News18 India World Cup 2019

ರಿಶಭ್​ ಶೆಟ್ಟಿ ನಿರ್ದೇಶನದಲ್ಲಿ ಬಿಗ್​ಬಿ ಅಮಿತಾಭ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಸುದೀಪ್​

news18
Updated:August 3, 2018, 6:21 PM IST
ರಿಶಭ್​ ಶೆಟ್ಟಿ ನಿರ್ದೇಶನದಲ್ಲಿ ಬಿಗ್​ಬಿ ಅಮಿತಾಭ್ ಜತೆ ತೆರೆ ಹಂಚಿಕೊಳ್ಳಲಿದ್ದಾರೆ ಸುದೀಪ್​
news18
Updated: August 3, 2018, 6:21 PM IST
- ಹರೀಶ್, ನ್ಯೂಸ್18 ಕನ್ನಡ 

ಅಮಿತಾಭ್​ ಬಚ್ಚನ್ ಕನ್ನಡಕ್ಕೆ ಬರುತ್ತಿದ್ದಾರೆ ಅಂತ ಈಗಲೇ ಹೇಳೋದು ಕಷ್ಟವಾಗಬಹುದು. ಆದರೆ ಕನ್ನಡದ ಕಿಚ್ಚ ಸುದೀಪ್ ಜೊತೆ ಅಮಿತಾಭ್​  ಬಚ್ಚನ್ ನಟಿಸ್ತಾರೆ ಅನ್ನೋದು ಮಾತ್ರ ಖಚಿತವಾಗಿದೆ. ಅದರಲ್ಲೂ ಸುದೀಪ್ ಮತ್ತು ಅಮಿತಾಭ್​ ಬಚ್ಚನ್ ಇಬ್ಬರೂ ಈ ಚಿತ್ರದಲ್ಲಿ ನಾಯಕರಂತೆ. ಇನ್ನೂ ಮಜಾ ಅಂದರೆ ಈ ಚಿತ್ರವನ್ನ ಹಿಂದಿಯಲ್ಲಿ ಮಾತ್ರ ಮಾಡಬೇಕು ಅನ್ನೊದು ಕಿರಿಕ್ ಪಾರ್ಟಿ ನಿರ್ದೇಶಕ ರಿಶಬ್ ಶೆಟ್ಟಿಯವ ಪ್ಲಾನ್​.

ಕಿರಿಕ್ ಪಾರ್ಟಿ ಚಿತ್ರದಿಂದ ಸ್ಯಾಂಡಲ್​ವುಡ್‍ನಲ್ಲಿ ಭರವಸೆಯ ನಿರ್ದೇಶಕ ಅನ್ನಿಸಿಕೊಂಡ ರಿಶಬ್ ಶೆಟ್ಟಿ, ಇದೀಗ ಬಾಲಿವುಡ್‍ನತ್ತ ಹೊರಟಿದ್ದಾರೆ. ಬೇರೆ ಯಾರಾದರೂ ಆಗಿದಿದ್ದರೆ ಸಣ್ಣ ಪುಟ್ಟ ಕಂದಮ್ಮಗಳ ಜೊತೆ ಹಿಂದಿ ಸಿನಿಮಾ ಮಾಡಿ ತಮ್ಮ ಎಂಟ್ರಿಗೆ ಓಂ ನಮಃ ಅಂದು ಬಿಡುತ್ತಿದ್ದರು. ಆದರೆ ರಿಶಬ್ ಶೆಟ್ಟಿ ಕಡಿಮೆಗೆ ಸೆಟಲ್​ ಆಗೋ ಆಸಾಮೀನೆ ಅಲ್ಲ. ಹಾಗಾಗಿ ರಿಶಭ್​ ಮೊದಲ ಬಾರಿಗೆ ಹಿಂದಿಯಲ್ಲಿ ನಿರ್ದೇಶನ ಮಾಡುತ್ತಿರೊ ಚಿತ್ರಕ್ಕೆ ಅಮಿತಾಭ್​ ಬಚ್ಚನ್‍ರನ್ನ ಆಯ್ಕೆ ಮಾಡ್ಕೊಂಡಿದ್ದಾರೆ. ಅಷ್ಟೇ ಅಲ್ಲ ಅಮಿತಾಭ್​ರಿಗೆ ಕಥೆ ಹೇಳಿ `ಭೇಷ್ ಬೇಟ, ಅಚ್ಚಾ ಹೇ ಕರೇಂಗೆ' ಅನ್ನೊ ಉತ್ತರ ಪಡೆದು ಕರ್ನಾಟಕಕ್ಕೆ ವಾಪಾಸ್ ಆಗಿದ್ದಾರೆ.

ಈಗಾಗಲೇ ಈ ವಿಷಯ ಕಿಚ್ಚ ಸುದೀಪ್‍ಗೂ ಗೊತ್ತಾಗಿದೆ. ಅವರಿಗೂ ರಿಶಭ್​ ಶೆಟ್ಟಿ ಸಣ್ಣದೊಂದು ಎಳೆ ಹೇಳಿ ಥ್ರಿಲ್ಲಾಗಿಸಿದ್ದಾರೆ. ಆದರೆ ಅಮಿತಾಭ್​ ಬಚ್ಚನ್ ಅವರಿಗೆ ಹೇಳಿದಷ್ಟು ವಿವರವಾಗಿ ಸುದೀಪ್ ಅವರಿಗೆ ಇನ್ನು ಫೈನಲ್ ರೀಡಿಂಗ್ ಕೊಟ್ಟಿಲ್ಲ. ಆದರೆ ರಿಶಭ್​ ಶೆಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಕ್ರಮಕ್ಕಾಗಿ, ರಿಶಭ್​ ಅಲ್ಲೆಲ್ಲೊ ದೂರದಲ್ಲಾದ ಮದುವೆಗಾಗಲಿ ಸುದೀಪ್ ಸಮಯ ಮಾಡಿಕೊಂಡು ಹೋಗಿ ಬರುತ್ತಾರೆ ಅಂದ್ರೆ ರಿಶಭ್​ ಮೇಲೆ ಅವರಿಗಿರೊ ಪ್ರೀತಿ ಮತ್ತು ಅವರ ಕೆಲಸದ ಮೇಲಿರೊ ವಿಶ್ವಾಸ ಅದೆಷ್ಟಿರಬಹುದು.

ಸುದೀಪ್ ಮತ್ತು ಅಮಿತಾಭ್ ಬಚ್ಚನ್ ಇಬ್ಬರೂ ಈ ಚಿತ್ರದಲ್ಲಿ ದೊಡ್ಡ ದೊಡ್ಡ ಪಾತ್ರಗಳನ್ನೇ ಮಾಡಲಿದ್ದಾರೆ. ಇದರಲ್ಲಿ ಯಾರು ಕಡಿಮೆ ಯಾರು ಹೆಚ್ಚು ಅನ್ನೋದಕ್ಕಿಂತ ಯಾರು ಯಾರನ್ನ ಮೀರಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ  ಅನ್ನೋದೆ ಕಾತುರದ ವಿಷಯ. ಇನ್ನು ಈ ಸಿನಿಮಾ ಯಾವಾಗ ಆರಂಭ ಆಗುತ್ತೆ ಅಂತ ನೋಡಿದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆದ ತಕ್ಷಣೆವೇ ರಿಶಬ್ ಮತ್ತು ಕಿಚ್ಚ ಬಾಲಿವುಡ್‍ಗೆ ವಿಮಾನ ಹತ್ತ ಬಹುದು. ಇನ್ನೂ ಒಂದು ವಿಷಯ ಅಂದರೆ ಬರೀ ಹಿಂದಿಯಲ್ಲಿ ಮಾತ್ರ ಮಾಡೋಣ ಅಂದುಕೊಂಡಿರೊ ಈ ಚಿತ್ರ ದಕ್ಷಿಣದ ಭಾಷೆಗಳಲ್ಲಿ ಮೂಡಿಬಂದರೂ ಆಶ್ಚರ್ಯವಿಲ್ಲ.

 
First published:August 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...