Sandalwood: ಯುವ ರಾಜ್ ಕುಮಾರ್ ಜೊತೆ ಸಂತೋಷ್ ಆನಂದ್​​ರಾಮ್​​ ಮುಂದಿನ ಸಿನಿಮಾ...?

Yuva Rajkumar: ಪುನೀತ್​​ ರಾಜ್​​ಕುಮಾರ್ ಗಾಗಿ ಸಂತೋಷ್ ಆನಂದ್​ ರಾಮ್ ಮಾಡಿಕೊಂಡಿದ್ದ ಸಿನಿಮಾ ಕಥೆಯನ್ನು ಕೊಂಚ ಬದಲಾವಣೆ ಮಾಡಿ ಯುವ ಅವರ ಜೊತೆ ಮಾಡಲು ಸಂತೋಷ್​ ಆನಂದ್​ ರಾಮ್​​ ಅವರು ಮುಂದಾಗಿದ್ದಾರೆ ಎಂಬ ಗುಸುಗುಸು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬಂದಿದೆ.

ಯುವ ರಾಜ್ ಕುಮಾರ್

ಯುವ ರಾಜ್ ಕುಮಾರ್

 • Share this:
  ಪುನೀತ್ ರಾಜ್ ಕುಮಾರ್(Puneeth Rajkumar) ನಟನೆಯ ರಾಜಕುಮಾರ ಸಿನಿಮಾ ಕನ್ನಡ ಚಿತ್ರರಂಗದಲ್ಲಿ(SandalWood) ಸರ್ವಕಾಲಿಕ ದಾಖಲೆ(Records) ಸೃಷ್ಟಿಸಿದ ಸಿನಿಮಾ.. ಕನ್ನಡಿಗರಿಗೆ ಹತ್ತಿರವಾಗಿದ್ದ ಪುನೀತ್ ರಾಜಕುಮಾರ್ ರನ್ನ ಈ ಸಿನಿಮಾ ಮತ್ತಷ್ಟು ಕನ್ನಡಿಗರಿಗೆ ಹತ್ತಿರ ವನ್ನಾಗಿ ಮಾಡಿಸಿತು.. ಅಂದಹಾಗೆ ಈ ಸಿನಿಮಾ ನಿರ್ದೇಶನ ಮಾಡಿದ್ದು  ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರ(Director) ಸಾಲುಗಳಲ್ಲಿ ಸಂತೋಷ್ ಆನಂದ್‌ರಾಮ್(Santhosh Anand Ram) ಕೂಡ ಒಬ್ಬರು. ನಟನೆಯ ರಾಮಾಚಾರಿ ಸಿನಿಮಾ ನಿರ್ದೇಶನ ಮಾಡಿ ಸೈ ಎನಿಸಿಕೊಂಡಿದ್ದ ಸಂತೋಷ್ ಆನಂದ್ ರಾಮ್, ಪುನೀತ್ ರಾಜಕುಮಾರ್ ಜೊತೆಗೆ ರಾಜಕುಮಾರ ಸಿನಿಮಾ ಮಾಡಿ ಕನ್ನಡಿಗರ ಮನಸ್ಸು ಗೆದ್ರು.. ಅದಾದ ಬಳಿಕ ಮತ್ತೆ ಪುನೀತ್ ರಾಜಕುಮಾರ್ ಜೊತೆಗೆ ಯುವ ರತ್ನ ಸಿನಿಮಾ ಮಾಡಿ ಕನ್ನಡಿಗರಿಗೆ ಮೋಡಿ ಮಾಡಿದರು.. ಇದಾದ ಬಳಿಕ ಅಪ್ಪು ಆಗುವ ಸಂತೋಷ್ ಆನಂದ್ ರಾಮ್ ಕಾಂಬಿನೇಶನ್ ನಲ್ಲಿ ಮತ್ತೊಂದು ಸಿನಿಮಾ ಬರಲಿದೆ ಎಂದು ಹೇಳಲಾಗುತ್ತಿತ್ತು.. ಆದರೆ ದುರಾದೃಷ್ಟವಶಾತ್ ಅಪ್ಪು ನಿಧನದಿಂದ ಸುದ್ದಿ ಸುದ್ದಿಯಾಗಿ ಉಳಿಯಿತು..ಆದರೆ ಅಪ್ಪು ಜೊತೆ ಮಾಡಬೇಕಿದ್ದ ಸಿನಿಮಾವನ್ನು ದೊಡ್ಡಮನೆಯ ಮತ್ತೊಂದು ಕುಡಿಯ ಜೊತೆ ಸಂತೋಷ್ ಆನಂದ್ ರಾಮ್ ಮಾಡಲು ಮುಂದಾಗಿದ್ದಾರಂತೆ.

  ಯುವರಾಜ್ ಕುಮಾರ್ ಜೊತೆ ಸಂತೋಷ್ ಸಿನಿಮಾ..?

  ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ರಾಘವೇಂದ್ರ ರಾಜಕುಮಾರ್ ಪುತ್ರ ಯುವರಾಜಕುಮಾರ್ ರ ಯಾವ ಸಿನಿಮಾವೂ ಬಿಡುಗಡೆ ಆಗಿಲ್ಲ.. ಹೀಗಾಗಿ ಪುನೀತರಾಜಕುಮಾರ್ ಗಾಗಿ ಸಂತೋಷ್ ರಾಮ್ ರೆಡ್ಡಿ ಮಾಡಿಕೊಂಡಿದ್ದ ಸಿನಿಮಾ ಕಥೆಯನ್ನು ಕೊಂಚ ಬದಲಾವಣೆ ಮಾಡಿ ಯುವ ರಾಜಕುಮಾರ್ ಅವರ ಜೊತೆ ಮಾಡಲು ಸಂತೋಷ ರಾಮ ಅವರು ಮುಂದಾಗಿದ್ದಾರೆ ಎಂಬ ಗುಸುಗುಸು ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬಂದಿದೆ..

  ಇದನ್ನೂ ಓದಿ: ದೊಡ್ಮನೆ 'ಯುವರಾಜ'ನ ಚೊಚ್ಚಲ ಚಿತ್ರದ ಫಸ್ಟ್​ ಲುಕ್ ಪೋಸ್ಟರ್​ ಔಟ್..!

  ಇದೀಗ ಕೆಲ ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತಿದ್ದು, ಪುನೀತ್ ಅಕಾಲಿಕ ಮರಣದಿಂದಾಗಿ, ಸಂತೋಷ್ ಜೊತೆ ಮಾಡಬೇಕಿದ್ದ ಸಿನಿಮಾ ಕೆಲಸಗಳು ಸುಮ್ಮನಾಗಿದ್ದವು, ಆದರೀಗ ಕೆಲ ಸುದ್ದಿಗಳು ಕೇಳಿಬರುತ್ತಿದ್ದು, ಅಪ್ಪು ಮಾಡಬೇಕಿದ್ದ ಸಿನಿಮಾವನ್ನು ಯುವರಾಜ್‌ಕುಮಾರ್ ಮಾಡಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಪುನೀತ್‌ಗಾಗಿಯೇ ಮಾಡಿದ್ದ ಈ ಕಥೆಗೆ ಯುವರಾಜ್ ಸೂಕ್ತವಾದ ಆಯ್ಕೆ ಎಂದು ಸಂತೋಷ್ ತೀರ್ಮಾನಿಸಿದ್ದಾರೆ. ಯುವರಾಜ್ ಅವರ `ಯುವ ರಣಧೀರ ಕಂಠೀರವ' ಸಿನಿಮಾದ ಕೆಲಸಗಳು ಬಾಕಿಹಿದ್ದು ಅದಾದ ನಂತರ ಈ ಸಿನಿಮಾಗೆ ಕೈ ಆಕಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ.ಇದಕ್ಕಾಗಿ ಸಂತೋಷ್ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ.

  ಜನವರಿಯಲ್ಲಿ ಸೆಟ್ಟೇರಲಿರುವ ಸಿನಿಮಾ...?

  ಎಲ್ಲವೂ ಅಂದುಕೊoಡoತೆ ಆದರೆ, ಜನವರಿ ಮೂರು ಇಲ್ಲ ನಾಲ್ಕನೇ ವಾರದಲ್ಲಿ ಈ ಸಿನಿಮಾ ಸೆಟ್ಟೇರಲದೆ. ಆದರೇ ಈ ಸಿನಿಮಾವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬುದು ಖಚಿತವಾಗಿಲ್ಲ. ಮೂಲಗಳ ಪ್ರಕಾರ ಹೊಂಬಾಳೆ ಬ್ಯಾನರ್ ಅಥವಾ ಪಿ,ಆರ್,ಕೆ ಸಂಸ್ಥೆಯಿoದ ನಿರ್ಮಾಣವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

  ಇದನ್ನೂ ಓದಿ: ಹಸೆಮಣೆ ಏರಲು ಸಿದ್ದನಾದ ರಾಜ್​​ ಕುಡಿ ಯುವರಾಜ್​​ಕುಮಾರ್

  ಇನ್ನು ಸಂತೋಷ್ ಆನಂದ್ ರಾಮ್ ಯುವರತ್ನ ನಂತರ ಮತ್ತೆ ಅಪ್ಪು ಜೊತೆ ಸಿನಿಮ ಮಾಡುತ್ತಾರೆ, ಅವರಿಗಾಗಿಯೇ ಸ್ಟೋರಿಕೂಡ ಮಾಡಿಕೊಂಡಿದ್ದಾರೆ ಎನ್ನುವ ವಿಚಾರಗಳು ತಿಳಿದು ಬಂದಿದ್ದವು. ಆದರೆ ಪುನೀತ್ ಜೇಮ್ಸ್ ಚಿತ್ರದಲ್ಲಿ ಬ್ಯೂಸಿ ಯಾಗಿದ್ದರು. ಇದರ ನಡುವೆ ಜಗ್ಗೇಷ್ ಅವರೊಟ್ಟಿಗೆ ಹಾಸ್ಯ ಮನರಂಜನೆ ಕಥೆ `ರಾಘವೇಂದ್ರ ಸ್ಟೊರ‍್ಸ್' ಸಿನಿಮಾ ಮಾಡುವುದಕ್ಕೆ ಮುಂದ್ದಾಗಿದ್ದರು. ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ. ಈಗ ವಿಷ್ಯ ಏನಪ್ಪಾ ಅಂದ್ರೆ ಸಂತೋಷ್ ಆನಂದ್ ರಾಮ್ ಅಪ್ಪು ಜೊತೆಗೆ ಮಾಡಬೇಕು ಎಂದುಕೊಂಡಿದ್ದ ಸಿನಿಮಾವನ್ನು, ದೊಡ್ಡಮನೆಯ ಮತ್ತೊಂದು ಕುಡಿಯ ಜೊತೆ ಮಾಡಲು ಮುಂದಾಗಿದ್ದಾರಂತೆ..
  Published by:ranjumbkgowda1 ranjumbkgowda1
  First published: