ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 (Bigg Boss OTT Kannada season 1) ಆರಂಭವಾಗಲು ಹೆಚ್ಚೇನು ಸಮಯವಿಲ್ಲ. ಬಿಗ್ಬಾಸ್ ಅಭಿಮಾನಿಗಳಂತೂ (Fans) ಕಾರ್ಯಕ್ರಮವನ್ನು ನೋಡಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಈ ಬಾರಿ ಯಾರೆಲ್ಲಾ ಮನೆಯ ಒಳಗೆ ಹೋಗಲಿದ್ದಾರೆ ಎನ್ನುವ ಬಗ್ಗೆ ಚರ್ಚೆ ಆರಂಭವಾಗಿ ಬಹಳ ದಿನಗಳಾಗಿದೆ. ಅದರಲ್ಲೂ ನಿನ್ನೆಯಿಂದ ಕೆಲ ಸ್ಪರ್ಧಿಗಳ ಲಿಸ್ಟ್ ಕೂಡ ವೈರಲ್ ಆಗಿದ್ದವು. ಆದರೆ ಇದೀಗ ಬಿಗ್ಬಾಸ್ ಮನೆಗೆ ಹೋಗುತ್ತಾರೆ ಎನ್ನಲಾಗುತ್ತಿದ್ದ ಸೆಲೆಬ್ರಿಟಿಯೊಬ್ಬರು ನಾನು ಹೋಗುತ್ತಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ನಾನು ಬಿಗ್ಬಾಸ್ಗೆ ಹೋಗಲ್ಲ ಎಂದ ನಿರ್ದೇಶಕ
ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ಸಂಭಾವ್ಯ ಸ್ಪರ್ಧಿಗಳ ಲಿಸ್ಟ್ನಲ್ಲಿ ಕನ್ನಡ ಚಿತ್ರ ನಿರ್ದೇಶಕ ರವಿ ಶ್ರೀವತ್ಸ ಅವರ ಹೆಸರಿತ್ತು. ಅವರು ಈ ಬಾರಿ ಓಟಿಟಿ ಬಿಗ್ಬಾಸ್ನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ಅದಕ್ಕೆ ರವಿ ಶ್ರೀವತ್ಸ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಪಟ್ಟಿಯಲ್ಲಿ ತಮ್ಮ ಹೆಸರು ಹಾಗೂ ಫೋಟೋ ಇರುವ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ‘’ನಾನು ‘ಬಿಗ್ ಬಾಸ್’ ಮನೆಗೆ ಹೋಗುತ್ತಿಲ್ಲ’’ ಎಂದು ಹೇಳಿದ್ದಾರೆ.
ಹೌದು, ಈ ಸಂಭಾವ್ಯ ಪಟ್ಟಿಯ ಫೋಟೋ ಹಂಚಿಕೊಂಡಿರುವ ನಿರ್ದೇಶಕ ’ನಾನು ಹೋಗುತ್ತಿಲ್ಲ. ಆದರೂ ಈ ನ್ಯೂಸ್ಗಳಲ್ಲಿ ಏನೋ ಥ್ರಿಲ್ ಇದೆ ಎಂದು ಬರೆದುಕೊಂಡಿದ್ದಾರೆ. ನಿರ್ದೇಶಕರ ಈ ಪೋಸ್ಟ್ಗೆ ನೆಟ್ಟಿಗರು ಸಹ ವಿವಿಧ ಕಾಮೆಂಟ್ ಮಾಡುತ್ತಿದ್ದಾರೆ. ’ಗುರುಗಳೇ ನೀವು ಹೋಗಿದ್ರೆ ಅಲ್ಲಿಗೆ ಒಂದು ಗತ್ತು ಇರ್ತಾ ಇತ್ತು’’, ‘’ನೀವು ಹೋಗಬೇಕಿತ್ತು. ನನಗೆ ತುಂಬಾ ನಿರೀಕ್ಷೆಇತ್ತು, ‘’ನೀವು ಹೋಗಿದ್ದರೆ ನಾವೆಲ್ಲಾ ನಿಮಗೆ ವೋಟ್ ಮಾಡುತ್ತಿದ್ದೇವು’, ‘’ನೀವು ಕೂಡ ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸುತ್ತೀರಾ ಅಂತ ತಿಳಿದುಕೊಂಡಿದ್ದೇವು ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಈ ಟಿಕ್ಟಾಕ್ ಸ್ಟಾರ್ ಎಂಟ್ರಿ ಪಕ್ಕನಾ? ಮೊದಲ ಸೀಸನ್ಗೆ ಕ್ಷಣಗಣನೆ
ಹೆಚ್ಚಾಗುತ್ತಿದೆ ಅಭಿಮಾನಿಗಳ ಕುತೂಹಲ
ಈ ಕಾರ್ಯಕ್ರಮ ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. 42 ದಿನ, 6 ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಯಾವೆಲ್ಲಾ ಸ್ಪರ್ಧಿಗಳು ಎಷ್ಟು ದಿನ ಇರಬಹುದು, ಯಾವ ರೀತಿ ಎಂಟರ್ಟೈನ್ಮೆಂಟ್ ಸಿಗಬಹುದು ಎಂದು ಕಾಯುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಯಾವೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಇನ್ನು ನಿನ್ನೆ ವೈರಲ್ ಆದ ಸಂಭಾವ್ಯ ಸ್ಪರ್ಧಿಗಳ ಪಟ್ಟಿಯಲ್ಲಿ, ನಟ ತರುಣ್ ಚಂದ್ರ, ಹುಚ್ಚ ಸಿನಿಮಾ ಖ್ಯಾತಿಯ ನಟಿ ರೇಖಾ, ಹಿಟ್ಲರ್ ಕಲ್ಯಾಣ ಧಾರಾವಾಹಿಯ ದಿಲೀಪ್ ರಾಜ್, ಕಾಫಿನಾಡು ಚಂದು, ಡ್ರೋನ್ ಪ್ರತಾಪ್, ಸೋನು ಶ್ರೀನಿವಾಸ್ ಗೌಡ, ಸರಿಗಮಪ ರಿಯಾಲಿಟಿ ಶೋ ಖ್ಯಾತಿಯ ಗಾಯಕಿ ಆಶಾ ಭಟ್, ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನ ಸಾನ್ಯ ಅಯ್ಯರ್, ಆರ್ಯವರ್ಧನ್ ಗುರೂಜಿ, ನಿರ್ದೇಶಕ ರವಿ ಶ್ರೀವತ್ಸ, ಮಿಮಿಕ್ರಿ ಗೋಪಿ, ನಿರ್ದೇಶಕ ನವೀನ್ ಕೃಷ್ಣ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಇದೀಗ ನಿರ್ದೇಶಕ ರವಿ ಶ್ರೀವತ್ಸ ತಾವು ಭಾಗವಹಿಸುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ ಮನೆಗೆ ಕಾಫಿನಾಡು ಚಂದು? ಕುತೂಹಲದಿಂದ ಕಾಯ್ತಿದ್ದಾರೆ ಫ್ಯಾನ್ಸ್
ಅಲ್ಲದೇ, ಸ್ಪರ್ಧಿಗಳ ಬಗ್ಗೆ ವಾಹಿನಿಯಾಗಲಿ ಅಥವಾ ಇತರ ಸ್ಪರ್ಧಿಗಳು ಅಧಿಕೃತ ಮಾಹಿತಿ ನೀಡಿಲ್ಲ. ಇಂದು ಸಂಜೆ 6 ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಎಲ್ಲಾ ಕುತೂಹಲಗಳಿಗೆ ತೆರೆ ಎಳೆಯಲಿದ್ದು, ಸ್ಪರ್ಧಿಗಳಲ್ಲಿ ಮನೆಯ ಒಳಗೆ ಲಾಕ್ ಮಾಡಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ