• Home
  • »
  • News
  • »
  • entertainment
  • »
  • HBD Ranvit Shetty: ರಿಷಭ್​ ಶೆಟ್ಟಿ ಮಗನ ಮೊದಲ ಹುಟ್ಟುಹಬ್ಬ: ವೈರಲ್​ ಆಯ್ತು ಮತ್ತೊಂದು ವಿಡಿಯೋ..!

HBD Ranvit Shetty: ರಿಷಭ್​ ಶೆಟ್ಟಿ ಮಗನ ಮೊದಲ ಹುಟ್ಟುಹಬ್ಬ: ವೈರಲ್​ ಆಯ್ತು ಮತ್ತೊಂದು ವಿಡಿಯೋ..!

ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಭ್​ ಶೆಟ್ಟಿ ದಂಪತಿ

ಮಗನ ಮೊದಲ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಷಭ್​ ಶೆಟ್ಟಿ ದಂಪತಿ

Ranvit Shetty First Birthday: ನಿನ್ನೆಯಷ್ಟೆ ರಣ್​ವಿತ್​ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಊರಿನ ಮನೆಯಲ್ಲೇ ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ರಣ್​ವಿತ್​ನ ಮೊದಲ ಹುಟ್ಟುಹಬ್ಬವನ್ನು ಆಚಸಿದ್ದಾರೆ ರಿಷಭ್​ ಶೆಟ್ಟಿ. ಅದರ ವಿಡಿಯೋವನ್ನು ರಿಷಭ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 

ಮುಂದೆ ಓದಿ ...
  • Share this:

ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸದ್ಯ ಲಾಕ್​ಡೌನ್​ನಿಂದಾಗಿ ತಮ್ಮ ಊರಿನಲ್ಲಿ ಮಗ ಹಾಗೂ ಹೆಂಡತಿ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ನಡುವೆ ಮಗ ರಣ್​ವಿತ್​ ಶೆಟ್ಟಿಯ ಮೊದಲ ವರ್ಷದ ಹುಟ್ಟುಹಬ್ಬ ಬಂದಿದೆ. 


ನಿನ್ನೆಯಷ್ಟೆ ರಣ್​ವಿತ್​ ಮೊದಲ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾನೆ. ಊರಿನ ಮನೆಯಲ್ಲೇ ಸರಳವಾಗಿ ಕೇಕ್​ ಕತ್ತರಿಸುವ ಮೂಲಕ ರಣ್​ವಿತ್​ನ ಮೊದಲ ಹುಟ್ಟುಹಬ್ಬವನ್ನು ಆಚಸಿದ್ದಾರೆ ರಿಷಭ್​ ಶೆಟ್ಟಿ. ಅದರ ವಿಡಿಯೋವನ್ನು ರಿಷಭ್​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.




ರಿಷಭ್​ ಶೆಟ್ಟಿ ತಮ್ಮ ಮಗ ಹಾಗೂ ಅವನೊಂದಿಗೆ ತಾವು ತೆಗೆಸಿಕೊಂಡಿರುವ ಕೆಲವು ಚಿತ್ರಗಳನ್ನು ಸೇರಿಸಿ ಈ ವಿಡಿಯೋ ಮಾಡಿದ್ದಾರೆ. ಜೊತೆಗೆ ಕೇಕ್​ಗ ಕತ್ತರಿಸುವ ವಿಡಿಯೋವನ್ನೂ ಸೇರಿಸಿದ್ದಾರೆ. ಈ ವಿಡಿಯೋ ಸದ್ಯ ವೈರಲ್​ ಆಗುತ್ತಿದೆ.


ರಣ್​ವಿತ್​ ಹುಟ್ಟುಹಬ್ಬಕ್ಕೆ ರಿಷಭ್​ ಅವರ ಗೆಳೆಯ ರಕ್ಷಿತ್​ ಶೆಟ್ಟಿ ಸಹ ಶುಭ ಕೋರಿದ್ದಾರೆ.



ಈ ಹಿಂದೆ ಲಾಕ್​ಡೌನ್​ ಆದೇಶ ಹೊರಬೀಳುತ್ತಿದ್ದಂತೆಯೇ ಊರು ಸೇರಿಕೊಂಡಿದ್ದ ರಿಷಭ್​ ಶೆಟ್ಟಿ ತಮ್ಮ ಮಗನಿಗೆ ಎಣ್ಣೆ ಸ್ನಾನ ಮಾಡಿಸುವ ಫೋಟೋವೊಂದನ್ನು ಹಂಚಿಕೊಂಡಿದ್ದರು.



ಇನ್ನು ಮಗನಿಗೆ ನಾಮಕರಣ ಮಾಡಲು ಹೆಸರು ಆಯ್ಕೆ ಮಾಡಿದ ವಿಷಯವನ್ನು ಸಿನಿಮಾದ ಟೀಸರ್​ನಂತೆ ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು.




HBD Nithya Menen: ಕನ್ನಡದಲ್ಲೇ ಹಾಡುತ್ತಾ-ಮಾತನಾಡುತ್ತಾ ಕನ್ನಡಿಗರ ಮನಗೆದ್ದ ನಟಿ ನಿತ್ಯಾ ಮೆನನ್​ಗೆ ಹುಟ್ಟುಹಬ್ಬದ ಸಂಭ್ರಮ​..!


Published by:Anitha E
First published: