ರಕ್ಷಿತ್ ಶೆಟ್ಟಿ (Rakshit Sheetty) ನಟನೆಯ 777 ಚಾರ್ಲಿ (777 Charlie) ಸ್ಯಾಂಡಲ್ವುಡ್ನ (Sandalwood) ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದು. ಇದೆ ಜೂನ್ 10 ರಂದು ಬಿಡುಗಡೆಗೆ ಸಹ ಈ ಚಿತ್ರ ಸಿದ್ದವಾಗಿದ್ದು, ಅಭಿಮಾನಿಗಳ ನಿರೀಕ್ಷೆ ಬಹಳಷ್ಟಿದೆ. ಈಗಾಗಲೇ ಟ್ರೇಲರ್ ಮೂಲಕ ಈ ಚಿತ್ರ ಕುತೂಹಲ ಹುಟ್ಟಿಸಿದ್ದು, ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾದು ಕುಳಿತಿದ್ದಾರೆ. ಇನ್ನು ಈಗಾಗಲೇ ಈ ಚಿತ್ರತಂಡ ಸಿನಿಮಾವನ್ನು ಮಾಧ್ಯಮದವರಿಗೆ ಹಾಗೂ ಸಿನಿರಂಗದವರಿಗೆ ವಿಶೇಷ ಶೋ ಮೂಲಕ ತೋರಿಸಿದ್ದು, ಎಲ್ಲರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕನ್ನಡ ಚಿತ್ರರಂಗದ ನಿರ್ದೇಶಕರೊಬ್ಬರು ವಿಶೇಷವಾಗಿ ರಕ್ಷಿತ್ ಅವರ ತಂಡಕ್ಕೆ ಶುಭಕೋರಿದ್ದಾರೆ.
ಹೌದು, ಪುನೀತ್ ರಾಜ್ಕುಮಾರ ಅಭಿನಯದ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್ ಪೋಸ್ಟ್ ಕಾರ್ಡ್ ಮೂಲಕ 777 ಚಾರ್ಲಿ ಚಿತ್ರತಂಡಕ್ಕೆ ಹಾರೈಸಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನೋಡಿದ ನಂತರ ಅದರ ಬಗ್ಗೆ ಸಾಮಾಜಿಕಾ ಜಾಲಾತಾಣದಲ್ಲಿ ಬರೆಯುವುದು ವಾಡಿಕೆ, ಆದರೆ ಆನಂದರಾಮ್ ಮಾತ್ರ ಪತ್ರ ಬರೆಯುವ ಮೂಲಕ ವಿಶೇಷವಾಗಿ ಚಿತ್ರವನ್ನು ಹಾಗೂ ನಟ ರಕ್ಷಿತ್ ಶೆಟ್ಟಿಯನ್ನು ಹಾಡಿ ಹೊಗಳಿದ್ದಾರೆ. ಇನ್ನು ಅಷ್ಟೇ ಅಲ್ಲದೇ ಇದೀಗ ಅವರು ಬರೆದಿರುವ ಆ ಒಂದು ಸಾಲು ಸ್ವಲ್ಪ ವೈರಲ್ ಆಗುತ್ತಿದ್ದು, ಅದು ರಶ್ಮಿಕಾಗೆ ಅವರು ಕೊಟ್ಟ ಟಾಂಗ್ ಎನ್ನಲಾಗುತ್ತಿದೆ.
ರಕ್ಷಿತ್ ಶೆಟ್ಟಿಯನ್ನು ಹಾಡಿ ಹೊಗಳಿದ ನಿರ್ದೇಶಕ
ಕಾರ್ಡ್ನಲ್ಲಿ ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಅರ್ಥ ಮಾಡಿಸುವ ಚಿತ್ರ ಚಾರ್ಲಿ. ರಕ್ಷಿತ್ ಶೆಟ್ಟಿ ಶ್ರೇಷ್ಠವಾದ ಮಾನವೀಯತೆಯನ್ನು ಮೆರೆದಿದ್ದಾರೆ. ನೈಜ ಬದುಕಿನಲ್ಲಿ ಅಂಥ ವ್ಯಕ್ತಿಯಾಗಿದ್ದರೆ ಮಾತ್ರ ಮೂರು ವರ್ಷ ಕಾದು ಈ ಚಿತ್ರವನ್ನು ತೆರೆಯ ಮೇಲೆ ತರುವುದಕ್ಕೆ ಸಾಧ್ಯ. ಇಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು ಎಂದು ಚಿತ್ರದ ಬಗ್ಗೆ ಪ್ರಶಂಸನೀಯವಾಗಿ ಬರೆದಿದ್ದಾರೆ. ಈ ರೀತಿ ಬರೆದು ವಿಶ್ ಮಾಡಿರುವುದು ನಿಜಕ್ಕೂ ಸಂತೋಷಕರ ಹಾಗೂ ಹೆಮ್ಮೆಯ ವಿಚಾರ. ಆದರೆ ಈಗ ಸುದ್ದಿ ಇದಲ್ಲ. ಈ ಪತ್ರದಲ್ಲಿರುವ ಕೊನೆಯ ಸಾಲುಗಳು.
ಇದನ್ನೂ ಓದಿ: ಮತ್ತೆ ಹಾಟ್ ಲುಕ್ನಲ್ಲಿ ಕಾಣಿಸಿಕೊಂಡ ಸಮಂತಾ, ಫೋಟೋ ನೋಡಿ ಪಡ್ಡೆ ಹೈಕ್ಳು ಕ್ಲೀನ್ ಬೋಲ್ಡ್!
ಇಲ್ಲಿ ಅವರು ಇಂತಹ ವ್ಯಕ್ತಿಯನ್ನು ಕಳೆದುಕೊಂಡವರು ನತದೃಷ್ಟರು ಎಂದು ಬರೆಯುವ ಮೂಲಕ ರಶ್ಮಿಕಾಗೆ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಆದರೆ ಅವರ ಯಾವುದೇ ನೇರ ಉಲ್ಲೇಖ ಮಾಡಿಲ್ಲ. ಇನ್ನು ಅವರು ಈ ಪೋಸ್ಟ್ ಕಾರ್ಡ್ನ ಚಿತ್ರವನ್ನು ಫೇಸ್ಬುಕ್ನಲ್ಲಿ ಸಹ ಶೇರ್ ಮಾಡಿಕೊಮಡಿದ್ದು, ಕಾಮೆಂಟ್ಗಳು ಮಾತ್ರ ರಶ್ಮಿಕಾ ಕಡೆಗೆ ಬೆರಳು ಮಾಡಿ ತೋರಿಸುತ್ತಿವೆ. ಅದೇನೇ ಬಹಳ ಪರಿಶ್ರಮದಿಂದ ತಯಾರಾದ ಈ ಚಿತ್ರಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬಿಡುಗಡೆಯಾದ ಮೇಲೆ ಇನ್ನೂ ಯಶಸ್ಸು ಸಿಗಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಜೂನ್ 10 ಕ್ಕೆ ಚಾರ್ಲಿ ರಿಲೀಸ್
ಇನ್ನು ಈ ಚಿತ್ರದ ಕ್ರೇಜ್ ಯಾವ ಮಟ್ಟಿಗೆ ಇದೆ ಎಂದರೆ ಥಿಯೇಟರ್ ಒಂದರಲ್ಲಿ ಚಾರ್ಲಿ ಶ್ವಾನದ ಪೋಸ್ಟರ್ ಹಾಕಲಾಗಿದೆ. ಅದು ಕರ್ನಾಟಕದಲ್ಲಿ ಅಲ್ಲ, ತಮಿಳುನಾಡಿನ ಥಿಯೇಟರ್ನಲ್ಲಿ. ಹೌದು, 777 ಚಾರ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಇದು ಕನ್ನಡ ಮಾತ್ರವಲ್ಲದೇ, ವಿವಿಧ ಭಾಷೆಗಳಲ್ಲಿ ಸಹ ಬಿಡುಗಡೆಯಾಗುತ್ತಿದೆ. ಈ ತಮಿಳುನಾಡಿನಲ್ಲಿ ಸಹ ಚಿತ್ರ ರಿಲೀಸ್ ಆಗುತ್ತಿದ್ದು, ಚೈನ್ನೈನ ಸತ್ಯಂ ಸಿನಿಮಾಸ್ ಎದುರು ಚಾರ್ಲಿ ಶ್ವಾನದ ಬೃಹತ್ ಕಟೌಟ್ ನಿಲ್ಲಿಸಲಾಗಿದೆ. ಸದ್ಯ ಅದರ ಫೋಟೋವನ್ನು ಚಿತ್ರತಂಡ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಈಗ ಆ ಫೋಟೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಬ್ಲಾಕ್ ಡ್ರೆಸ್ನಲ್ಲಿ ರಶ್ಮಿಕಾ ಮಂದಣ್ಣ ಮಿಂಚಿಂಗ್, ನೆಕ್ಸ್ಟ್ ಯಾವ್ ಫಿಲ್ಮ್ಗೆ ಈ ಫೋಟೋಶೂಟ್ ಎಂದ ಅಭಿಮಾನಿಗಳು
ಈ ರೀತಿ ಕನ್ನಡದ ಚಿತ್ರಕ್ಕೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಸಂತಸದ ವಿಚಾರವಾಗಿದ್ದು, ಈ ಚಿತ್ರ ಎಲ್ಲರಿಗೂ ಇಷ್ಟವಾಗಲಿದೆ ಎಂಬ ಭರವಸೆಯಲ್ಲಿ ಚಿತ್ರತಂಡವಿದೆ. ರಕ್ಷಿತ್ ಶೆಟ್ಟಿ ತಮ್ಮ ಪರಂವಾಹ ಸ್ಟೋಡಿಯೋಸ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ, ಸಂಗೀತಾ ಸೇರಿದಂತೆ ಅನೇಕರು ನಟಿಸಿದ್ದು, ಕಿರಣ್ ರಾಜ್ ಅವರ ನಿರ್ದೇಶನ ಈ ಚಿತ್ರಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ