇಕ್​ ಆಯಿತು.ಈ ಸಿನಿಮಾ ಸಾಕಷ್ಟು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ. ನಿರ್ದೇಶಕ ಸತ್ಯಪ್ರಕಾಶ್​ಗೆ​ ರಾಜ್ಯ ಪ್ರಶಸ್ತಿಯನ್ನು ಈ ಸಿನಿಮಾ ತಂದುಕೊಟ್ಟಿತ್ತು.


ಇದನ್ನೂ ಓದಿ: ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಿದ ಸಲ್ಮಾನ್ ಖಾನ್, ಭಜರಂಗಿ ಭಾಯ್‌ಜಾನ್‌ಗೆ ಕಾಡುತ್ತಿದೆಯಾ ಭಯ?


2 ಅದ್ಭುತ ಸಿನಿಮಾಗಳ ನಂತರ ಅವರು ಮ್ಯಾನ್ ಆಫ್ ದಿ ಮ್ಯಾಚ್ ಎನ್ನುವ ಸಿನಿಮಾ ಮಾಡಿದ್ದಾರೆ. ಈಗ ಅನ್​ ಲಾಕ್​ ರಾಘವ ಸಿನಿಮಾ ಮಾಡುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಈ ಸಿನಿಮಾದ ಮೇಲೆ ಹೆಚ್ಚಿದೆ. ಸಿನಿಮಾ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್ ಇತ್ತೀಚಿಗಷ್ಟೆ ಸಿನಿಮಾ ಹಂಚಿಕೆ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್ ಎನ್ನುವ ತಮ್ಮದೆ ಬ್ಯಾನರ್ ಹುಟ್ಟುಹಾಕಿದ್ದಾರೆ.

Published by:Sandhya M
First published: