Bigg Boss OTT: ಕಿಚ್ಚನ ವಾರದ ಕಥೆಯಲ್ಲಿ ರಿಷಬ್ ‘ಹರಿಕಥೆ’, ಸುದೀಪ್ ಪ್ರಶ್ನೆಗಳಿಗೆ ಶೆಟ್ರ ಪಂಚಿಂಗ್ ಆನ್ಸರ್

ಬಿಗ್​ಬಾಸ್​ ವಾರದ ಕಥೆ ಕಾರ್ಯಕ್ರಮದ ವೇದಿಕೆಗೆ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಹಾಗೂ ನಟಿ ತಪಸ್ವಿನಿ ಆಗಮಿಸಿದ್ರು. ಬಿಗ್​ಬಾಸ್​ ವೇದಿಕೆ ಮೇಲೆ ಯಾರೇ ಬಂದ್ರು  ಕಿಚ್ಚ ಸುದೀಪ್​ ಸುಮ್ಮನಿರ್ತಾರಾ? ಸಖತ್ ಆಗಿಯೇ ರಿಷಬ್​ ಶೆಟ್ಟಿ ಅವರ ಕಾಲು ಎಳೆದಿದ್ದಾರೆ. 

ಬಿಗ್​ಬಾಸ್​ ವೇದಿಕೆಯಲ್ಲಿ ರಿಷಬ್​

ಬಿಗ್​ಬಾಸ್​ ವೇದಿಕೆಯಲ್ಲಿ ರಿಷಬ್​

  • Share this:
ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (Bigg Boss)​ ಈ ಬಾರಿ ಓಟಿಟಿಯಲ್ಲಿ (OTT) ಪ್ರಸಾರವಾಗ್ತಿದ್ದು, ಜನರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ತಮ್ಮ ಜೀವನ ಅನೇಕ ವಿಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ. ಹೀಗಾಗಿ ಎಲ್ಲೆಲ್ಲೂ ಬಿಗ್​ ಬಾಸ್​ ಸ್ಪರ್ಧಿಗಳ (Bigg Boss Contestants) ಕುರಿತ ಚರ್ಚೆಗಳು ಹೆಚ್ಚಾಗಿದೆ. ಬಿಗ್​ ಬಾಸ್​ ಶುರುವಾಗಿ 1 ವಾರ ಕಳೆದಿದೆ. ಹೀಗಾಗಿ ವೀಕೆಂಡ್​ ಸ್ಪೆಷಲ್​ ಸಂಚಿಕೆ ವಾರದ ಕಥೆ ಕಿಚ್ಚನ ಜೊತೆ ನಡೆದಿದ್ದು, ಬಿಗ್​ಬಾಸ್​ ವೇದಿಕೆಗೆ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಆಗಮಿಸಿದ್ದಾರೆ.

ಕಿಚ್ಚನ ಜೊತೆ ರಿಷಬ್​ ಹರಿಕಥೆ

ಬಿಗ್​ಬಾಸ್​ ವಾರದ ಕಥೆ ಕಾರ್ಯಕ್ರಮದ ವೇದಿಕೆಗೆ ನಿರ್ದೇಶಕ ಹಾಗೂ ನಟ ರಿಷಬ್​ ಶೆಟ್ಟಿ ಹಾಗೂ ನಟಿ ತಪಸ್ವಿನಿ ಆಗಮಿಸಿದ್ರು. ಬಿಗ್​ಬಾಸ್​ ವೇದಿಕೆ ಮೇಲೆ ಯಾರೇ ಬಂದ್ರು  ಕಿಚ್ಚ ಸುದೀಪ್​ ಸುಮ್ಮನಿರ್ತಾರಾ? ಸಖತ್ ಆಗಿಯೇ ರಿಷಬ್​ ಶೆಟ್ಟಿ ಅವರ ಕಾಲು ಎಳೆದಿದ್ದಾರೆ.ನಟ, ನಿರ್ದೇಶಕ ರಿಷಬ್​ಗೆ ಪ್ರಶ್ನೆಗಳ ಸುರಿಮಳೆ

ಸಿನಿಮಾ ಕುರಿತು ಮಾತುಕಥೆ ಆರಂಭಿಸಿದ ಕಿಚ್ಚ ಸುದೀಪ್ ಅವರು ರಿಷಬ್ ಮುಂದಿನ ಸಿನಿಮಾ ಕುರಿತು ಮಾತುಕಥೆ ನಡೆಸಿದ್ರು. ಬಳಿಕ ರಿಷಬ್​ಗೆ ಒಂದಷ್ಟು ತರಲೆ ಪ್ರಶ್ನೆ ಕೇಳಿ ಎಲ್ಲರನ್ನು ನಕ್ಕು ನಲಿಸಿದ್ದಾರೆ.  ಹುಟ್ಟಿದಾಗಿನಿಂದ ರಿಷಬ್​ ಫುಲ್​ ಸತ್ಯವನ್ನೇ ಮಾತಾಡಿದ್ದಾರಾ ಎಂಬ ಪ್ರಶ್ನೆಗೆ ರಿಷಬ್​ ನೋ ಎಂದು ಉತ್ತರ ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸುದೀಪ್​, ರಿಷಬ್​ ಅವರು ಮುಂದೆ ಕೊಡುವ ಉತ್ತರ ಸತ್ಯನೋ ಸುಳ್ಳೊ ಅನ್ನೋ ಬಗ್ಗೆ ನೀವೆ ನಿರ್ಧರಿಸಿಕೊಳ್ಳಿ ಎಂದು ಜನರಿಗೆ ತಿಳಿಸಿದ್ದಾರೆ.

ಟ್ರೋಲ್​ ವಿಚಾರದಲ್ಲಿ ಸಿಟ್ಟಾಗಿದ್ದಾರಾ ಸೋನು?

 ರಾಜ್ ಬಿ ​ಶೆಟ್ಟಿಗೆ ಕೂದಲಿನ ಬಗ್ಗೆ ಸುದೀಪ್​ ಪ್ರಶ್ನೆ

ರಾಜ್ ಬಿ ​ಶೆಟ್ಟಿ ಅವರಿಗೆ ಕೂದಲು ಇಲ್ಲದಿರೋದ್ದಕ್ಕೆ ರಿಷಬ್​ ಕೂಡ ಕಾರಣನಾ? ಎಂದು ಸುದೀಪ್​ ಪ್ರಶ್ನೆ ಮಾಡಿದ್ರು. ಇದಕ್ಕೆ ನಗುತ್ತಾ ಉತ್ತರ ಕೊಟ್ಟ ರಿಷಬ್​, ನಾನು ಅವರನ್ನು ಮೀಟ್​ ಮಾಡಿದಾಗಲೇ ಅವರ ತಲೆಯಲ್ಲಿ ಕೂದಲು ಇರಲಿಲ್ಲ ಎಂದು ಹೇಳಿದ್ದಾರೆ. ಹೌದಾ ಎಂದ ಸುದೀಪ್​ ಮುಂದೆ ಬರೋದು ಇಲ್ವಾ ಅನ್ನೋದು ಗೊತ್ತಿತ್ತಾ ಎಂದು ಕಾಲೆಳಿದ್ದಾರೆ.

Director Rishabh Shetty came to the stage of Bigg Boss OTT show
ಬಿಗ್​ಬಾಸ್​ ವೇದಿಕೆಯಲ್ಲಿ ರಿಷಬ್​


ಊರಿಗೆ ಹೋದಾಗಲ್ಲೆಲ್ಲಾ ಫುಲ್ ಪಾರ್ಟಿ

ಸಿನಿಮಾ ಕಥೆ ಬರೆಯಲು 10 ದಿನ ಊರಿಗೆ ಹೋದ್ರೆ 5 ದಿನ ಪಾರ್ಟಿ ಮಾಡ್ತೀರಾ? ಎಂಬ ಸುದೀಪ್​ ಪ್ರಶ್ನೆಗೆ ಉತ್ತರಿಸಿದ ರಿಷಬ್​ ಹತ್ತೂ ದಿನ ಪಾರ್ಟಿ ನಡೆಯಬಹುದು ಎಂದು ಹೇಳೋ ಮೂಲಕ ಕಿಚ್ಚ ಸುದೀಪ್​ ಅವರನ್ನು ನಗೆಗಡಲಿನಲ್ಲಿ ಮುಳುಗಿಸಿದ್ರು.ಕಿಚ್ಚ ಸುದೀಪ್​ ಹಾಗೂ ರಿಷಬ್​ ನಡುವಿನ ಮಾತು ಹಾಗೂ ಹರಟೆಯನ್ನು ಕಂಪ್ಲೀಟ್​ ಆಗಿ ನೋಡಲು ವೀಕೆಂಡ್​ ಸ್ಪೆಷಲ್ ವಾರದ ಕಥೆ ಕಿಚ್ಚನ ಜೊತೆ ರಾತ್ರಿ 7ಕ್ಕೆ ತಪ್ಪದೇ  ವೀಕ್ಷಿಸಿ

ಇದನ್ನೂ ಓದಿ:Bigg Boss OTT: ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಸೋನು ಗೌಡ ವಿಡಿಯೋ ಚರ್ಚೆ; 'ಅವಳಿಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ'

ಓಟಿಟಿಯಲ್ಲಿ  ಹರಿಕಥೆ ಅಲ್ಲ ಗಿರಿಕಥೆ

ಇತ್ತೀಚಿಗಷ್ಟೆ ತೆರೆಕಂಡು ಪ್ರೇಕ್ಷಕರನ್ನು ನಗೆಕಡಲಲ್ಲಿ ತೇಲಿಸಿದ ‘ಹರಿಕಥೆ ಅಲ್ಲ ಗಿರಿಕಥೆ ( Harikathe Alla Girikathe ) ಸಿನಿಮಾ ಇದೀಗ ಓಟಿಟಿಯಲ್ಲಿ ರಿಲೀಸ್ ಅಗಿದೆ. ಈ ಚಿತ್ರದಲ್ಲಿ ರಚನಾ ಇಂದೆರ್ ಹಾಗೂ ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಹರಿಕಥೆ ಅಲ್ಲ ಗಿರಿಕಥೆ ಚಿತ್ರವನ್ನು ನೀವು ವೂಟ್ ಸೆಲೆಕ್ಟ್‌ನಲ್ಲಿ (Voot Select) ನೋಡಬಹುದಾಗಿದೆ. ಜನರನ್ನು ಮತ್ತಷ್ಟು ನಗಿಸಲು ಓಟಿಟಿಯಲ್ಲಿ ಹರಿಕಥೆ ಅಲ್ಲ ಗಿರಿಕಥೆ ಬರ್ತಿದೆ. ವೀಕೆಂಡ್​ನಲ್ಲಿ ಸಿನಿಮಾ ನೋಡೋ ಜನರಿಗೆ ಹರಿಕಥೆ  ಅಲ್ಲ ಗಿರಿಕಥೆ ಹಾಸ್ಯದ ಕಿಕ್​ ಕೊಡಲಿದೆ. ಕರಣ್ ಅನಂತ್ ಹಾಗೂ ಅನಿರುದ್ಧ ಮಹೇಶ್, ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿದರೆ, ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಿಸಿದ್ದಾರೆ.
Published by:Pavana HS
First published: