ಪವರ್​ ಸ್ಟಾರ್​ ಪುನೀತ್​ ಆರಂಭಿಸಿರುವ 'ಶೇಕಿ' ಚಾಲೆಂಜ್​ ಸ್ವೀಕರಿಸಿದ ಸಂತೋಷ್​ ಆನಂದ್​ರಾಮ್​..!

news18
Updated:August 13, 2018, 3:56 PM IST
ಪವರ್​ ಸ್ಟಾರ್​ ಪುನೀತ್​ ಆರಂಭಿಸಿರುವ 'ಶೇಕಿ' ಚಾಲೆಂಜ್​ ಸ್ವೀಕರಿಸಿದ ಸಂತೋಷ್​ ಆನಂದ್​ರಾಮ್​..!
news18
Updated: August 13, 2018, 3:56 PM IST
ಅನಿತಾ ಈ, ನ್ಯೂಸ್​ 18 ಕನ್ನಡ 

ಇತ್ತೀಚೆಗಷ್ಟೆ ಫೇಸ್​ಬುಕ್​ನಲ್ಲಿ ಪವರ್​ ಸ್ಟಾರ್ ಪುನೀತ್​ ರಾಜ್​ಕುಮಾರ್​ 'ಹ್ಯಾಂಡ್​ಶೇಕ್' ​ಚಾಲೆಂಜ್​ ಆರಂಭಸಿದ್ದರು.  ಗಟ್ಟಿಯಾಗಿ ಕೈ ಹಿಡಿದು ಕುಲುಕುವುದು  ಆತ್ಮವಿಶ್ವಾಸದ ಸಂಕೇತ ಎಂದು ತಾವು ಕೈ ಕುಲುಕಿದ ಚಿತ್ರವನ್ನು ಪೋಸ್ಟ್​ ಮಾಡುವುದರೊಂದಿಗೆ ಈ ಸವಾಲನ್ನು ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಹಾಗೂ ಡ್ಯಾನಿಶ್​ ಸೇಠ್​ ಅವರಿಗೆ ನೀಡಿದ್ದರು.

ಈಗ ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಈ ಸವಾಲನ್ನು ಸ್ವೀಕರಿಸಿದ್ದು, ತಾವು ಕೈ ಕುಲುಕಿರುವ ಚಿತ್ರವನ್ನು ಪೋಸ್ಟ್​ ಮಾಡಿದ್ದಾರೆ. ಜತೆಗೆ ನಿರ್ದೇಶಕ ಯೋಗಿ ಜಿ. ರಾಜ್​ ಹಾಗೂ ವಿಜಯ್​ ನಾಗೇಂದ್ರ ಅವರಿಗೆ ಈ ಸವಾಲನ್ನು ಪಾಸ್​ ಮಾಡಿದ್ದಾರೆ.

ಹೊಸ 'ಶೇಕಿ ಚಾಲೆಂಜ್​'ಗೆ ಕಿಕ್​ ಸ್ಟಾರ್ಟ್​ ಕೊಟ್ಟ ಪವರ್​ಸ್ಟಾರ್​ ಪುನೀತ್​..! ಸುದ್ದಿ ಓದಲು ಈ ಲಿಂಕ್​ ಕ್ಲಿಕ್​ ಮಾಡಿ...

https://kannada.news18.com/news/entertainment/puneeth-rajkumar-started-the-new-74233.html



ನಟ ಡ್ಯಾನಿಶ್​ ಸೇಠ್​ಗೂ ಪುನೀತ್​ ಈ ಸವಾಲು ನೀಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿರುವ ಡ್ಯಾನಿಶ್​, ಮೊದಲು ಪುನೀತ್​ ಅವರ ಕೈ ಕುಲುಕುವ ಮೂಲಕ ಈ ಸವಾಲನ್ನು ಆರಂಭಿಸುವುದಾಗಿ ಮಾರ್ಮಿಕವಾಗಿ ಹೇಳಿದ್ದಾರೆ.
Loading...

First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ