`ಪುಷ್ಪ’(Pushpa) ಚಿತ್ರದ ಟ್ರೈಲರ್ ರಿಲೀಸ್ ಆಗಿ ಭರ್ಜರಿಯಾಗಿ ಸೌಂಡ್ ಮಾಡುತ್ತಿದೆ. ಪುಷ್ಪ ಚಿತ್ರತಂಡದ ತಾಕತ್ತು ಏನೆಂಬುದು ಟ್ರೈಲರ್(Trailer) ನೋಡಿದವರಿಗೆ ಗೊತ್ತಾಗಿದೆ. ಹೌದು, ಭಾರೀ ನಿರೀಕ್ಷೆ ಮೂಡಿಸಿದ ಅಲ್ಲು ಅರ್ಜುನ್(Allu Arjun) ಅಭಿನಯದ ಪುಷ್ಪ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಯೂಟ್ಯೂಬ್(YouTube)ನಲ್ಲಿ ಧೂಳೆಬ್ಬಿಸುತ್ತಾ ಇದೆ. ಈ ಸಿನಿಮಾದ ಮೇಕಿಂಗ್(Making)ಗೆ ಸಿನಿಮಾರಂಗದ ಗಣ್ಯಾತಿಗಣ್ಯರೇ ಫಿದಾ ಆಗಿದ್ದಾರೆ. ಟ್ರೈಲರ್ ನೋಡಿದ ಸ್ಟಾರ್ಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಪುಷ್ಮ ಸಿನಿಮಾ ಸೂಪರ್-ಡೂಪರ್ ಹಿಟ್ ಆಗುವುದರಲ್ಲಿ ಅನುಮಾನನೇ ಇಲ್ಲ ಅಂತಿದ್ದಾರೆ ಅಲ್ಲು ಅರ್ಜುನ್ ಫ್ಯಾನ್ಸ್. ಇನ್ನೂ ಸದಾ ವಿವಾದದಿಂದಲೇ ಫೇಮಸ್ ಆಗಿರುವು ನಿರ್ದೇಶಕ ಆರ್ಜಿವಿ(RGV) ಅವರ ಪೋಸ್ಟ್ವೊಂದು ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಹೇಳಿದ ಮತು ಚಿತ್ರರಂಗಕ್ಕೆ ಕಿಡಿ ಹೊತ್ತಿಸಿದೆ. ಸ್ಟಾರ್ ನಟ(Star Heros)ರಿಗೆ ಅವರು ಚಾಲೆಂಜ್ ಮಾಡಿದ್ದಾರೆ. ಅವರ ಪೋಸ್ಟ್ ನೋಡಿ ಸ್ಟಾರ್ ನಟರ ಫ್ಯಾನ್ಸ್ ರಾಂಗ್ ಆಗಿದ್ದಾರೆ. ಒಬ್ಬರನ್ನು ಹೊಗಳುವ ಭರದಲ್ಲಿ ಮತ್ತೊಬ್ಬರ ತೆಗಳುವ ಕೆಲಸ ಮಾಡಬೇಡಿ. ಮೊದಲು ಒಳ್ಳೆಯ ಚಿತ್ರ ಮಾಡಿ ಹಿಟ್ ಡೈರೆಕ್ಟರ್ ಎನಿಸಿಕೊಳ್ಳು ಎಂದು ಗರಂ ಆಗಿದ್ದಾರೆ. ಮೊದಲು ಈ ಪೋಸ್ಟ್ ಡಿಲೀಟ್ ಮಾಡಿ, ಇಲ್ಲದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ಕಮೆಂಟ್(Comment) ಮಾಡುತ್ತಿದ್ದರೆ
ಅಲ್ಲು ಅರ್ಜುನ್ ನೋಡಿ ಕಲಿರಿ ಅಂತ RGV ಚಾಲೆಂಜ್!
ಪುಷ್ಪ ಟ್ರೈಲರ್ ನೋಡಿದ ಬಳಿಕ ಅದರ ಬಗ್ಗೆ ಆರ್ಜಿವಿ ಅವರ ಖಾತೆಯಲ್ಲಿ ಲಿಂಕ್ ಶೇರ್ ಮಾಡಿಕೊಂಡಿದ್ದಾರೆ. ಜೊತೆಗೆ ಅಲ್ಲು ಅರ್ಜುನ್ ಒಬ್ಬರಿಗೆ ಮಾತ್ರ ಈ ರಿಯಲಿಸ್ಟಿಕ್ ಪಾತ್ರದಲ್ಲಿ ಭಯವಿಲ್ಲದೇ ನಟಿಸುವ ಏಕೈಕ ಸೂಪರ್ ಸ್ಟಾರ್, ನಿಮಗೆ ಚಾಲೆಂಜ್ ಮಾಡುತ್ತಿದ್ದೇನೆ. ಪವನ್ ಕಲ್ಯಾಣ್, ಮಹೇಶ್ ಬಾಬು, ಚಿರಂಜೀವಿ, ರಜನಿಕಾಂತ್ ಸವಾಲು ಹಾಕುತ್ತಿದ್ದೇನೆ ಎಂದು ಸ್ಟಾರ್ ನಟರನ್ನು ತಮ್ಮ ಪೋಸ್ಟ್ನಲ್ಲಿ ಆರ್ಜಿವಿ ಟ್ಯಾಗ್ ಮಾಡಿದ್ದಾರೆ. ಹೀಗೆ ಒಬ್ಬರನ್ನು ಹೊಗಳಲು ಹೋಗಿ ಇದೀಗ ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ನಿರ್ದೇಶಕ ಆರ್ಜಿವಿಗೆ ವಿವಾದಗಳೇನು ಹೊಸದಲ್ಲ, ಆದರೆ ಈ ಬಾರಿ ಸೂಪರ್ ಸ್ಟಾರ್ ನಟರ ವಿರುದ್ಧವೇ ಹೇಳಿಕೆಯನ್ನು ನೀಡಿದ್ದಾರೆ.
ಇದನ್ನು ಓದಿ : ಟ್ರೈಲರ್ನಲ್ಲೇ ಬೆಂಕಿ ಹಚ್ಚಿದ `ಪುಷ್ಪ‘: ಏಯ್ ಬಿಡ್ಡಾ.. ಇದು ಅಲ್ಲು ಅಡ್ಡ.. ಅಂತಿದ್ದಾರೆ ಫ್ಯಾನ್ಸ್!
ಆರ್ಜಿವಿ ಪೋಸ್ಟ್ಗೆ ಫ್ಯಾನ್ಸ್ ಕೆಂಡಾಮಂಡಲ!
ಪುಷ್ಪ ಅನ್ನೋದು ಹೂ ಅಲ್ಲ.. ಅದು ಬೆಂಕಿ ಅಂತ ಕೊನೆಯಲ್ಲಿ ಬರೆದುಕೊಂಡು ಆರ್ಜಿವಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಕಂಡ ಇತರ ಸ್ಟಾರ್ ನಟರ ಅಭಿಮಾನಿಗಳು ಕೆಂಡಾಮಂಡಲರಾಗಿದ್ದಾರೆ. ‘ರಜನಿಕಾಂತ್ ಸಿನಿಮಾ ಮಾಡುವಾಗ ನೀವಿನ್ನು ಹುಟ್ಟೆ ಇರಲಿಲ್ಲ ಅನ್ನಿಸುತ್ತೆ. ಪುಷ್ಪ ಟ್ರೈಲರ್ ಅದ್ಭುತವಾಗಿದೆ.ಅದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಬಳಸಿಕೊಂಡು ಫ್ಯಾನ್ಸ್ ವಾರ್ ಕ್ರಿಯೆಟ್ ಮಾಡಲು ಮುಂದಾಗುತ್ತಿರುವ ನಿಮಗೆ ನಾಚಿಕೆ ಆಗಲ್ವಾ? ಎಂದು ನೆಟ್ಟಿಗರು ಆರ್ಜಿವಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲ ನಟರು ಅವರದ್ದೆ ಆದ ಕಲೆ ಹೊಂದಿದ್ದಾರೆ ಎಂದು’ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : Private Planeನಲ್ಲಿ ರಾಜಸ್ಥಾನಕ್ಕೆ ಹೊರಟ ವಿಕ್ಕಿ, ಕತ್ರಿನಾ ಕೈಫ್
ಸೂಪರ್ ಹಿಟ್ ಜೋಡಿ ಅಲ್ಲು, ಸುಕುಮಾರ್
‘ಆರ್ಯ', 'ಆರ್ಯ 2' ಬಳಿಕ ಅಲ್ಲು ಅರ್ಜುನ್ ಮತ್ತು ಸುಕುಮಾರ್ ಒಂದಾಗಿರುವುದು 'ಪುಷ್ಪ' ಚಿತ್ರಕ್ಕಾಗಿ. ಹೀಗಾಗಿ, 'ಪುಷ್ಪ' ಚಿತ್ರದ ಬಗ್ಗೆ ಸಿನಿ ಪ್ರಿಯರಿಗೆ ನಿರೀಕ್ಷೆ ತುಸು ಹೆಚ್ಚಿದೆ. 'ಪುಷ್ಪ' ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡುತ್ತಿದ್ದು, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಜಗಪತಿ ಬಾಬು, ಧನಂಜಯ, ಪ್ರಕಾಶ್ ರಾಜ್ ಮುಂತಾದವರ ತಾರಾಬಳಗವಿದೆ. ಒಟ್ನಲ್ಲಿ ಟ್ರೈಲರ್ನಲ್ಲೇ ಬೆಂಕಿ ಹಚ್ಚಿರುವ ಪುಷ್ಪ ಇನ್ನೂ ಸಿನಿಮಾ ರಿಲೀಸ್ ದಿನ ಅವರ ಫ್ಯಾನ್ಸ್ಗೆ ಹಬ್ಬ ಎನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ